Do not have an account?
Already have an account?

ನಿಮ್ಮ PAN ಪರಿಶೀಲಿಸಿ ಕುರಿತು ಬಳಕೆದಾರರ ಕೈಪಿಡಿ

 

1. ಪಕ್ಷಿನೋಟ

‘PAN ಸ್ಥಿತಿ ಪರಿಶೀಲಿಸಿ’ ಎಂಬುದು ಇ-ಸಲ್ಲಿಕೆ ಪೋರ್ಟಲಿನಲ್ಲಿ ಹೊರಗಿನ ಸಂಸ್ಥೆಗಳನ್ನು ಬಿಟ್ಟು ಉಳಿದೆಲ್ಲ ಬಳಕೆದಾರರಿಗೂ ಲಭ್ಯವಿರುವ ಒಂದು ಲಾಗಿನ್ ಪೂರ್ವ ಸೇವೆ (ಪೋರ್ಟಲಿಗೆ ಲಾಗಿನ್ ಮಾಡುವ ಅಗತ್ಯವಿಲ್ಲ).

ಹೊರಗಿನ ಸಂಸ್ಥೆಗಳು PAN ಸ್ಥಿತಿ ಪರಿಶೀಲಿಸಿ ಸೇವೆಯನ್ನು ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಆದನಂತರ ಪಡೆಯಬಹುದು

ಈ ಸೇವೆಯಿಂದ ನೀವು

  • PAN ಮೇಲಿರುವ ಹೆಸರು, ಜನ್ಮದಿನಾಂಕ ಮೊದಲಾದ ವಿವರಗಳು ಸರಿಯಿವೆಯೇ ಇಲ್ಲವೇ ಎಂದು ಪರಿಶೀಲಿಸಬಹುದು
  • PAN ಚಾಲ್ತಿಯಲ್ಲಿದೆಯೇ ಪರಿಶೀಲಿಸಬಹುದು

2. ಸೇವೆಯನ್ನು ಪಡೆಯುವುದಕ್ಕೆ ಬೇಕಾದ ಪೂರ್ವ ಅಗತ್ಯಗಳು

  • ಸರಿಯಾದ PAN
  • ಸರಿಯಾದ ಮೊಬೈಲ್ ನಂಬರ್ (ನಿಮಗೆ ಬಳಕೆಗೆ ಸಿಗುವಂತಿರಬೇಕು)
  • ಹೊರಗಿನ ಸಂಸ್ಥೆಗಳಿಗೆ: ಇ-ಫೈಲಿಂಗ್ ಪೋರ್ಟಲ್ನಲ್ಲಿ ನೊಂದಾಯಿಸಿದ ಬಳಕೆದಾರರಾಗಿರಬೇಕು, ಸರಿಯಾದ ಯೂಸರ್ ಐಡಿ ಪಾಸ್ವರ್ಡ್ ಮತ್ತು ಸ್ಥಾಪನೆ ದಿನಾಂಕ ಹೊಂದಿರಬೇಕು.

3. ಹಂತ ಹಂತವಾಗಿ ಮಾರ್ಗಸೂಚಿ


3.1 PAN ಸ್ಥಿತಿ ಪರಿಶೀಲಿಸಿ

ಹಂತ 1
: ಇ-ಸಲ್ಲಿಕೆ ಪೋರ್ಟಲ್ ಹೋಂ ಪೇಜಿಗೆ ಹೋಗಿ.

Data responsive

ಹಂತ 2: ತಕ್ಷಣದ ಲಿಂಕುಗಳು (Quick links) ಭಾಗದಲ್ಲಿ, 'PAN ಸ್ಥಿತಿ ಪರಿಶೀಲಿಸಿ' ಕ್ಲಿಕ್ ಮಾಡಿ.

Data responsive


ಹಂತ 3: 'PAN ಸ್ಥಿತಿ ಪರಿಶೀಲಿಸಿ' ಪುಟದಲ್ಲಿ, ನಿಮ್ಮ PAN ನಮೂದಿಸಿ, ಪೂರ್ತಿ ಹೆಸರು, ಜನ್ಮದಿನಾಂಕ ಮತ್ತು ಮೊಬೈಲ್ ನಂಬರ್ (ನಿಮಗೆ ಬಳಕೆಗೆ ಸಿಗುವಂತಿರಬೇಕು) ಮತ್ತು'ಕಂಟಿನ್ಯೂ' ಕ್ಲಿಕ್ ಮಾಡಿ.

Data responsive


ಹಂತ 4: 'ಪರಿಶೀಲನೆ' ಪುಟದಲ್ಲಿ, ಹೆಜ್ಜೆ 3ರಲ್ಲಿ ಮೊಬೈಲಿನಲ್ಲಿ ಪಡೆದ ಆರು ಅಂಕಿಗಳ OTP ಹಾಕಿ 'ದೃಢಪಡಿಸಿ' ಕ್ಲಿಕ್ ಮಾಡಿ.

Data responsive

ಸೂಚನೆ:

• OTP 15 ನಿಮಿಷಕ್ಕೆ ಮಾತ್ರ ಸೀಮಿತವಾಗಿರುತ್ತದೆ.
• ಸರಿಯಾದ OTP ಹಾಕಲು ನಿಮಗೆ ಮೂರು ಪ್ರಯತ್ನಗಳು ಲಭ್ಯವಿರುತ್ತದೆ.
• OTP ಟೈಮರ್ ಮತ್ತೆ OTP ತಯಾರಿಸಲು ಬಾಕಿಯಿರುವ ಸಮಯವನ್ನು ತೋರಿಸುತ್ತದೆ. 'OTP ಮತ್ತೆ ಕಳುಹಿಸಿ' ಕ್ಲಿಕ್ ಮಾಡಿದಾಗ, ಹೊಸ OTP ಯನ್ನು ಕಳುಹಿಸಲಾಗುತ್ತದೆ.

ಪರಿಶೀಲನೆ ಯಶಸ್ವಿಯಾದಾಗ, ನಿಮ್ಮ PAN ಸ್ಥಿತಿ ತೋರಿಸಲ್ಪಡುತ್ತದೆ.

Data responsive

ಸೂಚನೆ:

ಇದು ಕೇವಲ ಮಾಹಿತಿಗಾಗಿ ಮಾತ್ರ, ಇ-ಸಲ್ಲಿಕೆಯ ಬೇರೆ ಯಾವ ಕಾರ್ಯವಿಧಾನದ ಮೇಲೂ ಪರಿಣಾಮ ಬೀರುವುದಿಲ್ಲ. ಏನಾದರೂ ಪ್ರಶ್ನೆಗಳಿದ್ದರೆ ಬಳಕೆದಾರರು JAO ಅವರನ್ನೇ ಸಂಪರ್ಕಿಸಬೇಕು
 

3.2 ಹೊರಗಿನ ಸಂಸ್ಥೆಗಳಿಗೆ PAN ಪರಿಶೀಲನೆ


ಹಂತ 1:ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲಿಗೆ ಲಾಗಿನ್ ಮಾಡಿ.

 

Data responsive


ಹಂತ 2:‘ಸೇವೆಗಳು’ > ‘PAN ವಿವರಗಳನ್ನು ನೋಡಿ’. ಕ್ಲಿಕ್ ಮಾಡಿ

Data responsive


ಹಂತ 3: ‘ನಿಮ್ಮ PAN ಪರಿಶೀಲಿಸಿ’ ಪುಟದಲ್ಲಿ, (ನೀವು ಪರಿಶೀಲಿಸಬೇಕಾದ) PAN ಹಾಕಿ, ಪೂರ್ತಿ ಹೆಸರು ಮತ್ತು ಸ್ಥಾಪನೆ ದಿನಾಂಕ (DOI) / ಜನ್ಮದಿನಾಂಕ (DOB) ಇವುಗಳನ್ನು ಹಾಕಿ ‘ಕಂಟಿನ್ಯೂ’ ಕ್ಲಿಕ್ ಮಾಡಿ.

Data responsive


ದೃಢೀಕರಣ ಯಶಸ್ವಿಯಾದ ಮೇಲೆ, PAN ಸ್ಥಿತಿ ತೋರಿಸಲ್ಪಡುತ್ತದೆ.

Data responsive

4. ಸಂಬಂಧಿಸಿದ ವಿಷಯಗಳು