ಪ್ರಶ್ನೆ 1:
ಯಾವ ತೆರಿಗೆ ಮೌಲ್ಯಮಾಪನ ವರ್ಷದಿಂದ ಮರು-ಅಧಿಸೂಚನೆ ಹೊರಡಿಸಿದ ಫಾರ್ಮ್ 10B ಅನ್ವಯಿಸುತ್ತದೆ?
ಪರಿಹಾರ:
21ನೇ ಫೆಬ್ರವರಿ 2023 ದಿನಾಂಕದ ಸದರಿ ಅಧಿಸೂಚನೆ ಸಂಖ್ಯೆ 7/2023 ರ ಪ್ರಕಾರ ಫಾರ್ಮ್ 10B ಯನ್ನು ಅಧಿಸೂಚಿಸಲಾಗಿದೆ. ಇದು ತೆರಿಗೆ ಮೌಲ್ಯಮಾಪನ ವರ್ಷ 2023-24 ರಿಂದ ಅಂದರೆ A.Y 2023-24 ಮತ್ತು ಮುಂಬರುವ ವರ್ಷಗಳಿಗೆ ಅನ್ವಯಿಸುತ್ತದೆ.
ಪ್ರಶ್ನೆ 2:
ಅಧಿಸೂಚನೆ ಸಂಖ್ಯೆ 7/2023 ನೀಡುವುದಕ್ಕೆ ಮುಂಚಿತವಾಗಿ ಸಲ್ಲಿಸಲಾಗುತ್ತಿದ್ದ ಫಾರ್ಮ್ 10B ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇನ್ನೂ ಲಭ್ಯವಿದೆಯೇ?
ಪರಿಹಾರ:
ಹೌದು, ಹಳೆಯ ಫಾರ್ಮ್ 10B ಸಹ ಪೋರ್ಟಲ್‌ನಲ್ಲಿ ಲಭ್ಯವಿದೆ ಮತ್ತು ಇದು ತೆರಿಗೆ ಮೌಲ್ಯಮಾಪನ ವರ್ಷ 2022-23 ರವರೆಗೆ ಮಾತ್ರ ಅನ್ವಯಿಸುತ್ತದೆ.
2022-23 ರವರೆಗಿನ ಮೌಲ್ಯಮಾಪನ ವರ್ಷಗಳ ಫೈಲಿಂಗ್‌ಗಳಿಗಾಗಿ, ಫಾರ್ಮ್ 10B ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಅದನ್ನು ಹೀಗೆ ಪಡೆಯಬಹುದು-
“ಇ-ಫೈಲ್ -----> ಆದಾಯ ತೆರಿಗೆ ಫಾರ್ಮ್‌ಗಳು ----> ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ---> ಯಾವುದೇ ಆದಾಯದ ಮೂಲವನ್ನು ಅವಲಂಬಿಸಿರದ ವ್ಯಕ್ತಿಗಳು----> CA ಗೆ ನಿಯೋಜಿಸಲು ಫಾರ್ಮ್ 10B”.
ಅಥವಾ
ಪರ್ಯಾಯವಾಗಿ, "ನನ್ನ CA" ಕಾರ್ಯನಿರ್ವಹಣೆಯನ್ನು ಬಳಸಿಕೊಂಡು ಫಾರ್ಮ್ ನಿಯೋಜಿಸಬಹುದು.
ಪ್ರಶ್ನೆ 3:
ಸದರಿ ಅಧಿಸೂಚನೆ ಸಂಖ್ಯೆ 7/2023 ರ ಮೂಲಕ ಅಧಿಸೂಚನೆ ಹೊರಡಿಸಿದ ಫಾರ್ಮ್ 10B ಯನ್ನು ಆಡಿಟೀ ಯಾವಾಗ ಫೈಲ್ ಮಾಡುವ ಅಗತ್ಯವಿದೆ?
ಪರಿಹಾರ:
A.Y. 2023-24 ರಿಂದ, ಕೆಳಗೆ ತಿಳಿಸಲಾದ ಯಾವುದೇ ಷರತ್ತುಗಳು ಪೂರೈಸಿದಾಗ ಮರು-ಅಧಿಸೂಚಿಸಲಾದ ಫಾರ್ಮ್ 10B ಅನ್ವಯವಾಗುತ್ತದೆ-
- ಅನ್ವಯವಾಗುವಂತೆ ಕೆಳಗೆ ನಮೂದಿಸಲಾದ ಅಧಿನಿಯಮಗಳು/ಸೆಕ್ಷನ್‌ಗಳ ಉಪಬಂಧಗಳಿಗೆ ಒಳಪಡದೆ, ಆಡಿಟೀಯ ಒಟ್ಟು ಆದಾಯ-
- ಸೆಕ್ಷನ್ 10 ರ ಅಧಿನಿಯಮ 23C ಯ ಉಪ-ನಿಯಮಗಳು (iv), (v), (vi) ಮತ್ತು (via)
- ಸೆಕ್ಷನ್ 11 ಮತ್ತು 12.
ಹಿಂದಿನ ವರ್ಷದಲ್ಲಿ ಐದು ಕೋಟಿ ರೂಪಾಯಿಗಳನ್ನು ಮೀರಿದ್ದರೆ
- ಆಡಿಟೀ ಹಿಂದಿನ ವರ್ಷದಲ್ಲಿ ಯಾವುದಾದರೂ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದ್ದರೆ
- ಆಡಿಟೀ ಹಿಂದಿನ ವರ್ಷದಲ್ಲಿ ತನ್ನ ಆದಾಯದ ಯಾವುದಾದರೂ ಒಂದು ಭಾಗವನ್ನು ಭಾರತದ ಹೊರಗೆ ವಿನಿಯೋಗಿಸಿದ್ದರೆ.
ಹೆಚ್ಚಿನ ವಿವರಗಳಿಗಾಗಿ, ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಅನ್ನು ನೋಡಬಹುದು.
ಪ್ರಶ್ನೆ 4:
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 10B (A.Y. 2023-24 ರಿಂದ) ಸಲ್ಲಿಸುವ ಪ್ರಕ್ರಿಯೆ ಏನಿದೆ?
ಪರಿಹಾರ:
ಫಾರ್ಮ್ 10B ಅನ್ನು ಫೈಲ್ ದಯವಿಟ್ಟು ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ-1: ತೆರಿಗೆದಾರರು CA ಗೆ ಫಾರ್ಮ್ 10B (ತೆರಿಗೆ ವರ್ಷ 2023-24 ರಿಂದ) ಅನ್ನು ಇ-ಫೈಲ್ ಫಾರ್ಮ್ ವಿಧಾನದಿಂದ ನಿಯೋಜಿಸಬಹುದು ---->
ಹಂತ-2: ಕಾರ್ಯಪಟ್ಟಿ ಅಡಿಯಲ್ಲಿ "ನಿಮ್ಮ ಕ್ರಮಕ್ಕಾಗಿ ಟ್ಯಾಬ್" ನಲ್ಲಿ CA ನಿಯೋಜನೆಯನ್ನು ಪರಿಶೀಲಿಸಬಹುದು --->
ಹಂತ 3: CA ನಿಯೋಜನೆಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು----- >
ಹಂತ 4: ಒಂದು ವೇಳೆ CA ನಿಯೋಜನೆಗಳನ್ನು ಸ್ವೀಕರಿಸಿದರೆ, ಅವನು/ಅವಳು PDF ಅಟ್ಯಾಚ್ಮೆಂಟ್‌ಗಳೊಂದಿಗೆ JSON ಅನ್ನು ಆಫ್‌ಲೈನ್ ಫೈಲಿಂಗ್ ವಿಧಾನದ ಅಡಿಯಲ್ಲಿ
ಅಪ್‌ಲೋಡ್ ಮಾಡಬೇಕಾಗುತ್ತದೆ----->
ಹಂತ 5 : ಒಮ್ಮೆ CA JSON ಅನ್ನು ಮಾನ್ಯವಾದ ಅಟ್ಯಾಚ್ಮೆಂಟ್‌ಗಳೊಂದಿಗೆ ಸಲ್ಲಿಸಿದರೆ, ತೆರಿಗೆದಾರರು ಕಾರ್ಯಪಟ್ಟಿಯ "ನಿಮ್ಮ ಕ್ರಮಗಳಿಗಾಗಿ" ಟ್ಯಾಬ್ ಮೂಲಕ CA ಅಪ್ಲೋಡ್ ಮಾಡಿದ
ಫಾರ್ಮ್ ಅನ್ನು ಸ್ವೀಕರಿಸಬೇಕು/ತಿರಸ್ಕರಿಸಬೇಕು
ಪ್ರಶ್ನೆ 5:
ಮೇಲಿನ ಪ್ರಶ್ನೆ ಸಂಖ್ಯೆ 3 ರಲ್ಲಿ ಉಲ್ಲೇಖಿಸಿದಂತೆ "ಆಡಿಟೀ" ಯಾರು?
ಪರಿಹಾರ:
ಕಾಯಿದೆಯ ಸೆಕ್ಷನ್ 10 ರ ಅಧಿನಿಯಮ (23C) ರ ಉಪ-ಅಧಿನಿಯಮ (iv), (v), (vi) ಅಥವಾ (via) ನಲ್ಲಿ ಉಲ್ಲೇಖಿಸಲಾದ ಯಾವುದೇ ನಿಧಿ ಅಥವಾ ಸಂಸ್ಥೆ ಅಥವಾ ಟ್ರಸ್ಟ್ ಅಥವಾ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಇತರ ಶಿಕ್ಷಣ ಸಂಸ್ಥೆ ಅಥವಾ ಯಾವುದೇ ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆಗಳು ಅಥವಾ ಕಾಯಿದೆಯ ಸೆಕ್ಷನ್ 11 ಅಥವಾ 12 ರಲ್ಲಿ ಉಲ್ಲೇಖಿಸಲಾದ ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯನ್ನು ಈ ಫಾರ್ಮ್‌ನಲ್ಲಿ "ಆಡಿಟೀ" ಎಂದು ಉಲ್ಲೇಖಿಸಲಾಗುತ್ತದೆ.
ಪ್ರಶ್ನೆ 6:
ಫಾರ್ಮ್ 10B (A.Y. 2023-24 ರಿಂದ) ಸಲ್ಲಿಸಲು ಅಂತಿಮ ದಿನಾಂಕ ಯಾವುದು?
ಪರಿಹಾರ:
ಫಾರ್ಮ್‌ನ ಅಂತಿಮ ದಿನಾಂಕವು ಸೆಕ್ಷನ್ 44AB ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಅಂದರೆ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139 ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ರಿಟರ್ನ್ ಸಲ್ಲಿಸಲು ಇರುವ ನಿಗದಿತ ದಿನಾಂಕಕ್ಕಿಂತ ಒಂದು ತಿಂಗಳ ಮೊದಲು.
ಪ್ರಶ್ನೆ 7:
ಹೊಸ ಫಾರ್ಮ್ 10B ಗಾಗಿ ಆಫ್‌ಲೈನ್ ಯುಟಿಲಿಟಿಯನ್ನು ಹೇಗೆ ಡೌನ್ಲೋಡ್ ಮಾಡಬಹುದು?
ಪರಿಹಾರ:
ಭೇಟಿ ನೀಡಿ ಹೋಮ್ | ಆದಾಯ ತೆರಿಗೆ ಇಲಾಖೆ> ಡೌನ್ಲೋಡ್ ವಿಭಾಗಕ್ಕೆ ಹೋಗಿ------> ಆದಾಯ ತೆರಿಗೆ ಫಾರ್ಮ್‌ಗಳು------> ಫಾರ್ಮ್ 10B (AY .2023- 24 ರಿಂದ) -----> ಯುಟಿಲಿಟಿ ಫಾರ್ಮ್ ಮೇಲೆ ಕ್ಲಿಕ್ ಮಾಡಿ
ಪರ್ಯಾಯವಾಗಿ, ಈ CA ಫಾರ್ಮ್ ಅನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ ಆಫ್‌ಲೈನ್ ಯುಟಿಲಿಟಿಯ ಆಯ್ಕೆಯ ಅಡಿಯಲ್ಲಿ ಡೌನ್‌ಲೋಡ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಮಾರ್ಗವನ್ನು ಪ್ರವೇಶಿಸಬಹುದು.
ಗಮನಿಸಿ: json ಅನ್ನು ಡೌನ್‌ಲೋಡ್ ಮಾಡಲು ಮತ್ತು ಅಪ್‌ಲೋಡ್ ಮಾಡಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಯುಟಿಲಿಟಿಯ ಇತ್ತೀಚಿನ ಆವೃತ್ತಿಯನ್ನು ನೀವು ಬಳಸುತ್ತಿದ್ದೀರೆಂದು ಯಾವಾಗಲೂ ಖಚಿತಪಡಿಸಿಕೊಳ್ಳಿ.
ಪ್ರಶ್ನೆ 8:
ಸಿಸ್ಟಂನಲ್ಲಿ ಫಾರ್ಮ್ 10B ಅನ್ನು ಪರಿಶೀಲಿಸಲು ಲಭ್ಯವಿರುವ ವಿಧಾನಗಳು ಯಾವುವು?
ಪರಿಹಾರ:
ಫಾರ್ಮ್ 10B ಗಾಗಿ ಪರಿಶೀಲನೆಯ ವಿಧಾನಗಳು (A.Y. 2023-24 ರಿಂದ):
- CA ಗಳಿಗೆ, ಫಾರ್ಮ್ ಅನ್ನು ಅಪ್‌ಲೋಡ್ ಮಾಡಲು DSC ಆಯ್ಕೆ ಮಾತ್ರ ಲಭ್ಯವಿದೆ.
- ಕಂಪನಿಗಳನ್ನು ಹೊರತುಪಡಿಸಿ ತೆರಿಗೆದಾರರಿಗೆ (ಆಡಿಟೀ) CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಮತ್ತು EVC ಎರಡೂ ಆಯ್ಕೆಗಳು ಲಭ್ಯವಿವೆ.
- ಕಂಪನಿಗಳಿಗೆ, CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಆಯ್ಕೆ ಮಾತ್ರ ಲಭ್ಯವಿದೆ.
ಪ್ರಶ್ನೆ 9:
ಮರು-ಅಧಿಸೂಚಿತ ಫಾರ್ಮ್ 10B ಯ ಪ್ರಕಾರವಾಗಿ ಪ್ರಶ್ನೆ ಸಂಖ್ಯೆ 3 ರಲ್ಲಿ ಉಲ್ಲೇಖಿಸಿರುವ "ವಿದೇಶಿ ಕೊಡುಗೆ"ಯ ಅರ್ಥವೇನು?
ಪರಿಹಾರ:
ನಿಯಮ 16CC ಮತ್ತು ನಿಯಮ 17B ಗಾಗಿ, "ವಿದೇಶಿ ಕೊಡುಗೆ" ಎಂಬ ಪದವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 (2010 ರ 42) ರ ಸೆಕ್ಷನ್ 2 ರ ಸಬ್-ಸೆಕ್ಷನ್ (1) ರ ಅಧಿನಿಯಮ (h) ದಲ್ಲಿ ಅದೇ ಅರ್ಥವನ್ನು ಹೊಂದಿರುತ್ತದೆ.
ಪ್ರಶ್ನೆ 10:
"ವಿವರಗಳನ್ನು ಸೇರಿಸಿ" ಆಯ್ಕೆ ಮತ್ತು "CSV ಅಪ್ಲೋಡ್ ಮಾಡಿ" ಆಯ್ಕೆ ಒಟ್ಟಿಗೆ ಇರುವ ಕೋಷ್ಟಕವನ್ನು ಹೊಂದಿರುವ ಅನುಸೂಚಿಗಳಿಗಾಗಿ ದಾಖಲೆಗಳನ್ನು ಒದಗಿಸುವುದು ಹೇಗೆ?
ಪರಿಹಾರ:
“ವಿವರಗಳನ್ನು ಸೇರಿಸಿ" ಮತ್ತು “CSV ಅಪ್ಲೋಡ್ ಮಾಡಿ” ಎರಡೂ ಆಯ್ಕೆಗಳನ್ನು ಒಟ್ಟಿಗೆ ಹೊಂದಿರುವ ಅನುಸೂಚಿಗಳಿಗಾಗಿ, ದಯವಿಟ್ಟು ಈ ಕೆಳಗಿನವುಗಳನ್ನು ಗಮನಿಸಿ:-
- 50 ಸಂಖ್ಯೆಗಳವರೆಗಿನ ದಾಖಲೆಗಳಿಗೆ: ಕೋಷ್ಟಕ ಅಥವಾ CSV ಆಯ್ಕೆಯನ್ನು ಬಳಸಬಹುದು. ಎರಡೂ ಸಂದರ್ಭಗಳಲ್ಲಿ, ದತ್ತಾಂಶವು ಕೋಷ್ಟಕದಲ್ಲಿ ಪ್ರತಿಫಲಿಸುತ್ತದೆ.
- 50 ಕ್ಕಿಂತ ಹೆಚ್ಚಿನ ದಾಖಲೆಗಳ ಸಂಖ್ಯೆಗೆ: CSV ಆಯ್ಕೆಯನ್ನು ಮಾತ್ರ ಬಳಸಬಹುದು. ಡೇಟಾವು CSV ಅಟ್ಯಾಚ್ಮೆಂಟ್ ಆಗಿ ಮಾತ್ರ ಗೋಚರಿಸುತ್ತದೆ.
- CSV ಅಪ್‌ಲೋಡ್ ಮಾಡಿ ಆಯ್ಕೆಯನ್ನು ಬಳಸುವಾಗ, ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:-
“ಎಕ್ಸೆಲ್ ಟೆಂಪ್ಲೇಟ್ ಅನ್ನು ಡೌನ್‌ಲೋಡ್ ಮಾಡಿ ದಾಖಲೆಗಳನ್ನು ಸೇರಿಸಿ ಎಕ್ಸೆಲ್ ಟೆಂಪ್ಲೇಟ್ ಅನ್ನು .csv ಫೈಲ್ ಆಗಿ ಪರಿವರ್ತಿಸಿ .csv ಫೈಲ್ ಅಪ್ಲೋಡ್ ಮಾಡಿ
- CSV ಫೈಲ್ ಅನ್ನು ಅಪ್‌ಲೋಡ್ ಮಾಡಿದಾಗಲೆಲ್ಲಾ, ಅಸ್ತಿತ್ವದಲ್ಲಿರುವ ದಾಖಲೆಗಳು/ಡೇಟಾ ಯಾವುದಾದರೂ ಇದ್ದರೆ ಇದು ಅದನ್ನೆಲ್ಲಾ ತೆಗೆದುಹಾಕುತ್ತದೆ. ಹಳೆಯ ದಾಖಲೆಗಳನ್ನು ಅಳಿಸಲಾಗುತ್ತದೆ ಮತ್ತು ಇತ್ತೀಚಿನ CSV ಮೂಲಕ ಅಪ್ಲೋಡ್ ಮಾಡಿದ ದಾಖಲೆಗಳು ಉಳಿಯುತ್ತವೆ.
ಪ್ರಶ್ನೆ 11:
ಫಾರ್ಮ್ ಭರ್ತಿ ಮಾಡಲು ಯಾವುದೇ ಸೂಚನೆ ಅಥವಾ ಮಾರ್ಗದರ್ಶನ ಲಭ್ಯವಿದೆಯೇ?
ಪರಿಹಾರ:
ಹೌದು, CA ಸೂಚನಾ ಫೈಲ್ ಅನ್ನು ಫಾರ್ಮ್ 10B ನ ಯುಟಿಲಿಟಿಯಲ್ಲಿ ಡೌನ್‌ಲೋಡ್ ಮಾಡಬಹುದು (A.Y .2023-24 ರಿಂದ).
ಪ್ರಶ್ನೆ 12:
ಹೊಸ ಫಾರ್ಮ್ 10B ನಲ್ಲಿ ಅನ್ವಯವಾಗುವಂತೆ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟ ಹೇಳಿಕೆ ಮತ್ತು ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಎಲ್ಲಿ ಅಪ್‌ಲೋಡ್ ಮಾಡಬೇಕು?
ಪರಿಹಾರ:
ಲೆಕ್ಕಪರಿಶೋಧಕರು ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಲೆಕ್ಕಪತ್ರ ಮತ್ತು 3CA/3CB ಅಡಿಯಲ್ಲಿ ಆಡಿಟ್ ವರದಿಯನ್ನು PDF ಅಥವಾ ಜಿಪ್ ಫೈಲ್‌ನಲ್ಲಿ ಪೋಷಕ ದಾಖಲೆಗಳ ಅಡಿಯಲ್ಲಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ ಅನ್ನು ಸಲ್ಲಿಸುವ ಸಮಯದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
"ವಿವಿಧ ಅಟ್ಯಾಚ್ಮೆಂಟ್‌ಗಳು" ಎಂಬ ಹೆಸರಿನಲ್ಲಿ ಐಚ್ಛಿಕ ಅಟ್ಯಾಚ್ಮೆಂಟ್ ಆಯ್ಕೆ ಇದೆ. ಅಲ್ಲಿ ಯಾವುದೇ ಇತರ ಸಂಬಂಧಿತ ದಾಖಲೆಯನ್ನು ಲಗತ್ತಿಸಬಹುದು.
ಪ್ರತಿಯೊಂದು ದಾಖಲೆಯ ಗಾತ್ರವು 5 MB ಮೀರಬಾರದು ಮತ್ತು ಎಲ್ಲಾ ಅಟ್ಯಾಚ್ಮೆಂಟ್‌ಗಳು ಒಟ್ಟಿಗೆ 50MB ಮೀರಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಎಲ್ಲಾ ಅಟ್ಯಾಚ್ಮೆಂಟ್‌ಗಳು PDF/ZIP ಫಾರ್ಮ್ಯಾಟ್‌ನಲ್ಲಿ ಮಾತ್ರ ಇರಬೇಕು ಮತ್ತು ZIP ಫೋಲ್ಡರ್‌ನಲ್ಲಿರುವ ಎಲ್ಲಾ ಫೈಲ್‌ಗಳು PDF ಫಾರ್ಮ್ಯಾಟ್‌ನಲ್ಲಿ ಮಾತ್ರ ಫೈಲ್‌ಗಳನ್ನು ಹೊಂದಿರಬೇಕು.
ಪ್ರಶ್ನೆ 13:
ಫೈಲ್ ಮಾಡಲಾದ ಫಾರ್ಮ್ 10B (A.Y. 2023-24 ರಿಂದ) ಯನ್ನು ಪರಿಷ್ಕರಿಸಬಹುದೇ?
ಪರಿಹಾರ:
ಹೌದು, ಸಲ್ಲಿಸಿದ ಫಾರ್ಮ್ 10B ಗೆ ಪರಿಷ್ಕರಣೆ ಆಯ್ಕೆ ಲಭ್ಯವಿದೆ.
ಪ್ರಶ್ನೆ 14:
ಫಾರ್ಮ್ 10B ಸಲ್ಲಿಕೆಯು ಪೂರ್ಣಗೊಂಡಿದೆಯೆಂದು ಯಾವಾಗ ಪರಿಗಣಿಸಲಾಗುತ್ತದೆ ?
ಪರಿಹಾರ:
ತೆರಿಗೆದಾರರು CA ಸಲ್ಲಿಸಿದ ಫಾರ್ಮ್ ಅನ್ನು ಅಂಗೀಕರಿಸಿದಾಗ ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸಕ್ರಿಯ DSC ಅಥವಾ EVC ಯೊಂದಿಗೆ ಅದನ್ನು ಪರಿಶೀಲಿಸಿದಾಗ ಮಾತ್ರ ಫಾರ್ಮ್‌ನ ಫೈಲಿಂಗ್ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.
ಪ್ರಶ್ನೆ 15:
ಫಾರ್ಮ್ 10B ಯ ಆಫ್‌ಲೈನ್ ಯುಟಿಲಿಟಿಯನ್ನು ಭರ್ತಿ ಮಾಡಲು ಅನುಸೂಚಿಗಳ ಪ್ಯಾನೆಲ್‌ಗಳು ಯಾವಾಗ ಲಭ್ಯವಿರುತ್ತವೆ?
ಪರಿಹಾರ:
ಬಳಕೆದಾರರು ಫಾರ್ಮ್‌ನಲ್ಲಿ ಇತರ ಪ್ಯಾನೆಲ್‌ಗಳನ್ನು ಪೂರ್ಣಗೊಳಿಸಿದಾಗ ಮಾತ್ರ ಭರ್ತಿ ಮಾಡಲು ಅನುಸೂಚಿಗಳ ಪ್ಯಾನಲ್‌ಗಳು ಲಭ್ಯವಿರುತ್ತವೆ.
ಪ್ರಶ್ನೆ 16:
ಬಳಕೆದಾರರು ಕಳೆದ ವರ್ಷ ಫಾರ್ಮ್ 10B ಅನ್ನು ಸಲ್ಲಿಸಿದ್ದಾರೆ, A.Y..2023-24 ರಿಂದ ಯಾವ ಫಾರ್ಮ್, 10B ಅಥವಾ 10BB ಅನ್ನು ಸಲ್ಲಿಸುವ ಅಗತ್ಯವಿದೆ?
ಪರಿಹಾರ:
ಆದಾಯ ತೆರಿಗೆ ತಿದ್ದುಪಡಿ (3ನೇ ತಿದ್ದುಪಡಿ) ನಿಯಮಗಳು,2023 ನಿಯಮ 16CC ಮತ್ತು ನಿಯಮ 17B ಅನ್ನು ತಿದ್ದುಪಡಿ ಮಾಡಿದೆ. ಹಿಂದಿನ ತೆರಿಗೆ ಮೌಲ್ಯಮಾಪನ ವರ್ಷಗಳಲ್ಲಿ ಯಾವ ಫಾರ್ಮ್ ಅನ್ನು ಸಲ್ಲಿಸಲಾಗಿದೆ ಎಂಬುದನ್ನು ಲೆಕ್ಕಿಸದೆ, ತೆರಿಗೆ ವರ್ಷ 2023-24 ರಿಂದ ಫಾರ್ಮ್ 10B ಮತ್ತು 10BB ಅನ್ವಯವನ್ನು ತಿದ್ದುಪಡಿ ಮಾಡಲಾದ ನಿಯಮ 16CC ಮತ್ತು ನಿಯಮ 17B ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಪ್ರಶ್ನೆ 17:
ಫಾರ್ಮ್ 10B (A.Y. 2023-24 ರಿಂದ) ಸಲ್ಲಿಸಿದ ನಂತರ ಸಲ್ಲಿಸಿದ ಫಾರ್ಮ್‌ನ ವಿವರಗಳನ್ನು ಎಲ್ಲಿ ವೀಕ್ಷಿಸಬೇಕು?
ಪರಿಹಾರ:
ಸಲ್ಲಿಸಿದ ಫಾರ್ಮ್ ವಿವರಗಳನ್ನು ಈ ಕೆಳಗೆ ವೀಕ್ಷಿಸಬಹುದು ಇ ಫೈಲ್ ಟ್ಯಾಬ್--->ಆದಾಯ ತೆರಿಗೆ ಫಾರ್ಮ್‌ಗಳು--->CA ಮತ್ತು ತೆರಿಗೆದಾರರ ಲಾಗಿನ್ ಅಡಿಯಲ್ಲಿ ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ.
ಪ್ರಶ್ನೆ 18:
ನನ್ನ ಆದಾಯವು ತೆರಿಗೆ ವಿಧಿಸಲಾಗದ ಗರಿಷ್ಠ ಮೊತ್ತವನ್ನು ಮೀರದಿದ್ದರೂ ಫಾರ್ಮ್ 10B ಅನ್ನು ಸಲ್ಲಿಸಬೇಕೆ?
ಪರಿಹಾರ:
ದಯವಿಟ್ಟು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 10 ರ ಅಧಿನಿಯಮ (23C) ರ ಹತ್ತನೇ ನಿಬಂಧನೆಯ ಅಧಿನಿಯಮ (b) ಮತ್ತು ಸೆಕ್ಷನ್ 12A (1) ರ ಅಧಿನಿಯಮ (b) ನ ಉಪ ಅಧಿನಿಯಮ (ii) ಸಂಬಂಧಿತ ನಿಬಂಧನೆಗಳನ್ನು ನೋಡಿ ಜೊತೆಗೆ ಫಾರ್ಮ್10B ಅನ್ವಯಕ್ಕಾಗಿ ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಗಳೊಂದಿಗೆ ಓದಿ.
ಪ್ರಶ್ನೆ 19:
ಫಾರ್ಮ್ 10B ಅನ್ನು ಸಲ್ಲಿಸುವಾಗ, ಸಲ್ಲಿಕೆ ವಿಫಲವಾಗಿದೆ ಅಥವಾ "ದಯವಿಟ್ಟು ಈ ಕೆಳಗಿನ ಸಮಸ್ಯೆಗಳನ್ನು ಸರಿಪಡಿಸಿ ಮತ್ತು ಮತ್ತೆ ಸಲ್ಲಿಸಲು ಪ್ರಯತ್ನಿಸಿ ಎಂಬ ದೋಷಗಳನ್ನು ಪಡೆಯುತ್ತಿದ್ದೇನೆ: ಪೂರ್ಣ ಹೆಸರು, ಅಮಾನ್ಯ ಫ್ಲ್ಯಾಗ್, ಅಮಾನ್ಯ ಇನ್‌ಪುಟ್‌ಗಾಗಿ ಅಮಾನ್ಯ ಫಾರ್ಮ್ಯಾಟ್, ದಯವಿಟ್ಟು ಮಾನ್ಯವಾದ ಶೇಕಡಾವಾರು ನಮೂದಿಸಿ, ಅಮಾನ್ಯ ಫ್ಲಾಟ್, ಅಮಾನ್ಯ ವಿಳಾಸ, ಸಾಲು, ದಯವಿಟ್ಟು ಮಾನ್ಯವಾದ ಪಿನ್ ಕೋಡ್ ನಮೂದಿಸಿ." ಇತ್ಯಾದಿ. ಅಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು?
ಪರಿಹಾರ:
ಫೈಲಿಂಗ್ ಪ್ರಾರಂಭಿಸುವ ಮೊದಲು, ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲು ನಿಮಗೆ ಸಹಾಯ ಮಾಡುವ ಕೆಳಗಿನ ಹಂತಗಳನ್ನು ನೀವು ಖಚಿತಪಡಿಸಿಕೊಳ್ಳಬಹುದು,
- CA ಮತ್ತು ತೆರಿಗೆದಾರರ ಪ್ರೊಫೈಲ್ ಅನ್ನು ಎಲ್ಲಾ ಕಡ್ಡಾಯ ವಿವರಗಳೊಂದಿಗೆ ಅಪ್ಡೇಟ್ ಮಾಡಬೇಕು.
- ಅನ್ವಯವಾದರೆ ಪ್ರಮುಖ ವ್ಯಕ್ತಿಯ ವಿವರಗಳನ್ನು ಅಪ್ಡೇಟ್ ಮಾಡಬೇಕು.
- JSON ನಲ್ಲಿ ಯಾವುದೇ ದೋಷವಿಲ್ಲದಿದ್ದರೆ JSON ಯುಟಿಲಿಟಿಯಿಂದ ಡೌನ್‌ಲೋಡ್ ಆಗುತ್ತದೆ.
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯವಾದ JSON ಅನ್ನು ರಚಿಸಲು ಮತ್ತು ಅಪ್‌ಲೋಡ್ ಮಾಡಲು ಯಾವಾಗಲೂ ಡೌನ್‌ಲೋಡ್ ವಿಭಾಗದಲ್ಲಿ ಲಭ್ಯವಿರುವ ಇತ್ತೀಚಿನ ಯುಟಿಲಿಟಿಯನ್ನು ಬಳಸಿ.
ಪ್ರಶ್ನೆ 20:
ಆದಾಯ ತೆರಿಗೆ ಕಾಯಿದೆ, ,1961 ರ ಸೆಕ್ಷನ್ 13(3) ರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು ಫಾರ್ಮ್ 10B ನ S.no 41 ರಲ್ಲಿ ಒದಗಿಸುವುದು ಕಡ್ಡಾಯವಾಗಿದೆಯೇ, ಹಿಂದಿನ ಅವಧಿಯಲ್ಲಿ ಅಂತಹ ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಯಾವುದೇ ವಹಿವಾಟು ಇಲ್ಲದಿದ್ದರೂ ಸಹ?
ಪರಿಹಾರಗಳು:
SI.No 41 ನಲ್ಲಿ ಅಗತ್ಯವಿರುವ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. 9ನೇ ಅಕ್ಟೋಬರ್ 2023 ರ ಸುತ್ತೋಲೆ ಸಂಖ್ಯೆ 17/2023 ಮತ್ತು ವಿವರಗಳನ್ನು ನೀವು ನೋಡಬಹುದು, ಒಂದು ವೇಳೆ ವ್ಯಕ್ತಿಗಳ ಮಾಹಿತಿ ಲಭ್ಯವಿದ್ದರೆ ಅದನ್ನು ನೀಡಬಹುದು.
ಪ್ರಶ್ನೆ 21:
A.Y. 2023-24 ರ ಫಾರ್ಮ್ 10B ಗಾಗಿ UDIN ಅನ್ನು ಹೇಗೆ ರಚಿಸುವುದು?
ಪರಿಹಾರಗಳು:
A.Y. 2023-24 ರಿಂದ, ಮರು-ಅಧಿಸೂಚಿತ ಫಾರ್ಮ್ 10B ಗಾಗಿ, UDIN ಪೋರ್ಟಲ್‌ನಲ್ಲಿ ಫಾರ್ಮ್ ಹೆಸರನ್ನು "ಫಾರ್ಮ್ 10B- ಸೆಕ್ಷನ್ 10(23C)(b)(iv)/(v)/(vi)/(via) ರ ಹತ್ತನೇ ನಿಬಂಧನೆ ಮತ್ತು ಸೆಕ್ಷನ್ 12A(1)(b)(ii)" ಎಂದು ಆಯ್ಕೆ ಮಾಡುವ ಮೂಲಕ UDIN ಅನ್ನು ರಚಿಸಬಹುದು.
ಪ್ರಶ್ನೆ 22:
ಮರು-ಅಧಿಸೂಚಿತ ಫಾರ್ಮ್ 10B ಅನ್ನು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಮೂಲಕ ಸಲ್ಲಿಸಬಹುದೇ?
ಪರಿಹಾರಗಳು:
ಹೌದು, ಮರು ಅಧಿಸೂಚಿತ ಫಾರ್ಮ್ 10B ಯನ್ನು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಬಳಸಿ ಸಲ್ಲಿಸಬಹುದು.
ಪ್ರಶ್ನೆ 23:
ಫಾರ್ಮ್‌ನಲ್ಲಿ ಉಲ್ಲೇಖಿಸಲಾದ ವಹಿವಾಟಿನ ಎಲೆಕ್ಟ್ರಾನಿಕ್ ವಿಧಾನಗಳು ಯಾವುವು?
ಪರಿಹಾರಗಳು:
ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 6ABBA ನಲ್ಲಿ ಉಲ್ಲೇಖಿಸಿದಂತೆ, ಎಲೆಕ್ಟ್ರಾನಿಕ್ ವಿಧಾನಗಳು ಈ ಕೆಳಗಿನ ವಿಧಾನಗಳಾಗಿರಬೇಕು:
(a) ಕ್ರೆಡಿಟ್ ಕಾರ್ಡ್,
(b) ಡೆಬಿಟ್ ಕಾರ್ಡ್,
(c) ನೆಟ್ ಬ್ಯಾಂಕಿಂಗ್,
(d) IMPS (ತ್ವರಿತ ಪಾವತಿ ಸೇವೆ)
(e) UPI (ಏಕೀಕೃತ ಪಾವತಿ ಸೇವೆ),
(f) RTGS (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್),
(g) NEFT (ನ್ಯಾಶನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್),
(h) BHIM (ಭಾರತ್ ಇಂಟರ್‌ಫೇಸ್ ಫಾರ್ ಮನಿ) ಆಧಾರ್ ಪೇ.