ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ: ಬಾಹ್ಯ ಏಜೆನ್ಸಿಗಾಗಿ
ಹಂತ ಹಂತದ ಮಾರ್ಗದರ್ಶಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಹೋಮ್‌ಪೇಜ್‌ಗೆ ಹೋಗಿ, ನೋಂದಾಯಿಸಿ ಕ್ಲಿಕ್ ಮಾಡಿ.
ಹಂತ 2: ಇತರ ಕ್ಲಿಕ್ ಮಾಡಿ ಹಾಗೂ ವರ್ಗ ಬಾಹ್ಯ ಏಜೆನ್ಸಿ ಆಗಿ ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 3: ಏಜೆನ್ಸಿ ಪ್ರಕಾರ, ಸಂಸ್ಥೆಯ TAN / PAN, ಸಂಸ್ಥೆಯ ಹೆಸರು ಮತ್ತು ಮೂಲ ವಿವರಗಳು ಪುಟದಲ್ಲಿ DOI ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳನ್ನು ನಮೂದಿಸಿ ಹಾಗೂ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: ಪ್ರಮುಖ ಸಂಪರ್ಕ ವಿವರಗಳು ಪುಟದಲ್ಲಿ ಪ್ರಾಥಮಿಕ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಅಂಚೆ ವಿಳಾಸ ಸೇರಿದಂತೆ ಅಗತ್ಯವಿರುವ ವಿವರಗಳನ್ನು ನಮೂದಿಸಿ ಹಾಗೂ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ಹಂತ 4 ರಲ್ಲಿ ಸಮೂದಿಸಿರುವಂತೆ ಪ್ರಾಥಮಿಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಎರಡು ಪ್ರತ್ಯೇಕ OTP ಗಳನ್ನು ಕಳುಹಿಸಲಾಗಿದೆ. ನಿಮ್ಮ ಪ್ರಾಥಮಿಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ಸ್ವೀಕರಿಸಲಾದ 6-ಅಂಕಿಯ ಪ್ರತ್ಯೇಕ OTP ಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಸೂಚನೆ
- OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ
- ಸರಿಯಾದ OTP ಅನ್ನು ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿರುತ್ತೀರಿ
- ಪರದೆ ಮೇಲೆ OTP ಅವಧಿ ಮುಕ್ತಾಯವಾಗುವ ಕೌಂಟ್‌ಡೌನ್ ಟೈಮರ್ ನಿಮಗೆ OTP ಮುಕ್ತಾಯವಾಗುವ ಸಮಯವನ್ನು ತಿಳಿಸುತ್ತದೆ
- OTP ಪುನಃ ಕಳುಹಿಸಿ ಕ್ಲಿಕ್ ಮಾಡುವ ಮೂಲಕ ಹೊಸ OTP ಯನ್ನು ರಚಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ
ಹಂತ 6: ಸಹಿ ಮಾಡಿದ ವಿನಂತಿಯ ಪತ್ರದ ಸ್ಕ್ಯಾನ್ ಮಾಡಿದ ನಕಲು ಪ್ರತಿಯನ್ನು ಲಗತ್ತಿಸಿ ಮತ್ತು ಮುಂದುವರಿ ಕ್ಲಿಕ್ ಮಾಡಿ.
ಸೂಚನೆ
- ಒಂದು ಲಗತ್ತಿನ ಗರಿಷ್ಠ ಗಾತ್ರವು 5 MB ಆಗಿರಬೇಕು.
- ನೀವು ಅಪ್‌ಲೋಡ್ ಮಾಡಲು ಹೆಚ್ಚು ಡಾಕ್ಯುಮೆಂಟ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಜಿಪ್ ಮಾಡಿದ ಫೋಲ್ಡರ್‌ನಲ್ಲಿ ಇರಿಸಿ ಮತ್ತು ಫೋಲ್ಡರ್ ಅನ್ನು ಅಪ್‌ಲೋಡ್ ಮಾಡಿ. ಜಿಪ್ ಮಾಡಿದ ಫೋಲ್ಡರ್‌ನಲ್ಲಿರುವ ಎಲ್ಲಾ ಅಟ್ಯಾಚ್ಮೆಂಟ್‌ಗಳ ಗರಿಷ್ಠ ಗಾತ್ರವು 50 MB ಆಗಿರಬೇಕು.
ಹಂತ 7: ವಿವರಗಳನ್ನು ಪರಿಶೀಲಿಸಿ ಪುಟದಲ್ಲಿ, ಅಗತ್ಯವಿದ್ದರೆ ಪುಟದಲ್ಲಿ ವಿವರಗಳನ್ನು ತಿದ್ದಿ. ಪುಟದಲ್ಲಿ ಒದಗಿಸಲಾದ ವಿವರಗಳನ್ನು ಮೌಲ್ಯೀಕರಿಸಿ ಮತ್ತು ದೃಢೀಕರಿಸಿ ಕ್ಲಿಕ್ ಮಾಡಿ.
ಹಂತ 8: ಪಾಸ್‌ವರ್ಡ್ ಹೊಂದಿಸಿ ಪುಟದಲ್ಲಿ, ನಿಮ್ಮ ಅಪೇಕ್ಷಿತ ಪಾಸ್‌ವರ್ಡ್ ಅನ್ನುಪಾಸ್‌ವರ್ಡ್ ಹೊಂದಿಸಿ ಮತ್ತು ಪಾಸ್‌ವರ್ಡ್ ದೃಢೀಕರಿಸಿ ಎರಡೂ ಪಠ್ಯ ಬಾಕ್ಸ್‌ಗಳಲ್ಲೂ ನಮೂದಿಸಿ, ನಿಮ್ಮ ವೈಯಕ್ತಿಕ ಸಂದೇಶವನ್ನು ಹೊಂದಿಸಿ ಹಾಗೂ ನೋಂದಣಿ ಮಾಡಿ ಕ್ಲಿಕ್ ಮಾಡಿ.
ಸೂಚನೆ
ರಿಫ್ರೆಶ್ ಅಥವಾ ಹಿಂದಕ್ಕೆ ಕ್ಲಿಕ್ ಮಾಡಬೇಡಿ.
ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನೀತಿಯ ಕುರಿತು ಜಾಗರೂಕರಾಗಿರಿ:
- ಇದು ಕನಿಷ್ಠ 8 ಅಕ್ಷರಗಳನ್ನು ಮತ್ತು ಗರಿಷ್ಠ 14 ಅಕ್ಷರಗಳನ್ನು ಹೊಂದಿರಬೇಕು
- ಇದು ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರ ಎರಡನ್ನೂ ಹೊಂದಿರಬೇಕು.
- ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
- ಇದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%)
ಹಂತ 9: DGIT (ಸಿಸ್ಟಂಗಳು) ಇಂದ ಅನುಮೋದನೆಯನ್ನು ಪಡೆದ ನಂತರ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಪ್ರಾಥಮಿಕ ಇಮೇಲ್ ಐಡಿಯಲ್ಲಿ ಬಳಕೆದಾರರ ಐಡಿಯನ್ನು ಹೊಂದಿರುವ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ. ನೋಂದಣಿ ಮಾಡುವ ಸಮಯದಲ್ಲಿ ನೀವು ಸ್ವೀಕರಿಸಿದ ಬಳಕೆದಾರರ ID ಮತ್ತು ಹೊಂದಿಸಿದ ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ನಿಮಗೆ ಲಾಗಿನ್ ಆಗಲು ಸಾಧ್ಯವಾಗುತ್ತದೆ.