1. ಅವಲೋಕನ
ITDREIN ನಿರ್ವಹಿಸಿ ಸೇವೆಯು ಎಲ್ಲಾ ನೋಂದಾಯಿತ ಬಳಕೆದಾರರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಈ ಸೇವೆಯೊಂದಿಗೆ, ಅಗತ್ಯವಿರುವ ವರದಿ ಮಾಡುವ ಘಟಕವು ಫಾರ್ಮ್ 15CC/ಫಾರ್ಮ್ V ಸಲ್ಲಿಸಲು ಈ ಕೆಳಗಿನವುಗಳನ್ನು ಮಾಡಬಹುದು:
- ITDREIN ಅನ್ನು ರಚಿಸಿ (ಆದಾಯ ತೆರಿಗೆ ಇಲಾಖೆ ವರದಿ ಮಾಡುವ ಘಟಕದ ಗುರುತಿನ ಸಂಖ್ಯೆ); ಮತ್ತು
- ಈಗಾಗಲೇ ರಚಿಸಲಾದ ITDREIN ಗೆ ಸಂಬಂಧಿಸಿದಂತೆ ಫಾರ್ಮ್ 15CC ಮತ್ತು ಫಾರ್ಮ್ V ಅನ್ನು ಅಪ್‌ಲೋಡ್ ಮಾಡಲು ಮತ್ತು ವೀಕ್ಷಿಸಲು ಯಾವುದೇ ಅಧಿಕೃತ ವ್ಯಕ್ತಿಗಳನ್ನು ಸಕ್ರಿಯಗೊಳಿಸಿ.
ವರದಿ ಮಾಡುವ ಘಟಕವು ಅಧಿಕೃತ ವ್ಯಕ್ತಿಯನ್ನು ಸೇರಿಸಿದ ನಂತರ, ಅಧಿಕೃತ ವ್ಯಕ್ತಿಯು ಈ ಸೇವೆಯ ಮೂಲಕ ವಿನಂತಿಯನ್ನು ಸ್ವೀಕರಿಸಬಹುದು.
ITDREIN ಎನ್ನುವುದು ITD ಯಲ್ಲಿ ವರದಿ ಮಾಡುವ ಘಟಕವನ್ನು ನೋಂದಾಯಿಸಿದ ನಂತರ ಆದಾಯ ತೆರಿಗೆ ಇಲಾಖೆ (ITD) ಬಿಡುಗಡೆ ಮಾಡಿದ ಮತ್ತು ಸಂವಹನ ಮಾಡುವ ವಿಶಿಷ್ಟ ಐ.ಡಿ. ಆಗಿದೆ. ITDREIN XXXXXXXXXX.YZNNN ಫಾರ್ಮ್ಯಾಟ್‌ನಲ್ಲಿರುವ 16-ಅಕ್ಷರಗಳ ಗುರುತಿನ ಸಂಖ್ಯೆಯಾಗಿದೆ, ಇದರಲ್ಲಿ:
| ITDREIN ಫಾರ್ಮ್ಯಾಟ್ | ವಿವರಣೆ |
| xxxxxxxxxx | ವರದಿ ಮಾಡುವ ಘಟಕದ PAN ಅಥವಾ TAN |
| Y | ಫಾರ್ಮ್ ಕೋಡ್ |
| Z | ಫಾರ್ಮ್ ಕೋಡ್‌ಗಾಗಿ ವರದಿ ಮಾಡುವ ಘಟಕದ ಕೋಡ್ |
| NNN | ಅನುಕ್ರಮ ಸಂಖ್ಯೆಯ ಕೋಡ್ |
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
| ಕ್ರಮ ಸಂಖ್ಯೆ | ಬಳಕೆದಾರ | ವಿವರಣೆ |
| 1. | ವರದಿ ಮಾಡುವ ಘಟಕ |
|
| 2. | ಅಧಿಕೃತ ವ್ಯಕ್ತಿ |
|
3. ಹಂತ ಹಂತದ ಮಾರ್ಗದರ್ಶಿ
3.1. ಹೊಸ ITDREIN ಅನ್ನು ರಚಿಸಿ
ಹಂತ 1: ಮಾನ್ಯ ಬಳಕೆದಾರರ ಐ.ಡಿ. ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಸೇವೆಗಳು > ITD ವರದಿ ಮಾಡುವಿಕೆ ಘಟಕ ಗುರುತಿನ ಸಂಖ್ಯೆ (ITDREIN) ಅನ್ನು ನಿರ್ವಹಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3: ITD ವರದಿ ಮಾಡುವಿಕೆ ಘಟಕದ ಗುರುತಿನ ಸಂಖ್ಯೆ ರಚಿಸಿ (ITDREIN) ಪೇಜ್‌ನಲ್ಲಿ, ಹೊಸ ITDREIN ರಚಿಸಿ ಅನ್ನು ಕ್ಲಿಕ್ ಮಾಡಿ.
ಹಂತ 4: ITD ವರದಿ ಮಾಡುವ ಘಟಕ ಗುರುತಿನ ಸಂಖ್ಯೆ (ITDREIN) ರಚಿಸಿ ಪೇಜ್‌ನಲ್ಲಿ, ಫಾರ್ಮ್ ಪ್ರಕಾರ ಅನ್ನು ಆಯ್ಕೆ ಮಾಡಿ (ಫಾರ್ಮ್ 15CC ಅಥವಾ ಫಾರ್ಮ್ V).
ಹಂತ 5: ನಂತರ, ಡ್ರಾಪ್‌ಡೌನ್ ಪಟ್ಟಿಯಿಂದ ಸೂಕ್ತವಾದ ವರದಿ ಘಟಕದ ವರ್ಗ ಅನ್ನು ಆಯ್ಕೆಮಾಡಿ ಮತ್ತು ITDREIN ರಚಿಸಿ ಅನ್ನು ಕ್ಲಿಕ್ ಮಾಡಿ.
ಹಂತ 6: ITDREIN ಅನ್ನು ಯಶಸ್ವಿಯಾಗಿ ರಚಿಸಿದ ನಂತರ, ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ನಿಮ್ಮ ಫಾರ್ಮ್ ಅನ್ನು ಸಲ್ಲಿಸಲು ಅಧಿಕೃತ ವ್ಯಕ್ತಿಯನ್ನು ಸೇರಿಸಲು ಈಗ ಅಧಿಕೃತ ವ್ಯಕ್ತಿಯನ್ನು ಸೇರಿಸಿ ಅನ್ನು ಕ್ಲಿಕ್ ಮಾಡಿ.
ಗಮನಿಸಿ:
- ITDREIN ಅನ್ನು ಯಶಸ್ವಿಯಾಗಿ ರಚಿಸಿದ ನಂತರ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಪ್ರಾಥಮಿಕ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐ.ಡಿ. ಯಲ್ಲಿ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.
- ಅಧಿಕೃತ ವ್ಯಕ್ತಿಯನ್ನು ನಂತರ ಸೇರಿಸಲು ನೀವು ನಂತರ ಅಧಿಕೃತ ವ್ಯಕ್ತಿಯನ್ನು ಸೇರಿಸಿ ಆಯ್ಕೆಯನ್ನು ಆರಿಸಬಹುದು.
ಹಂತ 7: ಅಧಿಕೃತ ವ್ಯಕ್ತಿಯನ್ನು ಸೇರಿಸಿ ಪೇಜ್‌ನಲ್ಲಿ, ಅಗತ್ಯವಿರುವ ವಿವರಗಳನ್ನು ನಮೂದಿಸಿ, ಅಧಿಕೃತ ವ್ಯಕ್ತಿಯ ವಿಧ ಅನ್ನು ಆರಿಸಿ, ಹುದ್ದೆಯನ್ನು ನಮೂದಿಸಿ, ಪ್ರವೇಶದ ವಿಧವನ್ನು ಆರಿಸಿ ಮತ್ತು ಉಳಿಸಿ ಅನ್ನು ಕ್ಲಿಕ್ ಮಾಡಿ.
ಗಮನಿಸಿ:
- ನೀವು ಅಧಿಕೃತ ವ್ಯಕ್ತಿಯ PAN ಅಥವಾ ಆಧಾರ್ ಮಾಹಿತಿಯನ್ನು ಅಥವಾ ಎರಡನ್ನೂ ಒದಗಿಸಬಹುದು.
- ನೀವು ಅಧಿಕೃತ ವ್ಯಕ್ತಿಯ ಆಧಾರ್ ಅನ್ನು ಮಾತ್ರ ಒದಗಿಸಿದರೆ, ಆಧಾರ್ ಅನ್ನು ಅಧಿಕೃತ ವ್ಯಕ್ತಿಯ PAN ನೊಂದಿಗೆ ಲಿಂಕ್ ಮಾಡಿರಬೇಕು.
- ಅಧಿಕೃತ ವ್ಯಕ್ತಿಯ ಹೆಸರು ಐಚ್ಛಿಕ ಕ್ಷೇತ್ರವಾಗಿದೆ. ಇಮೇಲ್ ಐ.ಡಿ., ಮೊಬೈಲ್ ಸಂಖ್ಯೆ, ಅಧಿಕೃತ ವ್ಯಕ್ತಿಯ ವಿಧ, ಹುದ್ದೆ ಮತ್ತು ಪ್ರವೇಶದ ವಿಧ ಇವು ಕಡ್ಡಾಯ ಕ್ಷೇತ್ರಗಳಾಗಿವೆ.
- ಈ ಕೆಳಗಿನ ಕೋಷ್ಟಕದ ಪ್ರಕಾರ ಅಧಿಕೃತ ವ್ಯಕ್ತಿಯ ಪ್ರವೇಶದ ವಿಧವು ಬದಲಾಗುತ್ತದೆ:
| ನೀವು ಫಾರ್ಮ್ V ಅನ್ನು ಆಯ್ಕೆ ಮಾಡಿದರೆ | ನಿಯೋಜಿತ ನಿರ್ದೇಶಕ ಹುದ್ದೆಯನ್ನು ಆಯ್ಕೆ ಮಾಡಿದರೆ | ಅಧಿಕೃತ ವ್ಯಕ್ತಿಯು ಫಾರ್ಮ್ ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು |
| ಪ್ರಧಾನ ಅಧಿಕಾರಿ ಹುದ್ದೆಯನ್ನು ಆಯ್ಕೆ ಮಾಡಿದರೆ | ಅಧಿಕೃತ ವ್ಯಕ್ತಿಯು ಫಾರ್ಮ್ ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು | |
| ನೀವು ಫಾರ್ಮ್ 15CC ಆಯ್ಕೆ ಮಾಡಿದರೆ | ಅಧಿಕೃತ ವ್ಯಕ್ತಿಯು ಫಾರ್ಮ್ ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು |
ಹಂತ 8: ಅಧಿಕೃತ ವ್ಯಕ್ತಿಯನ್ನು ಯಶಸ್ವಿಯಾಗಿ ಸೇರಿಸಿದ ನಂತರ, ಈ ಕೆಳಗಿನ ಪಾಪ್ಅಪ್ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ, ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅಧಿಕೃತ ವ್ಯಕ್ತಿಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐ.ಡಿ. ಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ.
ಹಂತ 9: ಅಧಿಕೃತವ್ಯಕ್ತಿ(ಗಳ), ಸ್ಥಿತಿಯನ್ನು ವೀಕ್ಷಿಸಲು ಮುಚ್ಚಿ ಅನ್ನು ಕ್ಲಿಕ್ ಮಾಡಿ.
ಹಂತ 10: ಅಧಿಕೃತ ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸಲು, ಅಧಿಕೃತ ವ್ಯಕ್ತಿ(ಗಳು) ಪೇಜ್ನಲ್ಲಿ, ಸಕ್ರಿಯ ಟ್ಯಾಬ್ ಅಡಿಯಲ್ಲಿ ನಿಷ್ಕ್ರಿಯಗೊಳಿಸಿ ಅನ್ನು ಕ್ಲಿಕ್ ಮಾಡಿ.
ಹಂತ 11: ನಿಷ್ಕ್ರಿಯ ಟ್ಯಾಬ್ ಅಡಿಯಲ್ಲಿ ಈಗಾಗಲೇ ಸೇರಿಸಲಾದ ಅಧಿಕೃತ ವ್ಯಕ್ತಿಗಳ ಪಟ್ಟಿಯ ಎದುರಿಗಿರುವ ಸಕ್ರಿಯಗೊಳಿಸುವ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ನಿಷ್ಕ್ರಿಯ ಅಧಿಕೃತ ವ್ಯಕ್ತಿಗಳನ್ನು ಸಕ್ರಿಯಗೊಳಿಸಬಹುದು.
3.2. ಅಧಿಕೃತ ವ್ಯಕ್ತಿಯಿಂದ ಸಕ್ರಿಯಗೊಳಿಸುವಿಕೆ
ಹಂತ 1: ಮಾನ್ಯ ಬಳಕೆದಾರ ಐ.ಡಿ. ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಬಾಕಿ ಇರುವ ಕ್ರಿಯೆಗಳು > ವರ್ಕ್‌ಲಿಸ್ಟ್ ಅನ್ನು ಕ್ಲಿಕ್ ಮಾಡಿ.
ಹಂತ 3: ವರ್ಕ್‌ಲಿಸ್ಟ್ ಪೇಜ್ನಲ್ಲಿ, ನೀವು ಸಕ್ರಿಯಗೊಳಿಸಲು ಬಯಸುವ ITDREIN ಎದುರಿಗಿರುವ ಸಕ್ರಿಯಗೊಳಿಸಿ ಅನ್ನು ಕ್ಲಿಕ್ ಮಾಡಿ.
ಹಂತ 4: ITDREIN ವಿನಂತಿ-ಓ.ಟಿ.ಪಿ. ಮೌಲ್ಯೀಕರಣ ಪೇಜ್‌ನಲ್ಲಿ, ಅಧಿಕೃತ ವ್ಯಕ್ತಿಯನ್ನು ಸೇರಿಸಿ ಪೇಜ್‌ನಲ್ಲಿ ಅಧಿಕೃತ ವ್ಯಕ್ತಿಯಾಗಿ ನಿಮ್ಮನ್ನು ಸೇರಿಸುವಾಗ ಬಳಕೆದಾರರು ನಮೂದಿಸಿದ ಮೊಬೈಲ್ ಸಂಖ್ಯೆ (ನಿಮ್ಮೊಂದಿಗೆ ಲಭ್ಯವಿರುವ) ಮತ್ತು ಇಮೇಲ್ ಐ.ಡಿ.ಯಲ್ಲಿ ಪಡೆದ ವಿಭಿನ್ನ 6-ಅಂಕಿಯ ಓ.ಟಿ.ಪಿ.ಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಅನ್ನು ಕ್ಲಿಕ್ ಮಾಡಿ.
ಗಮನಿಸಿ:
- ಓ.ಟಿ.ಪಿ. ಕೇವಲ 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
- ಸರಿಯಾದ ಓ.ಟಿ.ಪಿ. ಅನ್ನು ನಮೂದಿಸಲು ನಿಮಗೆ 3 ಅವಕಾಶಗಳಿವೆ.
- ಸ್ಕ್ರೀನ್ ಮೇಲಿನ ಓ.ಟಿ.ಪಿ. ಅವಧಿ ಮುಗಿಯುವ ಕೌಂಟ್ಡೌನ್ ಟೈಮರ್ ಓ.ಟಿ.ಪಿ. ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ನಿಮಗೆ ತಿಳಿಸುತ್ತದೆ.
- ಓ.ಟಿ.ಪಿ. ಅನ್ನು ಪುನಃ ಕಳುಹಿಸಿ ಅನ್ನು ಕ್ಲಿಕ್ ಮಾಡಿದಾಗ ಹೊಸ ಓ.ಟಿ.ಪಿ. ಅನ್ನು ರಚಿಸಿ, ಕಳುಹಿಸಲಾಗುತ್ತದೆ.
ಹಂತ 5: ITDREIN ವಿನಂತಿ- ಹೊಸ ಪಾಸ್‌ವರ್ಡ್ ಹೊಂದಿಸಿ ಪೇಜ್‌ನಲ್ಲಿ, ಹೊಸ ಪಾಸ್‌ವರ್ಡ್ ಹೊಂದಿಸಿ ಮತ್ತು ಹೊಸ ಪಾಸ್‌ವರ್ಡ್ ದೃಢೀಕರಿಸಿಆಯ್ಕೆಗಳಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಸಕ್ರಿಯಗೊಳಿಸಿ ಅನ್ನು ಕ್ಲಿಕ್ ಮಾಡಿ.
ಗಮನಿಸಿ:
- ರಿಫ್ರೆಶ್ ಅಥವಾ ಬ್ಯಾಕ್ ಮೇಲೆ ಕ್ಲಿಕ್ ಮಾಡಬೇಡಿ.
- ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನೀತಿಯ ಬಗ್ಗೆ ಜಾಗರೂಕರಾಗಿರಿ:
- ಇದು ಕನಿಷ್ಠ 8 ಮತ್ತು ಗರಿಷ್ಠ 14 ಅಕ್ಷರಗಳನ್ನು ಒಳಗೊಂಡಿರಬೇಕು.
- ಇದು ದೊಡ್ಡಕ್ಷರ ಮತ್ತು ಸಣ್ಣ ಅಕ್ಷರಗಳನ್ನು ಒಳಗೊಂಡಿರಬೇಕು.
- ಇದು ಸಂಖ್ಯೆಯನ್ನು ಹೊಂದಿರಬೇಕು.
- ಇದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%).
ಹಂತ 6: ಯಶಸ್ವಿಯಾಗಿ ಸಕ್ರಿಯಗೊಳಿಸಿದ ನಂತರ, ಈ ಕೆಳಗಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.
ಹಂತ 7: ನೀವು ಫಾರ್ಮ್ 15CC ಮತ್ತು/ಅಥವಾ ಫಾರ್ಮ್ V ಅನ್ನು ಅಪ್‌ಲೋಡ್ ಮಾಡಲು/ವೀಕ್ಷಿಸಲು ಬಯಸಿದರೆ, ITDREIN, PAN ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
4. ಸಂಬಂಧಿತ ವಿಷಯಗಳು
- ಇಲ್ಲಿ ಲಾಗಿನ್ ಮಾಡಿ
- ಡ್ಯಾಶ್‌ಬೋರ್ಡ್
- ವರ್ಕ್‌ಲಿಸ್ಟ್
- ನನ್ನ ಪ್ರೊಫೈಲ್
- ಪಾಸ್‌ವರ್ಡ್ ಮರೆತುಹೋಗಿದೆ