Do not have an account?
Already have an account?

1. ಫೈಲ್ ಮಾಡಲು ನನಗೆ ಅನ್ವಯವಾಗುವ ಆದಾಯ ತೆರಿಗೆ ಫಾರ್ಮ್ ನ ವರ್ಗವನ್ನು ನಾನು ಹೇಗೆ ಪ್ರವೇಶಿಸಬಹುದು?
ಇ-ಫೈಲ್ ಮೆನುವಿನಲ್ಲಿನ ಆದಾಯ ತೆರಿಗೆ ನಮೂನೆ ಆಯ್ಕೆಗಳ ಅಡಿಯಲ್ಲಿ, ನಿಮಗೆ ಲಭ್ಯವಿರುವ ಎಲ್ಲಾ ಆದಾಯ ತೆರಿಗೆ ನಮೂನೆಗಳ ವರ್ಗ ಪಟ್ಟಿಯನ್ನು ಸಣ್ಣ ವಿವರಣೆಗಳೊಂದಿಗೆ ನೀಡಲಾಗುವುದು. ಎಲ್ಲಾ ವರ್ಗಗಳ ಅಡಿಯಲ್ಲಿ ಲಭ್ಯವಿರುವ ಪಟ್ಟಿಯಿಂದ ನಿಮ್ಮ ಫೈಲಿಂಗ್‌ಗೆ ಹೆಚ್ಚು ಪ್ರಸ್ತುತವಾದ ನಮೂನೆಯನ್ನು(ಗಳನ್ನು) ಆರಿಸಿ.

2. ನನಗೆ ಲಭ್ಯವಿರುವ ವಿಭಿನ್ನ ಇ-ಪರಿಶೀಲನೆ ಆಯ್ಕೆಗಳು ಯಾವುವು?
ಕೆಳಗಿನ ಇ-ಪರಿಶೀಲನೆ ಆಯ್ಕೆಗಳು ಲಭ್ಯವಿದೆ. ನಿಮಗೆ ಹೆಚ್ಚು ಅನುಕೂಲಕರವಾದ ಒಂದನ್ನು ನೀವು ಆಯ್ಕೆ ಮಾಡಬಹುದು:

  • ಆಧಾರ್ OTP
  • EVC (ಈಗಾಗಲೇ ಲಭ್ಯವಿರುವ EVC ಅಥವಾ ರಚಿಸಬೇಕಾಗಿರುವ EVC)
  • DSC

ಕೆಲವು ಫಾರ್ಮ್ ಗಳಿಗೆ, ಇ-ಪರಿಶೀಲನೆಯನ್ನು DSC ಬಳಸಿ ಮಾತ್ರ ಮಾಡಬಹುದು.

3. ನಾನು ಅಪ್‌ಲೋಡ್ ಮಾಡುವ ಮೊದಲು ಫಾರ್ಮ್ ನಲ್ಲಿ ಆಫ್‌ಲೈನ್‌ನಲ್ಲಿ ಬದಲಾವಣೆಗಳನ್ನು ಮಾಡಬಹುದೇ?
ಹೌದು, ಫಾರ್ಮ್ ಅನ್ನು ಆಫ್‌ಲೈನ್‌ನಲ್ಲಿ ತಯಾರಿಸಬಹುದು ಮತ್ತು ಲಭ್ಯವಿರುವ ಯುಟಿಲಿಟಿಯನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಯುಟಿಲಿಟಿಯನ್ನು ಇ-ಫೈಲಿಂಗ್ ಪೋರ್ಟಲ್‌ನಿಂದಲೇ ಡೌನ್‌ಲೋಡ್ ಮಾಡಬೇಕು.

4. ನನ್ನ ಪರವಾಗಿ ಬೇರೆ ಯಾರಾದರೂ ಫಾರ್ಮ್ ಗಳನ್ನು ಅಪ್‌ಲೋಡ್ ಮಾಡಬಹುದೇ?
ಹೌದು, ಕೆಲವು ಸಂದರ್ಭಗಳಲ್ಲಿ, ತೆರಿಗೆದಾರರು ತಮ್ಮ ಪರವಾಗಿ ಫಾರ್ಮ್ ಗಳನ್ನು ಅಪ್‌ಲೋಡ್ ಮಾಡಲು ಇನ್ನೊಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಬಹುದು ಮತ್ತು ಅಧಿಕಾರ ನೀಡಬಹುದು. ಯಾರನ್ನು ಪ್ರತಿನಿಧಿಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರತಿನಿಧಿಯಾಗಿ ಅಧಿಕೃತಗೊಳಿಸಿ/ನೋಂದಾಯಿಸಿ ಎಂಬ ಬಳಕೆದಾರರ ಕೈಪಿಡಿಯಲ್ಲಿ ಕಾಣಬಹುದು.