1. ಅವಲೋಕನ
ಈ ಕೆಳಗಿನ ನೋಂದಾಯಿತ ಬಳಕೆದಾರರಿಗೆ ITR ಸ್ಥಿತಿ ಸೇವೆಯು (ಪೂರ್ವ- ಲಾಗಿನ್ ಮತ್ತು ಲಾಗಿನ್ ನಂತರ) ಲಭ್ಯವಿದೆ:
- ತಮ್ಮ PAN ಗೆ ಸಂಬಂಧಿಸಿದಂತೆ ITR ಗಳನ್ನು ಸಲ್ಲಿಸಿದ ಎಲ್ಲಾ ತೆರಿಗೆದಾರರು
- ಅಂತಹ ಪಾತ್ರದಲ್ಲಿ ಅವರು ಸಲ್ಲಿಸಿದ ITR ಗಳಿಗೆ ಅಧಿಕೃತ ಸಹಿದಾರ, ERI ಮತ್ತು ತೆರಿಗೆದಾರನ ಪ್ರತಿನಿಧಿ
ಈ ಸೇವೆಯು ಮೇಲಿನ ಬಳಕೆದಾರರಿಗೆ ಸಲ್ಲಿಸಿದ ITR ಗಳ ವಿವರಗಳನ್ನು ವೀಕ್ಷಿಸಲು ಅನುಮತಿಸುತ್ತದೆ:
- ITR-V ಸ್ವೀಕೃತಿ, ಅಪ್‌ಲೋಡ್ ಮಾಡಲಾದ JSON (ಆಫ್‌ಲೈನ್ ಯುಟಿಲಿಟಿಯಿಂದ), PDFನಲ್ಲಿ ಪೂರ್ಣ ITR ಫಾರ್ಮ್ ಮತ್ತು ಮಾಹಿತಿ ಆದೇಶವನ್ನುವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ
- ಪರಿಶೀಲನೆಗಾಗಿ ಬಾಕಿ ಇರುವ ರಿಟರ್ನ್(ಗಳನ್ನು) ವೀಕ್ಷಿಸಿ
2. ಈ ಸೇವೆಯನ್ನು ಪಡೆಯಲು ಬೇಕಾದ ಪೂರ್ವಾಪೇಕ್ಷಿತಗಳು
ಲಾಗಿನ್‌ಗೆ-ಮೊದಲು:
- ಮಾನ್ಯವಾದ ಸ್ವೀಕೃತಿ ಸಂಖ್ಯೆಯೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಕನಿಷ್ಠ ಒಂದು ITR ಅನ್ನು ಸಲ್ಲಿಸಿರಬೇಕು
- OTP ಗಾಗಿ ಮಾನ್ಯ ಮೊಬೈಲ್ ಸಂಖ್ಯೆ
ಲಾಗಿನ್-ನ೦ತರ:
- ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಕನಿಷ್ಠ ಒಂದು ITR ಸಲ್ಲಿಸಿರಬೇಕು
3. ಪ್ರಕ್ರಿಯೆ/ಹಂತ ಹಂತದ ಮಾರ್ಗದರ್ಶಿ
3.1 ITR ಸ್ಥಿತಿ (ಲಾಗಿನ್-ಮೊದಲು)
ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ.
ಹಂತ 2: ಆದಾಯ ತೆರಿಗೆ ರಿಟರ್ನ್ (ITR) ಸ್ಥಿತಿ ಅನ್ನು ಕ್ಲಿಕ್ ಮಾಡಿ.
ಹಂತ 3:ಆದಾಯ ತೆರಿಗೆ ರಿಟರ್ನ್ (ITR) ಸ್ಥಿತಿ ಪುಟದಲ್ಲಿ, ನಿಮ್ಮ ಸ್ವೀಕೃತಿ ಸಂಖ್ಯೆ ಮತ್ತು ಮಾನ್ಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 4: ಹಂತ 3 ರಲ್ಲಿ ನಮೂದಿಸಿದ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ ಮತ್ತು ಸಲ್ಲಿಸಿ ಅನ್ನು ಕ್ಲಿಕ್ ಮಾಡಿ.
ಸೂಚನೆ:
- OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿದ್ದೀರಿ.
- ಸ್ಕ್ರೀನ್ ಮೇಲಿನ OTP ಮುಕ್ತಾಯದ ಕೌಂಟ್‌ಡೌನ್ ಟೈಮರ್, OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.
- OTP ಪುನಃ ಕಳುಹಿಸಿ ಎಂದು ಕ್ಲಿಕ್ ಮಾಡಿದಾಗ, ಒಂದು ಹೊಸ OTP ಯನ್ನು ರಚಿಸಲಾಗುತ್ತದೆ ಮತ್ತು ಕಳುಹಿಸಲಾಗುತ್ತದೆ.
ಯಶಸ್ವಿ ದೃಢೀಕರಣದ ನಂತರ, ನೀವು ITR ಸ್ಥಿತಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ಮರುಪಾವತಿಯನ್ನು ನೀಡಲು ಸಾಧ್ಯವಿಲ್ಲ. ಸೆಕ್ಷನ್ 234H ಅಡಿಯಲ್ಲಿ ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ನಿಮ್ಮ PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಿ.
3.2 ITR ಸ್ಥಿತಿ (ಲಾಗಿನ್-ನಂತರ)
ಹಂತ 1: ನಿಮ್ಮ ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ಇನ್ ಮಾಡಿ.
ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ಅನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.
PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಲು, ಈಗಲೇ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
.ಹಂತ 2: ಇ-ಫೈಲ್ > ಆದಾಯ ತೆರಿಗೆ ರಿಟರ್ನ್‌ಗಳು > ಸಲ್ಲಿಸಿದ ರಿಟರ್ನ್ ಅನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3: ಫೈಲ್ ಮಾಡಿದ ರಿಟರ್ನ್‌ಗಳನ್ನು ವೀಕ್ಷಿಸಿ ಪುಟದಲ್ಲಿ, ನೀವು ಸಲ್ಲಿಸಿದ ಎಲ್ಲಾ ರಿಟರ್ನ್‌ಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ. ITR-V ಸ್ವೀಕೃತಿ, ಅಪ್‌ಲೋಡ್ ಮಾಡಿದ JSON (ಆಫ್‌ಲೈನ್ ಯುಟಿಲಿಟಿಯಿಂದ), PDFನಲ್ಲಿ ಪೂರ್ಣ ITR ಫಾರ್ಮ್, ಮತ್ತು ಮಾಹಿತಿ ಆದೇಶವನ್ನು (ಬಲಭಾಗದಲ್ಲಿರುವ ಆಯ್ಕೆಗಳನ್ನು ಬಳಸುವ ಮೂಲಕ) ಡೌನ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಸೂಚನೆ:
ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ನಿಮ್ಮ PAN ನಿಷ್ಕ್ರಿಯವಾಗಿರುವುದರಿಂದ ಮರುಪಾವತಿ ನೀಡಲು ಸಾಧ್ಯವಿಲ್ಲ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ. ಈಗಲೇ ಲಿಂಕ್ ಮಾಡಿ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ PAN ಅನ್ನು ಲಿಂಕ್ ಮಾಡಬಹುದು ಇಲ್ಲದಿದ್ದರೆ ನೀವು ಮುಂದುವರಿಸಿ ಕ್ಲಿಕ್ ಮಾಡಬಹುದು.
ಸೂಚನೆ:
- ವಿಭಿನ್ನ ಮಾನದಂಡಗಳ (AY ಅಥವಾ ಫೈಲಿಂಗ್ ವಿಧ) ಆಧಾರದ ಮೇಲೆ ನೀವು ಸಲ್ಲಿಸಿದ ರಿಟರ್ನ್‌ಗಳನ್ನು ವೀಕ್ಷಿಸಲು ಫಿಲ್ಟರ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ರಿಟರ್ನ್‌ಗಳ ಮಾಹಿತಿಯನ್ನು ಎಕ್ಸೆಲ್ ಫಾರ್ಮ್ಯಾಟ್‌ಗೆ ಎಕ್ಸ್‌ಪೋರ್ಟ್ ಮಾಡಲು ಎಕ್ಸೆಲ್‌ಗೆ ಎಕ್ಸ್‌ಪೋರ್ಟ್ ಮಾಡಿ ಅನ್ನು ಕ್ಲಿಕ್ ಮಾಡಿ.
- ರಿಟರ್ನ್ ಮತ್ತು ಅದಕ್ಕೆ ಸಂಬಂಧಿಸಿದ ಕ್ರಿಯೆಗಳ ಅವಧಿಯನ್ನು ವೀಕ್ಷಿಸಲು ವಿವರಗಳನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ (ಉ.ದಾ., ಇ-ಪರಿಶೀಲನೆಗಾಗಿ ಬಾಕಿ ಉಳಿದಿರುವ ರಿಟರ್ನ್‌ಗಳು).