Do not have an account?
Already have an account?

1. ಅವಲೋಕನ

 

ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಅಕ್ಟೋಬರ್ 1, 2024 ರಂದು ಸುತ್ತೋಲೆ ಸಂಖ್ಯೆ .11/2024 ಅನ್ನು ಹೊರಡಿಸಿದ್ದು, ಇದು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 119(2)(b) ಅಡಿಯಲ್ಲಿ ಮರುಪಾವತಿ ಅಥವಾ ನಷ್ಟವನ್ನು ಮುಂದಕ್ಕೆ ಸಾಗಿಸುವ ಹಕ್ಕು ಪಡೆಯುವಲ್ಲಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವಲ್ಲಿ ವಿಳಂಬವನ್ನು ಕ್ಷಮಿಸುವ ಬಗ್ಗೆ ಹಿಂದಿನ ಎಲ್ಲಾ ಸೂಚನೆಗಳನ್ನು ರದ್ದುಗೊಳಿಸುತ್ತದೆ. ಹಣಕಾಸಿನ ಮಿತಿಗಳ ಆಧಾರದ ಮೇಲೆ ಅಂತಹ ಹಕ್ಕುಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ವಿವಿಧ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ ಮತ್ತು ಈ ಸುತ್ತೋಲೆಯು ಸಮಗ್ರ ಮಾರ್ಗಸೂಚಿಗಳನ್ನು ಒದಗಿಸುತ್ತದೆ

 

ಪ್ರತಿಯೊಬ್ಬ ಮೌಲ್ಯಮಾಪಿತರು ಅಥವಾ ತೆರಿಗೆದಾರರು ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(1) /139(4) ರ ಅಡಿಯಲ್ಲಿ ಸೂಚಿಸಲಾದ ಸಮಯದೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಾಗುತ್ತದೆ. ಆದಾಗ್ಯೂ, ಯಾವುದೇ ಸಮರ್ಪಕ ಕಾರಣದಿಂದ ತೆರಿಗೆದಾರರಿಗೆ ನಿರ್ದಿಷ್ಟ ಸಮಯದೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗದಿದ್ದರೆ ಭಾರೀ ಬಡ್ಡಿ ಮತ್ತು ದಂಡಗಳನ್ನು ತೆರೆಬೇಕಾಗಬಹುದು.

 

ಅಂತಹ ಪರಿಸ್ಥಿತಿಯಲ್ಲಿ ತೆರಿಗೆದಾರರಿಗೆ ಎರಡು ಆಯ್ಕೆಗಳಿವೆ:

1. ಸೆಕ್ಷನ್ 139(8A) ಅಡಿಯಲ್ಲಿ ITR-u ಅನ್ನು ಫೈಲ್ ಮಾಡುವುದು, ಅಥವಾ

2. ITR ಸಲ್ಲಿಸುವಲ್ಲಿ ವಿಳಂಬದ ಕ್ಷಮಾದಾನಕ್ಕಾಗಿ ವಿನಂತಿಯ ಅನುಮೋದನೆಯ ನಂತರ ITR ಅನ್ನು ಸೆಕ್ಷನ್ 139(9A) ಅಡಿಯಲ್ಲಿ ಫೈಲ್ ಮಾಡುವುದು.

 

ITR-U ಅನ್ನು ಸಲ್ಲಿಸಿದ ಸಂದರ್ಭದಲ್ಲಿ ತೆರಿಗೆದಾರರು ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಸೆಕ್ಷನ್ 139(8A) ಪ್ರಕಾರ 25%/ 50%/ 60%/70% ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಸಮರ್ಪಕ ಕರಣವಿದ್ದಲ್ಲಿ, ತೆರಿಗೆದಾರರು ಸೆಕ್ಷನ್ 119(2)(b) ಅಡಿಯಲ್ಲಿ ಕ್ಷಮಾದಾನ ವಿನಂತಿಯನ್ನು ಸಲ್ಲಿಸಬಹುದು.

 

ಕ್ಷಮಾದಾನ ವಿನಂತಿಯನ್ನು ಆದಾಯ ತೆರಿಗೆ ಪ್ರಾಧಿಕಾರವು ಸ್ವೀಕರಿಸಿದರೆ, ಯಾವುದೇ ಹೆಚ್ಚುವರಿ ತೆರಿಗೆ, ಬಡ್ಡಿ ಅಥವಾ ದಂಡವನ್ನು ಪಾವತಿಸುವ ಅಗತ್ಯವಿಲ್ಲ.

 

ಆದ್ದರಿಂದ, ITR ಫೈಲಿಂಗ್‌ನಲ್ಲಿ ವಿಳಂಬವನ್ನು ಕ್ಷಮಿಸುವುದು ಸೆಕ್ಷನ್ 119(2) (B) ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಒದಗಿಸಲಾದ ವಿಶೇಷ ಪರಿಹಾರವಾಗಿದೆ.

 

ಈ ಬಳಕೆದಾರರ ಕೈಪಿಡಿಯಲ್ಲಿ ನಾವು ಆದಾಯ ತೆರಿಗೆ ಪ್ರಾಧಿಕಾರದ ಕ್ಷಮಾದಾನ ವಿನಂತಿಯನ್ನು ಸ್ವೀಕರಿಸಿದ ನಂತರ ITR‌ ಸಲ್ಲಿಸುವ ಹಂತ ಹಂತದ ಪ್ರಕ್ರಿಯೆಯ ಬಗ್ಗೆ ಚರ್ಚಿಸುತ್ತೇವೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳನ್ನು ನೋಡುತ್ತೇವೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

  • ಮಾನ್ಯವಿರುವ ಬಳಕೆದಾರರ ID ಮತ್ತು ಪಾಸ್‌ವರ್ಡ್
  • ಕ್ಷಮಾದಾನವನ್ನು ಆದೇಶಿಸುವ ಅನನ್ಯ ಸಂಖ್ಯೆಯೊಂದಿಗೆ PCIT ಆರ್ಡರ್ (ಕ್ಷಮಾದಾನ ಆದೇಶದ DIN)
  • ಮಾನ್ಯವಾದ ಬ್ಯಾಂಕ್ ಖಾತೆಯ ವಿವರಗಳು
  • ಫಾರ್ಮ್ 26AS & AIS

 

3. ಪ್ರತಿ ಹಂತದ ಮಾರ್ಗದರ್ಶನ


3.1. ಸೆಕ್ಷನ್ 119(2B) ಅಡಿಯಲ್ಲಿ ವಿಳಂಬದ ಕ್ಷಮಾದಾನದ ನಂತರ ಸೆಕ್ಷನ್ 139(9A) ಅಡಿಯಲ್ಲಿ ITR ಸಲ್ಲಿಸುವುದು

PCIT ವಿಳಂಬವನ್ನು ಕ್ಷಮಿಸಿದ ಸಂಬಂಧಿತ ಮೌಲ್ಯಮಾಪನ ವರ್ಷಗಳಿಗೆ ITR ಸೆಕ್ಷನ್ 139 (9A) ಅಡಿಯಲ್ಲಿ ಸಲ್ಲಿಸುವುದು. (ಸೆಕ್ಷನ್ 139(9A) ಅಡಿಯಲ್ಲಿ ಆಫ್‌ಲೈನ್ ಯುಟಿಲಿಟಿಯನ್ನು ಮಾತ್ರ ಬಳಸಿಕೊಂಡು ಸಲ್ಲಿಸಬಹುದು, ಆನ್‌ಲೈನ್ ಫೈಲಿಂಗ್‌ನ ಆಯ್ಕೆ ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ)


ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ.

 

1


ಹಂತ 2: ಬಳಕೆದಾರರ ID ಮತ್ತು ಪಾಸ್‌‌ವರ್ಡ್ ಅನ್ನು ನಮೂದಿಸಿ.

 

2


ಹಂತ 3:"ಇ-ಫೈಲ್" ಟ್ಯಾಬ್‌ಗೆ ಹೋಗಿ ಮತ್ತು "ಆದಾಯ ತೆರಿಗೆ ರಿಟರ್ನ್ಸ್" ಆಯ್ಕೆಮಾಡಿ.

 

3


ಹಂತ 4:ನೀವು ರಿಟರ್ನ್ ಅನ್ನು ಸಲ್ಲಿಸಬೇಕಾದ ಮೌಲ್ಯಮಾಪನ ವರ್ಷ ಆಯ್ಕೆ ಮಾಡಿ.

 

4


ಹಂತ 5: ಫೈಲಿಂಗ್ ಪ್ರಕಾರವನ್ನು ಆಯ್ಕೆ ಮಾಡಿ "ಸೆಕ್ಷನ್ 139(9A) - ಸೆಕ್ಷನ್ 119(2)(b) ಅಡಿಯಲ್ಲಿ ವಿಳಂಬದ ಕ್ಷಮಾದಾನದ ನಂತರ"

 

5


ಹಂತ 6: ITR ಸಲ್ಲಿಸುವ ಮೊದಲು ಕ್ಷಮಾದಾನ ವಿನಂತಿಯನ್ನು ಅನುಮೋದಿಸಲಾಗಿದೆಯೇ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

 

6


Step 7: Select ITR Type and click Continue.

 

 

7


ಹಂತ 8:ಸೆಕ್ಷನ್ ಸಂಖ್ಯೆ 4 ರಲ್ಲಿನ ಹಂತಗಳ ಪ್ರಕಾರ ಸಿದ್ಧಪಡಿಸಿದ JSON ಅನ್ನು ಅಪ್ಲೋಡ್ ಮಾಡಿ ಮತ್ತು ಅದನ್ನು ಪರಿಶೀಲಿಸುವ ಮೂಲಕ ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡಿ. You shall get a success message. Keep a note of transaction ID for future reference.

(For How to prepare ITR in offline utility and generate the JSON, follow section no. 4)

 

8

 


4. ಯುಟಿಲಿಟಿಯಲ್ಲಿ ITR ಅನ್ನು ತಯಾರಿಸುವುದು ಮತ್ತು JSON ಫೈಲ್ ಅನ್ನು ರಚಿಸುವುದು ಹೇಗೆ


ಹಂತ 1: ಇ-ಫೈಲಿಂಗ್ ಪೋರ್ಟಲ್‌ನ ಮುಖಪುಟಕ್ಕೆ ಹೋಗಿ.

 

4.1


ಹಂತ 2: ಮುಖಪುಟದಲ್ಲಿ ಡೌನ್‌ಲೋಡ್‌ಗಳ ಮೇಲೆ ಕ್ಲಿಕ್ ಮಾಡಿ.

 

4.2


ಹಂತ 3:ಆದಾಯ ತೆರಿಗೆ ರಿಟರ್ನ್ ವಿಭಾಗದಲ್ಲಿ, ನೀವು ITR ಅನ್ನು ಸಲ್ಲಿಸಲಿರುವ ಸಂಬಂಧಿತ AY ಅನ್ನು ಆಯ್ಕೆ ಮಾಡಿ.

 

4.3


ಹಂತ 4: ಈಗ ನಿಮ್ಮ ಸಿಸ್ಟಮ್‌ನಲ್ಲಿ ಎಕ್ಸೆಲ್ ಯುಟಿಲಿಟಿಯನ್ನು ಡೌನ್ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.

 

4.4


ಹಂತ 5: ಎಕ್ಸೆಲ್ ಯುಟಿಲಿಟಿಯನ್ನು ತಯಾರಿಸಿ.

 

4.5


ಹಂತ 6: ಫೈಲಿಂಗ್ ಮಾಹಿತಿಯಲ್ಲಿ ವಿಶಿಷ್ಟ ಸಂಖ್ಯೆ/ದಾಖಲೆ ಗುರುತಿನ ಸಂಖ್ಯೆ ಮತ್ತು ಕ್ಷಮಾದಾನ ಆದೇಶದ ದಿನಾಂಕವನ್ನು ನಮೂದಿಸಿ.

 

4.6

 

ಹಂತ 7: ಯುಟಿಲಿಟಿಯಲ್ಲಿ ITR ಅನ್ನು ತಯಾರಿಸಿ ಮತ್ತು JSON ಅನ್ನು ರಚಿಸಿ.

 

5. ಸಂಬಂಧಿತ ವಿಷಯಗಳು

ಪದಕೋಶ

ಸಂಕ್ಷಿಪ್ತ ರೂಪ / ಸಂಕ್ಷೇಪಣ

ವಿವರಣೆ/ಪೂರ್ಣ ಸ್ವರೂಪ

AO

ತೆರಿಗೆ ಮೌಲ್ಯಮಾಪನ ಅಧಿಕಾರಿ

AY

ತೆರಿಗೆ ಮೌಲ್ಯಮಾಪನ ವರ್ಷ

CA

ಚಾರ್ಟರ್ಡ್ ಅಕೌಂಟೆಂಟ್

CPC

ಕೇಂದ್ರೀಕೃತ ಪ್ರಕ್ರಿಯಾ ಕೇಂದ್ರ

EVC

ಎಲೆಕ್ಟ್ರಾನಿಕ್ ಪರಿಶೀಲನೆ ಕೋಡ್