1. ಅವಲೋಕನ
ನೀವು ತೆರಿಗೆಗಳಲ್ಲಿ ಪಾವತಿಸಿದ ಮೊತ್ತವು ನಿಜವಾಗಿಯೂ ಪಾವತಿಸಬೇಕಿದ್ದ ಮೊತ್ತಕ್ಕಿಂತ ಹೆಚ್ಚಾಗಿದ್ದರೆ (TDS ಅಥವಾ TCS ಅಥವಾ ಮುಂಗಡ ತೆರಿಗೆ ಅಥವಾ ಸ್ವಯಂ-ಮೌಲ್ಯಮಾಪನ ತೆರಿಗೆಯ ಮೂಲಕ) ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಮೊತ್ತವನ್ನು ನಿಮಗೆ ಹಿಂದಿರುಗಿಸುತ್ತದೆ. ಇದನ್ನು ಆದಾಯ ತೆರಿಗೆ ಮರುಪಾವತಿ ಎನ್ನಲಾಗುತ್ತದೆ. ಆದಾಯ ತೆರಿಗೆ ಇಲಾಖೆಯ ಮೌಲ್ಯಮಾಪನದ ಸಮಯದಲ್ಲಿ ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಪರಿಗಣಿಸಿದ ನಂತರ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ.
ತೆರಿಗೆ ಇಲಾಖೆಯಿಂದ ಮರುಪಾವತಿ ಪ್ರಕ್ರಿಯೆಯು ತೆರಿಗೆದಾರರು ರಿಟರ್ನ್ ಇ-ಪರಿಶೀಲಿಸಿದ ನಂತರ ಮಾತ್ರ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ತೆರಿಗೆದಾರರ ಖಾತೆಗೆ ಮರುಪಾವತಿಯನ್ನು ಜಮಾ ಮಾಡಲು 4-5 ವಾರಗಳು ಬೇಕಾಗುತ್ತವೆ. ಆದಾಗ್ಯೂ, ಈ ಅವಧಿಯಲ್ಲಿ ಮರುಪಾವತಿಯನ್ನು ಸ್ವೀಕರಿಸದಿದ್ದರೆ, ತೆರಿಗೆದಾರರು ITR ನಲ್ಲಿನ ವ್ಯತ್ಯಾಸಗಳ ಬಗ್ಗೆ IT ಇಲಾಖೆಯಿಂದ ಬಂದಿರಬಹುದಾದ ಇ-ಮೇಲ್ ಪರಿಶೀಲಿಸಬೇಕು. ತೆರಿಗೆದಾರರು ಇಲ್ಲಿ ವಿವರಿಸಿದ ಪ್ರಕ್ರಿಯೆಯ ಪ್ರಕಾರ ಇ-ಫೈಲಿಂಗ್‌ನಲ್ಲಿ ಮರುಪಾವತಿ ಸ್ಥಿತಿಯನ್ನು ಸಹ ಪರಿಶೀಲಿಸಬಹುದು.
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ಮಾನ್ಯವಿರುವ ಬಳಕೆದಾರರ ID ಮತ್ತು ಪಾಸ್‌ವರ್ಡ್
- PAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿರಬೇಕು
- ಮರುಪಾವತಿ ಕ್ಲೈಮ್ ಮಾಡಿ ITR ಸಲ್ಲಿಸಿರಬೇಕು
3. ಪ್ರಕ್ರಿಯೆ/ಪ್ರತಿ ಹಂತದ ಮಾರ್ಗದರ್ಶಿ
3.1 ಮರುಪಾವತಿ ಸ್ಥಿತಿ
ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ.
ಹಂತ 2: ಬಳಕೆದಾರರ ID ಮತ್ತು ಪಾಸ್‌ವರ್ಡ್ ನಮೂದಿಸಿ.
ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ PAN ಅನ್ನು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.
PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಲು, ಈಗಲೇ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 3: ಇ-ಫೈಲ್ ಟ್ಯಾಬ್ > ಆದಾಯ ತೆರಿಗೆ ರಿಟರ್ನ್ಸ್ > ಸಲ್ಲಿಸಿದ ರಿಟರ್ನ್ಸ್ ವೀಕ್ಷಿಸಿ - ಗೆ ಹೋಗಿರಿ
ಹಂತ 4: ಈಗ ನೀವು ಬಯಸಿದ ಮೌಲ್ಯಮಾಪನ ವರ್ಷಕ್ಕೆ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು.
ವಿವರಗಳನ್ನು ವೀಕ್ಷಿಸಿ ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಸಲ್ಲಿಸಿದ ITRನ ವಿವಿಧ ಹಂತಗಳನ್ನು ಪರಿಶೀಲಿಸಬಹುದು.
ಸ್ಥಿತಿ 1: ಮರುಪಾವತಿಯನ್ನು ವಿತರಿಸಿದಾಗ:
ಸ್ಥಿತಿ 2: ಮರುಪಾವತಿಯನ್ನು ಭಾಗಶಃ ಸರಿಹೊಂದಿಸಿದಾಗ:
ಸ್ಥಿತಿ 3: ಪೂರ್ಣ ಮರುಪಾವತಿಯನ್ನು ಸರಿಹೊಂದಿಸಿದಾಗ:
ಸ್ಥಿತಿ 4: ಮರುಪಾವತಿ ವಿಫಲವಾದಾಗ:
ಸೂಚನೆ: ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ಮರುಪಾವತಿ ವಿಫಲವಾಗುತ್ತದೆ ಮತ್ತು PAN ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕೆನ್ನುವ ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸುತ್ತೀರಿ.
ಮರುಪಾವತಿ ವೈಫಲ್ಯದ ಇತರ ಕಾರಣಗಳು:
ಮೇಲಿನವುಗಳ ಜೊತೆಗೆ, ಆದಾಯ ತೆರಿಗೆ ಇಲಾಖೆಯಿಂದ ಪಾವತಿಸಲು ನಿಗದಿಪಡಿಸಲಾದ ಮರುಪಾವತಿ ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು ವಿಫಲವಾಗಬಹುದು:
1. ಒಂದು ವೇಳೆ ಬ್ಯಾಂಕ್ ಖಾತೆಯನ್ನು ಪೂರ್ವಧೃಡೀಕರಿಸಲಾಗಿರದಿದ್ದರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಪೂರ್ವ-ಧೃಡೀಕರಿಸುವುದು ಈಗ ಕಡ್ಡಾಯವಾಗಿದೆ.
2. ಬ್ಯಾಂಕ್ ಖಾತೆಯಲ್ಲಿ ನಮೂದಿಸಿರುವ ಹೆಸರು PAN ಕಾರ್ಡ್ ವಿವರಗಳೊಂದಿಗೆ ಹೊಂದಿಕೆಯಾಗದಿದ್ದರೆ.
3. IFSC ಕೋಡ್ ಅಮಾನ್ಯವಾಗಿದ್ದರೆ.
4. ನೀವು ITR ಅಲ್ಲಿ ಉಲ್ಲೇಖಿಸಿರುವ ಖಾತೆ ಮುಚ್ಚಲ್ಪಟ್ಟಿದ್ದರೆ.