Do not have an account?
Already have an account?

1. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನನ್ನ ಪ್ರೊಫೈಲ್ ಅನ್ನು ನವೀಕರಿಸಲಾಗಿದೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಮಾಹಿತಿಯನ್ನು ನವೀಕರಿಸಿದರೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಪ್ರಾಥಮಿಕ ಇಮೇಲ್ IDಗೆ ನೀವು ಇಮೇಲ್ ಸ್ವೀಕರಿಸುತ್ತೀರಿ.


2. ನಾನು NRI ಆಗಿದ್ದೇನೆ ಮತ್ತು ನನ್ನ ಬಳಿ ಭಾರತದ ಸಂಖ್ಯೆ ಇಲ್ಲ. ನನ್ನ ಸಂಪರ್ಕದ ವಿವರಗಳನ್ನು ಪರಿಶೀಲಿಸಲು ನಾನು OTP ಅನ್ನು ಹೇಗೆ ಸ್ವೀಕರಿಸುತ್ತೇನೆ?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ IDಯಲ್ಲಿ ನೀವು OTP ಸ್ವೀಕರಿಸುತ್ತೀರಿ.


3. ಪ್ರೊಫೈಲ್ ನವೀಕರಿಸಿಕೊಳ್ಳುವುದು ಕಡ್ಡಾಯವೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ನವೀಕರಿಸುವುದು ಕಡ್ಡಾಯವಲ್ಲ. ಆದಾಗ್ಯೂ, ವರ್ಧಿತ ಬಳಕೆದಾರರ ಅನುಭವವನ್ನು (ಪೂರ್ವ-ಭರ್ತಿ ಸೇರಿದಂತೆ) ಪಡೆಯಲು ಮತ್ತು ಆದಾಯ ತೆರಿಗೆ ಇಲಾಖೆಯಿಂದ ಸಮಯೋಚಿತ ಸಂವಹನಗಳನ್ನು ಸ್ವೀಕರಿಸಲು ನಿಮ್ಮ ಪ್ರೊಫೈಲ್ ಅನ್ನು ನವೀಕರಿಸುವಂತೆ ಶಿಫಾರಸು ಮಾಡಲಾಗಿದೆ.


4. ಪ್ರೊಫೈಲ್ ನವೀಕರಿಸುವುದರಿಂದ ಏನು ಪ್ರಯೋಜನ?
ನೀವು ನವೀಕರಿಸಿರುವ ಪ್ರೊಫೈಲ್ ವಿವರಗಳು, ಅಗತ್ಯವಿದ್ದರೆ, ನಿಮ್ಮೊಂದಿಗೆ ಸಮಯೋಚಿತವಾಗಿ ಸಂವಹನ ನಡೆಸಲು ITD ಗೆ ಅನುವು ಮಾಡಿಕೊಡುತ್ತದೆ. ಇದು ವಿವಿಧ ಫಾರ್ಮ್‌ಗಳನ್ನು ಪೂರ್ವ-ಭರ್ತಿ ಮಾಡಲು ಇನ್ಪುಟ್ ಅನ್ನು ಒದಗಿಸುತ್ತದೆ ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮಗೆ ಅನ್ವಯವಾಗುವ ಐಟಿಆರ್‌ಗಳನ್ನು ಸಹ ಒದಗಿಸುತ್ತದೆ.


5. ನನ್ನ ಪ್ರೊಫೈಲ್ ಮೂಲಕ ನಾನು ಮಾರ್ಪಡಿಸಬಹುದಾದ / ನವೀಕರಿಸಬಲ್ಲ ವಿವರಗಳು ಯಾವುವು?
ನಿಮ್ಮ ಪ್ರೊಫೈಲ್ ಮೂಲಕ ನೀವು ಈ ಕೆಳಗಿನವುಗಳನ್ನು ಅಪ್‌ಡೇಟ್ ಮಾಡಬಹುದು ಅಥವಾ ಮಾರ್ಪಡಿಸಬಹುದು:

  • ಆದಾಯದ ಮೂಲ ವಿವರಗಳು
  • ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆ ವಿವರಗಳು
  • DSC ಅನ್ನು ನೋಂದಾಯಿಸಿ
  • ಸಂಪರ್ಕ ವಿವರಗಳು (OTP ದೃಢೀಕರಣ), ಪ್ರಮುಖ ವ್ಯಕ್ತಿಗಳ ವಿವರಗಳು
    • ನೀವು ತೆರಿಗೆದಾರರಾಗಿ ಲಾಗ್ ಇನ್ ಆಗಿದ್ದರೆ - ವಸತಿ ಸ್ಥಿತಿ ಮತ್ತು ಪಾಸ್‌ಪೋರ್ಟ್ ಸಂಖ್ಯೆ; ಪ್ರಾಥಮಿಕ ಮತ್ತು ದ್ವಿತೀಯ ಮೊಬೈಲ್ ಸಂಖ್ಯೆ, ಇಮೇಲ್ ID ಮತ್ತು ವಿಳಾಸದಂತಹ ಸಂಪರ್ಕ ವಿವರಗಳನ್ನು ನಿಮ್ಮ ಮೂಲ ಪ್ರೊಫೈಲ್ ವಿವರಗಳನ್ನು ಎಡಿಟ್ ಮಾಡಬಹುದು.
    • ನೀವು ERI ಆಗಿ ಲಾಗ್ ಇನ್ ಮಾಡಿದರೆ - ಬಾಹ್ಯ ಸಂಸ್ಥೆ ಪ್ರಕಾರ, ಸೇವೆಗಳ ಪ್ರಕಾರ, ಸಂಸ್ಥೆಯ PAN, ಸಂಸ್ಥೆಯ TAN; ಸಂಪರ್ಕ ವಿವರಗಳು; ಪ್ರಮಾಣಪತ್ರಗಳನ್ನು ನಿರ್ವಹಿಸಿ, ಪ್ರಮುಖ ಸಂಪರ್ಕ ವಿವರಗಳನ್ನು ನವೀಕರಿಸಿ, ERI ಅನ್ನು ಸೇರಿಸಿ ಅಥವಾ ಅಳಿಸಿ, ERI ವಿಧವನ್ನು ಬದಲಾಯಿಸಿ ಇಂತಹ ನಿಮ್ಮ ಮೂಲ ಪ್ರೊಫೈಲ್‌ ವಿವರಗಳನ್ನು ನೀವು ಎಡಿಟ್‌ ಮಾಡಬಹುದು.
    • ನೀವು ಬಾಹ್ಯ ಏಜೆನ್ಸಿಯಲ್ಲಿ ಲಾಗ್ ಇನ್ ಮಾಡಿದ್ದರೆ - ನೀವು ಸಂಪರ್ಕ ವಿವರಗಳು, ಪ್ರಮಾಣಪತ್ರಗಳನ್ನು ನಿರ್ವಹಿಸಿ, ಪ್ರಮುಖ ವ್ಯಕ್ತಿಗಳನ್ನು ಸೇರಿಸಿ ಅಥವಾ ತೆಗೆದುಹಾಕಿ ಇವುಗಳನ್ನು ಅಪ್ಡೇಟ್‌ ಮಾಡಬಹುದು,
    • ನೀವು TIN 2.0 ಸ್ಟೇಕ್‌ಹೋಲ್ಡರ್ನಲ್ಲಿ ಲಾಗ್ ಇನ್ ಆಗಿದ್ದರೆ - ನೀವು ಸಂಪರ್ಕ ವಿವರಗಳನ್ನು ಅಪ್‌ಡೇಟ್ ಮಾಡಬಹುದು, ಪ್ರಮಾಣಪತ್ರಗಳನ್ನು ನಿರ್ವಹಿಸಬಹುದು ಮತ್ತು ಅಪ್‌ಡೇಟ್ ಮಾಡಬಹುದು ಅಥವಾ ಹೊಸ ತಾಂತ್ರಿಕ SPOC ವಿವರಗಳನ್ನು ಸೇರಿಸಬಹುದು.

6. ನನ್ನ ಪ್ರೊಫೈಲ್ ಪ್ರಕಾರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳಲ್ಲಿ ITD ಯಿಂದ ಸಂವಹನವನ್ನು ನಾನು ಪಡೆಯಬಹುದೇ
ಹೌದು, ನಿಮ್ಮ ಇ-ಫೈಲಿಂಗ್ ಪ್ರೊಫೈಲ್‌ನಲ್ಲಿ ಸೇರಿಸಿದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ವಿವರಗಳ ಮೇಲೆ ನೀವು ITD ಯಿಂದ ಸಂವಹನವನ್ನು ಪಡೆಯಬಹುದು.


7. ನನ್ನ ಪ್ರೊಫೈಲ್‌ ಎಷ್ಟು ಅಪ್‌ಡೇಟ್ ಆಗಿದೆ / ಪೂರ್ಣಗೊಂಡಿದೆ ಎಂದು ನನಗೆ ಹೇಗೆ ಗೊತ್ತಾಗುತ್ತದೆ?
ಪ್ರೊಫೈಲ್ ಪೂರ್ಣಗೊಳಿಸುವ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ ಫೈಲ್ ಪುಟದಲ್ಲಿ ಪ್ರೊಫೈಲ್ ಪೂರ್ಣಗೊಳಿಸುವ ಶೇಕಡಾವಾರು ಬಾರ್ ಅನ್ನು ನೀವು ಉಲ್ಲೇಖಿಸಬಹುದು. ಈ ಕೆಳಗಿನ ಬಳಕೆದಾರ ಪ್ರಕಾರಗಳನ್ನು ಹೊರತುಪಡಿಸಿ ಎಲ್ಲಾ ನೋಂದಾಯಿತ ಬಳಕೆದಾರರಿಗೆ ಇದು ಲಭ್ಯವಾಗುತ್ತದೆ:

  • ERI ಗಳು
  • ಬಾಹ್ಯ ಏಜೆನ್ಸಿಗಳು
  • TIN 2.0 ಮಧ್ಯಸ್ಥಗಾರರು
  • ITDREIN
  • ತೆರಿಗೆ ಕಡಿತಗೊಳಿಸುವವ ಮತ್ತು ಸಂಗ್ರಾಹಕ

8. ನನ್ನ DSC ರಿಜಿಸ್ಟರ್ ಆಗಿದೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?
ನೀವು ನಿಮ್ಮ ಪ್ರೊಫೈಲ್‌ಗೆ ಹೋಗಬಹುದು ಮತ್ತು ಸ್ಥಿತಿಯನ್ನು ವೀಕ್ಷಿಸಲು DSC ನೋಂದಣಿ ಕ್ಲಿಕ್ ಮಾಡಿ. ಸಿಎ / ಕಂಪನಿ / ERI ಗಾಗಿ, PAN / ಪ್ರಧಾನ ಸಂಪರ್ಕಕ್ಕಾಗಿ DSC ನೋಂದಾಯಿತವಾಗಿರದಿದ್ದರೆ ಅಥವಾ ಅವಧಿ ಮುಗಿದಿದ್ದರೆ, ಅದನ್ನು ಪ್ರೊಫೈಲ್ ಪೋಸ್ಟ್ ಲಾಗಿನ್‌ನಲ್ಲಿ ತಿಳಿಸುವ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ನೀವು ಇನ್ನಷ್ಟು ಕಲಿಯಲು DSC ನೋಂದಣಿ ಬಳಕೆದಾರರ ಕೈಪಿಡಿಯನ್ನು ಉಲ್ಲೇಖಿಸಬಹುದು.