Do not have an account?
Already have an account?

1. ತೆರಿಗೆ ಮೌಲ್ಯಮಾಪನ ವರ್ಷ 2021-22 ಅವಧಿಗೆ ITR-2 ಫೈಲ್ ಮಾಡಲು ಯಾರು ಅರ್ಹರಾಗಿದ್ದಾರೆ?
ಈ ಕೆಳಗಿನ ವ್ಯಕ್ತಿಗಳು ಅಥವಾ HUF ಗಳು ITR-2 ಅನ್ನು ಫೈಲ್ ಮಾಡಬಹುದು:

  • ITR-1 ಅನ್ನು ಫೈಲ್ ಮಾಡಲು ಅರ್ಹತೆ ಇಲ್ಲದವರು (ಸಹಜ್)
  • ವ್ಯಾಪಾರ ಅಥವಾ ವೃತ್ತಿಯಲ್ಲಿನ ಲಾಭ ಮತ್ತು ಗಳಿಕೆಗಳಿಂದ ಬಂದ ಆದಾಯವನ್ನು ಹೊಂದಿಲ್ಲದಿದ್ದರೆ ಮತ್ತು ವ್ಯಾಪಾರ ಅಥವಾ ವೃತ್ತಿಯಲ್ಲಿ ಈ ಕೆಳಗಿನ ರೂಪದಲ್ಲಿಯೂ ಲಾಭ ಮತ್ತು ಗಳಿಕೆಗಳಿಂದ ಬಂದ ಆದಾಯವನ್ನು ಹೊಂದಿಲ್ಲದಿದ್ದರೆ:
    • ಬಡ್ಡಿ
    • ಸಂಬಳ
    • ಬೋನಸ್
    • ಪಾಲುದಾರಿಕೆ ಸಂಸ್ಥೆಯಿಂದ ಅವರು ಪಡೆದ ಅಥವಾ ಸ್ವೀಕರಿಸಿದ ಯಾವುದೇ ಹೆಸರಿನಲ್ಲಿರುವ ಕಮಿಷನ್ ಅಥವಾ ಸಂಭಾವನೆ
  • ಸಂಗಾತಿ, ಅಪ್ರಾಪ್ತ ಮಗು, ಮುಂತಾದ ಇನ್ನೊಬ್ಬ ವ್ಯಕ್ತಿಯ ಆದಾಯವನ್ನು ಹೊಂದಿದ್ದರೆ, ಒಂದು ವೇಳೆ ಸೇರಿಸಬೇಕಾದ ಆದಾಯವು ಈ ಮೇಲಿನ ಯಾವುದೇ ವಿಭಾಗಗಳಿಗೆ ಸಂಬಂಧಿಸಿದ್ದರೆ – ಅವರ ಆದಾಯದ ಜೊತೆಗೆ ಸೇರಿಸುವುದು.

2. ತೆರಿಗೆ ಮೌಲ್ಯಮಾಪನ ವರ್ಷ 2021-22 ಅವಧಿಗೆ ITR-2 ಫೈಲ್ ಮಾಡಲು ಯಾರಿಗೆ ಅರ್ಹತೆಯಿಲ್ಲ?
ಯಾವುದೇ ವ್ಯಕ್ತಿ ಅಥವಾ HUF ಮೂಲಕ ITR-2 ಫೈಲ್ ಮಾಡಲು ಸಾಧ್ಯವಾಗುವುದಿಲ್ಲ, ಯಾವ ವ್ಯಕ್ತಿಯ ವರ್ಷದ ಒಟ್ಟು ಆದಾಯದಲ್ಲಿ ವ್ಯಾಪಾರ ಅಥವಾ ವೃತ್ತಿಯಲ್ಲಿನ ಲಾಭ ಮತ್ತು ಗಳಿಕೆಗಳಿಂದ ಬಂದ ಆದಾಯವು ಒಳಗೊಂಡಿದ್ದರೆ, ಮತ್ತು ಈ ಕೆಳಗಿನ ರೂಪದಲ್ಲಿಯೂ ಆದಾಯವನ್ನು ಹೊಂದಿದ್ದರೆ:

  • ಬಡ್ಡಿ
  • ಸಂಬಳ
  • ಬೋನಸ್
  • ಪಾಲುದಾರಿಕೆ ಸಂಸ್ಥೆಯಿಂದ ಅವರು ಪಡೆದ ಅಥವಾ ಸ್ವೀಕರಿಸಿದ ಯಾವುದೇ ಹೆಸರಿನಲ್ಲಿರುವ ಕಮಿಷನ್ ಅಥವಾ ಸಂಭಾವನೆ.

3. ಹಿಂದಿನ ವರ್ಷಗಳಿಗೆ ಹೋಲಿಸಿದರೆ ITR-2 ನಲ್ಲಿ ಮಾಡಿದ ಬದಲಾವಣೆಗಳೇನು?
ತೆರಿಗೆ ಮೌಲ್ಯಮಾಪನ ವರ್ಷ 2021-22 ರ ITR-2 ರಲ್ಲಿ, ಸೆಕ್ಷನ್‌ 115BAC ಅಡಿಯಲ್ಲಿ ಹೊಸ ತೆರಿಗೆ ನಿಯಮವನ್ನು ಆಯ್ಕೆಮಾಡಲು ನೀವು ಆರಿಸಬಹುದು. ಸೆಕ್ಷನ್‌ 115BAC ಅಡಿಯಲ್ಲಿ ಹೊಸ ತೆರಿಗೆ ನಿಯಮವನ್ನು ಆಯ್ಕೆಮಾಡುವ ಆಯ್ಕೆಯು, ಸೆಕ್ಷನ್‌ 139(1) ಅಡಿಯಲ್ಲಿ ರಿಟರ್ನ್ ಅನ್ನು ಫೈಲ್ ಮಾಡಲು ಇರುವ ಅಂತಿಮ ದಿನಾಂಕದವರೆಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

4. ITR-2 ಫೈಲ್ ಮಾಡಲು ನನಗೆ ಯಾವ ದಾಖಲೆಗಳ ಅಗತ್ಯವಿದೆ?

  1. ನೀವು ಸಂಬಳ ಆದಾಯ ಹೊಂದಿದ್ದರೆ, ನಿಮ್ಮ ಉದ್ಯೋಗದಾತರು ನೀಡುವ ಫಾರ್ಮ್ 16 ನಿಮಗೆ ಬೇಕಾಗುತ್ತದೆ.
  2. ನೀವು ಸ್ಥಿರ ಠೇವಣಿಗಳು ಅಥವಾ ಉಳಿತಾಯ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಬಡ್ಡಿಯನ್ನು ಗಳಿಸಿದ್ದರೆ ಮತ್ತು ಒಂದು ವೇಳೆ TDS ಅನ್ನು ಕಡಿತಗೊಳಿಸಿದ್ದರೆ, TDS ಪ್ರಮಾಣಪತ್ರಗಳು ಅಂದರೆ ಕಡಿತಗೊಳಿಸುವವರು ನೀಡಿದ ಫಾರ್ಮ್ 16A ಬೇಕಾಗುತ್ತವೆ.
  3. ಸಂಬಳದ ಮೇಲಿನ TDS ಮತ್ತು ಸಂಬಳವನ್ನು ಹೊರತುಪಡಿಸಿದ TDS ಅನ್ನು ದೃಢೀಕರಿಸಲು ನಿಮಗೆ ಫಾರ್ಮ್ 26AS ಅಗತ್ಯವಿದೆ. ಫಾರ್ಮ್ 26AS ಅನ್ನು ಇ-ಫೈಲಿಂಗ್ ಪೋರ್ಟಲ್‌ನಿಂದ ಡೌನ್‌ ಲೋಡ್ ಮಾಡಬಹುದು.
  4. ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, HRA ಲೆಕ್ಕಾಚಾರ ಮಾಡಲು ಬಾಡಿಗೆ ಪಾವತಿಸಿದ ರಶೀದಿಗಳು ಬೇಕಾಗುತ್ತವೆ (ಒಂದು ವೇಳೆ ನೀವು ಅವುಗಳನ್ನು ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಿರದಿದ್ದರೆ).
  5. ನೀವು ಷೇರುಗಳಲ್ಲಿ ಯಾವುದೇ ಬಂಡವಾಳ ಲಾಭದ ವಹಿವಾಟುಗಳನ್ನು ಹೊಂದಿದ್ದರೆ, ಬಂಡವಾಳ ಲಾಭದ ಗಣನೆ/ಲೆಕ್ಕಾಚಾರಕ್ಕಾಗಿ, ಒಂದು ವರ್ಷದಲ್ಲಿನ ಷೇರುಗಳ ಅಥವಾ ಸೆಕ್ಯೂರಿಟಿಗಳ ಬಂಡವಾಳ ಲಾಭದ ವಹಿವಾಟುಗಳ ಸಾರಾಂಶ ಅಥವಾ ಲಾಭ / ನಷ್ಟದ ಹೇಳಿಕೆಯ ಅಗತ್ಯವಿರುತ್ತದೆ.
  6. ಬಡ್ಡಿ ಆದಾಯದ ಮೊತ್ತವನ್ನು ಲೆಕ್ಕಹಾಕಲು ನಿಮ್ಮ ಬ್ಯಾಂಕ್ ಪಾಸ್‌ಬುಕ್, ಸ್ಥಿರ ಠೇವಣಿ ರಶೀದಿಗಳ (FDRಗಳು) ಅಗತ್ಯವಿದೆ.
  7. ನಿಮ್ಮ ಬಾಡಿಗೆ ಗೃಹ ಆಸ್ತಿಯಿಂದ ನೀವು ಬಾಡಿಗೆಯನ್ನು ಪಡೆದಿದ್ದರೆ, ಗೃಹ ಆಸ್ತಿಯಿಂದ ಬಂದ ಆದಾಯವನ್ನು ಲೆಕ್ಕಹಾಕಲು ನಿಮ್ಮ ಬಾಡಿಗೆದಾರರು / ಸ್ಥಳೀಯ ತೆರಿಗೆ ಪಾವತಿ / ಪಡೆದುಕೊಂಡ ಬಂಡವಾಳ ಮೇಲಿನ ಬಡ್ಡಿಯ (ಯಾವುದಾದರೂ ಇದ್ದರೆ) ವಿವರಗಳ ಅಗತ್ಯವಿದೆ.
  8. ಪ್ರಸ್ತುತ ವರ್ಷದಲ್ಲಿ ನೀವು ಅನುಭವಿಸಿದ ಯಾವುದೇ ನಷ್ಟವನ್ನು ಕ್ಲೈಮ್ ಮಾಡಲು ಬಯಸಿದರೆ, ನಷ್ಟವನ್ನು ತೋರಿಸುವ ಸಂಬಂಧಿತ ದಾಖಲೆಗಳ ಅಗತ್ಯವಿದೆ.
  9. ಹಿಂದಿನ ವರ್ಷದ ನಷ್ಟವನ್ನು ಕ್ಲೈಮ್ ಮಾಡಲು ನೀವು ಬಯಸಿದರೆ, ನಿಮಗೆ ಈ ನಷ್ಟವನ್ನು ಬಹಿರಂಗಪಡಿಸುವ ಹಿಂದಿನ ವರ್ಷಕ್ಕೆ ಸಂಬಂಧಿಸಿದ ITR-V ನಕಲು ಪ್ರತಿಯ ಅಗತ್ಯವಿರುತ್ತದೆ.
  10. ಸೆಕ್ಷನ್‌ 80C, 80D, 80G, 80GG ಅಡಿಯಲ್ಲಿ ತೆರಿಗೆ ಉಳಿತಾಯ ಕಡಿತಗಳನ್ನು ಕ್ಲೈಮ್ ಮಾಡಲು ನಿಮಗೆ ದಾಖಲೆಗಳು ಅಥವಾ ಪುರಾವೆಗಳು ಬೇಕಾಗುತ್ತವೆ ಉದಾಹರಣೆಗೆ ಜೀವನ ಮತ್ತು ಆರೋಗ್ಯ ವಿಮೆ ರಶೀದಿಗಳು, ದೇಣಿಗೆ ರಶೀದಿಗಳು, ಬಾಡಿಗೆ ರಶೀದಿಗಳು, ಬೋಧನಾ ಶುಲ್ಕಗಳು ಇತ್ಯಾದಿಗಳು, ಒಂದು ವೇಳೆ ಇವುಗಳನ್ನು ನಿಮ್ಮ ಫಾರ್ಮ್ 16 ರಲ್ಲಿ ಪರಿಗಣಿಸಿರದಿದ್ದರೆ ಬೇಕಾಗುತ್ತವೆ.

5. ನನ್ನ ITR ಫೈಲ್ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ನಾನು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ನಿಮ್ಮ ರಿಟರ್ನ್ ಫೈಲ್ ಮಾಡುವಾಗ ಮತ್ತು ನಿಮ್ಮ ರೀಫಂಡ್ ಅನ್ನು ಪಡೆಯುವಾಗ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು, ನೀವು ಈ ಕೆಳಗಿನವುಗಳನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು:

  • ಆಧಾರ್ ಮತ್ತು PAN ಲಿಂಕ್‌ ಮಾಡಿರಬೇಕು.
  • ನೀವು ರೀಫಂಡ್ ಪಡೆಯಲು ಬಯಸುವ ನಿಮ್ಮ ಬ್ಯಾಂಕ್ ಖಾತೆಯನ್ನು ಪೂರ್ವ-ಮೌಲ್ಯೀಕರಿಸಿ.
  • ITR ಅನ್ನು ಫೈಲ್ ಮಾಡುವ ಮೊದಲು ಸರಿಯಾದ ITR ಅನ್ನು ಆರಿಸಿ; ಇಲ್ಲದಿದ್ದರೆ ಫೈಲ್ ಮಾಡಿದ ರಿಟರ್ನ್ ಅನ್ನು ದೋಷಯುಕ್ತವೆಂದು ಪರಿಗಣಿಸಲಾಗುತ್ತದೆ ಮತ್ತು ನೀವು ಸರಿಯಾದ ಫಾರ್ಮ್ ಬಳಸಿ ಪರಿಷ್ಕೃತ ITR ಅನ್ನು ಸಲ್ಲಿಸಬೇಕಾಗುತ್ತದೆ.
  • ನಿಗದಿತ ಅವಧಿಯೊಳಗೆ ರಿಟರ್ನ್ ಅನ್ನು ಫೈಲ್ ಮಾಡಿ.
  • ನಿಮ್ಮ ರಿಟರ್ನ್ ಅನ್ನು ದೃಢೀಕರಿಸಿ - ನೀವು ಇ-ಪರಿಶೀಲನೆ (ಶಿಫಾರಸು ಮಾಡಿದ ಆಯ್ಕೆ – ಈಗಲೇ ಇ-ಪರಿಶೀಲನೆ ಮಾಡಿ) ಅನ್ನು ಆಯ್ಕೆಮಾಡಬಹುದು, ಇದು ನಿಮ್ಮ ITR ಅನ್ನು ದೃಢೀಕರಿಸಲು ಇರುವ ಸುಲಭ ಮಾರ್ಗವಾಗಿದೆ.

6. HUF / ಸಂಸ್ಥೆ ಸೆಕ್ಷನ್‌ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದೇ?

7. ನಾನು ಅನಿವಾಸಿ. ನಾನು ಸೆಕ್ಷನ್‌ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದೇ?

8. ನನ್ನ ಬಳಿ ಎರಡು ಮನೆಗಳಿವೆ. ಒಂದು ಮನೆ ನಾನು ಪ್ರತಿ ವಾರ ಭೇಟಿ ನೀಡುವ, ತೋಟದ ಮನೆ ಆಗಿದೆ ಮತ್ತು ಇನ್ನೊಂದು ನನ್ನ ನಿವಾಸವಾಗಿದೆ. ಈ ಎರಡೂ ನಿವಾಸಗಳನ್ನು ಸ್ವಯಂ- ವಾಸವಿರುವ ಸ್ಥಳ ಎಂದು ಪರಿಗಣಿಸಬಹುದೇ?
ತೆರಿಗೆ ಮೌಲ್ಯಮಾಪನ ವರ್ಷ 2019-20 ರವರೆಗೆ, ನೀವು ಕೇವಲ ಒಂದು ಆಸ್ತಿಯನ್ನು ಮಾತ್ರ ಸ್ವಯಂ- ವಾಸವಿರುವ ಆಸ್ತಿ ಎಂದು ಕ್ಲೈಮ್ ಮಾಡಬಹುದಾಗಿತ್ತು ಮತ್ತು ಇತರ ಆಸ್ತಿಯನ್ನು ಪರಿಗಣಿಸಲಾಗುತ್ತಿರಲಿಲ್ಲ. ತೆರಿಗೆ ಮೌಲ್ಯಮಾಪನ ವರ್ಷ 2020-21 ರಿಂದ ಮಾತ್ರ, ನಿಗದಿತ ಷರತ್ತುಗಳನ್ನು ಪೂರೈಸಲು ವಸತಿ ಉದ್ದೇಶಕ್ಕಾಗಿ ಎರಡೂ ಮನೆಗಳನ್ನು ಸ್ವಯಂ-ವಾಸವಿರುವ ಆಸ್ತಿಗಳಾಗಿ ಪರಿಗಣಿಸಬಹುದು.

9. ವರ್ಷದ ಒಂದು ಭಾಗದಲ್ಲಿ ಸ್ವಯಂ-ವಾಸವಿರುವ ಆಸ್ತಿಯಾಗಿದ್ದು ಮತ್ತು ಬಾಕಿ ವರ್ಷದ ಭಾಗದಲ್ಲಿ ಬಾಡಿಗೆಗೆ ಕೊಟ್ಟಿರುವ ಆಸ್ತಿಯಾಗಿದೆ, ಅದರ ಆದಾಯವನ್ನು ಹೇಗೆ ಲೆಕ್ಕಾಚಾರ ಮಾಡುವುದು?
ಈ ಸಂದರ್ಭದಲ್ಲಿ, ಗೃಹ ಆಸ್ತಿಯಿಂದ ಬಂದ ಆದಾಯ ಎಂಬ ಶೀರ್ಷಿಕೆಯಡಿಯಲ್ಲಿ ತೆರಿಗೆ ವಿಧಿಸಬಹುದಾದ ಆದಾಯದ ಗಣನೆ/ಲೆಕ್ಕಾಚಾರದ ಉದ್ದೇಶಕ್ಕಾಗಿ, ಅಂತಹ ಆಸ್ತಿಯನ್ನು ಪೂರ್ಣ ವರ್ಷಕ್ಕಾಗಿ ಪರಿಗಣಿಸಲಾಗುವುದು ಮತ್ತು ಆದಾಯವನ್ನು ಅದಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. ಆದರೆ, ಅಂತಹ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ವಿಧಿಸಬಹುದಾದ ಆದಾಯವನ್ನು ಲೆಕ್ಕಾಚಾರ ಮಾಡುವಾಗ, ನಿಜವಾದ ಬಾಡಿಗೆಯನ್ನು ಬಾಡಿಗೆಗೆ ಕೊಟ್ಟ ಅವಧಿಗೆ ಮಾತ್ರ ಪರಿಗಣಿಸಲಾಗುತ್ತದೆ.

10. ಬಂಡವಾಳ ಲಾಭಗಳ ವಿಭಾಗದ ಅಡಿಯಲ್ಲಿ ತೆರಿಗೆ ವಿಧಿಸುವ ಆದಾಯಗಳು ಯಾವುವು?
ವರ್ಷದಲ್ಲಿ ಬಂಡವಾಳ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಲಾಭ ಅಥವಾ ಗಳಿಕೆಗೆ, ಬಂಡವಾಳ ಲಾಭಗಳು ಶೀರ್ಷಿಕೆ ಅಡಿಯಲ್ಲಿ ತೆರಿಗೆಗೆ ವಿಧಿಸಲಾಗುತ್ತದೆ.

11. ಬಂಡವಾಳ ಆಸ್ತಿಯ ಅರ್ಥವೇನು?
ಬಂಡವಾಳ ಆಸ್ತಿಯನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 2(14) ಅಡಿಯಲ್ಲಿ ವ್ಯಾಖ್ಯಾನಿಸಲಾಗಿದ್ದು ಅದರಲ್ಲಿ ಇವುಗಳು ಸೇರಿಕೊಂಡಿವೆ:
 

  • ತೆರಿಗೆದಾರರ ವ್ಯವಹಾರ ಅಥವಾ ವೃತ್ತಿಯೊಂದಿಗೆ ಸಂಪರ್ಕ ಹೊಂದಿರಬಹುದಾದ ಅಥವಾ ಸಂಪರ್ಕ ಹೊಂದಿಲ್ಲದ, ತೆರಿಗೆದಾರರು ಹೊಂದಿರುವ ಯಾವುದೇ ರೀತಿಯ ಆಸ್ತಿ.
  • SEBI ಕಾಯ್ದೆ, 1992 ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಸಾರವಾಗಿ ಅಂತಹ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡಿರುವ FII ನಿರ್ವಹಿಸುವ ಯಾವುದೇ ಸೆಕ್ಯೂರಿಟಿಗಳು (ಕೆಲವು ಹೊರಗಿಡುವಿಕೆಗಳಿಗೆ ಒಳಪಟ್ಟಿರುತ್ತದೆ).

12. ದೀರ್ಘಾವಧಿಯ ಬಂಡವಾಳ ಆಸ್ತಿ ಎಂಬ ಪದದ ಅರ್ಥವೇನು?

  • ಯಾವುದೇ ಬಂಡವಾಳ ಆಸ್ತಿಯು ವರ್ಗಾವಣೆಯಾದ ದಿನಾಂಕದಿಂದ 36 ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ ಹಿಡಿದಿಟ್ಟುಕೊಂಡರೆ ದೀರ್ಘಾವಧಿಯ ಬಂಡವಾಳ ಆಸ್ತಿ ಎಂದು ಕರೆಯಲಾಗುತ್ತದೆ. ಆದರೆ, ಭಾರತದಲ್ಲಿ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾದ ಷೇರುಗಳು (ಇಕ್ವಿಟಿ ಅಥವಾ ಪ್ರಾಶಸ್ತ್ಯ), ಈಕ್ವಿಟಿ-ಆಧಾರಿತ ಮ್ಯೂಚುವಲ್ ಫಂಡ್‌ಗಳ ಘಟಕಗಳು, ಡಿಬೆಂಚರ್‌ಗಳು ಮತ್ತು ಸರ್ಕಾರಿ ಸೆಕ್ಯೂರಿಟಿಗಳಂತಹ ಪಟ್ಟಿಮಾಡಿದ ಸೆಕ್ಯೂರಿಟಿಗಳು, UTI ಮತ್ತು ಶೂನ್ಯ ಕೂಪನ್ ಬಾಂಡ್‌ಗಳಂತಹ ಕೆಲವು ಸ್ವತ್ತುಗಳಿಗೆ ಸಂಬಂಧಿಸಿದಂತೆ, ಪರಿಗಣಿಸಬೇಕಾದ ಹಿಡುವಳಿ ಅವಧಿಯು 36 ತಿಂಗಳುಗಳ ಬದಲಿಗೆ 12 ತಿಂಗಳುಗಳು.
  • ಕಂಪನಿಯಲ್ಲಿ ಪಟ್ಟಿಮಾಡದ ಷೇರುಗಳಿದ್ದರೆ, ಪರಿಗಣಿಸಬೇಕಾದ ಹಿಡಿದಿಟ್ಟುಕೊಳ್ಳುವ ಅವಧಿಯು 36 ತಿಂಗಳುಗಳ ಬದಲಿಗೆ 24 ತಿಂಗಳುಗಳು.
  • ತೆರಿಗೆ ಮೌಲ್ಯಮಾಪನ ವರ್ಷ 2018-19 ರಿಂದ, ಸ್ಥಿರ ಆಸ್ತಿಯನ್ನು (ಭೂಮಿ ಅಥವಾ ಕಟ್ಟಡ ಅಥವಾ ಎರಡೂ ಆಗಿರುವುದು) ಹಿಡಿದಿಟ್ಟುಕೊಳ್ಳುವ ಅವಧಿಯು 36 ತಿಂಗಳುಗಳ ಬದಲಿಗೆ 24 ತಿಂಗಳುಗಳು ಎಂದು ಪರಿಗಣಿಸಲಾಗುತ್ತದೆ.

13. ಆದಾಯ ತೆರಿಗೆ ಕಾನೂನಿನ ಪ್ರಕಾರ, ಬಂಡವಾಳ ಆಸ್ತಿಯ ವರ್ಗಾವಣೆಯಿಂದ ಬರುವ ಲಾಭಕ್ಕೆ ಬಂಡವಾಳ ಲಾಭಗಳು ಎಂಬ ಶೀರ್ಷಿಕೆಯಡಿಯಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ ವರ್ಗಾವಣೆಯ ಅರ್ಥವೇನು?
ಸಾಮಾನ್ಯವಾಗಿ, ವರ್ಗಾವಣೆ ಎಂದರೆ ಮಾರಾಟ, ಆದರೆ, ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 2(47) ರ ಪ್ರಕಾರ, ಬಂಡವಾಳ ಆಸ್ತಿಗೆ ಸಂಬಂಧಿಸಿದಂತೆ ವರ್ಗಾವಣೆಯು ಇವುಗಳನ್ನು ಒಳಗೊಂಡಿದೆ:

  • ಆಸ್ತಿಯ ಮಾರಾಟ, ವಿನಿಮಯ ಅಥವಾ ಪರಿತ್ಯಜಿಸುವಿಕೆ;
  • ಬಂಡವಾಳ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಗಳ ನಿರ್ಮೂಲನಗೊಳಿಸುವುದು;
  • ಆಸ್ತಿಯನ್ನು ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳುವುದು;
  • ಬಂಡವಾಳ ಆಸ್ತಿಯನ್ನು ಸ್ಟಾಕ್ - ಇನ್ - ಟ್ರೇಡ್ ಆಗಿ ಪರಿವರ್ತಿಸುವುದು;
  • ಶೂನ್ಯ ಕೂಪನ್ ಬಾಂಡ್‌ನ ಮುಕ್ತಾಯ ಅಥವಾ ವಿಮೋಚನೆ;
  • ಆಸ್ತಿ ವರ್ಗಾವಣೆ ಕಾಯ್ದೆ, 1882 ರ ಸೆಕ್ಷನ್‌ 53A ನಲ್ಲಿ ಉಲ್ಲೇಖಿಸಲಾದ ಒಪ್ಪಂದದ ಭಾಗ ಕಾರ್ಯಕ್ಷಮತೆಯಲ್ಲಿ ಖರೀದಿದಾರರಿಗೆ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿಸುವುದು;
  • ಸ್ಥಿರ ಆಸ್ತಿಯನ್ನು ವರ್ಗಾವಣೆ ಮಾಡುವ (ಅಥವಾ ಅನುಭವಿಸುವುದನ್ನು ಸಕ್ರಿಯಗೊಳಿಸುವ) ಪರಿಣಾಮವನ್ನು ಹೊಂದಿರುವ ಯಾವುದೇ ವಹಿವಾಟು; ಅಥವಾ
  • ಯಾವುದೇ ರೀತಿಯಲ್ಲಿ ಯಾವುದೇ ಆಸ್ತಿಯನ್ನು ವಿಲೇವಾರಿ ಮಾಡುವುದು ಅಥವಾ ಆಸ್ತಿಯಲ್ಲಿ ಅಥವಾ ಅದರ ಬಡ್ಡಿಯಲ್ಲಿ ಭಾಗ ಮಾಡುವುದು ಅಥವಾ ಯಾವುದೇ ಆಸ್ತಿಯಲ್ಲಿ ಯಾವುದೇ ಬಡ್ಡಿಯನ್ನು ರಚಿಸುವುದು.

14. ಬಂಡವಾಳ ನಷ್ಟವನ್ನು ಮುಂದೂಡುವುದಕ್ಕೆ ಮತ್ತು ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾನೂನಿನಡಿಯಲ್ಲಿ ರೂಪಿಸಲಾದ ನಿಬಂಧನೆಗಳು ಯಾವುವು?

  • ಒಂದು ವರ್ಷದಲ್ಲಿ ಮಾಡಿದ ಬಂಡವಾಳ ಲಾಭಗಳ ಶೀರ್ಷಿಕೆಯಡಿಯಲ್ಲಿನ ನಷ್ಟವನ್ನು ಅದೇ ವರ್ಷದಲ್ಲಿ ಸರಿಹೊಂದಿಸಲು ಸಾಧ್ಯವಾಗದಿದ್ದರೆ, ನಂತರ ಸರಿಹೊಂದಿಸದ ಬಂಡವಾಳ ನಷ್ಟವನ್ನು ಮುಂದಿನ ವರ್ಷಕ್ಕೆ ಮುಂದುವರಿಸಬಹುದು.
  • ನಂತರದ ವರ್ಷದಲ್ಲಿ(ಗಳಲ್ಲಿ), ಬಂಡವಾಳ ಲಾಭಗಳ ಶೀರ್ಷಿಕೆಯಡಿಯಲ್ಲಿ ತೆರಿಗೆಗೆ ವಿಧಿಸಬಹುದಾದ ಆದಾಯಕ್ಕೆ ಸಂಬಂಧಿಸಿದಂತೆ ಮಾತ್ರ ಅಂತಹ ನಷ್ಟವನ್ನು ಸರಿಹೊಂದಿಸಬಹುದು, ಆದರೆ, ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ಸಂಬಂಧಿಸಿದಂತೆ ಮಾತ್ರ ದೀರ್ಘಾವಧಿಯ ಬಂಡವಾಳ ನಷ್ಟವನ್ನು ಸರಿಹೊಂದಿಸಬಹುದು. ಅಲ್ಪಾವಧಿಯ ಬಂಡವಾಳ ನಷ್ಟವನ್ನು ದೀರ್ಘಾವಧಿಯ ಬಂಡವಾಳ ಲಾಭಗಳು ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳಿಗೆ ಸಂಬಂಧಿಸಿದಂತೆ ಸರಿಹೊಂದಿಸಬಹುದು.
  • ಅಂತಹ ನಷ್ಟವನ್ನು ಅನುಭವಿಸಿದ ವರ್ಷವನ್ನು ಅದಾದ ತಕ್ಷಣದ ಎಂಟು ವರ್ಷಗಳವರೆಗೆ ಸಾಗಿಸಬಹುದು.
  • ಸೆಕ್ಷನ್ 139(1) ಅಡಿಯಲ್ಲಿ ವಿವರಿಸಿದಂತೆ, ಆದಾಯದ ರಿಟರ್ನ್ / ಅನುಭವಿಸಿದ ನಷ್ಟವನ್ನು ನಷ್ಟ ಅನುಭವಿಸಿದ ವರ್ಷದ ರಿಟರ್ನ್ ಅನ್ನು ಪೂರ್ಣಗೊಳಿಸಿದ ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಸಲ್ಲಿಸಿದರೆ ಮಾತ್ರ ಅಂತಹ ನಷ್ಟವನ್ನು ಮುಂದೂಡಬಹುದು.