1. ಫಾರ್ಮ್ 26AS ಎಂದರೇನು?
ಇದು ಒಂದು ನಿರ್ದಿಷ್ಟ ಹಣಕಾಸು ವರ್ಷಕ್ಕೆ (FY) ಏಕೀಕೃತ ವಾರ್ಷಿಕ ಮಾಹಿತಿಯ ಹೇಳಿಕೆಯಾಗಿದೆ. ಇದು ಈ ಕೆಳಗಿನವುಗಳ ವಿವರಗಳನ್ನು ಒಳಗೊಂಡಿದೆ:
- ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (TDS)
- ಮೂಲದಲ್ಲಿ ಸಂಗ್ರಹಿಸಿದ ತೆರಿಗೆ (TCS)
- ಮುಂಗಡ ತೆರಿಗೆ / ಸ್ವಯಂ-ಮೌಲ್ಯಮಾಪನ ತೆರಿಗೆ / ಜಮಾ ಮಾಡಲಾದ ನಿಯಮಿತ ಮೌಲ್ಯಮಾಪನ ತೆರಿಗೆ
- ಹಣಕಾಸು ವರ್ಷದಲ್ಲಿ ಸ್ವೀಕರಿಸಲಾದ ಮರುಪಾವತಿ (ಯಾವುದಾದರೂ ಇದ್ದರೆ)
- ಯಾವುದೇ ನಿರ್ದಿಷ್ಟ ಹಣಕಾಸು ವಹಿವಾಟಿನ ವಿವರಗಳು (SFT) (ಯಾವುದಾದರೂ ಇದ್ದರೆ)
- 194IA ಸೆಕ್ಷನ್ ಅಡಿಯಲ್ಲಿ ಸ್ಥಿರ ಆಸ್ತಿ ಮಾರಾಟದ ಮೇಲಿನ ತೆರಿಗೆ ಕಡಿತದ ವಿವರಗಳು (ಅಂತಹ ಆಸ್ತಿಯ ಮಾರಾಟಗಾರರ ಸಂದರ್ಭದಲ್ಲಿ)
- TDS ಡೀಫಾಲ್ಟ್‌ಗಳು (ಯಾವುದಾದರೂ ಇದ್ದರೆ)
- ಬೇಡಿಕೆ ಮತ್ತು ಮರುಪಾವತಿಗೆ ಸಂಬಂಧಿಸಿದ ಮಾಹಿತಿ
- ಬಾಕಿ ಇರುವ ಮತ್ತು ಪೂರ್ಣಗೊಂಡ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿ
2. ನನ್ನ ವಾರ್ಷಿಕ ತೆರಿಗೆ ಕ್ರೆಡಿಟ್ ಸ್ಟೇಟ್ಮೆಂಟ್‌ನಲ್ಲಿ (26AS) ನಾನು ಜಮಾ ಮಾಡಿದ ನನ್ನ ಸ್ವಯಂ-ಮೌಲ್ಯಮಾಪನ / ಮುಂಗಡ ತೆರಿಗೆ ಮೊತ್ತವು ಕಂಡುಬರುತ್ತಿಲ್ಲ. ನಾನು ಈಗ ಏನು ಮಾಡಬೇಕು?
ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಚಲನ್ ಸಂಖ್ಯೆ ಮತ್ತು PAN ಸಂಖ್ಯೆಯನ್ನು ಮೌಲ್ಯೀಕರಿಸಬೇಕು.
3. ತೆರಿಗೆ ಕ್ರೆಡಿಟ್ ಹೊಂದಾಣಿಕೆಯಾಗುತ್ತಿಲ್ಲ ಎಂದು ನನಗೆ ಹೇಗೆ ತಿಳಿಯುತ್ತದೆ?
ತೆರಿಗೆ ಕ್ರೆಡಿಟ್ ಹೊಂದಾಣಿಕೆಯಾಗದ ಪುಟದಲ್ಲಿ, ನಿಮ್ಮ ವಿವರಗಳನ್ನು ನಮೂದಿಸಿದ ನಂತರ, ಸಂಬಂಧಪಟ್ಟ TDS / TCS / ಯಾವುದೇ ಇತರ ಚಲನ್ ಮೊತ್ತಗಳು ಮತ್ತು 26AS ಪ್ರಕಾರ ಮೊತ್ತದ ನಡುವಿನ ಯಾವುದೇ ಹೊಂದಾಣಿಕೆಯನ್ನು ಪರಿಶೀಲಿಸಿ. ಅನುಗುಣವಾದ ಮೊತ್ತವು ವಿಭಿನ್ನವಾಗಿದ್ದರೆ, ತೆರಿಗೆ ಕ್ರೆಡಿಟ್ ಹೊಂದಾಣಿಕೆಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ - ಹೊಂದಾಣಿಕೆ ಇಲ್ಲಎಂಬ ಸಂದೇಶವನ್ನು ಪ್ರದರ್ಶಿಸಲಾಗುವುದು.
ತೆರಿಗೆ ಕ್ರೆಡಿಟ್ ಹೊಂದಾಣಿಕೆಯಾದರೆ, ಕ್ಲೈಮ್ ಮಾಡಲಾದ ತೆರಿಗೆ ಕ್ರೆಡಿಟ್ 26AS ನಲ್ಲಿ ಉಪಲಬ್ಧವಿರುವ ತೆರಿಗೆ ಕ್ರೆಡಿಟ್‌ನೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗಿದೆ ಎಂದು ಪ್ರದರ್ಶಿಸಲಾಗುತ್ತದೆ.
4. ನಾನು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ ಒಂದರಲ್ಲಿ ತೆರಿಗೆ-ಕ್ರೆಡಿಟ್ ಹೊಂದಾಣಿಕೆಯಾಗದಿದ್ದರೆ ನಾನು ಏನು ಮಾಡಬೇಕು?
ಒಂದು ವೇಳೆ TDSನಲ್ಲಿ ಹೊಂದಾಣಿಕೆಯಿಲ್ಲದಿದ್ದರೆ:
- ನಿಮ್ಮ ಆದಾಯದಿಂದ TDS ಕಡಿತಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಉದ್ಯೋಗದಾತ / ಕಡಿತದಾರರಿಗೆ ತಿಳಿಸಿ. ನಿಮ್ಮ ಉದ್ಯೋಗದಾತ / ಕಡಿತದಾರರು ತಿದ್ದುಪಡಿಮಾಡಿದ TDS ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ.
ನೀವು ಆದಾಯ ತೆರಿಗೆ ರಿಟರ್ನ್‌ನಲ್ಲಿ ಒದಗಿಸಿದ ಇತರ ತೆರಿಗೆ ಕ್ರೆಡಿಟ್ (AT / SAT) ಹೊಂದಾಣಿಕೆಯಾಗದಿದ್ದಲ್ಲಿ:
- ಸೆಕ್ಷನ್ 143(1)ರ ಅಡಿಯಲ್ಲಿ ನೀವು ಮಾಹಿತಿಯನ್ನು ಸ್ವೀಕರಿಸದಿದ್ದರೆ, ನೀವು ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಬಹುದು; ಅಥವಾ
- ತಿದ್ದುಪಡಿ ವಿನಂತಿ ಸೇವೆಯ ಮೂಲಕ ನೀವು ತಿದ್ದುಪಡಿ ಮನವಿಯನ್ನು ಸಲ್ಲಿಸಬಹುದು. (ಸೆಕ್ಷನ್ 143(1)ರ ಅಡಿಯಲ್ಲಿ ನೀವು ಮಾಹಿತಿಯನ್ನು ಪಡೆದಿದ್ದರೆ ಮಾತ್ರ.)
- ನಿಮ್ಮ ITRನಲ್ಲಿ ಚಲನ್ ವಿವರಗಳನ್ನು ಸರಿಯಾಗಿ ಉಲ್ಲೇಖಿಸಿದ್ದೀರಾ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
- ನಿಮ್ಮ ಫಾರ್ಮ್ 26 AS ನಲ್ಲಿ ತೋರಿಸಲಾದ ಮೊತ್ತಕ್ಕೆ ಅನುಗುಣವಾಗಿ ITRನಲ್ಲಿ ಕ್ಲೈಮ್ ಮಾಡಲಾದ ತೆರಿಗೆ ಕ್ರೆಡಿಟ್ ಅನ್ನು ನಿರ್ಬಂಧಿಸಲಾಗಿದೆಯೇ/ಒದಗಿಸಲಾಗಿದೆಯೇ ಎಂಬುದನ್ನು ಗಮನಿಸಿ.