1. TAN ಎಂದರೇನು?
TAN ಎಂದರೆ ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ. ಇದು ITD ನೀಡುವ 10-ಅಂಕಿಯ ಅಕ್ಷರಾಂಕೀಯ ಸಂಖ್ಯೆಯಾಗಿದೆ
2. TAN ಅನ್ನು ಯಾರು ಪಡೆಯಬೇಕಾಗಿದೆ?
ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲು ಜವಾಬ್ದಾರರಾಗಿರುವ ಅಥವಾ ಮೂಲದಲ್ಲಿ ತೆರಿಗೆಯನ್ನು ಸಂಗ್ರಹಿಸುವ ಅಗತ್ಯವಿರುವ ಎಲ್ಲಾ ವ್ಯಕ್ತಿಗಳು TAN ಪಡೆಯಬೇಕು.TDS/TCS ರಿಟರ್ನ್, ಯಾವುದೇ TDS/TCS ಪಾವತಿ ಚಲನ್, TDS/TCS ಪ್ರಮಾಣಪತ್ರಗಳು ಮತ್ತು ITD ಯೊಂದಿಗಿನ ಸಂವಹನಗಳಲ್ಲಿ ಸೂಚಿಸಲಾದ ಇತರ ದಾಖಲೆಗಳಲ್ಲಿ TAN ಅನ್ನು ಉಲ್ಲೇಖಿಸುವುದು ಕಡ್ಡಾಯವಾಗಿದೆ.ಆದರೆ, ಸೆಕ್ಷನ್ 194IA ಅಥವಾ ಸೆಕ್ಷನ್ 194IB ಅಥವಾ ಸೆಕ್ಷನ್ 194M ಪ್ರಕಾರ TDS ಅನ್ನು ಕಡಿತಗೊಳಿಸಬೇಕಾದ ವ್ಯಕ್ತಿಯು TAN ಬದಲಿಗೆ PAN ಅನ್ನು ಉಲ್ಲೇಖಿಸಬಹುದು.
3. "TAN ವಿವರಗಳನ್ನು ತಿಳಿಯಿರಿ" ಸೇವೆಯನ್ನು ಬಳಸಲು ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರನಾಗಿರಬೇಕೇ?
ಇಲ್ಲ. ನೋಂದಾಯಿತ ಮತ್ತು ನೋಂದಾಯಿತರಲ್ಲದ ಬಳಕೆದಾರರು ಈ ಸೇವೆಯನ್ನು ಬಳಸಬಹುದು. TAN ವಿವರಗಳನ್ನು ತಿಳಿಯಿರಿ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಫೈಲಿಂಗ್ ಪೋರ್ಟಲ್ ಹೋಮ್‌ಪೇಜ್‌ನಿಂದ ಲಾಗಿನ್ ಗೂ ಮುನ್ನ ಅದನ್ನು ಪ್ರವೇಶಿಸಬಹುದು.
4. ನನ್ನ ಕಡಿತದಾರ TAN ವಿವರಗಳನ್ನು ನಾನು ಯಾವ ಉದ್ದೇಶಕ್ಕಾಗಿ ಬಳಸಬೇಕು?
ನಿಮ್ಮ ಪರವಾಗಿ ಮೂಲದಿಂದ (TDS ಎಂದು ಕರೆಯಲ್ಪಡುವ) ತೆರಿಗೆಯನ್ನು ಕಡಿತಗೊಳಿಸುವ ಯಾರಾದರೂ TAN ಅನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸವಾಗಿದೆ. ನಿಮ್ಮ ಫಾರ್ಮ್ 16/16A/26AS ಅನ್ನು ನೋಡಿ ಮತ್ತು ನೀವು ಹಣಕಾಸು ವರ್ಷಕ್ಕೆ TDS ವಿವರಗಳನ್ನು ನೋಡುತ್ತೀರಿ. TAN ವಿವರಗಳನ್ನು ತಿಳಿಯಿರಿ, ಸೇವೆಯನ್ನು ಬಳಸಿಕೊಂಡು, ಸರಿಯಾದ ವ್ಯಕ್ತಿಯಿಂದ ಮೊತ್ತವನ್ನು ಕಡಿತಗೊಳಿಸಲಾಗಿದೆಯೇ ಎಂದು ನೀವು ಪರಿಶೀಲಿಸಬಹುದು. ಇದಲ್ಲದೆ, ಯಾವುದೇ TDSನಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ನೀವು TAN ಅನ್ನು ಉಲ್ಲೇಖಿಸಬೇಕು.
5. ನನ್ನ ಉದ್ಯೋಗದಾತ TAN ಅನ್ನು ಪಡೆದಿರದಿದ್ದರೆ ಏನು ಮಾಡಬೇಕು?
ಉದ್ಯೋಗದಾತನು TAN ಅನ್ನು ಪಡೆಯಲು ಮತ್ತು/ಅಥವಾ ಉಲ್ಲೇಖಿಸಲು ವಿಫಲವಾದಲ್ಲಿ, ಆದಾಯ ತೆರಿಗೆ ಕಾಯ್ದೆ 1961ರ ಸಂಬಂಧಿತ ವಿಭಾಗದ ಅಡಿಯಲ್ಲಿ ದಂಡಕ್ಕೆ ಹೊಣೆಗಾರನಾಗಿರುತ್ತಾನೆ. ಇದಲ್ಲದೆ, ಉದ್ಯೋಗದಾತರು TDS ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ (ಒಂದು ವೇಳೆ ಕಡಿತಗೊಂಡಿದ್ದರೆ) ಮತ್ತು ಅದಕ್ಕೆ TDS ಸ್ಟೇಟ್‌ಮೆಂಟ್ ಅನ್ನೂ ಸಹ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಸಂಬಳವು ತೆರಿಗೆ ವಿಧಿಸಬಹುದಾದ ವ್ಯಾಪ್ತಿಯಲ್ಲಿದ್ದರೆ ಮತ್ತು ನಿಮ್ಮ ಉದ್ಯೋಗದಾತರು TDS ಕಡಿತಗೊಳಿಸದಿದ್ದರೆ, ನೀವು ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು/ಅಥವಾ ಮುಂಗಡ ತೆರಿಗೆಯನ್ನು ಅನ್ವಯವಾಗುವಂತೆ ಪಾವತಿಸಬೇಕಾಗುತ್ತದೆ.
6. ಸರ್ಕಾರಿ ಕಡಿತದಾರರು TANಗೆ ಅರ್ಜಿ ಸಲ್ಲಿಸುವುದು ಕಡ್ಡಾಯವೇ?
ಹೌದು.
7. ಮೂಲದಲ್ಲಿ ತೆರಿಗೆ ಸಂಗ್ರಹದ ಉದ್ದೇಶಕ್ಕಾಗಿ ಪ್ರತ್ಯೇಕ TAN ಪಡೆಯುವ ಅವಶ್ಯಕತೆ ಇದೆಯೇ?
ಒಂದು ವೇಳೆ TAN ಈಗಾಗಲೇ ನೀಡಲಾಗಿದ್ದರೆ, TAN ಪಡೆಯಲು ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ. TCSಗಾಗಿ ಎಲ್ಲಾ ರಿಟರ್ನ್ ಗಳು, ಚಲನ್‌ಗಳು ಮತ್ತು ಪ್ರಮಾಣಪತ್ರಗಳಲ್ಲಿ ಅದೇ ಸಂಖ್ಯೆಯನ್ನು ಉಲ್ಲೇಖಿಸಬಹುದು.