1. ನಾನು ನನ್ನ PAN ಅನ್ನು ಏಕೆ ಪರಿಶೀಲಿಸಬೇಕು?
ನೀವು ನಿಮ್ಮ PAN ಅನ್ನು ಈ ಕೆಳಗಿನವುಗಳಿಗಾಗಿ ಪರಿಶೀಲಿಸಬಹುದು:
- PAN ಕಾರ್ಡ್‌ನಲ್ಲಿರುವ ಹೆಸರು, ಹುಟ್ಟಿದ ದಿನಾಂಕದಂತಹ ವಿವರಗಳು PAN ಡೇಟಾಬೇಸ್‌ನಲ್ಲಿ ಲಭ್ಯವಿರುವ ವಿವರಗಳಂತೆಯೇ ಇವೆಯೇ ಎಂದು ಪರಿಶೀಲಿಸಿ.
- ನಿಮ್ಮ PAN ಸಕ್ರೀಯವಾಗಿದೆಯೇ ಅಥವಾ ಇಲ್ಲವೇ ಎಂದು ಮೌಲ್ಯೀಕರಿಸಿ.
2. PAN ಪರಿಶೀಲನೆಗಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಾನು ನನ್ನ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವ ಅಗತ್ಯವಿದೆಯೇ?
ಪರಿಶೀಲನೆಯ ಸಮಯದಲ್ಲಿ ನಿಮಗೆ ಪ್ರವೇಶಕ್ಕೆ ಅವಕಾಶವಿರುವ ಯಾವುದೇ ಮಾನ್ಯ ಮೊಬೈಲ್ ಸಂಖ್ಯೆಯನ್ನು ನೀವು ಬಳಸಬಹುದಾಗಿದ್ದು, ಅದರಲ್ಲಿ ನೀವು OTP ಸ್ವೀಕರಿಸುತ್ತೀರಿ (ಗರಿಷ್ಠ ಮೂರು ಪ್ರಯತ್ನಗಳೊಂದಿಗೆ 15 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ).
3. ಯಾವುದೇ ಒಬ್ಬ ತೆರಿಗೆದಾರರಿಗೆ ಒಂದೇ ಮೊಬೈಲ್ ಸಂಖ್ಯೆಯೊಂದಿಗೆ ಪರಿಶೀಲಿಸಬಹುದಾದ PANಗಳ ಸಂಖ್ಯೆಗೆ ಮಿತಿಯಿದೆಯೇ?
ಹೌದು. ಒಂದು ದಿನದಲ್ಲಿ, ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು, ನೀವು ಗರಿಷ್ಠ 5 ಬೇರೆ ಬೇರೆ PANಗಳನ್ನು ಪರಿಶೀಲಿಸಬಹುದು.
4. ಬಾಹ್ಯ ಏಜೆನ್ಸಿಯಾಗಿ, ನಾನು ಬಳಕೆದಾರರ PAN ಅನ್ನು ಮೌಲ್ಯೀಕರಿಸಬಹುದೇ?
ಹೌದು, ಬಾಹ್ಯ ಏಜೆನ್ಸಿಗಳೂ ಸೇರಿದಂತೆ ಎಲ್ಲಾ ನೋಂದಾಯಿತ ಬಳಕೆದಾರರಿಗೆ PAN ಪರಿಶೀಲನಾ ಸೇವೆ ಲಭ್ಯವಿದೆ. ಬೃಹತ್ ಪ್ರಮಾಣದ PAN / TAN ಪರಿಶೀಲನೆಯು ಬಾಹ್ಯ ಏಜೆನ್ಸಿಗಳಿಗೆ ಪ್ರತ್ಯೇಕ ಸೇವೆಯಾಗಿದ್ದು ಅದಕ್ಕೆ ಇಲಾಖೆಯ ಅನುಮೋದನೆಯ ಅಗತ್ಯವಿರುತ್ತದೆ.
5. ನಾನು ನನ್ನ PAN ವಿವರಗಳನ್ನು ಆನ್‌ಲೈನ್‌ನಲ್ಲಿ ಹೇಗೆ ನೋಡಬಹುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ನಿಮ್ಮ PAN ಅನ್ನು ತಿಳಿಯಿರಿ ಸೇವೆಗೆ ನೀವು ಭೇಟಿ ನೀಡಬಹುದು. ನಿಮ್ಮ PAN ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಹ ನೀವು ಈ ಸೇವೆಯನ್ನು ಬಳಸಬಹುದು.