Do not have an account?
Already have an account?

1. ನನ್ನ ITR ಸ್ಥಿತಿಯನ್ನು ಪರಿಶೀಲಿಸುವುದು ಏಕೆ ಮುಖ್ಯ?

ITR ಸ್ಥಿತಿಯು ನೀವು ಸಲ್ಲಿಸಿದ ITR ನ ಪ್ರಸ್ತುತ ಸ್ಥಿತಿ/ಹಂತವನ್ನು ತೋರಿಸುತ್ತದೆ. ಒಮ್ಮೆ ನಿಮ್ಮ ITR ಫೈಲ್ ಮಾಡಿದ ನಂತರ, ನೀವು ಆದಾಯ ತೆರಿಗೆ ಇಲಾಖೆ ಅದನ್ನು ಸ್ವೀಕರಿಸಿದೆಯೇ ಅಥವಾ ಪ್ರಕ್ರಿಯೆಗೊಳಿಸಿದೆಯೇ ಎಂದು ಪರಿಶೀಲಿಸಬಹುದು. ಕೆಲವು ವ್ಯತ್ಯಾಸಗಳು ಕಂಡುಬಂದ ಕೆಲವು ಸಂದರ್ಭಗಳಲ್ಲಿ, ನೀವು ITD ಅವರಿಂದ ಸಂವಹನಕ್ಕೆ ಪ್ರತಿಕ್ರಿಯಿಸಬೇಕಾಗಬಹುದು. ಆದ್ದರಿಂದ, ನಿಮ್ಮ ITR‌ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಸೂಕ್ತವಾಗಿದೆ.


2. ವಿವಿಧ ರೀತಿಯ ITR ಸ್ಥಿತಿಗಳು ಯಾವುವು?

  • ಸಲ್ಲಿಸಲಾಗಿದೆ ಮತ್ತು ಇ-ಪರಿಶೀಲನೆ / ಪರಿಶೀಲನೆಗಾಗಿ ಬಾಕಿ ಉಳಿದಿದೆ: ಇದು ನೀವು ನಿಮ್ಮ ITR ಅನ್ನು ಸಲ್ಲಿಸಿದ್ದು, ಆದರೆ ಇ-ಪರಿಶೀಲಿಸದಿರುವಾಗ ಅಥವಾ ನಿಮ್ಮ ಸರಿಯಾಗಿ ಸಹಿ ಮಾಡಿದ ITR-V ಅನ್ನು ಇನ್ನೂ CPC ಯಲ್ಲಿ ಸ್ವೀಕರಿಸದಿರುವ ಸ್ಥಿತಿಯಾಗಿದೆ.
  • ಯಶಸ್ವಿಯಾಗಿ ಇ-ಪರಿಶೀಲಿಸಲಾಗಿದೆ / ಪರಿಶೀಲಿಸಲಾಗಿದೆ: ನಿಮ್ಮ ರಿಟರ್ನ್ ಅನ್ನು ನೀವು ಸಲ್ಲಿಸಿದಾಗ ಮತ್ತು ಸಮುಚಿತವಾಗಿ ಇ-ಪರಿಶೀಲಿಸಿದ್ದು / ಪರಿಶೀಲಿಸಲಾಗಿದ್ದು, ಆದರೆ ರಿಟರ್ನ್ ಅನ್ನು ಇನ್ನೂ ಪ್ರಕ್ರಿಯೆಗೊಳಿಸಿಲ್ಲವಾದರೆ ಈ ಸ್ಥಿತಿಯು ಇರುತ್ತದೆ.
  • ಪ್ರಕ್ರಿಯೆಗೊಳಿಸಲಾಗಿದೆ: ನಿಮ್ಮ ರಿಟರ್ನ್ ಅನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಿದಾಗ ಈ ಸ್ಥಿತಿ ಇರುತ್ತದೆ.
  • ದೋಷಯುಕ್ತವಾಗಿದೆ: ಇದು ಕಾನೂನು ಪ್ರಕಾರ ಅಗತ್ಯವಿರುವ ಕೆಲವು ಅಗತ್ಯ ಮಾಹಿತಿಯ ಕೊರತೆ ಅಥವಾ ಕೆಲವು ಅಸಂಗತತೆಗಳಿಂದಾಗಿ ಸಲ್ಲಿಸಿದ ರಿಟರ್ನ್‌ನಲ್ಲಿ ಕೆಲವು ದೋಷವನ್ನು ಇಲಾಖೆಯು ಗಮನಿಸಿದಾಗ ಈ ಸ್ಥಿತಿ ಇರುತ್ತದೆ. ಅಂತಹ ಸಂದರ್ಭದಲ್ಲಿ, ನೀವು ನೋಟಿಸ್ ಸ್ವೀಕರಿಸುವ ದಿನಾಂಕದಿಂದ ನಿರ್ದಿಷ್ಟ ಸಮಯದ ಮಿತಿಯೊಳಗೆ ದೋಷವನ್ನು ಸರಿಪಡಿಸಲು ಸೆಕ್ಷನ್ 139(9)ರ ಅಡಿಯಲ್ಲಿ ನೀವು ನೋಟಿಸ್ ಸ್ವೀಕರಿಸುತ್ತೀರಿ. ದೋಷಯುಕ್ತ ರಿಟರ್ನ್ ಸ್ಥಿತಿಗೆ ನೀವು ಪ್ರತಿಕ್ರಿಯಿಸದಿದ್ದರೆ, ನಿಮ್ಮITR ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲು ಇದನ್ನು ಪರಿಗಣಿಸಲಾಗುವುದಿಲ್ಲ.
  • ಮೌಲ್ಯಮಾಪನ ಅಧಿಕಾರಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ: CPC ನಿಮ್ಮ ITR ಅನ್ನು ನಿಮ್ಮ ಅಧಿಕಾರ ವ್ಯಾಪ್ತಿಯ AO ಗೆ ವರ್ಗಾಯಿಸಿದಾಗ ಇದು ಸ್ಥಿತಿಯಾಗಿದೆ. ನಿಮ್ಮ ಪ್ರಕರಣವನ್ನು ನಿಮ್ಮ AO ಗೆ ವರ್ಗಾಯಿಸಿದರೆ, ಅಗತ್ಯ ವಿವರಗಳನ್ನು ಒದಗಿಸಲು ಅಧಿಕಾರಿ ನಿಮ್ಮನ್ನು ಸಂಪರ್ಕಿಸುತ್ತಾರೆ.

3. ನನ್ನ ಅಧಿಕೃತ ಪ್ರತಿನಿಧಿ / ERI ಆತನ/ಆಕೆಯ ಲಾಗಿನ್ ಅನ್ನು ಬಳಸಿಕೊಂಡು ನನ್ನ ITR ಸ್ಥಿತಿಯನ್ನು ಪ್ರವೇಶಿಸಬಹುದೇ?

ಹೌದು, ಅಧಿಕೃತ ಪ್ರತಿನಿಧಿ / ERI ಗಳು ಸಲ್ಲಿಸಿದ ITR ಗಳಿಗಾಗಿ, ನೀವು ಮತ್ತು ನಿಮ್ಮ ಅಧಿಕೃತ ಪ್ರತಿನಿಧಿ / ERI ಇಬ್ಬರಿಗೂ ಅದನ್ನು ತೋರಿಸಲಾಗುತ್ತದೆ. ನೀವು ನಿಮ್ಮ ಸ್ವಂತ ITR ಅನ್ನು (ನೋಂದಾಯಿತ ತೆರಿಗೆದಾರರಾಗಿ) ಸಲ್ಲಿಸಿದರೆ, ಸ್ಥಿತಿಯನ್ನು ನಿಮ್ಮ ಇ-ಫೈಲಿಂಗ್ ಖಾತೆಯಲ್ಲಿ ನಿಮಗೆ ಮಾತ್ರ ತೋರಿಸಲಾಗುತ್ತದೆ.


4. ನೋಂದಾಯಿತ ತೆರಿಗೆದಾರರಾಗಿ ನನ್ನ ITR ಸ್ಥಿತಿಯನ್ನು ವೀಕ್ಷಿಸುವುದಕ್ಕೆ ಮಾತ್ರ ITR ಸ್ಥಿತಿ ಸೇವೆಯು ಇರುತ್ತದೆಯೇ?

ಇಲ್ಲ. ನಿಮ್ಮ ITR ಸ್ಥಿತಿಯನ್ನು ನೋಡುವುದರ ಹೊರತಾಗಿ, ನಿಮ್ಮ ಆದಾಯ ತೆರಿಗೆ ರಿಟರ್ನ್ಸ್‌ಗಳ ವಿವರಗಳನ್ನು ನೀವು ವೀಕ್ಷಿಸಬಹುದು:

  • ನಿಮ್ಮ ITR-V ಸ್ವೀಕೃತಿ ರಶೀದಿ, ಅಪ್‌ಲೋಡ್ ಮಾಡಿದ JSON (ಆಫ್‌ಲೈನ್ ಯುಟಿಲಿಟಿಯಿಂದ), PDF ನಲ್ಲಿ ಸಂಪೂರ್ಣ ITR ಫಾರ್ಮ್ ಮತ್ತು ಸೂಚನೆಯ ಆದೇಶವನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ.
  • ಪರಿಶೀಲನೆಗಾಗಿ ಬಾಕಿ ಇರುವ ನಿಮ್ಮ ರಿಟರ್ನ್(ಗಳು) ವೀಕ್ಷಿಸಬಹುದು, ಮತ್ತು ನಿಮ್ಮ ರಿಟರ್ನ್(ಗಳನ್ನು) ಇ-ಪರಿಶೀಲನೆಗಾಗಿ ಮುಂದಿನ ಕ್ರಮ ತೆಗೆದುಕೊಳ್ಳಬಹುದು.

5. ನನ್ನ ITR ಸ್ಥಿತಿಯನ್ನು ಪರಿಶೀಲಿಸಲು ನಾನು ಲಾಗ್ ಇನ್ ಮಾಡಬೇಕೇ?

ಇಲ್ಲ, ITR ಸ್ಥಿತಿಯನ್ನು ಲಾಗಿನ್ ಮಾಡುವ ಮುನ್ನ ಮತ್ತು ಲಾಗಿನ್ ಆದ ನಂತರ ಪರಿಶೀಲಿಸಬಹುದು. ನೀವು ಲಾಗಿನ್ ಮಾಡಿದ ನಂತರ‌ ನಿಮ್ಮ ITR ಸ್ಥಿತಿಯನ್ನು ಪರಿಶೀಲಿಸಿದರೆ ರಿಟರ್ನ್ / ಮಾಹಿತಿಯನ್ನು ಡೌನ್‌ಲೋಡ್‌ ಮಾಡುವಂತಹ ಹೆಚ್ಚುವರಿ ಮಾಹಿತಿಯನ್ನು ನೀವು ಪಡೆಯಬಹುದು.

6. ITR ಸ್ಥಿತಿ ಸೇವೆಯೊಂದಿಗೆ, ನಾನು ನನ್ನ ಕೊನೆಯ ಬಾರಿ ಸಲ್ಲಿಸಿದ ರಿಟರ್ನ್ ಅಥವಾ ಇದಕ್ಕೂ ಮುಂಚಿನ ರಿಟರ್ನ್‌ಗಳನ್ನು ನೋಡಬಹುದೇ?

ನಿಮ್ಮ ಹಿಂದಿನ ಎಲ್ಲಾ ಫೈಲಿಂಗ್‌ಗಳನ್ನು ಮತ್ತು ನಿಮ್ಮ ಪ್ರಸ್ತುತ ಫೈಲಿಂಗ್‌ಗಳನ್ನು ಸಹ ನೀವು ನೋಡಬಹುದು.

7. ಲಾಗಿನ್ ಮಾಡದೆ ನನ್ನ ITR ಸ್ಥಿತಿಯನ್ನು ವೀಕ್ಷಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನನ್ನ ಮೊಬೈಲ್ ಸಂಖ್ಯೆಯ ಅಗತ್ಯವಿದೆಯೇ?

ಇಲ್ಲ, ಲಾಗಿನ್ ಮಾಡದೆ ನಿಮ್ಮ ITR ಸ್ಥಿತಿಯನ್ನು ವೀಕ್ಷಿಸಲು ನೀವು ಯಾವುದೇ ಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಬಹುದು. ಆದರೂ, ನೀವು ಈ ಸೇವೆಯನ್ನು ಲಾಗಿನ್ ಮಾಡದೆ ಬಳಸುತ್ತಿದ್ದರೆ ನೀವು ಮಾನ್ಯ ITR ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬೇಕು.

8. ನನ್ನ ಸಂಗಾತಿಯ ITR ಸ್ಥಿತಿಯನ್ನು ನೋಡಲು ನಾನು ಬಯಸುತ್ತೇನೆ. ನಾನು ಹಾಗೆ ಮಾಡಬಹುದೇ?

ನಿಮ್ಮ ಸಂಗಾತಿಯ ITR ಸ್ಥಿತಿಯನ್ನು ನೀವು ಈ ಕೆಳಗಿನ ವಿಧಾನಗಳಲ್ಲಿ ವೀಕ್ಷಿಸಬಹುದು:

  • ಪೂರ್ವ-ಲಾಗಿನ್: ಇ-ಫೈಲಿಂಗ್ ಮುಖಪುಟದಲ್ಲಿ, ITR ಸ್ಥಿತಿಯನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ. ನಿಮಗೆ ಆತನ/ಆಕೆಯ ITR ಸ್ವೀಕೃತಿ ಸಂಖ್ಯೆ ಮತ್ತು ಮಾನ್ಯ ಮೊಬೈಲ್ ಸಂಖ್ಯೆಯ ಅಗತ್ಯವಿರುತ್ತದೆ.
  • ಲಾಗಿನ್-ನ೦ತರ:
    • ನೀವು ನಿಮ್ಮ ಸಂಗಾತಿಯ ITR ಅನ್ನು ಅಧಿಕೃತ ಪ್ರತಿನಿಧಿ/ಅಧಿಕೃತ ಸಹಿದಾರರಾಗಿ ಸಲ್ಲಿಸಿದರೆ, ನೀವು ಮತ್ತು ನಿಮ್ಮ ಸಂಗಾತಿಯ ಇಬ್ಬರೂ ITR ಸ್ಥಿತಿಯನ್ನು ವೀಕ್ಷಿಸಬಹುದು.
    • ನಿಮ್ಮ ಸಂಗಾತಿಯು ಆತನ/ಆಕೆಯ ಸ್ವಂತ ITR ಅನ್ನು ಸಲ್ಲಿಸಿದರೆ, ಆತನ/ಆಕೆಯ ಸ್ವಂತ ಇ-ಫೈಲಿಂಗ್ ಖಾತೆಯಲ್ಲಿ ಸ್ಥಿತಿಯನ್ನು ಆತ/ಆಕೆಯು ವೀಕ್ಷಿಸಬಹುದು.

9. ನನ್ನ ITR ಸ್ಥಿತಿಯನ್ನು ಪರಿಶೀಲಿಸುವಾಗ, ನಮೂದಿಸಲು ನನ್ನ ಸ್ವೀಕೃತಿ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬಹುದು?

  • ನಿಮ್ಮ ರಿಟರ್ನ್ ಅನ್ನು ಇ-ಫೈಲಿಂಗ್ ಮಾಡಿದ ನಂತರ ನಿಮ್ಮ ನೋಂದಾಯಿತ ಇಮೇಲ್‌ನಲ್ಲಿ ಸ್ವೀಕರಿಸಿದ ನಿಮ್ಮ ITR-V ಯಿಂದ ನಿಮ್ಮ ಸ್ವೀಕೃತಿ ರಶೀದಿ ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ಲಾಗಿನ್ ನಂತರ ಇ-ಫೈಲಿಂಗ್ ಪೋರ್ಟಲ್‌ನಿಂದ ನಿಮ್ಮ ITR-V ಅನ್ನೂ ಸಹ ಡೌನ್ಲೋಡ್ ಮಾಡಬಹುದು: ಇ-ಫೈಲ್ > ಆದಾಯ ತೆರಿಗೆ ರಿಟರ್ನ್ಸ್ > ಸಲ್ಲಿಸಿದ ರಿಟರ್ನ್ಸ್ ನೋಡಿ > ಡೌನ್ಲೋಡ್ ಮಾಡಿ ರಶೀದಿ ಆಯ್ಕೆ.
  • ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ಸೇವೆಯನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಲ್ಲಿಸಿದ ITR ಗಾಗಿ ನೀವು ನಿಮ್ಮ ಸ್ವೀಕೃತಿ ರಶೀದಿ ಸಂಖ್ಯೆಯನ್ನು (ಲಾಗಿನ್ ನಂತರ) ಪರಿಶೀಲಿಸಬಹುದು.