1. ನಾನು ಸಲ್ಲಿಸಿರುವ ನನ್ನ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದೇ?
ಹೌದು. ನೀವು ಇ-ಫೈಲಿಂಗ್ ಪೋರ್ಟಲ್‌ನಿಂದ ಫೈಲ್ ಮಾಡಿದ ಫಾರ್ಮ್‌ನ PDF ಆವೃತ್ತಿಯನ್ನು ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳು > ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ ಅಡಿಯಲ್ಲಿ ಡೌನ್‌ಲೋಡ್ ಮಾಡಬಹುದು.
2. ಸಲ್ಲಿಸಿದ ಫಾರ್ಮ್‌ಗಳನ್ನು ಯಾರು ವೀಕ್ಷಿಸಬಹುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟ ಯಾರಾದರೂ, ಅವರು ಸಲ್ಲಿಸಿದ ಫಾರ್ಮ್‌ಗಳನ್ನು ಅಥವಾ ಅವರ ಪರವಾಗಿ ಅವರ ಅಧಿಕೃತ ಪ್ರತಿನಿಧಿಯಿಂದ ವೀಕ್ಷಿಸಬಹುದು.
3. ಈ ಹಿಂದೆ ಸಲ್ಲಿಸಿರುವ ಫಾರ್ಮ್ 15CA / 15CB ಅನ್ನು CA ಹೇಗೆ ವೀಕ್ಷಿಸಬಹುದು?
CA ಲಾಗಿನ್ ಅಥವಾ TAN ಲಾಗಿನ್ ಹೊಂದಿರುವ ಬಳಕೆದಾರರು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ ಎಂಬ ಸೇವೆಯ ಮೂಲಕ 15CA / 15CB ಫಾರ್ಮ್ ಅನ್ನು ವೀಕ್ಷಿಸಬಹುದು.
4. ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ ಆಯ್ಕೆಯ ಅಡಿಯಲ್ಲಿ ನಾನು ಯಾವ ಫಾರ್ಮ್‌ಗಳನ್ನು ವೀಕ್ಷಿಸಬಹುದು?
ನೀವು ಸಲ್ಲಿಸಿದ ಅಥವಾ ನಿಮ್ಮ ಪರವಾಗಿ ಅಧಿಕೃತ ಪ್ರತಿನಿಧಿಯಿಂದ ಸಲ್ಲಿಸಲ್ಪಟ್ಟ ಎಲ್ಲಾ ಶಾಸನಬದ್ಧ ಫಾರ್ಮ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ನಿಮ್ಮ ಪರವಾಗಿ CA ಸಲ್ಲಿಸಿದ ಫಾರ್ಮ್‌ಗಳನ್ನು ನಿಮಗೆ ಮತ್ತು CA ಗೆ ತೋರಿಸಲಾಗುತ್ತದೆ.
5. ಇದಕ್ಕೂ ಮುಂಚೆ ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮ್ಯಾನ್ಯುವಲ್ ಆಗಿ ಫೈಲ್ ಮಾಡಿದ ಫಾರ್ಮ್ ಅನ್ನು ವೀಕ್ಷಿಸಬಹುದೇ?
ಇಲ್ಲ, ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇದಕ್ಕೂ ಮುಂಚೆ ಮ್ಯಾನ್ಯುವಲ್ ಆಗಿ ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಲು ಆಗುವುದಿಲ್ಲ.
6. ನಾನು ಸಲ್ಲಿಸಿರುವ ನನ್ನ ಫಾರ್ಮ್‌ಗಳನ್ನು ಹೇಗೆ ತಿದ್ದುಪಡಿ ಮಾಡಬಹುದು?
ಒಮ್ಮೆ ಫಾರ್ಮ್ ಅನ್ನು ಫೈಲ್ ಮಾಡಿದ ನಂತರ ಪುನಃ ತಿದ್ದುಪಡಿ ಮಾಡಲು ಆಗುವುದಿಲ್ಲ. ಆದಾಗ್ಯೂ, ಆದಾಯ ತೆರಿಗೆ ಕಾಯ್ದೆ / ನಿಯಮಗಳ ಪ್ರಕಾರ ಸಮಯ ಮಿತಿಯು ಮುಕ್ತಾಯಗೊಳ್ಳದಿದ್ದರೆ ನೀವು ಹೊಸ ಫಾರ್ಮ್ ಅನ್ನು ಸಲ್ಲಿಸಬಹುದು ಮತ್ತು ಮೊದಲು ಸಲ್ಲಿಸಿದ ಫಾರ್ಮ್ ಅನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ.