Do not have an account?
Already have an account?

1. ಸ್ಥಿರ ಪಾಸ್‌ವರ್ಡ್‌ ಎಂದರೇನು?
ಸ್ಥಿರ ಪಾಸ್‌ವರ್ಡ್ ಎರಡನೇ ಪಾಸ್‌ವರ್ಡ್ ಆಗಿದ್ದು, ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಲು ಬಳಸುವುದರ ಜೊತೆಗೆ ಬಳಸುತ್ತೀರಿ. ನಿಮ್ಮ ಇ-ಫೈಲಿಂಗ್ ಪಾಸ್‌ವರ್ಡ್ ಮತ್ತು ಸ್ಥಿರ ಪಾಸ್‌ವರ್ಡ್ ನಡುವಿನ ವ್ಯತ್ಯಾಸವು ಹೀಗಿದೆ:

  • ನೀವು ನಿಮ್ಮ ಸ್ಥಿರ ಪಾಸ್‌ವರ್ಡ್ ಅನ್ನು‌ ರಚಿಸಬೇಕಾಗಿಲ್ಲ, ಇದು ಸಿಸ್ಟಮ್-ರಚಿತವಾಗಿದೆ (ನೀವು ಸ್ಥಿರ ಪಾಸ್‌ವರ್ಡ್‌ ಬಳಸಲು ಆಯ್ಕೆ ಮಾಡಿದ್ದರೆ).
  • ಸ್ಥಿರ ಪಾಸ್‌ವರ್ಡ್‌ ಬಳಕೆಯು ಐಚ್ಛಿಕವಾಗಿದೆ, ಇ-ಫೈಲಿಂಗ್ ಪಾಸ್‌ವರ್ಡ್ ಕಡ್ಡಾಯವಾಗಿದೆ.
  • ಸ್ಥಿರ ಪಾಸ್‌ವರ್ಡ್ ಎರಡನೇ ದೃಢೀಕರಣ ಅಂಶವಾಗಿದ್ದು, ನಿಮ್ಮ ಇ-ಫೈಲಿಂಗ್ ಪಾಸ್‌ವರ್ಡ್ ಮೊದಲನೆಯದಾಗಿರುತ್ತದೆ.

2. ಸ್ಥಿರ ಪಾಸ್‌ವರ್ಡ್ ರಚಿಸುವುದು ಹೇಗೆ ಉಪಯುಕ್ತವಾಗಿದೆ?
ಆಧಾರ್ OTP, EVC, ನೆಟ್ ಬ್ಯಾಂಕಿಂಗ್, DSC. ಅಥವಾ QR ಕೋಡ್‌ನಂತಹ ಎರಡು ಅಂಶಗಳ ದೃಢೀಕರಣಕ್ಕಾಗಿ ನೀವು ಬಳಸಬಹುದಾದ ವಿವಿಧ ವಿಧಾನಗಳಿವೆ. ಈ ವಿಧಾನಗಳು ಸಾಮಾನ್ಯವಾಗಿ ಉತ್ತಮ ನೆಟ್‌ವರ್ಕ್ ಸಂಪರ್ಕವನ್ನು ಅವಲಂಬಿಸಿರುತ್ತದೆ. ನೀವು ಕಡಿಮೆ ಮೊಬೈಲ್ ನೆಟ್‌ವರ್ಕ್ ಹೊಂದಿರುವಾಗ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು ಸಾಧ್ಯವಿರದಿದ್ಧಾಗ ಸ್ಥಿರ ಪಾಸ್‌ವರ್ಡ್‌ಗಳು ಉಪಯುಕ್ತವಾಗುತ್ತದೆ.

3. ನನ್ನ ಸ್ವಂತ ಸ್ಥಿರ ಪಾಸ್‌ವರ್ಡ್‌ ಅನ್ನು ನಾನು ರಚಿಸಬೇಕೇ?
ಇಲ್ಲ. ಸ್ಥಿರ ಪಾಸ್‌ವರ್ಡ್‌ಗಳು ಸಿಸ್ಟಮ್-ರಚಿತವಾಗಿದ್ದು, ಅದನ್ನು ಇ - ಫೈಲಿಂಗ್‌ನಲ್ಲಿನ ನಿಮ್ಮ ನೋಂದಾಯಿತ ಇಮೇಲ್ ID ಗೆ ಇಮೇಲ್ ಮಾಡಲಾಗುತ್ತದೆ.

4. ಸ್ಥಿರ ಪಾಸ್‌ವರ್ಡ್‌ ರಚಿಸಲು ಇರುವ ನಿಯಮಗಳು ಯಾವುವು?

  • ಒಂದು ಸಮಯದಲ್ಲಿ, ಒಟ್ಟು 10 ಸ್ಥಿರ ಪಾಸ್‌ವರ್ಡ್‌ಗಳನ್ನು ರಚಿಸಲಾಗುತ್ತದೆ ಮತ್ತು ಇ-ಫೈಲಿಂಗ್‌ನಲ್ಲಿನ ನಿಮ್ಮ ನೋಂದಾಯಿತ ಇಮೇಲ್ ID ಗೆ ಕಳುಹಿಸಲಾಗುತ್ತದೆ.
  • ರಚಿಸಲಾದ 10 ಪಾಸ್‌ವರ್ಡ್‌ಗಳಿಂದ, ಒಂದು ಲಾಗಿನ್‌ಗೆ ಕೇವಲ ಒಂದು ಪಾಸ್‌ವರ್ಡ್‌ ಅನ್ನು ಮಾತ್ರ ಬಳಸಬಹುದು ಮತ್ತು ಇದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ನೀವು ರಚಿಸಿದ ಪಟ್ಟಿಯಿಂದ ನೀವು ಇನ್ನೊಂದನ್ನು ಆಯ್ಕೆ ಮಾಡಬೇಕಾಗುತ್ತದೆ.
  • ನಿಮಗೆ ಕಳುಹಿಸಲಾದ ಸ್ಥಿರ ಪಾಸ್‌ವರ್ಡ್‌ಗಳು ರಚನೆಯಾದ ದಿನಾಂಕದಿಂದ 30 ದಿನಗಳವರೆಗೆ ಸಕ್ರಿಯವಾಗಿರುತ್ತವೆ.
  • ನೀವು ಸ್ಥಿರ ಪಾಸ್‌ವರ್ಡ್‌ ರಚನೆಗೊಂಡ ನಂತರ, ಎಲ್ಲಾ 10 ಪಾಸ್‌ವರ್ಡ್‌ಗಳನ್ನು ಉಪಯೋಗಿಸುವವರೆಗೆ, ಅಥವಾ 30 ದಿನಗಳವರೆಗೆ, ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ, ಸ್ಥಿರ ಪಾಸ್‌ವರ್ಡ್‌ ರಚಿಸಿ ಬಟನ್‌ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. 10 ಪಾಸ್‌ವರ್ಡ್‌ಗಳು ಅಥವಾ 30 ದಿನಗಳ ಮುಕ್ತಾಯದ ನಂತರ, ನೀವು ಪುನಃ ಸ್ಥಿರ ಪಾಸ್‌ವರ್ಡ್‌ಗಳನ್ನು ರಚಿಸಬೇಕಾಗುತ್ತದೆ.

5. ನಾನು ಸ್ಥಿರ ಪಾಸ್‌ವರ್ಡ್‌ಗಳನ್ನು ಹಲವು ಬಾರಿ ರಚಿಸಬಹುದೇ, ಅಥವಾ ಇದು ಒಂದು ಬಾರಿಯ ಚಟುವಟಿಕೆಯೇ?
ಹೌದು, ನೀವು ಸ್ಥಿರ ಪಾಸ್‌ವರ್ಡ್‌ಗಳನ್ನು ಹಲವು ಬಾರಿ ರಚಿಸಬಹುದು, ಆದರೆ ಅವಧಿ ಮುಗಿದ ನಂತರ`ಮಾತ್ರ (ರಚನೆಗೊಂಡ 30 ದಿನಗಳ ನಂತರ) ಅಥವಾ ಎಲ್ಲಾ 10 ಸ್ಥಿರ ಪಾಸ್‌ವರ್ಡ್‌ಗಳ ಬಳಕೆಯ ನಂತರ.

6. ನಾನು ಈಗಾಗಲೇ ಇ-ಫೈಲಿಂಗ್ ಪಾಸ್‌ವರ್ಡ್ ಹೊಂದಿದ್ದೇನೆ. ನನಗೆ ಸ್ಥಿರ ಪಾಸ್‌ವರ್ಡ್ ಏಕೆ ಬೇಕು?
ವರ್ಧಿತ ಭದ್ರತೆಗಾಗಿ, ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಲು, ಎರಡು ಅಂಶಗಳ ದೃಢೀಕರಣವನ್ನು ಒಳಗೊಂಡಿರುತ್ತದೆ. ಎರಡು ಅಂಶಗಳ ದೃಢೀಕರಣವು ಹೆಚ್ಚುವರಿ ಭದ್ರತಾ ಪದರವನ್ನು ಹೊಂದಿರುವ ಒಂದು ವಿಧಾನವಾಗಿದೆ (ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಜೊತೆಗೆ). ಸ್ಥಿರ ಪಾಸ್‌ವರ್ಡ್, ನಿಮ್ಮ ಇ-ಫೈಲಿಂಗ್ ಬಳಕೆದಾರ ಐ.ಡಿ. ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರದ ಎರಡು-ಅಂಶಗಳ ದೃಢೀಕರಣ ವಿಧಾನಗಳಲ್ಲಿ ಒಂದಾಗಿದೆ.

7. ಇ-ಫೈಲಿಂಗ್‌ಗಾಗಿ ಸ್ಥಿರ ಪಾಸ್‌ವರ್ಡ್‌ ಏನನ್ನು ಒಳಗೊಂಡಿರುತ್ತದೆ?
ಇ-ಫೈಲಿಂಗ್ ಸ್ಥಿರ ಪಾಸ್‌ವರ್ಡ್ ಎಂಬುದು ಯಾದೃಚ್ಛಿಕವಾಗಿ ರಚಿಸಲಾದ 6-ಅಂಕಿಗಳ ಅಕ್ಷರಾಂಕೀಯ ಕೋಡ್ ಆಗಿದೆ.

8. ನನ್ನ ಬಳಕೆಯಾಗದ ಸ್ಥಿರ ಪಾಸ್‌ವರ್ಡ್‌ಗಳ ಸ್ಥಿತಿಯ ಬಗ್ಗೆ ನಾನು ಹೇಗೆ ತಿಳಿದುಕೊಳ್ಳಬಹುದು?
ನಿಮ್ಮ ಇ-ಫೈಲಿಂಗ್ ಡ್ಯಾಶ್‌ಬೋರ್ಡ್‌ನ ಎಡಭಾಗದ ಮೆನುವಿನಿಂದ, "ಸ್ಥಿರ ಪಾಸ್‌ವರ್ಡ್" ಅನ್ನು ಕ್ಲಿಕ್ ಮಾಡಿ. ನೀವು ಕಳೆದ 30 ದಿನಗಳಲ್ಲಿ ಯಾವುದೇ ಸ್ಥಿರ ಪಾಸ್‌ವರ್ಡ್‌ಗಳನ್ನು ರಚಿಸಿರುವಿರಾ ಮತ್ತು ನೀವು ಎಲ್ಲಾ 10 ಸ್ಥಿರ ಪಾಸ್‌ವರ್ಡ್‌ಗಳನ್ನು ಬಳಸಿರುವಿರಾ ಎಂಬುದನ್ನು ಸಿಸ್ಟಂ ಪರಿಶೀಲಿಸುತ್ತದೆ. ನೀವು ಯಾವುದೇ ಬಳಕೆಯಾಗದ ಸ್ಥಿರ ಪಾಸ್‌ವರ್ಡ್‌ಗಳನ್ನು ಹೊಂದಿದ್ದರೆ, 30 ದಿನಗಳಲ್ಲಿ ನಿಮ್ಮ ಬಳಿ ಇನ್ನೂ ಎಷ್ಟು ಪಾಸ್‌ವರ್ಡ್‌ಗಳು ಉಳಿದಿವೆ ಎಂಬುದನ್ನು ಸೂಚಿಸುವ ಸಂದೇಶವು ಕಾಣಿಸುತ್ತದೆ."ಸ್ಥಿರ ಪಾಸ್‌ವರ್ಡ್‌ ಅನ್ನು ಪುನಃ ಕಳುಹಿಸಿ" ಎಂಬುದರ ಮೇಲೆ ಕ್ಲಿಕ್ ಮಾಡಿ, ಮತ್ತು ಇ-ಫೈಲಿಂಗ್‌ನಲ್ಲಿ ನಿಮ್ಮ ನೋಂದಾಯಿತ ಇ-ಮೇಲ್ ID ಗೆ ಬಳಕೆಯಾಗದ ಸ್ಥಿರ ಪಾಸ್‌ವರ್ಡ್‌ಗಳ ಪಟ್ಟಿಯೊಂದನ್ನು ಸ್ವೀಕರಿಸುತ್ತೀರಿ.

9. ಸ್ಥಿರ ಪಾಸ್‌ವರ್ಡ್‌ ಅನ್ನು ನಾನು ಎಲ್ಲಿ ನಮೂದಿಸಬೇಕು?
ಸ್ಥಿರ ಪಾಸ್‌ವರ್ಡ್ ಬಳಸಲು, ನೀವು ಈ ಹಿಂದೆ ಅವುಗಳನ್ನು ರಚಿಸಿರಬೇಕು. ಈ ಕೆಳಗಿನ ಸಂದರ್ಭಗಳಲ್ಲಿ ನೀವು ಮತ್ತೆ ಸ್ಥಿರ ಪಾಸ್‌ವರ್ಡ್‌ಗಳನ್ನು ರಚಿಸಬೇಕಾಗುತ್ತದೆ:

  • ನೀವು ಈ ಹಿಂದೆ ರಚಿಸಲಾದ ಎಲ್ಲಾ 10 ಪಾಸ್‌ವರ್ಡ್‌ಗಳನ್ನು ಬಳಸಿದ್ದರೆ, ಅಥವಾ
  • ನೀವು ಕೊನೆಯದಾಗಿ ಸ್ಥಿರ ಪಾಸ್‌ವರ್ಡ್‌ಗಳನ್ನು ರಚಿಸಿದ ನಂತರ 30 ದಿನಗಳು ಕಳೆದಿದ್ದರೆ (ನೀವು ಎಲ್ಲಾ 10 ಅನ್ನು ಬಳಸದಿದ್ದರೂ ಸಹ)

ಸ್ಥಿರ ಪಾಸ್‌ವರ್ಡ್‌ಗಳನ್ನು ಬಳಸುವ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ:

  1. ಇ-ಫೈಲಿಂಗ್ ಹೋಮ್ ಪೇಜ್‌ಗೆ ಹೋಗಿ, ನಿಮ್ಮ ಇ-ಫೈಲಿಂಗ್ ಬಳಕೆದಾರ ID ಮತ್ತು ಪಾಸ್‌ವರ್ಡ್ ನಮೂದಿಸಿ
  2. ಇದು ನೀವೇ ಎಂದು ಪರಿಶೀಲಿಸಿ ಪೇಜ್‌ನಲ್ಲಿ, ಇನ್ನೊಂದು ವಿಧಾನವನ್ನು ಪ್ರಯತ್ನಿಸಿ ಅನ್ನು ಕ್ಲಿಕ್ ಮಾಡಿ.
  3. ಮುಂದಿನ ಪೇಜ್‌ನಲ್ಲಿ, ಸ್ಥಿರ ಪಾಸ್ವರ್ಡ್ ಅನ್ನು ಕ್ಲಿಕ್ ಮಾಡಿ, ನಂತರ ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.
  4. ಸ್ಥಿರ ಪಾಸ್ವರ್ಡ್ ಪೇಜ್‌ನಲ್ಲಿ, ಟೆಕ್ಸ್ಟ್‌ಬಾಕ್ಸ್‌ನಲ್ಲಿ, ನಿಮ್ಮ ಮಾನ್ಯವಾದ ಸ್ಥಿರ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಿ.

10. ನಿರ್ದಿಷ್ಟ ಸ್ಥಿರ ಪಾಸ್‌ವರ್ಡ್‌ ಅನ್ನು ಮೊದಲೇ ಬಳಸಲಾಗಿದೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?
ಸ್ವತಃ ನೀವೇ ಬಳಸಿದ ಪಾಸ್‌ವರ್ಡ್‌ಗಳ ಟ್ರ್ಯಾಕ್ ಇರಿಸಬಹುದು, ಅಥವಾ ನಿಮ್ಮ ಡ್ಯಾಶ್‌ಬೋರ್ಡ್‌ > ಸ್ಥಿರ ಪಾಸ್‌ವರ್ಡ್ ಟ್ಯಾಬ್‌ಗೆ ಹೋಗಿ > ಸ್ಥಿರ ಪಾಸ್‌ವರ್ಡ್‌ ಪುನಃ ಕಳುಹಿಸಿ ‌ಅನ್ನು ಕ್ಲಿಕ್ ಮಾಡಿ. ನಿಮ್ಮ ಇ-ಫೈಲಿಂಗ್ ನೋಂದಾಯಿತ ಇಮೇಲ್ ID ಯಲ್ಲಿ ಬಳಕೆಯಾಗದ ಸ್ಥಿರ ಪಾಸ್‌ವರ್ಡ್‌ಗಳ ಪಟ್ಟಿಯೊಂದಿಗಿನ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ.

11. ಸ್ಥಿರ ಪಾಸ್‌ವರ್ಡ್‌ಗಳನ್ನು ಬಳಸುವುದು ಕಡ್ಡಾಯವೇ?
ಇಲ್ಲ. ನಿಮ್ಮ ಲಾಗಿನ್ ಅನ್ನು ಸುರಕ್ಷಿತಗೊಳಿಸಲು ಆಧಾರ್ OTP, EVC, ನೆಟ್ ಬ್ಯಾಂಕಿಂಗ್, DSC, ಅಥವಾ QR ಕೋಡ್‌ನಂತಹ ಇತರೆ ವಿಧಾನಗಳನ್ನು ನೀವು ಆಯ್ಕೆ ಮಾಡಬಹುದು. ನೀವು ಕಡಿಮೆ ಅಥವಾ ಮೊಬೈಲ್ ನೆಟ್‌ವರ್ಕ್ ಸಂಪರ್ಕವಿಲ್ಲದ ಪ್ರದೇಶದಲ್ಲಿದ್ದರೆ, ನಿಮ್ಮ ಮೊಬೈಲ್‌ನಲ್ಲಿ OTP/EVC ಸ್ವೀಕರಿಸಲು ನಿಮಗೆ ಕಷ್ಟವಾಗಬಹುದಾದಲ್ಲಿ ಸ್ಥಿರ ಪಾಸ್ವರ್ಡ್ ಸಹಾಯಕವಾಗಿದೆ.