1. ಅವಲೋಕನ
ನನ್ನ ಪ್ರೊಫೈಲ್ / ಅಪ್‌ಡೇಟ್ ಪ್ರೊಫೈಲ್ ಸೇವೆ ಇ-ಫೈಲಿಂಗ್ ಪೋರ್ಟಲ್‌ನ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಅವರ ಪ್ರೊಫೈಲ್ ಮಾಹಿತಿ ಪೋಸ್ಟ್-ಲಾಗಿನ್ ಅನ್ನು ತಿದ್ದಲು / ಸಂಪಾದಿಸಲು ಲಭ್ಯವಿದೆ. ವಿಭಿನ್ನ ಬಳಕೆದಾರರ ಪ್ರಕಾರವನ್ನು ಆಧರಿಸಿ ಪ್ರೊಫೈಲ್ ಮಾಹಿತಿಯನ್ನು ತಿದ್ದಲು / ನವೀಕರಣ ಮಾಡಲು ಈ ಸೇವೆಯು ನಿಮಗೆ ಅನುಮತಿಸುತ್ತದೆ:
- PAN ವಿವರಗಳು, TAN ವಿವರಗಳು, ಆಧಾರ್ ಸಂಖ್ಯೆ ಮುಂತಾದ ನಿಮ್ಮ ವೈಯಕ್ತಿಕ ವಿವರಗಳನ್ನು ವೀಕ್ಷಿಸಿ / ನವೀಕರಿಸಿ
- ಮೊಬೈಲ್ ನಂಬರ್, ಇಮೇಲ್ ID ಮತ್ತು ವಿಳಾಸದಂತಹ ನಿಮ್ಮ ಸಂಪರ್ಕ ವಿವರಗಳನ್ನು ವೀಕ್ಷಿಸಿ / ನವೀಕರಿಸಿ
- ನಿಮ್ಮ ಇತರ ವಿವರಗಳನ್ನು ವೀಕ್ಷಿಸಿ / ನವೀಕರಿಸಿ:
- ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆ ವಿವರಗಳು
- DSC ಅನ್ನು ನೋಂದಾಯಿಸಿ
- ಇ-ಫೈಲಿಂಗ್ ವಾಲ್ಟ್ ಹೈಯರ್ ಸೆಕ್ಯುರಿಟಿ
- PAN - AO ನ್ಯಾಯವ್ಯಾಪ್ತಿ ವಿವರಗಳು
- ಆದಾಯ ತೆರಿಗೆ ರಿಟರ್ನ್ಸ್ / ಫಾರ್ಮ್‌ಗಳ ಪ್ರತಿನಿಧಿ ಮೌಲ್ಯಮಾಪಕ ಮತ್ತು ಅಧಿಕೃತ ಸಹಿದಾರರ ವಿವರಗಳು
- ಆದಾಯದ ಮೂಲ ವಿವರಗಳು
- ನೋಂದಣಿಗಳು ಮತ್ತು ಪ್ರಮಾಣಪತ್ರಗಳು
- ಮೆಚ್ಚುಗೆ ಮತ್ತು ಪ್ರತಿಫಲಗಳು
- ಪೋರ್ಚುಗೀಸ್ ಪೌರ ಸಂಹಿತೆ ಅನ್ವಯಿಕತೆ
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಮಾನ್ಯ ಬಳಕೆದಾರ ID ಮತ್ತು ಗುಪ್ತಪದ/ಪಾಸ್ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
3. ಪ್ರತಿ ಹಂತದ ಮಾರ್ಗದರ್ಶನ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ಡ್ಯಾಶ್‌ಬೋರ್ಡ್ ಪುಟದಲ್ಲಿ, ನಿಮ್ಮ ಡ್ಯಾಶ್‌ಬೋರ್ಡ್‌ನ ಮೇಲಿನ ಬಲ ಮೂಲೆಯಲ್ಲಿ, ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ನನ್ನ ಪ್ರೊಫೈಲ್ಅನ್ನು ಕ್ಲಿಕ್ ಮಾಡಿ.
ಹಂತ 3: ನನ್ನ ಪ್ರೊಫೈಲ್ ಪುಟದಲ್ಲಿ, ನೀವು ವೀಕ್ಷಿಸಬಹುದು ಮತ್ತು/ಅಥವಾ ಅಪ್ಡೇಟ್ ಮಾಡಬಹದು:
| ಪೌರತ್ವ, ವಸತಿ ವಿವರಗಳು, ಪಾಸ್‌ಪೋರ್ಟ್ ಸಂಖ್ಯೆ ಮುಂತಾದ ವೈಯಕ್ತಿಕ ವಿವರಗಳು | ಸೆಕ್ಷನ್ 3.1 ಅನ್ನು ನೋಡಿ |
| ಮೊಬೈಲ್ ನಂಬರ್, ಇಮೇಲ್ ID ಮತ್ತು ವಿಳಾಸದಂತಹ ಸಂಪರ್ಕ ವಿವರಗಳು | ಸೆಕ್ಷನ್ 3.2 ಅನ್ನು ನೋಡಿ |
| ಆದಾಯದ ಮೂಲ ವಿವರಗಳು | ಸೆಕ್ಷನ್ 3.3 ಅನ್ನು ನೋಡಿ |
| ಪೋರ್ಚುಗೀಸ್ ಪೌರ ಸಂಹಿತೆ ಅನ್ವಯಿಕತೆ | ಸೆಕ್ಷನ್ 3.4 ಅನ್ನು ನೋಡಿ |
| ಆದಾಯ ತೆರಿಗೆ ರಿಟರ್ನ್ಸ್ / ಫಾರ್ಮ್‌ಗಳಿಗೆ ಅಧಿಕೃತ ಸಹಿದಾರ |
ಆದಾಯ ತೆರಿಗೆ ರಿಟರ್ನ್ಸ್ / ಫಾರ್ಮ್‌ಗಳಿಗೆ ಅಧಿಕೃತ ಸಹಿದಾರ ಅನ್ನು ಕ್ಲಿಕ್ ಮಾಡಿ. ವಿವರಗಳನ್ನು ನವೀಕರಿಸಲು ತಿದ್ದು ಕ್ಲಿಕ್ ಮಾಡಿ ಮತ್ತು ಉಳಿಸಿ ಕ್ಲಿಕ್ ಮಾಡಿ. ಸೂಚನೆ: ಅಧಿಕೃತ ಪ್ರತಿನಿಧಿ / ಸಹಿದಾರ ಮಾಡಿದವರನ್ನು ಹೇಗೆ ನೋಂದಾಯಿಸಬೇಕು ಎಂಬುದನ್ನು ತಿಳಿಯಲು ಅಧಿಕೃತ ಮತ್ತು ತೆರಿಗೆದಾರನ ಪ್ರತಿನಿಧಿ ಕೈಪಿಡಿಯನ್ನು ನೋಡಿ. |
| ತೆರಿಗೆದಾರರ ಪ್ರತಿನಿಧಿ |
ತೆರಿಗೆದಾರನ ಪ್ರತಿನಿಧಿಯನ್ನುಕ್ಲಿಕ್ ಮಾಡಿ. ವಿವರಗಳನ್ನು ನವೀಕರಿಸಲು ತಿದ್ದು ಕ್ಲಿಕ್ ಮಾಡಿ ಮತ್ತು ಉಳಿಸಿ ಕ್ಲಿಕ್ ಮಾಡಿ. ಸೂಚನೆ: ತೆರಿಗೆದಾರನ ಪ್ರತಿನಿಧಿಯನ್ನು ಹೇಗೆ ನೋಂದಾಯಿಸಬೇಕು ಎಂಬುದನ್ನು ತಿಳಿಯಲು ಅಧಿಕೃತ ಮತ್ತು ತೆರಿಗೆದಾರನ ಪ್ರತಿನಿಧಿ ಕೈಪಿಡಿಯನ್ನು ನೋಡಿ. |
| ಸುರಕ್ಷಿತ ಪ್ರವೇಶ ಸಂದೇಶವನ್ನು ಹೊಂದಿಸಿ (ಇ-ಫೈಲಿಂಗ್ ಪೋರ್ಟಲ್‌ಗೆ ನೀವು ಲಾಗ್ ಇನ್ ಮಾಡಿದಾಗ ವೈಯಕ್ತಿಕಗೊಳಿಸಿದ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ]. ನಿಮ್ಮ ಬಳಕೆದಾರರ ID ಮತ್ತು ಗುಪ್ತಪದ/ಪಾಸ್ವರ್ಡ್ ನಮೂದಿಸಿದ ಜಾಲತಾಣ/ವೆಬ್ ಸೈಟ್ ನೈಜ ಇ-ಫೈಲಿಂಗ್ ಪೋರ್ಟಲ್ ಆಗಿದೆಯೇ ಎಂದು ತನಿಖೆ ನಡೆಸಲು ವೈಯಕ್ತಿಕಗೊಳಿಸಿದ ಸಂದೇಶ ಉಪಯುಕ್ತ ಮಾರ್ಗವಾಗಿದೆ ) |
ಸುರಕ್ಷಿತ ಪ್ರವೇಶ ಸಂದೇಶವನ್ನುಕ್ಲಿಕ್ ಮಾಡಿ. ಸುರಕ್ಷಿತ ಪ್ರವೇಶ ಸಂದೇಶ ಪುಟದಲ್ಲಿ, ಪಠ್ಯ ಪೆಟ್ಟಿಗೆಯಲ್ಲಿ ವೈಯಕ್ತಿಕಗೊಳಿಸಿದ ಸಂದೇಶವನ್ನು ನಮೂದಿಸಿ ಮತ್ತು ಉಳಿಸಿ ಕ್ಲಿಕ್ ಮಾಡಿ. |
| ಆಧಾರ್ OTP ಲಾಗಿನ್ | ಏಕ ಅಂಶ ದೃಢೀಕರಣಕ್ಕಾಗಿ ಆಧಾರ್ OTP ಮೂಲಕ ನಿಮ್ಮ ಲಾಗಿನ್ ಅನ್ನು ಸಕ್ರಿಯಗೊಳಿಸಲು, ಆಧಾರ್ OTP ಲಾಗಿನ್ ಕ್ಲಿಕ್ ಮಾಡಿ. ಆಧಾರ್‌ನಲ್ಲಿ OTP ಲಾಗಿನ್ ಪುಟದಲ್ಲಿ, ಹೌದು ಆಯ್ಕೆ ಮಾಡಿ ಮತ್ತು ಆಧಾರ್ ಮೂಲಕ ಉಳಿಸಿಮತ್ತು ಲಾಗ್ ಇನ್ ಕ್ಲಿಕ್ ಮಾಡಿ. |
| ನ್ಯಾಯವ್ಯಾಪ್ತಿಯ ವಿವರಗಳು | ನ್ಯಾಯವ್ಯಾಪ್ತಿಯ ವಿವರಗಳನ್ನು ವೀಕ್ಷಿಸಲು ನ್ಯಾಯವ್ಯಾಪ್ತಿಯ ವಿವರಗಳನ್ನು ಕ್ಲಿಕ್ ಮಾಡಿ |
| ನೋಂದಣಿಗಳು ಮತ್ತು ಪ್ರಮಾಣಪತ್ರಗಳು | ಇ-PAN ವಿವರಗಳು, ಸ್ಟಾರ್ಟಪ್ ಅಂಗೀಕೃತ ವಿವರಗಳು ಮತ್ತು ಇ-ಸಲ್ಲಿಸಿದ ಫಾರ್ಮ್‌ಗಳ ವಿವರಗಳನ್ನು ವೀಕ್ಷಿಸಲು ಮತ್ತು ಡೌನ್ ಲೋಡ್ ಮಾಡಲು ನೋಂದಣಿಗಳು ಮತ್ತು ಪ್ರಮಾಣಪತ್ರಗಳನ್ನು ಕ್ಲಿಕ್ ಮಾಡಿ. |
| ಮೆಚ್ಚುಗೆ ಮತ್ತು ಪ್ರತಿಫಲಗಳು | ಮೆಚ್ಚುಗೆಯ ಪ್ರಮಾಣಪತ್ರವನ್ನುಡೌನ್ ಲೋಡ್ ಮಾಡಲು ಮೆಚ್ಚುಗೆ ಮತ್ತು ಪ್ರತಿಫಲಗಳನ್ನು ಕ್ಲಿಕ್ ಮಾಡಿ |
| ಬ್ಯಾಂಕ್ ಖಾತೆ ವಿವರಗಳು |
ಬ್ಯಾಂಕ್ ಖಾತೆ ವಿವರಗಳು ಕ್ಲಿಕ್ ಮಾಡಿದಾಗ, ಬ್ಯಾಂಕ್ ಖಾತೆ ಸೇವೆ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ ಬ್ಯಾಂಕ್ ಖಾತೆಯಿಂದ EVCಅನ್ನು ನೀವು ಸೇರಿಸಬಹುದು / ತೆಗೆದುಹಾಕಬಹುದು ಅಥವಾ ಸಕ್ರಿಯಗೊಳಿಸಬಹುದು / ನಿಷ್ಕ್ರಿಯಗೊಳಿಸಬಹುದು. |
| ಡಿಮ್ಯಾಟ್ ಖಾತೆ ವಿವರಗಳು |
ಡಿಮ್ಯಾಟ್ ಖಾತೆ ವಿವರಗಳುಕ್ಲಿಕ್ ಮಾಡಿದಾಗ, ಡಿಮ್ಯಾಟ್ ಖಾತೆ ಸೇವಾ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಡಿಮ್ಯಾಟ್ ಖಾತೆಯಿಂದ EVC ಅನ್ನು ಸೇರಿಸಬಹುದು / ತೆಗೆದುಹಾಕಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು / ಸಕ್ರಿಯಗೊಳಿಸಬಹುದು. |
| DSC ನೋಂದಾಯಿಸಿ ಅಥವಾ ವೀಕ್ಷಿಸಿ ಮತ್ತು DSC ನವೀಕರಿಸಿ | ರಿಜಿಸ್ಟರ್ DSC ಕ್ಲಿಕ್ ಮಾಡಿದಾಗ, ನಿಮ್ಮನ್ನು ರಿಜಿಸ್ಟರ್ ಡಿಜಿಟಲ್ ಸಹಿ/ಹಸ್ತಾಕ್ಷರ ಪ್ರಮಾಣಪತ್ರ (DSC) ಪುಟಕ್ಕೆ ಕರೆದೊಯ್ಯಲಾಗುತ್ತದೆ ಅಲ್ಲಿ ನೀವು ಕೆಳಗೆ ಕೊಟ್ಟಿರುವ ಪ್ರಕ್ರಿಯೆಗಳನ್ನು ಕೈಗೊಳ್ಳಬಹುದು:
ಸೂಚನೆ: ಮತ್ತಷ್ಟು ತಿಳಿದುಕೊಳ್ಳಲು DSC ನೊಂದಾಯಿಸಿ ಬಳಕೆದಾರ ಕೈಪಿಡಿಯನ್ನು ನೋಡಿ. |
| ಇ-ಫೈಲಿಂಗ್ ವಾಲ್ಟ್ - ಹೆಚ್ಚಿನ ಭದ್ರತೆ |
ಇ-ಫೈಲಿಂಗ್ ವಾಲ್ಟ್ -ಹೆಚ್ಚಿನ ಭದ್ರತೆಮೇಲೆ ಕ್ಲಿಕ್ ಮಾಡಿದಾಗ, ನಿಮ್ಮನ್ನು ಇ-ಫೈಲಿಂಗ್ ವಾಲ್ಟ್ - ಹೆಚ್ಚಿನ ಭದ್ರತಾ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ನಿಮ್ಮ ಇ-ಫೈಲಿಂಗ್ ಖಾತೆಗೆ ಹೆಚ್ಚುವರಿ ಮಟ್ಟದ ದೃಢೀಕರಣವನ್ನು ಸೇರಿಸಬಹುದು. |
| ಸ್ಥಿರ ಪಾಸ್‌ವರ್ಡ್ |
ಸ್ಥಿರ ಗುಪ್ತಪದ/ಪಾಸ್ವರ್ಡ್ ರಚಿಸಲು ಸ್ಥಾಯೀ ಗುಪ್ತಪದ/ಪಾಸ್ವರ್ಡ್ ಕ್ಲಿಕ್ ಮಾಡಿ. |
ಸೂಚನೆ:
- ಬಾಹ್ಯ ಏಜೆನ್ಸಿಗಳು ವೈಯಕ್ತಿಕ ವಿವರಗಳನ್ನು ಬಾಹ್ಯ ಸಂಸ್ಥೆ ಪ್ರಕಾರ, ಸೇವೆ ಪ್ರಕಾರ, ಸಂಸ್ಥೆಯ PAN, ಸಂಸ್ಥೆಯ TAN, ಲ್ಯಾಂಡ್‌ಲೈನ್ ಸಂಖ್ಯೆ ಮತ್ತು ಇಮೇಲ್ IDಯಂತಹ ವೈಯಕ್ತಿಕ ವಿವರಗಳನ್ನು ತಿದ್ದುಪಡಿ / ನವೀಕರಣ ಮಾಡಬಹುದು.
- ERI ಗಳು ಮತ್ತು TIN 2.0ನೋಂದಣಿ ಮಧ್ಯಸ್ಥಗಾರರು ತಮ್ಮ ವೈಯಕ್ತಿಕ ವಿವರಗಳನ್ನು ಮಾತ್ರ ವೀಕ್ಷಿಸಬಹುದು ಮತ್ತು ಯಾವುದೇ ವೈಯಕ್ತಿಕ ವಿವರಗಳನ್ನು ತಿದ್ದುಪಡಿ / ನವೀಕರಣ ಮಾಡಲು ಸಾಧ್ಯವಾಗುವುದಿಲ್ಲ.
- ERI ಗಳು, ಬಾಹ್ಯ ಏಜೆನ್ಸಿಗಳು ಮತ್ತು TIN 2.0ನೋಂದಣಿ ಮಧ್ಯಸ್ಥಗಾರರು ತಮ್ಮ ಸಂಪರ್ಕ ವಿವರಗಳನ್ನು ನವೀಕರಣ ಮಾಡಬಹುದು.
- ERI ಮತ್ತು ಬಾಹ್ಯ ಏಜೆನ್ಸಿಗಳು ಆಯಾ ಪ್ರೊಫೈಲ್‌ಗಳ ಮೂಲಕ ಸೇವೆಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.
- ಇನ್ನಷ್ಟು ಕಲಿಯಲು ಆಯಾ ಬಳಕೆದಾರರ ಕೈಪಿಡಿಗಳನ್ನು ನೋಡಿ.
3.1ವೈಯಕ್ತಿಕ ವಿವರಗಳನ್ನು ನವೀಕರಣ ಮಾಡಲು
ಹಂತ 1: ವೈಯಕ್ತಿಕ ವಿವರಗಳನ್ನು ಅಪ್ಡೇಟ್ ಮಾಡಲು ನನ್ನ ಪ್ರೊಫೈಲ್ ಪುಟದಲ್ಲಿ ಸಂಪಾದಿಸಿ ಕ್ಲಿಕ್ ಮಾಡಿ.
ಗಮನಿಸಿ: ಪೌರತ್ವ ಮತ್ತು ವಸತಿ ಸ್ಥಿತಿಯನ್ನು ಮಾತ್ರ ಬದಲಾಯಿಸಬಹುದು.
ಹಂತ 2: ಅಪೇಕ್ಷಿತ ವಿವರಗಳನ್ನು ತಿದ್ದುಪಡಿ ಮಾಡಿದ ನಂತರ, ಉಳಿಸಿ ಕ್ಲಿಕ್ ಮಾಡಿ
ಸೂಚನೆ: ಬಳಕೆದಾರರ ಪ್ರಕಾರವನ್ನು ಆಧರಿಸಿ ಕೆಲವು ವಿವರಗಳನ್ನು ತಿದ್ದುಪಡಿ ಮಾಡಲಾಗದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
3.2ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ವಿವರಗಳನ್ನು ನವೀಕರಣ ಮಾಡಲು (ಮೊಬೈಲ್ ನಂಬರ್ ಮತ್ತು ಇಮೇಲ್ ID)
( ಆಧಾರ್, PAN ಅಥವಾ ಬ್ಯಾಂಕ್ ವಿವರಗಳ ಪ್ರಕಾರ ನಿಮ್ಮ ಮೊಬೈಲ್ ನಂಬರ್ ಅನ್ನು ನೀವು ನವೀಕರಿಸಬಹುದು )
ಹಂತ 1: ನನ್ನ ಪ್ರೊಫೈಲ್ ಪುಟದಲ್ಲಿ, ಸಂಪರ್ಕ ವಿವರಗಳನ್ನು ನವೀಕರಿಸಲು ತಿದ್ದುಪಡಿ ಕ್ಲಿಕ್ ಮಾಡಿ.
ಹಂತ 2: ಬ್ಯಾಂಕ್ / ಆಧಾರ್ / PAN ವಿವರಗಳ ಪ್ರಕಾರ ಮೊಬೈಲ್ ಸಂಖ್ಯೆ ನಮೂದಿಸಿ ಮತ್ತು ಇ-ಪರಿಶೀಲನೆಗೆ ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 3a: ನಿಮ್ಮ ಸಂಪರ್ಕ ವಿವರಗಳನ್ನು ಪರಿಶೀಲಿಸಿ ಪುಟದಲ್ಲಿ, ಪ್ರಾಥಮಿಕ ಮತ್ತು ಸೆಕೆಂಡರಿ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಮತ್ತು ಪ್ರಾಥಮಿಕ ಮತ್ತು ಸೆಕೆಂಡರಿ ಇಮೇಲ್ ID ಅಲ್ಲಿ ಸ್ವೀಕರಿಸಿದ ಎರಡು ಪ್ರತ್ಯೇಕ 6ಅಂಕಿಯ OTP ಗಳನ್ನು ನಮೂದಿಸಿದ ನಂತರ ಮತ್ತು "ಸಲ್ಲಿಸಿ ಮತ್ತು ಪರಿಶೀಲನೆಗೆ ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ
ಹಂತ 3b: ಇ-ಪರಿಶೀಲನೆ ಪುಟದಲ್ಲಿ, ನೀವು ರಿಟರ್ನ್ ಅನ್ನು ಇ-ಪರಿಶೀಲಿಸಲು ಬಯಸುವ ಆಯ್ಕೆಯನ್ನು ಆರಿಸಿ ಮತ್ತು ಮುಂದುವರಿಯಿರಿ ಕ್ಲಿಕ್ ಮಾಡಿ.
ಗಮನಿಸಿ: ನೀವು ಅನಿವಾಸಿಗಳಾಗಿದ್ದರೆ ಮತ್ತು PAN ಬಳಕೆದಾರರನ್ನು ಹೊಂದಿರಬೇಕಾದ ಅಗತ್ಯವಿಲ್ಲದಿದ್ದರೆ ಹಂತ 3B ಅನ್ವಯಿಸುವುದಿಲ್ಲ
3.3. ಆದಾಯದ ಮೂಲವನ್ನು ನವೀಕರಿಸಲು ( ತೆರಿಗೆದಾರರಿಗೆ ಮಾತ್ರ )
ಹಂತ 1: ನನ್ನ ಪ್ರೊಫೈಲ್ ಪುಟದಲ್ಲಿ, ಆದಾಯದ ಮೂಲ ಕ್ಲಿಕ್ ಮಾಡಿ.
ಹಂತ 2: ಯಾವುದೇ ವಿವರಗಳನ್ನು ಸೇರಿಸದಿದ್ದರೆ, ವಿವರಗಳನ್ನುಸೇರಿಸಿ ಕ್ಲಿಕ್ ಮಾಡಿ.
ಸೂಚನೆ: ಒಂದು ವೇಳೆ ಆದಾಯದ ಮೂಲವು ಭರ್ತಿ ಮಾಡಲ್ಪಟ್ಟರೆ ಮತ್ತು ವಿವರಗಳನ್ನು ನವೀಕರಣ ಮಾಡಲು ನೀವು ಬಯಸಿದರೆ %3sತಿದ್ದುಪಡಿ ಕ್ಲಿಕ್ ಮಾಡಿ. ನೀವು ಈಗಾಗಲೇ ಸೇರಿಸಿರುವ ಆದಾಯದ ಮೂಲವನ್ನು ಅಳಿಸಲು ಬಯಸಿದರೆ, ಅಳಿಸಿ ಕ್ಲಿಕ್ ಮಾಡಿ. ಅಳಿಸಿ ಕ್ಲಿಕ್ ಮಾಡಿದಾಗ ವಿವರಗಳನ್ನು ನಿಮ್ಮ ಪ್ರೊಫೈಲ್‌ನಿಂದ ಅಳಿಸಲಾಗುತ್ತದೆ.
ಹಂತ 3: ಆದಾಯದ ಮೂಲ( ಸಂಬಳ / ಪಿಂಚಣಿದಾರರು, ಗೃಹ ಆಸ್ತಿ, ವ್ಯವಹಾರ / ವೃತ್ತಿ, ಕೃಷಿ, ಇತರರು ) ಡ್ರಾಪ್‌ಡೌನ್‌ನಿಂದ ಆಯ್ಕೆ ಮಾಡಿ.
ಹಂತ 4: ಡ್ರಾಪ್‌ಡೌನ್‌ನಿಂದ ಆಯ್ಕೆಯನ್ನು ಆಯ್ಕೆ ಮಾಡಿದಾಗ, ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಸೇರಿಸಿ ಕ್ಲಿಕ್ ಮಾಡಿ.
- ನೀವು ಸಂಬಳ / ಪಿಂಚಣಿದಾರರನ್ನು ಆರಿಸಿದರೆ,TAN ಉದ್ಯೋಗದಾತ / ಪಿಂಚಣಿದಾರರ ವಿತರಣಾ ಪ್ರಾಧಿಕಾರ, ಉದ್ಯೋಗಗಳ ಸ್ವರೂಪ, ಉದ್ಯೋಗದಾತರ ಹೆಸರು / ಪಿಂಚಣಿದಾರರ ಹೆಸರು ವಿತರಣಾ ಪ್ರಾಧಿಕಾರ ಮತ್ತು ಉದ್ಯೋಗದ ಅವಧಿಯ ವಿವರಗಳನ್ನು ನಮೂದಿಸಿ.
- ನೀವು ವ್ಯವಹಾರ / ವೃತ್ತಿಯನ್ನು ಆಯ್ಕೆಮಾಡಿದಲ್ಲಿ,ನೀವು ವ್ಯವಹಾರ / ವೃತ್ತಿಯೊಂದಿಗೆಸಂಘದ ಪ್ರಕಾರವನ್ನು ಆಯ್ಕೆ ಮಾಡಬಹುದು, ವೃತ್ತಿಪರ ವಿವರಗಳು ಮತ್ತು ವ್ಯವಹಾರ ವಿಳಾಸವನ್ನು ನಮೂದಿಸಿ.
- ನೀವು ಗೃಹ ಆಸ್ತಿಯನ್ನುಆಯ್ಕೆ ಮಾಡಿದರೆ, ಆಸ್ತಿಯ ಮಾಲೀಕತ್ವ ( ಸ್ವಯಂ ), ವಿಳಾಸ, ಗೃಹ ಆಸ್ತಿಯ ಪ್ರಕಾರ ( ಸ್ವಯಂ ವಾಸವಿರುವ / ಬಾಡಿಗೆಗೆ ಬಿಟ್ಟ / ಬಾಡಿಗೆಗೆ ಬಿಡಲಾಗಿದೆ ಎಂದು ಪರಿಗಣಿಸಿದ ), ಮಾಲೀಕತ್ವ ಶೇಕಡಾವಾರು, ಇತರ ಸಹ - ಮಾಲೀಕರು ಮತ್ತು ಸಹ-ಮಾಲೀಕರು ಮತ್ತು ಮಾಲೀಕತ್ವದ ವಿವರಗಳನ್ನುವಸತಿ ಸ್ಥಿತಿ, PAN ವಿವರಗಳು, ಆಧಾರ್, ಇತ್ಯಾದಿ ವಿವರಗಳನ್ನು ನೀವು ನಮೂದಿಸಬಹುದು.
ಸೂಚನೆ: ನೀವು ಆದಾಯದ ಅನೇಕ ಮೂಲಗಳನ್ನು ಸೇರಿಸಬಹುದು. ಆದಾಯದ ಎಲ್ಲಾ ಮೂಲಗಳನ್ನು ಸೇರಿಸಲು ವಿವರಗಳನ್ನು ಸೇರಿಸಿ ಕ್ಲಿಕ್ ಮಾಡಿ.
3.4 ಪೋರ್ಚುಗೀಸ್ ಪೌರ ಸಂಹಿತೆ ಅನ್ವಯಿಸುವಿಕೆಯನ್ನು ನವೀಕರಿಸಲು
ಹಂತ 1: ನನ್ನ ಪ್ರೊಫೈಲ್ಪುಟದಲ್ಲಿ, ಪೋರ್ಚುಗೀಸ್ ಪೌರ ಸಂಹಿತೆ ಅನ್ವಯಿಸುವಿಕೆಯನ್ನು ಕ್ಲಿಕ್ ಮಾಡಿ.
ಸೂಚನೆ: ಪೋರ್ಚುಗೀಸ್ ಪೌರ ಸಂಹಿತೆ ಎಂದರೇನು? ಅದು ನಿಮಗೆ ಅನ್ವಯಿಸಬಹುದೇ ಎಂದು ತಿಳಿಯಲು.
ಹಂತ 2: ವಿಭಾಗ 5A ಪ್ರಕಾರ ಪೋರ್ಚುಗೀಸ್ ಪೌರ ಸಂಹಿತೆಯಿಂದ ನಿಯಂತ್ರಿಸಲ್ಪಟ್ಟರೆ ಹೌದು ಎಂದು ಆಯ್ಕೆ ಮಾಡಿ.
ಹಂತ 3: PAN, ಆಧಾರ್ ಮತ್ತುನಿಮ್ಮ ಸಂಗಾತಿಯ ಹೆಸರು ಮುಂತಾದ ವಿವರಗಳನ್ನು ನಮೂದಿಸಿ ಮತ್ತು ಸೇರಿಸಿ ಕ್ಲಿಕ್ ಮಾಡಿ.
ಸೂಚನೆ: ವ್ಯಕ್ತಿಗಳನ್ನು ಹೊರತುಪಡಿಸಿ ತೆರಿಗೆದಾರರು, ಈ ಕೆಳಗಿನ ವಿವರಗಳನ್ನು ತಮ್ಮ ಪ್ರೊಫೈಲ್‌ನಲ್ಲಿ ನಮೂದಿಸಬಹುದು / ನವೀಕರಿಸಬಹುದು:
| ತೆರಿಗೆದಾರರ ಪ್ರವರ್ಗ | ವಿವರಗಳು |
| HUF | ಪ್ರಮುಖ ವ್ಯಕ್ತಿ ವಿವರಗಳು |
| ವ್ಯವಹಾರ ಸಂಸ್ಥೆ | ವ್ಯವಸ್ಥಾಪಕ ಪಾಲುದಾರ / ಗೊತ್ತುಪಡಿಸಿದ ಪಾಲುದಾರ ವಿವರಗಳನ್ನು ನಿರ್ವಹಿಸುವುದು |
| ಕಂಪನಿ | ಪ್ರಮುಖ ವ್ಯಕ್ತಿ ವಿವರಗಳು, ಹುದ್ದೆ, ಪ್ರಧಾನ ಸಂಪರ್ಕ, ಷೇರುದಾರರ ವಿವರಗಳು |
| AOP | ಸದಸ್ಯ ವಿವರಗಳು, ಪ್ರಧಾನ ಅಧಿಕಾರಿ ವಿವರಗಳು |
| ಟ್ರಸ್ಟ್ | ಟ್ರಸ್ಟೀ ವಿವರಗಳು |
| AJP, ಸ್ಥಳೀಯ ಪ್ರಾಧಿಕಾರ, ತೆರಿಗೆ ಕಡಿತಗೊಳಿಸುವವ ಮತ್ತು ಸಂಗ್ರಹಣಾಕಾರ, ಸರ್ಕಾರ | ಪ್ರಧಾನ ಅಧಿಕಾರಿಯ ವಿವರಗಳು |
| CA | ಸದಸ್ಯತ್ವ ಸಂಖ್ಯೆ, ದಾಖಲಾತಿಯ ದಿನಾಂಕ ಸೇರಿದಂತೆ ವ್ಯವಹಾರ / ವೃತ್ತಿಪರ ವಿವರಗಳು |