Do not have an account?
Already have an account?

1. ನಾನು ನನ್ನ ಪಾಸ್‌ವರ್ಡ್ ಅನ್ನು ಏಕೆ ಮರುಹೊಂದಿಸಬೇಕು?
ಒಂದು ವೇಳೆ ನಿಮ್ಮ ಇ-ಫೈಲಿಂಗ್ ಪೋರ್ಟಲ್ ಪಾಸ್ವರ್ಡ್ ಅನ್ನು ನೀವು ಮರೆತಿದ್ದರೆ ಅಥವಾ ಯಾವುದೇ ಕಾರಣಕ್ಕಾಗಿ ನಿಮ್ಮ ಪಾಸ್‌ವರ್ಡ್ ನಿಮಗೆ ತಿಳಿದಿಲ್ಲದಿದ್ದರೆ, ಈ ಸೇವೆಯನ್ನು ಬಳಸಿಕೊಂಡು ನೀವು ಅದನ್ನು ಮರುಹೊಂದಿಸಬಹುದು.


2. ನನ್ನ ಪಾಸ್‌ವರ್ಡ್‌ ಅನ್ನು ಯಶಸ್ವಿಯಾಗಿ ಮರುಹೊಂದಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ ಪಾಸ್‌ವರ್ಡ್ ಅನ್ನು ಯಶಸ್ವಿಯಾಗಿ ಮರುಹೊಂದಿಸಿದ ನಂತರ, ಒಂದು ವಹಿವಾಟಿನ ID ರಚಿಸಲಾಗುತ್ತದೆ. ನೀವೂ ಸಹ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ನಿಮ್ಮ ಇಮೇಲ್ ID ಮತ್ತು ಮೊಬೈಲ್ ನಂಬರ್‌ನಲ್ಲಿ ಒಂದು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.


3. DSC ಬಳಸಿ ನನ್ನ ಪಾಸ್‌ವರ್ಡ್ ಅನ್ನು ಮರುಹೊಂದಿಸುವಾಗ ನಾನು ಅಮಾನ್ಯ ಡಿಜಿಟಲ್ ಸಹಿ ಪ್ರಮಾಣಪತ್ರ ಸಂದೇಶವನ್ನು ಪಡೆಯುತ್ತಿದ್ದೇನೆ. ನಾನೇನು ಮಾಡಬೇಕು?
ಒಂದು ವೇಳೆ ನೀವು ನಿಮ್ಮ ಪಾಸ್ವರ್ಡ್ ಅನ್ನು DSC ಬಳಸಿ ಮರುಹೊಂದಿಸುತ್ತಿದ್ದರೆ ಪ್ರಮಾಣೀಕರಿಸುವ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ DSCಯ ಸಕ್ರಿಯ ಹಂತ 2 ಅಥವಾ ಅದಕ್ಕಿಂತ ಹೆಚ್ಚಿನದನ್ನು ನೀವು ಅಪ್ಲೋಡ್ ಮಾಡಬೇಕು.


4. ನಾನು ನನ್ನ ಪಾಸ್‌ವರ್ಡ್‌ ಅನ್ನು ಮರುಹೊಂದಿಸಲು ಇರುವ ವಿಧಾನಗಳು ಯಾವುವು?
ನೀವು ಈ ಕೆಳಗಿನವುಗಳನ್ನು ಬಳಸಿಕೊಂಡು ನಿಮ್ಮ ಪಾಸ್‌ವರ್ಡ್‌ ಅನ್ನು ಮರುಹೊಂದಿಸಬಹುದು:

  • ಇ-ಫೈಲಿಂಗ್ OTP (ಇ-ಫೈಲಿಂಗ್ ಪೋರ್ಟಲ್ನಲ್ಲಿ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ ಸ್ವೀಕರಿಸಲಾಗಿರುವುದು)
  • ಆಧಾರ್‌ OTP (ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಲಾಗಿರುವುದು)
  • EVC (ನಿಮ್ಮ ಪೂರ್ವ-ಮೌಲ್ಯೀಕರಿಸಿದ ಬ್ಯಾಂಕ್/ಡಿಮ್ಯಾಟ್ ಖಾತೆಯನ್ನು ಬಳಸಿ ರಚಿಸಲಾಗಿರುವುದು)
  • DSC

5. ನಾನು EVC ಎಲ್ಲಿ ಪಡೆಯುತ್ತೇನೆ?
ನೀವು ಆರಿಸಿರುವ ಆಯ್ಕೆಯನ್ನು ಆಧರಿಸಿ ನಿಮ್ಮ ಪೂರ್ವ-ಮೌಲ್ಯೀಕರಿಸಿದ ಬ್ಯಾಂಕ್ /ಡಿಮ್ಯಾಟ್ ಖಾತೆಯೊಂದಿಗೆ ನೋಂದಾಯಿತ ಮೊಬೈಲ್ ನಂಬರ್‌ನಲ್ಲಿ EVC ಅನ್ನು ಸ್ವೀಕರಿಸುತ್ತೀರಿ.


6. ನಾನು ನನ್ನ ಬ್ಯಾಂಕ್ ಖಾತೆ EVC ಅನ್ನು ಬಳಸಿ ಪಾಸ್‌ವರ್ಡ್‌ ಅನ್ನು ಮರುಹೊಂದಿಸಲು ಆದರೆ ಅಂತಹ ಆಯ್ಕೆಯನ್ನು ಪಟ್ಟಿಯಲ್ಲಿ ನೀಡಲಾಗಿಲ್ಲ. ನಾನೇನು ಮಾಡಬೇಕು?
ನಿಮ್ಮ ಇ-ಫೈಲಿಂಗ್ ಖಾತೆಯನ್ನು ರಕ್ಷಣೆ ಮಾಡಲು ಇ-ಫೈಲಿಂಗ್ ವಾಲ್ಟ್ ಉನ್ನತ ಭದ್ರತೆ ಸೇವೆಯಿಂದ ನೀವು ಆಯ್ಕೆ ಮಾಡಿದ ಆಯ್ಕೆಯನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಒಂದು ವೇಳೆ ನೀವು ನಿಮ್ಮ ಪಾಸ್‌ವರ್ಡ್‌ ಅನ್ನು ಬ್ಯಾಂಕ್ ಖಾತೆ EVC ಅಥವಾ ಬೇರೆ ಯಾವುದಾದರೂ ವಿಧಾನವನ್ನು ಬಳಸಿ ಮರುಹೊಂದಿಸಲು ಬಯಸುತ್ತಿದ್ದು ಅದು ಆಯ್ಕೆಯಾಗಿ ಪ್ರದರ್ಶಿಸಲಿಲ್ಲವಾದರೆ, ನೀವು ಆ ಆಯ್ಕೆಯನ್ನು ಇ-ಫೈಲಿಂಗ್ ವಾಲ್ಟ್ ಉನ್ನತ ಭದ್ರತೆ ಸೇವೆ ಮುಖಾಂತರ ಸೇರಿಸಬಹುದು.


7. ಯಾವುದೇ ವಿಧಾನಗಳಿಂದ ಪಾಸ್‌ವರ್ಡ್‌ ಮರುಹೊಂದಿಸಲು ನನಗೆ ಸಾಧ್ಯವಾಗುತ್ತಿಲ್ಲ?
ಹೆಚ್ಚಿನ ಸಹಾಯಕ್ಕಾಗಿ ನೀವು ಸಹಾಯವಾಣಿ (1800 103 0025) ಅನ್ನು ಸಂಪರ್ಕಿಸಬಹುದು.