Do not have an account?
Already have an account?
ದಸ್ತಾವೇಜು

ಪ್ರಶ್ನೆ 1:

ಯಾವ ತೆರಿಗೆ ಮೌಲ್ಯಮಾಪನ ವರ್ಷದಿಂದ ಮರು-ಅಧಿಸೂಚಿಸಲಾದ ಫಾರ್ಮ್ 10BB ಅನ್ವಯಿಸುತ್ತದೆ?

ಪರಿಹಾರ:

21ನೇ ಫೆಬ್ರವರಿ 2023 ದಿನಾಂಕದ ಸದರಿ ಅಧಿಸೂಚನೆ ಸಂಖ್ಯೆ 7/2023 ರ ಮೂಲಕ ಫಾರ್ಮ್ 10BB ಅಧಿಸೂಚಿಸಲಾಗಿದ್ದು ಇದು ತೆರಿಗೆ ಮೌಲ್ಯಮಾಪನ ವರ್ಷ 2023-24 ರಿಂದ ಅನ್ವಯಿಸುತ್ತದೆ.

 

ಪ್ರಶ್ನೆ 2:

ಅಧಿಸೂಚನೆ ಸಂಖ್ಯೆ 7/2023 ನೀಡುವ ಮೊದಲು ಸಲ್ಲಿಸಲಾಗುತ್ತಿದ್ದ ಫಾರ್ಮ್ 10BB ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇನ್ನೂ ಲಭ್ಯವಿದೆಯೇ?

ಪರಿಹಾರ:

ಅಸ್ತಿತ್ವದಲ್ಲಿರುವ ಫಾರ್ಮ್ 10BB ಪೋರ್ಟಲ್‌ನಲ್ಲಿ ಲಭ್ಯವಿದೆ ಮತ್ತು ಇದು ತೆರಿಗೆ ಮೌಲ್ಯಮಾಪನ ವರ್ಷ 2022-23 ರವರೆಗೆ ಮಾತ್ರ ಅನ್ವಯಿಸುತ್ತದೆ.

2022-23 ರವರೆಗಿನ ತೆರಿಗೆ ಮೌಲ್ಯಮಾಪನ ವರ್ಷಗಳ ಫೈಲಿಂಗ್‌ಗಳಿಗಾಗಿ, ಫಾರ್ಮ್ 10BB ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಅದನ್ನು ಈ ಮುಂದಿನ ರೀತಿಯಲ್ಲಿ ಪ್ರವೇಶಿಸಬಹುದು-

“ಇ-ಫೈಲ್ -----> ಆದಾಯ ತೆರಿಗೆ ಫಾರ್ಮ್‌ಗಳು ----> ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ---> ಯಾವುದೇ ಆದಾಯದ ಮೂಲವನ್ನು ಅವಲಂಬಿಸಿರದ ವ್ಯಕ್ತಿಗಳು----> CA ನಿಯೋಜನೆಗಾಗಿ ಫಾರ್ಮ್ 10BB”.

ಅಥವಾ

ಪರ್ಯಾಯವಾಗಿ, "ನನ್ನ CA" ಕಾರ್ಯನಿರ್ವಹಣೆಯನ್ನು ಬಳಸಿಕೊಂಡು ಫಾರ್ಮ್ ನಿಯೋಜಿಸಬಹುದು.

 

ಪ್ರಶ್ನೆ 3:

ಸದರಿ ಅಧಿಸೂಚನೆ ಸಂಖ್ಯೆ 7/2023 ರ ಮೂಲಕ ಫಾರ್ಮ್ 10BB ಸೂಚನೆಯನ್ನು ಸಲ್ಲಿಸಲು ಆಡಿಟೀ ಅಗತ್ಯ ಯಾವಾಗಿದೆ?

ಪರಿಹಾರ:

A.Y. 2023-24 ರಿಂದ, ಕೆಳಗೆ ತಿಳಿಸಲಾದ ಯಾವುದೇ ಷರತ್ತುಗಳು ಪೂರೈಸಿದಾಗ ಮರು-ಅಧಿಸೂಚಿಸಲಾದ ಫಾರ್ಮ್ 10B ಅನ್ವಯವಾಗುತ್ತದೆ-

  1. ಉಲ್ಲೇಖಿಸಲಾದ ಷರತ್ತು/ಸೆಕ್ಷನ್‌ನ ಉಪಬಂಧಗಳಿಗೆ ಪರಿಣಾಮ ಬೀರದಂತೆ ಆಡಿಟೀ ಒಟ್ಟು ಆದಾಯ, ಅನ್ವಯವಾಗುವಂತೆ-
  1. ಸೆಕ್ಷನ್ 10 ರ ಅಧಿನಿಯಮ 23C ಯ ಉಪ-ಅಧಿನಿಯಮಗಳ (iv), (v), (vi) ಮತ್ತು (via)
  2. ಸೆಕ್ಷನ್ 11 ಮತ್ತು 12,

ಹಿಂದಿನ ವರ್ಷದಲ್ಲಿ ಐದು ಕೋಟಿ ರೂಪಾಯಿಗಳನ್ನು ಮೀರಿದ್ದರೆ

  1. ಆಡಿಟೀ ಹಿಂದಿನ ವರ್ಷದಲ್ಲಿ ಯಾವುದಾದರೂ ವಿದೇಶಿ ಕೊಡುಗೆಯನ್ನು ಸ್ವೀಕರಿಸಿದ್ದರೆ
  2. ಆಡಿಟೀ ಹಿಂದಿನ ವರ್ಷದಲ್ಲಿ ತನ್ನ ಆದಾಯದ ಯಾವುದಾದರೂ ಒಂದು ಭಾಗವನ್ನು ಭಾರತದ ಹೊರಗೆ ವಿನಿಯೋಗಿಸಿದ್ದರೆ.

 

ಎಲ್ಲಾ ಇತರ ಪ್ರಕರಣಗಳಿಗೆ, ಮರು-ಅಧಿಸೂಚಿತ ಫಾರ್ಮ್ ಸಂಖ್ಯೆ 10BB ಅನ್ವಯಿಸುತ್ತದೆ.

ಹೆಚ್ಚಿನ ವಿವರಗಳಿಗಾಗಿ, ನೀವು ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಅನ್ನು ನೋಡಬಹುದು.

 

ಪ್ರಶ್ನೆ 4:

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 10BB (AY 2023-24 ರ ನಂತರ) ಸಲ್ಲಿಸುವ ಪ್ರಕ್ರಿಯೆ ಏನಿದೆ?

ಪರಿಹಾರ:

ಫಾರ್ಮ್ 10BB (AY 2023-24 ರ ನಂತರ) ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

ಹಂತ 1) ತೆರಿಗೆದಾರರ ಲಾಗಿನ್: CA ಗೆ ಫಾರ್ಮ್ ನಿಯೋಜಿಸಿ. ಫಾರ್ಮ್ ಅನ್ನು ಎರಡು ರೀತಿಯಲ್ಲಿ ನಿಯೋಜಿಸಬಹುದು-

  • ಇ-ಫೈಲ್ -----> ಆದಾಯ ತೆರಿಗೆ ಫಾರ್ಮ್‌ಗಳು ----> ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ---> ಯಾವುದೇ ಆದಾಯದ ಮೂಲವನ್ನು ಅವಲಂಬಿಸಿರದ ವ್ಯಕ್ತಿಗಳು----> ಫಾರ್ಮ್ 10BB (2023-24 ನಂತರದ ತೆರಿಗೆ ವರ್ಷ)
  • ಅಧಿಕೃತ ಪಾಲುದಾರರು-----> ನನ್ನ ಚಾರ್ಟರ್ಡ್ ಅಕೌಂಟೆಂಟ್ (CA) -----> CA ಸೇರಿಸಿ (ಒಂದುವೇಳೆ ಸೇರಿಸದಿದ್ದರೆ)----> ಫಾರ್ಮ್ 10BB ನಿಯೋಜಿಸಿ (2023-24 ನಂತರದ AY).

ಹಂತ 2) CA ಲಾಗಿನ್: ಕಾರ್ಯಪಟ್ಟಿಯ "ನೀವು ಕ್ರಮತೆಗೆದುಕೊಳ್ಳುವುದಕ್ಕಾಗಿ" ಟ್ಯಾಬ್‌ನಲ್ಲಿ CA ನಿಯೋಜನೆಯನ್ನು ಸ್ವೀಕರಿಸಿ ಫಾರ್ಮ್ ಅನ್ನು ಅಪ್‌ಲೋಡ್ ಮಾಡಬಹುದು.

ಹಂತ 3) ತೆರಿಗೆದಾರರ ಲಾಗಿನ್: ಕಾರ್ಯಪಟ್ಟಿಯ "ನೀವು ಕ್ರಮತೆಗೆದುಕೊಳ್ಳುವುದಕ್ಕಾಗಿ" ಟ್ಯಾಬ್‌ನಲ್ಲಿ CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ತೆರಿಗೆದಾರರು ಸ್ವೀಕರಿಸಬಹುದು.

 

ಸೆಕ್ಷನ್ 44AB ನಲ್ಲಿ ಉಲ್ಲೇಖಿಸಲಾದಂತೆ ನಿರ್ದಿಷ್ಟ ದಿನಾಂಕದ ಮೊದಲು ಫಾರ್ಮ್ ಅನ್ನು ಅಪ್‌ಲೋಡ್ ಮಾಡಿ ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಅಂದರೆ ಯಾವುದೇ ವಿಳಂಬವಾದ ಫೈಲಿಂಗ್ ಪರಿಣಾಮಗಳನ್ನು ತಪ್ಪಿಸಲು ಸೆಕ್ಷನ್ 139 ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವ ದಿನಾಂಕಕ್ಕಿಂತ ಒಂದು ತಿಂಗಳ ಹಿಂದಿನ ದಿನಾಂಕ.

 

ಪ್ರಶ್ನೆ 5:

ಮೇಲಿನ ಪ್ರಶ್ನೆ ಸಂಖ್ಯೆ 3 ರಲ್ಲಿ ಉಲ್ಲೇಖಿಸಿದಂತೆ "ಆಡಿಟೀ" ಯಾರು?

ಪರಿಹಾರ:

ಕಾಯಿದೆಯ ಸೆಕ್ಷನ್ 10 ರ ಅಧಿನಿಯಮ (23C) ರ ಉಪ-ಅಧಿನಿಯಮ (iv), (v), (vi) ಅಥವಾ (via) ನಲ್ಲಿ ಉಲ್ಲೇಖಿಸಲಾದ ಯಾವುದೇ ನಿಧಿ ಅಥವಾ ಸಂಸ್ಥೆ ಅಥವಾ ಟ್ರಸ್ಟ್ ಅಥವಾ ಯಾವುದೇ ವಿಶ್ವವಿದ್ಯಾನಿಲಯ ಅಥವಾ ಇತರ ಶಿಕ್ಷಣ ಸಂಸ್ಥೆ ಅಥವಾ ಯಾವುದೇ ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆಗಳು ಅಥವಾ ಕಾಯಿದೆಯ ಸೆಕ್ಷನ್ 11 ಅಥವಾ 12 ರಲ್ಲಿ ಉಲ್ಲೇಖಿಸಲಾದ ಯಾವುದೇ ಟ್ರಸ್ಟ್ ಅಥವಾ ಸಂಸ್ಥೆಯನ್ನು ಈ ಫಾರ್ಮ್‌ನಲ್ಲಿ "ಆಡಿಟೀ" ಎಂದು ಉಲ್ಲೇಖಿಸಲಾಗುತ್ತದೆ.

 

ಪ್ರಶ್ನೆ 6:

ಮರು-ಅಧಿಸೂಚಿತ ಫಾರ್ಮ್ 10BB ಯ ಪ್ರಕಾರ ಪ್ರಶ್ನೆ ಸಂಖ್ಯೆ 3 ರಲ್ಲಿ ಉಲ್ಲೇಖಿಸಿರುವ "ವಿದೇಶಿ ಕೊಡುಗೆ"ಯ ಅರ್ಥವೇನು?

ಪರಿಹಾರ:

ನಿಯಮ 16CC ಮತ್ತು ನಿಯಮ 17B ಗಾಗಿ, "ವಿದೇಶಿ ಕೊಡುಗೆ" ಎಂಬ ಪದವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 (2010 ರ 42) ರ ಸೆಕ್ಷನ್ 2 ರ ಸಬ್-ಸೆಕ್ಷನ್ (1) ರ ಅಧಿನಿಯಮ (h) ದಲ್ಲಿ ಅದೇ ಅರ್ಥವನ್ನು ಹೊಂದಿರುತ್ತದೆ.

 

ಪ್ರಶ್ನೆ 7:

ಫಾರ್ಮ್ 10BB (2023-24 ರ ನಂತರದ A.Y ಗಳಿಗೆ) ಸಲ್ಲಿಸಲು ಅಂತಿಮ ದಿನಾಂಕ ಯಾವುದು?

ಪರಿಹಾರ:

ಫಾರ್ಮ್ 10BB ಅನ್ನು ಸೆಕ್ಷನ್ 44AB ನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ದಿನಾಂಕದ ಮೊದಲು ಸಲ್ಲಿಸಬೇಕು, ಅಂದರೆ ಸೆಕ್ಷನ್ 139(1) ರ ಅಡಿಯಲ್ಲಿ ರಿಟರ್ನ್ ಸಲ್ಲಿಸುವ ನಿಗದಿತ ದಿನಾಂಕಕ್ಕಿಂತ ಒಂದು ತಿಂಗಳ ಮೊದಲು.

 

ಪ್ರಶ್ನೆ 8:

ಫಾರ್ಮ್ 10BB (AY 2023-24 ನಂತರ) ಸಲ್ಲಿಸುವಿಕೆ ಪೂರ್ಣಗೊಂಡಿದೆ ಎಂದು ಯಾವಾಗ ಪರಿಗಣಿಸಲಾಗುತ್ತದೆ?

ಪರಿಹಾರ:

ತೆರಿಗೆದಾರರು CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಿ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸಕ್ರಿಯ DSC ಅಥವಾ EVC ಯೊಂದಿಗೆ ಅದನ್ನು ಪರಿಶೀಲಿಸಿದಾಗ ಮಾತ್ರ ಫಾರ್ಮ್‌ನ ಫೈಲಿಂಗ್ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.

 

ಪ್ರಶ್ನೆ 9:

ಫಾರ್ಮ್ 10BB (AY 2023-24 ನಂತರ) ಗಾಗಿ ಯಾವ ಪರಿಶೀಲನೆಯ ವಿಧಾನಗಳು ಲಭ್ಯವಿರುತ್ತವೆ?

ಪರಿಹಾರ:

ಫಾರ್ಮ್ 10BB ಗಾಗಿ ಪರಿಶೀಲನೆಯ ವಿಧಾನಗಳು (AY 2023-24 ರ ನಂತರ):

  • CA ಗಳಿಗೆ, ಫಾರ್ಮ್ ಅನ್ನು ಅಪ್‌ಲೋಡ್ ಮಾಡಲು DSC ಆಯ್ಕೆ ಮಾತ್ರ ಲಭ್ಯವಿದೆ.
  • ಕಂಪನಿಗಳನ್ನು ಹೊರತುಪಡಿಸಿ ತೆರಿಗೆದಾರರಿಗೆ (ಆಡಿಟೀ) CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಮತ್ತು EVC ಎರಡೂ ಆಯ್ಕೆಗಳು ಲಭ್ಯವಿವೆ.
  • ಕಂಪನಿಗಳಿಗೆ, CA ಅಪ್‌ಲೋಡ್ ಮಾಡಿದ ಫಾರ್ಮ್ ಅನ್ನು ಸ್ವೀಕರಿಸಲು DSC ಆಯ್ಕೆ ಮಾತ್ರ ಲಭ್ಯವಿದೆ.

 

ಪ್ರಶ್ನೆ 10:

ನಾನು ಕಳೆದ ವರ್ಷ ಫಾರ್ಮ್ 10BB ಫೈಲ್ ಮಾಡಿದ್ದೇನೆ. A.Y .2023-24 ಅಥವಾ ಮುಂದಿನ A.Y ಗಳಿಗೆ ಯಾವ ಫಾರ್ಮ್, 10B ಅಥವಾ 10BB ಅನ್ನು ಸಲ್ಲಿಸುವ ಅಗತ್ಯವಿದೆ?

ಪರಿಹಾರ:

ಆದಾಯ ತೆರಿಗೆ ತಿದ್ದುಪಡಿ (3ನೇ ತಿದ್ದುಪಡಿ) ನಿಯಮಗಳು,2023 ನಿಯಮ 16CC ಮತ್ತು ನಿಯಮ 17B ಅನ್ನು ತಿದ್ದುಪಡಿ ಮಾಡಿದೆ. ಹಿಂದಿನ ಮೌಲ್ಯಮಾಪನ ವರ್ಷಗಳಲ್ಲಿ ಯಾವ ಫಾರ್ಮ್ ಅನ್ನು ಸಲ್ಲಿಸಲಾಗಿದೆ ಎಂಬುದನ್ನು ಲೆಕ್ಕಿಸದೆ, ತೆರಿಗೆ ವರ್ಷ 2023-24 ರ ನಂತರ ಫಾರ್ಮ್ 10B ಮತ್ತು 10BB ಯ ಅನ್ವಯವನ್ನು ತಿದ್ದುಪಡಿ ಮಾಡಿದ ನಿಯಮ 16CC ಮತ್ತು ನಿಯಮ 17B ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

 

ಪ್ರಶ್ನೆ 11:

"ವಿವರಗಳನ್ನು ಸೇರಿಸಿ" ಆಯ್ಕೆ ಮತ್ತು "CSV ಅಪ್ಲೋಡ್ ಮಾಡಿ" ಆಯ್ಕೆ ಒಟ್ಟಿಗೆ ಇರುವ ಕೋಷ್ಟಕವನ್ನು ಹೊಂದಿರುವ ಅನುಸೂಚಿಗಳಿಗಾಗಿ ದಾಖಲೆಗಳನ್ನು ಒದಗಿಸುವುದು ಹೇಗೆ?

ಪರಿಹಾರ:

ಕ್ರಮಸಂಖ್ಯೆ 23(vii), ಕ್ರಮಸಂಖ್ಯೆ 23(viii) ಮತ್ತು ಕ್ರಮಸಂಖ್ಯೆ 32 ರಲ್ಲಿನ ಎಲ್ಲಾ ಅನುಸೂಚಿಗಳಿಗಾಗಿ, ದಯವಿಟ್ಟು ಈ ಕೆಳಗಿನವುಗಳನ್ನು ಗಮನಿಸಿ:-

 

  1. 50 ಸಂಖ್ಯೆಗಳವರೆಗಿನ ದಾಖಲೆಗಳಿಗೆ: ಕೋಷ್ಟಕ ಅಥವಾ CSV ಆಯ್ಕೆಯನ್ನು ಬಳಸಬಹುದು. ಎರಡೂ ಸಂದರ್ಭಗಳಲ್ಲಿ, ದತ್ತಾಂಶವು ಕೋಷ್ಟಕದಲ್ಲಿ ಪ್ರತಿಫಲಿಸುತ್ತದೆ.
  2. 50 ಕ್ಕಿಂತ ಹೆಚ್ಚಿನ ದಾಖಲೆಗಳ ಸಂಖ್ಯೆಗೆ: CSV ಆಯ್ಕೆಯನ್ನು ಮಾತ್ರ ಬಳಸಬಹುದು. ಡೇಟಾವು CSV ಅಟ್ಯಾಚ್ಮೆಂಟ್ ಆಗಿ ಮಾತ್ರ ಗೋಚರಿಸುತ್ತದೆ.
  3. CSV ಅಪ್‌ಲೋಡ್ ಮಾಡಿ ಆಯ್ಕೆಯನ್ನು ಬಳಸುವಾಗ, ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:-

“ಎಕ್ಸೆಲ್ ಟೆಂಪ್ಲೇಟ್ ಡೌನ್‌ಲೋಡ್ ಮಾಡಿ à ದಾಖಲೆಗಳನ್ನು ಸೇರಿಸಿ àಎಕ್ಸೆಲ್ ಟೆಂಪ್ಲೇಟ್ ಅನ್ನು .csv ಫೈಲ್ ಆಗಿ ಪರಿವರ್ತಿಸಿà.csv ಫೈಲ್ ಅಪ್ಲೋಡ್ ಮಾಡಿ"

  1. CSV ಫೈಲ್ ಅನ್ನು ಅಪ್‌ಲೋಡ್ ಮಾಡಿದಾಗಲೆಲ್ಲಾ, ಅಸ್ತಿತ್ವದಲ್ಲಿರುವ ದಾಖಲೆಗಳು/ಡೇಟಾ ಯಾವುದಾದರೂ ಇದ್ದರೆ ಇದು ಅದನ್ನೆಲ್ಲಾ ತೆಗೆದುಹಾಕುತ್ತದೆ. ಹಳೆಯ ದಾಖಲೆಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಇತ್ತೀಚಿನ CSV ಮೂಲಕ ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.

 

ಪ್ರಶ್ನೆ 12:

ಫೈಲ್ ಮಾಡಿದ ಫಾರ್ಮ್ 10BB ಯನ್ನು (AY 2023-24 ರ ನಂತರದ) ಪರಿಷ್ಕರಿಸಬಹುದೇ?

ಪರಿಹಾರ:

ಹೌದು, ಫೈಲ್ ಮಾಡಿದ ಫಾರ್ಮ್ 10BB ಗಾಗಿ ಪರಿಷ್ಕರಣೆ ಆಯ್ಕೆ ಲಭ್ಯವಿದೆ.

 

ಪ್ರಶ್ನೆ 13:

ಫಾರ್ಮ್ ಭರ್ತಿ ಮಾಡಲು ಯಾವುದೇ ಸೂಚನೆ ಅಥವಾ ಮಾರ್ಗದರ್ಶನ ಲಭ್ಯವಿದೆಯೇ?

ಪರಿಹಾರ:

ಹೌದು, ಒಮ್ಮೆ CA ನಿಯೋಜನೆಯನ್ನು ಸ್ವೀಕರಿಸಿ ಅವರ ARCA ಲಾಗಿನ್ ಅಡಿಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಲು ಮುಂದಾದರೆ, ಅವರು ಪರದೆಯ ಮೇಲ್ಭಾಗದಲ್ಲಿ ಲಭ್ಯವಿರುವ ಸೂಚನಾ ಫೈಲ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಅಲ್ಲಿ ಫಾರ್ಮ್ 10BB (AY 2023-24 ರ ನಂತರ) ಪ್ಯಾನೆಲ್‌ಗಳನ್ನು ಒದಗಿಸಲಾಗಿದೆ.

ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ, ಸೂಚನಾ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

 

ಪ್ರಶ್ನೆ 14:

ಫಾರ್ಮ್ ಅನ್ನು ಸಲ್ಲಿಸುವಾಗ ಯಾವುದೇ ಅಟ್ಯಾಚ್ಮೆಂಟ್‌ಗಳನ್ನು ಲಗತ್ತಿಸುವ ಅಗತ್ಯವಿದೆಯೇ?

ಪರಿಹಾರ:

ಹೌದು, ಕೆಳಗಿನ ಅಟ್ಯಾಚ್ಮೆಂಟ್‌ಗಳನ್ನು "ಅಟ್ಯಾಚ್ಮೆಂಟ್‌ಗಳು" ಫಾರ್ಮ್‌ನ ಪ್ಯಾನೆಲ್ ಅಡಿಯಲ್ಲಿ ಲಗತ್ತಿಸುವುದು ಕಡ್ಡಾಯವಾಗಿದೆ-

  1. ಆದಾಯ ಮತ್ತು ವೆಚ್ಚದ ಖಾತೆ/ಲಾಭ ಮತ್ತು ನಷ್ಟದ ಖಾತೆ
  2. ಬ್ಯಾಲೆನ್ಸ್ ಶೀಟ್

"ವಿವಿಧ ಅಟ್ಯಾಚ್ಮೆಂಟ್‌ಗಳು" ಎಂಬ ಹೆಸರಿನಲ್ಲಿ ಐಚ್ಛಿಕ ಅಟ್ಯಾಚ್ಮೆಂಟ್‌ ಆಯ್ಕೆ ಇದೆ. ಅಲ್ಲಿ ಯಾವುದೇ ಇತರ ಸಂಬಂಧಿತ ದಾಖಲೆಯನ್ನು ಲಗತ್ತಿಸಬಹುದು.

ಪ್ರತಿ ಅಟ್ಯಾಚ್ಮೆಂಟ್ ಸೈಜ್ 5MB ಮೀರಬಾರದು ಎಂಬುದನ್ನು ದಯವಿಟ್ಟು ಗಮನಿಸಿ. ಎಲ್ಲಾ ಅಟ್ಯಾಚ್ಮೆಂಟ್‌ಗಳು PDF/ZIP ಫಾರ್ಮ್ಯಾಟ್‌ನಲ್ಲಿರಬೇಕು ಮತ್ತು ZIP ಫೈಲ್‌ನಲ್ಲಿರುವ ಎಲ್ಲಾ ಫೈಲ್‌ಗಳು PDF ಫಾರ್ಮ್ಯಾಟ್‌ನಲ್ಲಿರುವ ಫೈಲ್‌ಗಳನ್ನು ಮಾತ್ರ ಹೊಂದಿರಬೇಕು.

 

ಪ್ರಶ್ನೆ 15:

ಫಾರ್ಮ್ 10BB (A.Y. 2023-24 ರ ನಂತರ) ಫೈಲ್ ಮಾಡಿದ ನಂತರ ಸಲ್ಲಿಸಿದ ಫಾರ್ಮ್ ವಿವರಗಳನ್ನು ಎಲ್ಲಿ ವೀಕ್ಷಿಸಬೇಕು?

ಪರಿಹಾರ:

ಸಲ್ಲಿಸಿದ ಫಾರ್ಮ್ ವಿವರಗಳನ್ನು ಈ ಕೆಳಗೆ ವೀಕ್ಷಿಸಬಹುದು ಇ ಫೈಲ್ ಟ್ಯಾಬ್--->ಆದಾಯ ತೆರಿಗೆ ಫಾರ್ಮ್‌ಗಳು--->CA ಮತ್ತು ತೆರಿಗೆದಾರರ ಲಾಗಿನ್ ಅಡಿಯಲ್ಲಿ ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ.

 

ಪ್ರಶ್ನೆ 16:

ಫಾರ್ಮ್ 10BB (ತೆರಿಗೆ ವರ್ಷ 2023-24 ರಿಂದ) ಆಫ್‌ಲೈನ್ ಯುಟಿಲಿಟಿಯನ್ನು ನಾನು ಹೇಗೆ ಡೌನ್‌ಲೋಡ್ ಮಾಡಬಹುದು?

ಪರಿಹಾರ:

ಹೋಮ್‌ಗೆ ಹೋಗಿ | ಆದಾಯ ತೆರಿಗೆ ಇಲಾಖೆ -----> ಡೌನ್ಲೋಡ್‌ಗಳಿಗೆ ಹೋಗಿ------> ಆದಾಯ ತೆರಿಗೆ ಫಾರ್ಮ್‌ಗಳು------> ಫಾರ್ಮ್ 10BB (A.Y..2023-24 ರ ನಂತರ) -----> ಫಾರ್ಮ್ ಯುಟಿಲಿಟಿ.

ಪರ್ಯಾಯವಾಗಿ, ಫಾರ್ಮ್ ಅನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ ಆಫ್‌ಲೈನ್ ಫೈಲಿಂಗ್ ಆಯ್ಕೆಯ ಅಡಿಯಲ್ಲಿ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ CA ಈ ಮಾರ್ಗವನ್ನು ಪ್ರವೇಶಿಸಬಹುದು.

ಗಮನಿಸಿ: ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಯುಟಿಲಿಟಿಯ ಇತ್ತೀಚಿನ ಆವೃತ್ತಿಯನ್ನೇ ನೀವು ಯಾವಾಗಲೂ ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ.

 

ಪ್ರಶ್ನೆ 17:

ಫಾರ್ಮ್ 10BB (AY 2023-24 ರಿಂದ) ERI ಗಳ ಮೂಲಕ ಅಂದರೆ ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಮೂಲಕ ಸಲ್ಲಿಸಬಹುದೇ?

ಪರಿಹಾರ:

ಹೌದು, "ಆಫ್‌ಲೈನ್" ಫೈಲಿಂಗ್ ವಿಧಾನವನ್ನು ಬಳಸಿಕೊಂಡು ERI ಗಳ ಮೂಲಕವೂ ಈ ಫಾರ್ಮ್ ಅನ್ನು ಸಲ್ಲಿಸಬಹುದು.

 

ಪ್ರಶ್ನೆ 18:

ನನ್ನ ಆದಾಯವು ಮೂಲಭೂತ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಫಾರ್ಮ್ 10BB ಅನ್ನು ಸಲ್ಲಿಸುವ ಅಗತ್ಯವಿದೆಯೇ?

ಪರಿಹಾರ:

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 10 ರ ಅಧಿನಿಯಮ (23C) ಗೆ ಹತ್ತನೇ ಉಪಬಂಧದ ಅಧಿನಿಯಮ (b) ಮತ್ತು ಸೆಕ್ಷನ್ 12A (1) ರ ಅಧಿನಿಯಮ (b) ಯ ಉಪ-ಅಧಿನಿಯಮ (ii) ಸಂಬಂಧಿತ ನಿಬಂಧನೆಗಳನ್ನು ದಯವಿಟ್ಟು ನೋಡಿ ಜೊತೆಗೆ ಫಾರ್ಮ್ 10BB ಯ ಅನ್ವಯಕ್ಕಾಗಿ ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 16CC ಮತ್ತು ನಿಯಮ 17B ಜೊತೆಗೆ ಓದಿಕೊಳ್ಳಿ.

 

ಪ್ರಶ್ನೆ 19:

ಫಾರ್ಮ್ 10BB ನಲ್ಲಿ, ಅಕೌಂಟೆಂಟ್ ಪ್ಯಾನಲ್ ವರದಿಯ ಅಡಿಯಲ್ಲಿ, "ಸಹಕಾರ ಸಂಘ/ ಕಂಪನಿ/ಲಾಭರಹಿತ ಸಂಸ್ಥೆ/ಇತ್ಯಾದಿ" ಅಯ್ದುಕೊಳ್ಳಲು ಸಾಧ್ಯವಿಲ್ಲ. ನಾನು ಯಾವ ಆಯ್ಕೆಯನ್ನು ಆರಿಸಬೇಕು?

ಪರಿಹಾರ:

ಫಾರ್ಮ್ 10BB "ಅಕೌಂಟೆಂಟ್‌ನಿಂದ ವರದಿ" ಪ್ಯಾನೆಲ್-ಫಂಡ್, ಟ್ರಸ್ಟ್, ಸಂಸ್ಥೆ, ವಿಶ್ವವಿದ್ಯಾನಿಲಯ, ಇತರ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಅಥವಾ ಇತರ ವೈದ್ಯಕೀಯ ಸಂಸ್ಥೆಗಳ ಅಡಿಯಲ್ಲಿ ಆಡಿಟೀ ವಿವರಗಳ ಆಯ್ಕೆಗಾಗಿ ಈ ಕೆಳಗಿನ ಆಯ್ಕೆಗಳನ್ನು ನೀಡುತ್ತದೆ.

ತಾತ್ಕಾಲಿಕ/ಅಂತಿಮ ನೋಂದಣಿಯನ್ನು ನೀಡಲಾದ ಸಂಸ್ಥೆಯ ಪ್ರಕಾರ ಅಥವಾ ಸಂಸ್ಥೆಯು ನಡೆಸುವ ಚಟುವಟಿಕೆಗಳ ಸ್ವರೂಪ ಅಥವಾ ಆಧಾರವಾಗಿ ತೆಗೆದುಕೊಳ್ಳಬಹುದಾದ ಯಾವುದೇ ಇತರ ಸಂಬಂಧಿತ ಅಂಶಗಳ ಪ್ರಕಾರ ಆಡಿಟೀಯವರ ಆಧಾರದ ಮೇಲೆ ಸೂಕ್ತವಾದದನ್ನು ನೀವು ಆಯ್ಕೆ ಮಾಡಬಹುದು.

 

ಪ್ರಶ್ನೆ 20:

ನಾನು 'ಸಲ್ಲಿಕೆ ವೈಫಲ್ಯ' ದೋಷವನ್ನು ಪಡೆಯುತ್ತಿದ್ದೇನೆ

ಅಥವಾ

"ದಯವಿಟ್ಟು ಈ ಕೆಳಗಿನ ಸಮಸ್ಯೆಗಳನ್ನು ಸರಿಪಡಿಸಿ ಮತ್ತು ಪುನಃ ಸಲ್ಲಿಸಲು ಪ್ರಯತ್ನಿಸಿ: ಪೂರ್ಣ ಹೆಸರು ಅಮಾನ್ಯವಾದ ಸ್ವರೂಪದಲ್ಲಿದೆ, ಅಮಾನ್ಯ ಫ್ಲ್ಯಾಗ್, ಅಮಾನ್ಯ ಇನ್‌ಪುಟ್, ದಯವಿಟ್ಟು ಮಾನ್ಯವಾದ ಶೇಕಡಾವಾರು ನಮೂದಿಸಿ, ಅಮಾನ್ಯ ಫ್ಲಾಟ್, ಅಮಾನ್ಯ ವಿಳಾಸ, ಸಾಲು, ದಯವಿಟ್ಟು ಮಾನ್ಯವಾದ ಪಿನ್ ಕೋಡ್ ನಮೂದಿಸಿ" ಎಂದು ತೋರಿಸಿದಾಗ ಅದರ ಸಲ್ಲಿಕೆಯಲ್ಲಿ ದೋಷವಿರುತ್ತದೆ ಎಂದರ್ಥ. ನಾನು ಈಗ ಏನು ಮಾಡಬೇಕು?

ಪರಿಹಾರ:

ಪ್ರಮುಖ ವ್ಯಕ್ತಿ ವಿವರಗಳು ಸೇರಿದಂತೆ ಎಲ್ಲಾ ಕಡ್ಡಾಯ ಕ್ಷೇತ್ರಗಳಿಗೆ ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಅವರ ಪ್ರೊಫೈಲ್ ಪೂರ್ಣಗೊಂಡಿದೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಪೂರ್ಣಗೊಂಡ ನಂತರ, ಹಳೆಯ ಡ್ರಾಫ್ಟ್ ಡಿಲೀಟ್ ಮಾಡಿ ಮತ್ತು ಹೊಸ ಫಾರ್ಮ್ ಸಲ್ಲಿಸಲು ಮರು-ಪ್ರಯತ್ನಿಸಿ.

 

ಪ್ರಶ್ನೆ 21:

ಸೆಕ್ಷನ್ 13(3) ರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವ್ಯಕ್ತಿಯ ವಿವರಗಳನ್ನು ಫಾರ್ಮ್ 10BB ಯ ಕ್ರಮ ಸಂಖ್ಯೆ 28 ರಲ್ಲಿ ಒದಗಿಸುವುದು ಕಡ್ಡಾಯವಾಗಿದೆಯೇ, ಸಬ್-ಸೆಕ್ಷನ್ (1) ರ ಅಧಿನಿಯಮ (c) ಅಥವಾ ಸೆಕ್ಷನ್ 13 ರ ಸಬ್-ಸೆಕ್ಷನ್ (2) ನಲ್ಲಿ ಷರತ್ತುಗಳು/ಮಾನದಂಡಗಳು ಅನ್ವಯಿಸದಿದ್ದರು ಕೂಡ?

ಪರಿಹಾರ:

ಕ್ರಮ ಸಂಖ್ಯೆ 28 ರಲ್ಲಿ ಅಗತ್ಯವಿರುವ ನಿರ್ದಿಷ್ಟ ವ್ಯಕ್ತಿಗಳ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು 9ನೇ ಅಕ್ಟೋಬರ್ 2023 ರ ಸುತ್ತೋಲೆ ಸಂಖ್ಯೆ 17/2023 ಅನ್ನು ನೋಡಬಹುದು ಮತ್ತು ಲಭ್ಯವಿರುವ ವ್ಯಕ್ತಿಗಳ ವಿವರಗಳನ್ನು ಒದಗಿಸಬಹುದು.

 

ಪ್ರಶ್ನೆ 22:

A.Y. 2023-24 ಕ್ಕಾಗಿ ಫಾರ್ಮ್ 10BB ಗಾಗಿ UDIN ಅನ್ನು ಹೇಗೆ ರಚಿಸುವುದು?

ಪರಿಹಾರ:

ಮರು-ಅಧಿಸೂಚಿಸಲಾದ ಫಾರ್ಮ್ 10BB, A.Y. 2023-24 ರಿಂದ ಅನ್ವಯಿಸುತ್ತದೆ. UDIN ಪೋರ್ಟಲ್‌ನಲ್ಲಿ ಫಾರ್ಮ್ ಹೆಸರನ್ನು "ಫಾರ್ಮ್ 10BB-ಸೆಕ್ಷನ್ 10(23C)(b)(iv)/(v)/(vi)/(via) ನ ಹತ್ತನೇ ನಿಬಂಧನೆ ಮತ್ತು ಸೆಕ್ಷನ್ 12A(1)(b)(ii)" ಆಗಿ ಆಯ್ಕೆ ಮಾಡುವ ಮೂಲಕ UDIN ಅನ್ನು ರಚಿಸಬೇಕಾಗಿದೆ.