1. ಅವಲೋಕನ
ನಿಮ್ಮ PAN ಅನ್ನು ಪರಿಶೀಲಿಸಿ ಎಂಬುದು ಬಾಹ್ಯ ಏಜೆನ್ಸಿಗಳನ್ನು ಹೊರತುಪಡಿಸಿ ಎಲ್ಲಾ ಬಳಕೆದಾರರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪೂರ್ವ-ಲಾಗಿನ್ ಮಾಡುವ (ಪೋರ್ಟಲ್‌ಗೆ ಲಾಗಿನ್ ಆಗುವ ಅಗತ್ಯವಿಲ್ಲ) ಸೇವೆಯಾಗಿದೆ. ಬಾಹ್ಯ ಏಜೆನ್ಸಿಗಳು ಲಾಗಿನ್ ಆದ ನಂತರ ಈ ಸೇವೆಯನ್ನು ಆಕ್ಸೆಸ್ ಮಾಡಬಹುದು. ನೀವು ಏನು ಮಾಡಬಹುದು ಎಂದರೆ:
- PAN ಕಾರ್ಡ್‌ನಲ್ಲಿರುವ ಹೆಸರು, ಜನ್ಮ ದಿನಾಂಕ ಇತ್ಯಾದಿ PAN ನ ವಿವರಗಳು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ
- PAN ಸಕ್ರಿಯವಾಗಿದೆಯೇ ಎಂದು ಪರಿಶೀಲಿಸಿ
2. ಈ ಸೇವೆಯನ್ನು ಪಡೆಯಲು ಬೇಕಾದ ಪೂರ್ವಾಪೇಕ್ಷಿತಗಳು
- ಮಾನ್ಯವಾದ PAN
- ಮಾನ್ಯವಾದ ಮೊಬೈಲ್ ನಂಬರ್ (ನಿಮಗೆ ಆಕ್ಸೆಸ್ ಇರುವುದು)
- ಬಾಹ್ಯ ಏಜೆನ್ಸಿಗಳಿಗಾಗಿ: ಮಾನ್ಯವಾದ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
3. ಹಂತ-ಹಂತದ ಮಾರ್ಗದರ್ಶಿ
3.1 ನಿಮ್ಮ PAN ಅನ್ನು ಪರಿಶೀಲಿಸಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ.
ಹಂತ 2: ಇ-ಫೈಲಿಂಗ್ ಮುಖಪುಟದಲ್ಲಿ ನಿಮ್ಮ PAN ಅನ್ನು ಪರಿಶೀಲಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3: ನಿಮ್ಮ PAN ಅನ್ನು ಪರಿಶೀಲಿಸಿ ಪೇಜ್‌ನಲ್ಲಿ, ನಿಮ್ಮ PAN, ಪೂರ್ಣ ಹೆಸರು, ಜನ್ಮ ದಿನಾಂಕ ಮತ್ತು ಮೊಬೈಲ್ ನಂಬರ್ (ನೀವು ಆಕ್ಸೆಸ್ ಮಾಡಬಹುದಾದ) ಅನ್ನು ನಮೂದಿಸಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.
ಹಂತ 4:ಪರಿಶೀಲನೆ ಪೇಜ್‌ನಲ್ಲಿ, ಹಂತ 3 ರಲ್ಲಿ ನಮೂದಿಸಿದ ನಿಮ್ಮ ಮೊಬೈಲ್ ನಂಬರ್‌ನಲ್ಲಿ ಸ್ವೀಕರಿಸಿದ 6-ಅಂಕಿಯ OTP ಯನ್ನು ನಮೂದಿಸಿ ಮತ್ತು ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ
ಸೂಚನೆ:
• OTP ಯು 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
• ಸರಿಯಾದ OTP ಅನ್ನು ನಮೂದಿಸಲು ನಿಮ್ಮ ಬಳಿ 3 ಪ್ರಯತ್ನಗಳಿವೆ.
• ಸ್ಕ್ರೀನ್ ಮೇಲಿನ OTP ಮುಕ್ತಾಯದ ಕೌಂಟ್‌ಡೌನ್ ಟೈಮರ್, OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ.
• OTP ಟೈಮರ್, OTP ಅನ್ನು ಮರುಸೃಷ್ಟಿಸಲು ಬಾಕಿ ಉಳಿದಿರುವ ಸಮಯವನ್ನು ತೋರಿಸುತ್ತದೆ. OTP ಮರುಕಳುಹಿಸಿ ಕ್ಲಿಕ್ ಮಾಡಿದಾಗ, ಹೊಸ OTP ಅನ್ನು ರಚಿಸಿ, ಕಳುಹಿಸಲಾಗುತ್ತದೆ.
ಯಶಸ್ವಿಯಾಗಿ ಪರಿಶೀಲನೆ ಆದ ನಂತರ, ನಿಮ್ಮ PAN ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ.
3.2 ಬಾಹ್ಯ ಏಜೆನ್ಸಿಗಾಗಿ PAN ಅನ್ನು ಪರಿಶೀಲಿಸಿ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2:ಸೇವೆಗಳು>PAN ವಿವರಗಳನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ.
ಹಂತ 3:ನಿಮ್ಮ PAN ಅನ್ನು ಪರಿಶೀಲಿಸಿ ಪೇಜ್‌ನಲ್ಲಿ, PAN(ಯಾವುದನ್ನು ನೀವು ಪರಿಶೀಲಿಸಬೇಕೋ ಅದನ್ನು),ಪೂರ್ಣ ಹೆಸರು ಮತ್ತು ರಚನೆಯ ದಿನಾಂಕ (DOI) / ಜನ್ಮ ದಿನಾಂಕ (DOB) ಅನ್ನು ನಮೂದಿಸಿ ಮತ್ತು ಮುಂದುವರಿಯಿರಿ ಅನ್ನು ಕ್ಲಿಕ್ ಮಾಡಿ.
ಯಶಸ್ವಿಕರ ಪರಿಶೀಲನೆಯ ನಂತರ, PAN ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ