Do not have an account?
Already have an account?

 

AY 2026-27 ಸಾಲಿಗೆ ವೇತನ ಪಡೆಯುವ ವ್ಯಕ್ತಿಗಳು ಅನ್ವಯವಾಗುವ ರಿಟರ್ನ್ಸ್ ಮತ್ತು ಫಾರ್ಮ್‌ಗಳು

 

ಘೋಷಣೆ: ಈ ಪುಟದಲ್ಲಿನ ವಿಷಯವು ಕೇವಲ ಒಂದು ಸಾಮಾನ್ಯ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡುವ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಇದು ಸಮಗ್ರ ಮಾಹಿತಿಯನ್ನು ಒಳಗೊಂಡಿಲ್ಲ.

 

 

  1. ITR-1 (SAHAJ) – ಪ್ರತ್ಯೇಕ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ

 

ಈ ರಿಟರ್ನ್ ಈ ಕೆಳಗಿನ ಯಾವುದೇ ಮೂಲಗಳಿಂದ ₹ 50 ಲಕ್ಷದವರೆಗಿನ ಒಟ್ಟು ಆದಾಯವನ್ನು ಹೊಂದಿರುವ ದೇಶವಾಸಿ (ಸಾಮಾನ್ಯವಾಗಿ ನಿವಾಸಿ ಅಲ್ಲದ ಇತರೆ) ವ್ಯಕ್ತಿಗೆ ಅನ್ವಯಿಸುತ್ತದೆ

ಸಂಬಳ / ಪಿಂಚಣಿ ಒಂದು ಗೃಹ ಆಸ್ತಿ ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ.) ₹ 5,000 ವರೆಗಿನ ಕೃಷಿ ಆದಾಯ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1,25,000 ವರೆಗೆ ಬಂಡವಾಳದ ಮೇಲಿನ ಲಾಭ

ಸೂಚನೆ: ಈ ಕೆಳಗಿನವರಿಂದ ITR-1 ಅನ್ನು ಬಳಸಲಾಗುವುದಿಲ್ಲ:

a) ಒಂದು ಕಂಪನಿಯ ನಿರ್ದೇಶಕರಾಗಿದ್ಧರೆ

b) ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ

c) ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1,25,000 ಕ್ಕಿಂತ ಹೆಚ್ಚಿನ ದೀರ್ಘಕಾಲೀನ ಬಂಡವಾಳ ಲಾಭ ಹೊಂದಿರುವವರು.

d) ಹಿಂದಿನ ಹಣಕಾಸು ವರ್ಷದ ಯಾವುದೇ ಸಮಯದಲ್ಲಿ ಪಟ್ಟಿ ಮಾಡದ ಈಕ್ವಿಟಿ ಷೇರುಗಳನ್ನು ಹೊಂದಿದ್ದವರು.

e) ಭಾರತದ ಹೊರಗೆ ಯಾವುದೇ ಆಸ್ತಿಯನ್ನು (ಯಾವುದೇ ಸಂಸ್ಥೆಯಲ್ಲಿ ಹಣಕಾಸು ಹಿತಾಸಕ್ತಿ ಸೇರಿದಂತೆ) ಹೊಂದಿರುವವರು.

f) ಭಾರತದ ಹೊರಗೆ ಇರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ

g) ಭಾರತದ ಹೊರಗಿನ ಯಾವುದೇ ಮೂಲದಿಂದ ಆದಾಯವಿದ್ದರೆ

h) ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 194N ಅಡಿಯಲ್ಲಿ ಯಾರಿಗೆ ತೆರಿಗೆ ಕಡಿತಗೊಳಿಸಲ್ಪಟ್ಟಿದೆಯೋ ಅಂತಹ ವ್ಯಕ್ತಿ.

i) ESOP ಮೇಲೆ ತೆರಿಗೆಯ ಪಾವತಿ ಅಥವಾ ತೆರಿಗೆ ಕಡಿತವನ್ನು ಮುಂದೂಡಿದ ವ್ಯಕ್ತಿಯಾಗಿದ್ದರೆ

j) ಯಾವುದೇ ಆದಾಯ ಶೀರ್ಷಿಕೆಯ ಅಡಿಯಲ್ಲಿ ಮುಂದಕ್ಕೆ ಸಾಗಿಸಬೇಕಾದ ನಷ್ಟ (carry forward loss) ಅಥವಾ ಹಿಂದಿನಿಂದ ಬಂದ ನಷ್ಟ (brought forward loss) ಹೊಂದಿರುವವರು.

k) ಒಟ್ಟು ಆದಾಯವು ₹50 ಲಕ್ಷಕ್ಕಿಂತ ಹೆಚ್ಚು ಇರುವವರು (ಸೆಕ್ಷನ್ 112A ಅಡಿಯಲ್ಲಿ ₹1,25,000 ವರೆಗೆ ಇರುವ ದೀರ್ಘಕಾಲೀನ ಬಂಡವಾಳ ಲಾಭವನ್ನು ಹೊರತುಪಡಿಸಿ).


 

 

2. ITR-2 - ವ್ಯಕ್ತಿಗಳಿಗೆ ಅನ್ವಯಿಸುತ್ತದೆ (ITR 1ಗೆ ಅರ್ಹವಲ್ಲ) ಮತ್ತು HUF

ಈ ರಿಟರ್ನ್ ವ್ಯಕ್ತಿ ಮತ್ತು ಹಿಂದೂ ಅವಿಭಕ್ತ ಕುಟುಂಬ (HUF)ಗಳಿಗೆ ಅನ್ವಯಿಸುತ್ತದ

 

ವ್ಯವಹಾರ ಅಥವಾ ವೃತ್ತಿಯ ಲಾಭ ಮತ್ತು ಗಳಿಕೆಗಳನ್ನು ಹೊರತುಪಡಿಸಿ ಯಾವುದೇ ಶೀರ್ಷಿಕೆಯ ಅಡಿಯಲ್ಲಿ ಆದಾಯವನ್ನು ಹೊಂದಿದ್ದರೆ. ITR-1 ಫೈಲ್ ಮಾಡಲು ಅರ್ಹರಲ್ಲದವರು

 

 

3. ITR-3-ವ್ಯಕ್ತಿ ಮತ್ತು HUF(ಹಿಂದೂ ಅವಿಭಕ್ತ ಕುಟುಂಬ)ಗೆ ಅನ್ವಯಿಸುತ್ತದೆ

ಈ ಆದಾಯ ತೆರಿಗೆ ರಿಟರ್ನ್ ವ್ಯಕ್ತಿ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ (HUF) ಅನ್ವಯಿಸುತ್ತದೆ

 

ಸಂಬಳ/ಪಿಂಚಣಿ, ಗೃಹ ಆಸ್ತಿ, ವ್ಯವಹಾರ ಅಥವಾ ವೃತ್ತಿಯ ಲಾಭ ಅಥವಾ ಗಳಿಕೆಗಳು, ಬಂಡವಾಳಕ್ಕೆ ಲಾಭಗಳು ಅಥವಾ ಇತರ ಮೂಲಗಳಿಂದ ಬರುವ ಆದಾಯ ಎಂಬ ಶೀರ್ಷಿಕೆಯಡಿಯಲ್ಲಿ ಆದಾಯವನ್ನು ಹೊಂದಿರುವುದು. ITR-1, ITR-2 ಅಥವಾ ITR-4 ಅನ್ನು ಸಲ್ಲಿಸಲು ಅರ್ಹರಲ್ಲದವರು

 

 

4. ITR-4 (ಸುಗಮ್) – ವ್ಯಕ್ತಿ , HUF ಮತ್ತು (LLP ಹೊರತುಪಡಿಸಿದ) ಸಂಸ್ಥೆಗೆ ಅನ್ವಯಿಸುತ್ತದೆ

ಈ ರಿಟರ್ನ್‌, "ಸಾಮಾನ್ಯವಾಗಿ ನಿವಾಸಿಯಲ್ಲ" (NOR) ವರ್ಗಕ್ಕೆ ಸೇರಿರದ ನಿವಾಸಿ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUF) ಅಥವಾ ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆ (LLP) ವರ್ಗಕ್ಕೆ ಸೇರದ ನಿವಾಸಿ ವ್ಯವಹಾರ ಸಂಸ್ಥೆಗೆ, ಅನ್ವಯಿಸುತ್ತದೆ. ಅವರ ವ್ಯವಹಾರ ಅಥವಾ ವೃತ್ತಿಯಿಂದ ಆಗುವ ಒಟ್ಟು ಆದಾಯವನ್ನು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD / 44ADA / 44AE ಅಡಿಯಲ್ಲಿ ಅಂದಾಜಿನ (presumptive) ಆಧಾರದ ಮೇಲೆ ಗಣನೆ ಮಾಡಲಾಗುತ್ತದೆ, ಹಾಗೂ ಕೆಳಗಿನ ಯಾವುದೇ ಮೂಲಗಳಿಂದ ಆದಾಯ ಹೊಂದಿರುತ್ತಾರೆ:

 

 

ಸಂಬಳ / ಪಿಂಚಣಿ ಒಂದು ಗೃಹ ಆಸ್ತಿ ಇತರ ಮೂಲಗಳು (ಬಡ್ಡಿ, ಕುಟುಂಬ ಪಿಂಚಣಿ, ಲಾಭಾಂಶ ಇತ್ಯಾದಿ.) ₹ 5,000 ವರೆಗಿನ ಕೃಷಿ ಆದಾಯ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1,25,000 ವರೆಗೆ ಇರುವ ಬಂಡವಾಳದ ಲಾಭ.

 

ಸೂಚನೆ 1:

ITR-4 ಅನ್ನು ಈ ಕೆಳಕಂಡ ವ್ಯಕ್ತಿಗಳು ಬಳಸಲಾಗುವುದಿಲ್ಲ:

  1. ಒಂದು ಕಂಪನಿಯ ನಿರ್ದೇಶಕರಾಗಿದ್ಧರೆ
  2. ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ
  3. ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 112A ಅಡಿಯಲ್ಲಿ ₹1,25,000 ಕ್ಕಿಂತ ಹೆಚ್ಚಿನ ದೀರ್ಘಕಾಲೀನ ಬಂಡವಾಳ ಲಾಭ ಹೊಂದಿರುವವರು.
  4. ಕಳೆದ ವರ್ಷದಲ್ಲಿ ಯಾವುದೇ ಸಮಯದಲ್ಲಿ ಪಟ್ಟಿಮಾಡದ ಇಕ್ವಿಟಿ ಷೇರುಗಳನ್ನು ಹೊಂದಿದ್ದರೆ
  5. ಭಾರತದ ಹೊರಗೆ ಆಸ್ತಿಯನ್ನು (ಯಾವುದೇ ಘಟಕದಲ್ಲಿ ಹಣಕಾಸಿನ ಆಸಕ್ತಿ ಸೇರಿದಂತೆ) ಹೊಂದಿದ್ದರೆ
  6. ಭಾರತದ ಹೊರಗೆ ಇರುವ ಯಾವುದೇ ಖಾತೆಯಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿದ್ದರೆ
  7. ಭಾರತದ ಹೊರಗಿನ ಯಾವುದೇ ಮೂಲದಿಂದ ಆದಾಯವಿದ್ದರೆ
  8. ESOP ಮೇಲೆ ತೆರಿಗೆಯ ಪಾವತಿ ಅಥವಾ ತೆರಿಗೆ ಕಡಿತವನ್ನು ಮುಂದೂಡಿದ ವ್ಯಕ್ತಿಯಾಗಿದ್ದರೆ
  9. ಯಾವುದೇ ಆದಾಯ ಶೀರ್ಷಿಕೆಯಡಿಯಲ್ಲಿ ಮುಂದೂಡಲಾದ ನಷ್ಟ (Brought Forward Loss) ಅಥವಾ ಮುಂದಕ್ಕೆ ಸಾಗಿಸಬೇಕಾದ ನಷ್ಟ (Carry Forward Loss) ಹೊಂದಿರುವವರು.
  10. ಒಟ್ಟು ಆದಾಯವು ₹50 ಲಕ್ಷಕ್ಕಿಂತ ಹೆಚ್ಚು ಇರುವವರು (ಸೆಕ್ಶನ್ 112A ಅಡಿಯಲ್ಲಿ ₹1,25,000 ವರೆಗೆ ಇರುವ ದೀರ್ಘಕಾಲೀನ ಮೂಲಧನ ಲಾಭವನ್ನು ಹೊರತುಪಡಿಸಿ).

 

 ಸೂಚನೆ 2:

ITR-4 (ಸುಗಮ್) ಕಡ್ಡಾಯವಲ್ಲ. ಇದು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD, 44ADA ಅಥವಾ 44AE ಅಡಿಯಲ್ಲಿ ಅಂದಾಜಿನ (presumptive) ಆಧಾರದ ಮೇಲೆ ವ್ಯವಹಾರ ಅಥವಾ ವೃತ್ತಿಯಿಂದ ಲಾಭ ಮತ್ತು ಆದಾಯವನ್ನು ಘೋಷಿಸಲು ಅರ್ಹನಾಗಿರುವ ತೆರಿಗೆದಾರ ತನ್ನ ಆಯ್ಕೆಯಂತೆ ಬಳಸಬಹುದಾದ ಸರಳೀಕೃತ ರಿಟರ್ನ್ ಫಾರ್ಮ್ ಆಗಿದೆ.

 

 

ಅನ್ವಯಿಸುವ ಫಾರ್ಮ್‌ಗಳು (ಆದಾಯ ತೆರಿಗೆ ಕಾಯಿದೆ, 1961 ಪ್ರಕಾರ):

 

1. ಫಾರ್ಮ್ 12BB – ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 192 ಅಡಿಯಲ್ಲಿ ಉದ್ಯೋಗಿಯು ತೆರಿಗೆ ಕಡಿತಕ್ಕಾಗಿ ಮಾಡುವ ದಾವೆಗಳ ವಿವರಗಳು

ಒದಗಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಒಬ್ಬ ಉದ್ಯೋಗಿ ತನ್ನ ಉದ್ಯೋಗದಾತರಿಗೆ

ಮನೆ ಬಾಡಿಗೆ ಭತ್ಯೆ (HRA), ರಜೆ ಪ್ರಯಾಣ ರಿಯಾಯಿತಿ (LTC), ಗೃಹ ಸಾಲದ ಬಡ್ಡಿ ಕಡಿತ, ಹಾಗೂ ತೆರಿಗೆ ಉಳಿಸುವ ಅರ್ಹ ಪಾವತಿಗಳು ಅಥವಾ ಹೂಡಿಕೆಗಳ ಸಂಬಂಧಿತ ಪುರಾವೆಗಳು ಅಥವಾ ವಿವರಗಳು — ಇವುಗಳನ್ನು ಮೂಲದಲ್ಲೇ ತೆರಿಗೆ ಕಡಿತ (TDS) ಲೆಕ್ಕಿಸಲು ಬಳಸಲಾಗುತ್ತದೆ.

 

 

2. ಫಾರ್ಮ್ 16 - ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 203ರ ಅಡಿಯಲ್ಲಿ, ಸಂಬಳದ ಮೇಲೆ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಯ ಪ್ರಮಾಣಪತ್ರ

ಒದಗಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಹಣಕಾಸು ವರ್ಷದ ಕೊನೆಯಲ್ಲಿ ತನ್ನ ಉದ್ಯೋಗಿಗೆ ಉದ್ಯೋಗದಾತ(ರು)

ನೌಕರನ ಆದಾಯ, ತೆರಿಗೆ ಕಡಿತಗಳು / ವಿನಾಯಿತಿಗಳು ಮತ್ತು ಪಾವತಿಸಬಹುದಾದ / ಮರುಪಾವತಿಸಬಹುದಾದ ತೆರಿಗೆಯ ಲೆಕ್ಕಾಚಾರದ ಉದ್ದೇಶಕ್ಕಾಗಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ

 

 

3. ಫಾರ್ಮ್ 16A – ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 203 ಅಡಿಯಲ್ಲಿ ವೇತನವಲ್ಲದ ಆದಾಯದ ಮೇಲೆ ಕಡಿತಗೊಂಡ TDS ಗೆ ನೀಡುವ ಪ್ರಮಾಣಪತ್ರ

ಒದಗಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ತೆರಿಗೆ ಕಡಿತಗೊಳಿಸುವವರಿಂದ ತೆರಿಗೆ ಕಡಿತಕ್ಕೊಳಗಾದವರಿಗೆ

ಫಾರ್ಮ್ 16A ಎನ್ನುವುದು ತ್ರೈಮಾಸಿಕವಾಗಿ ನೀಡಲಾಗುವ TDS ಪ್ರಮಾಣಪತ್ರವಾಗಿದ್ದು, ಇದರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಠೇವಣಿ ಮಾಡಲಾದ TDS ಮೊತ್ತ, ಪಾವತಿಗಳ ಸ್ವರೂಪ ಮತ್ತು TDS ಪಾವತಿಗಳ ವಿವರಗಳು ಒಳಗೊಂಡಿರುತ್ತವೆ.

 

 

4.ಫಾರ್ಮ್ 67- ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಆದಾಯದ ಸ್ಟೇಟ್‌ಮೆಂಟ್ ಮತ್ತು ವಿದೇಶಿ ತೆರಿಗೆ ಕ್ರೆಡಿಟ್

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ತೆರಿಗೆದಾರರು ಸೆಕ್ಷನ್ 139(1) ಅಡಿಯಲ್ಲಿ ITR ಗಳನ್ನು ಒದಗಿಸುವುದಕ್ಕಾಗಿ ನಿರ್ದಿಷ್ಟಪಡಿಸಿದ ನಿಗದಿತ ದಿನಾಂಕದಂದು ಅಥವಾ ಮೊದಲು ಸಲ್ಲಿಸಬೇಕು.

ಅನ್ನು ಕ್ಲೈಮ್ ಮಾಡಲಾದ ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಬಂದ ಆದಾಯ ಮತ್ತು ವಿದೇಶಿ ತೆರಿಗೆ ಕ್ರೆಡಿಟ್‌

 

 

5. ಫಾರ್ಮ್ 26 AS

AIS (ವಾರ್ಷಿಕ ಮಾಹಿತಿ ವಿವರಣಾ ಪಟ್ಟಿ)

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಇದು e-Filing ಪೋರ್ಟಲ್‌ನಲ್ಲಿ ಲಭ್ಯವಿದೆ:

ಲಾಗಿನ್ > ಇ-ಫೈಲ್ > ಆದಾಯ ತೆರಿಗೆ ರಿಟರ್ನ್ > 26AS ಫಾರ್ಮ ನೋಡಿ)

ಒದಗಿಸಿದವರು:

ಆದಾಯ ತೆರಿಗೆ ಇಲಾಖೆ (ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಇದನ್ನು ಪ್ರವೇಶಿಸಬಹುದು)

ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ > AIS

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು:

  • ಮೂಲದಲ್ಲೇ ಕಡಿತಗೊಂಡ/ಸಂಗ್ರಹಿಸಿದ ತೆರಿಗೆ
  • SFT ಮಾಹಿತಿ
  • ತೆರಿಗೆಗಳ ಪಾವತಿ
  • ಬೇಡಿಕೆ / ಮರುಪಾವತಿ

ಇತರೆ ಮಾಹಿತಿ (ಉದಾಹರಣೆಗೆ ಬಾಕಿ ಇರುವ/ಪೂರ್ಣಗೊಂಡ ಪ್ರಕ್ರಿಯೆಗಳು, GST ಮಾಹಿತಿ, ವಿದೇಶಿ ಸರ್ಕಾರದಿಂದ ಪಡೆದ ಮಾಹಿತಿ ಇತ್ಯಾದಿ).

 

 

 

6. ಫಾರ್ಮ್ 15G - ತೆರಿಗೆ ಕಡಿತವಾಗದಂತೆ ಕೆಲವು ರಶೀದಿಗಳನ್ನು ಕ್ಲೈಮ್ ಮಾಡುವ (ಕಂಪನಿ ಅಥವಾ ಸಂಸ್ಥೆಯಲ್ಲದ) ನಿವಾಸಿ ತೆರಿಗೆದಾರ ಮಾಡುವ ಘೋಷಣೆ .

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ, ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಿರಲು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ದೇಶವಾಸಿ ವ್ಯಕ್ತಿ ಅಥವಾ HUF(ಹಿಂದೂ ಅವಿಭಕ್ತ ಕುಟುಂಬ) ಅಥವಾ ಯಾವುದೇ ಇತರ ವ್ಯಕ್ತಿ (ಕಂಪನಿ / ಸಂಸ್ಥೆಯನ್ನು ಹೊರತುಪಡಿಸಿ)

ಹಣಕಾಸು ವರ್ಷಕ್ಕೆ ಅಂದಾಜು ಆದಾಯ

 

 

7. ಫಾರ್ಮ್ 15H - ತೆರಿಗೆ ಕಡಿತವಿಲ್ಲದೆ ಕೆಲವು ರಶೀದಿಗಳನ್ನು ಕ್ಲೈಮ್ ಮಾಡುವ ನಿವಾಸಿ ವ್ಯಕ್ತಿ (60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಮಾಡಬೇಕಾದ ಘೋಷಣೆ

ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಿವಾಸಿ ವ್ಯಕ್ತಿಯು ಬ್ಯಾಂಕಿಗೆ ಬಡ್ಡಿ ಆದಾಯದ ಮೇಲೆ TDS ಕಡಿತಗೊಳಿಸದಂತೆ ಕೋರಿಕೆಗಾಗಿ.

ಹಣಕಾಸು ವರ್ಷಕ್ಕೆ ಅಂದಾಜು ಆದಾಯ

 

 

8. ಫಾರ್ಮ್ 10E – ವೇತನವನ್ನು ಬಾಕಿ (arrears) ಅಥವಾ ಮುಂಗಡವಾಗಿ (advance) ಪಡೆದ ಸಂದರ್ಭದಲ್ಲಿ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 89(1) ಅಡಿಯಲ್ಲಿ ಪರಿಹಾರ (relief) ಪಡೆಯಲು ಆದಾಯದ ವಿವರಗಳನ್ನು ಸಲ್ಲಿಸುವ ಫಾರ್ಮ್

ಆದಾಯ ತೆರಿಗೆ ರಿಟರ್ನ್‌ನಲ್ಲಿ ಸೆಕ್ಷನ್ 89(1) ಅಡಿಯಲ್ಲಿ ಪರಿಹಾರವನ್ನು (relief) ಪಡೆಯಲು ಸಲ್ಲಿಸಿದವರು

ಫಾರ್ಮ್‌ನಲ್ಲಿ ನೀಡಲಾಗಿರುವ ವಿವರಗಳು

ಆದಾಯ ತೆರಿಗೆ ಇಲಾಖೆಯ ಉದ್ಯೋಗಿ

1.ಬಾಕಿಗಳು / ಮುಂಗಡ ಸಂಬಳ

2.ಗ್ರಾಚ್ಯುಟಿ

3.ಸೇವೆಯಿಂದ ವಜಾಗೊಳಿಸಿದಕ್ಕೆ ನೀಡುವ ಪರಿಹಾರ

4.ಪರಿವರ್ತಿತ ನಿವೃತ್ತಿ ವೇತನ

 

(ಮೌಲ್ಯಮಾಪನ ವರ್ಷ) AY 2026-27ಗಾಗಿ ತೆರಿಗೆ ಶ್ರೇಣಿಗಳು***

ಹೊಸ ತೆರಿಗೆ ಪದ್ಧತಿ ಹೋಲಿಕೆ ಹಳೆಯ ತೆರಿಗೆ ಪದ್ಧತಿ:

ಹಣಕಾಸು ಕಾಯಿದೆ 2023, ಆದಾಯ ತೆರಿಗೆ ಕಾಯಿದೆ ಸೆಕ್ಷನ್ 115BAC ಅನ್ನು ತಿದ್ದುಪಡಿ ಮಾಡಿ, ಮೌಲ್ಯಮಾಪನ ವರ್ಷ 2024-25 ರಿಂದ ಹೊಸ ತೆರಿಗೆ ವ್ಯವಸ್ಥೆಯನ್ನು ವ್ಯಕ್ತಿಗಳು, ಹಿಂದು ಅವಿಭಜಿತ ಕುಟುಂಬ (HUF), ವ್ಯಕ್ತಿಗಳ ಸಂಘ (AOP – ಸಹಕಾರಿ ಸಂಘಗಳನ್ನು ಹೊರತುಪಡಿಸಿ), ವ್ಯಕ್ತಿಗಳ ಗುಂಪು (BOI) ಮತ್ತು ಕೃತಕ ನ್ಯಾಯಿಕ ವ್ಯಕ್ತಿಗಳಿಗೆ (Artificial Juridical Person) ಮೂಲ (default) ತೆರಿಗೆ ಪದ್ಧತಿಯಾಗಿ ಮಾಡಿದೆ. ಆದಾಗ್ಯೂ, ಅರ್ಹ ತೆರಿಗೆದಾರರಿಗೆ ಈ ಮೂಲ ಪದ್ಧತಿಯಿಂದ ಹೊರಬಂದು ಹಳೆಯ ತೆರಿಗೆ ಪಧತಿಯಡಿ ತೆರಿಗೆ ವಿಧಿಸಿಕೊಳ್ಳುವ ಆಯ್ಕೆ ಇರುತ್ತದೆ. ಹಳೆಯ ತೆರಿಗೆ ಪದ್ಧತಿ ಎಂದರೆ, ಹೊಸ ತೆರಿಗೆ ವ್ಯವಸ್ಥೆ ಪರಿಚಯಿಸುವ ಮೊದಲು ಇದ್ದ ಆದಾಯ ತೆರಿಗೆ ಲೆಕ್ಕಾಚಾರ ಮತ್ತು ತೆರಿಗೆ ಶ್ರೇಣಿಗಳ ಪದ್ಧತಿ. ಹಳೆಯ ಪದ್ಧತಿಯಲ್ಲಿ ತೆರಿಗೆದಾರರು ವಿವಿಧ ತೆರಿಗೆ ವಿನಾಯಿತಿಗಳು ಮತ್ತು ಕಡಿತಗಳನ್ನು (deductions & exemptions) ಕ್ಲೇಮ್ ಮಾಡಬಹುದು. ಇದಕ್ಕೆ ವಿರುದ್ಧವಾಗಿ, ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ದರಗಳು ಕಡಿಮೆ ಇದ್ದರೂ, ಹಳೆಯ ವ್ಯವಸ್ಥೆಯಿಗಿಂತ ಕಡಿತಗಳು ಮತ್ತು ವಿನಾಯಿತಿಗಳು ಬಹಳ ಕಡಿಮೆ ಇರುತ್ತವೆ.

ವ್ಯವಹಾರವಲ್ಲದ ಪ್ರಕರಣ:

“ವ್ಯವಹಾರವಲ್ಲದ ಪ್ರಕರಣಗಳಲ್ಲಿ”, ಮೂಲ ತೆರಿಗೆ ಪದ್ಧತಿಯನ್ನು ಬದಲಿಸುವ ಆಯ್ಕೆಯನ್ನು ಪ್ರತಿವರ್ಷ ನೇರವಾಗಿ ITR ನಲ್ಲಿ ಬಳಸಬಹುದು ಮತ್ತು ಅಂತಹ ITR ಅನ್ನು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಂತಿಮ ದಿನಾಂಕದೊಳಗೆ ಸಲ್ಲಿಸಬೇಕು.

ವ್ಯಾವಹಾರಿಕ ಪ್ರಕರಣ:

ವ್ಯವಹಾರ ಮತ್ತು ವೃತ್ತಿಯಿಂದ ಆದಾಯ ಹೊಂದಿರುವ ಅರ್ಹ ತೆರಿಗೆದಾರರ ಸಂದರ್ಭದಲ್ಲಿ, ತೆರಿಗೆದಾರ(Assessee) ಮೂಲ ತೆರಿಗೆ ಪದ್ಧತಿ(ಹೊಸ ತೆರಿಗೆ ಪದ್ಧತಿ) ಯಿಂದ ಹೊರಬರಲು ಬಯಸಿದರೆ, ಅವರು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139(1) ಅಡಿಯಲ್ಲಿ ರಿಟರ್ನ್ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಫಾರ್ಮ್ 10-IEA ಅನ್ನು ಸಲ್ಲಿಸಬೇಕು. ಅದೇ ರೀತಿ, ಈ ಆಯ್ಕೆಯನ್ನು ಹಿಂಪಡೆಯಲು (ಅಂದರೆ ಮತ್ತೆ ಮೂಲ/ಹೊಸ ತೆರಿಗೆ ಪದ್ಧತಿಗೆ ಮರುಪ್ರವೇಶಿಸಲು) ಕೂಡ ಸೆಕ್ಷನ್ 139(1) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಂತಿಮ ದಿನಾಂಕದೊಳಗೆ ಫಾರ್ಮ್ 10-IEA ಸಲ್ಲಿಸುವ ಮೂಲಕ ಮಾಡಬೇಕು. ಆದಾಗ್ಯೂ, ಹಳೆಯ ತೆರಿಗೆ ವ್ಯವಸ್ಥೆಯಿಂದ ಹೊರಬಂದು ಮತ್ತೆ ಮೂಲ (ಹೊಸ) ತೆರಿಗೆ ಪದ್ಧತಿಗೆ ಮರುಪ್ರವೇಶಿಸುವ ಆಯ್ಕೆ ಮುಂದಿನ ಮೌಲ್ಯಮಾಪನ ವರ್ಷದಲ್ಲಿ ಮಾತ್ರ ಲಭ್ಯವಾಗುತ್ತದೆ ಮತ್ತು ವ್ಯವಹಾರ/ವೃತ್ತಿ ಆದಾಯ ಹೊಂದಿರುವ ಅರ್ಹ ತೆರಿಗೆದಾರರಿಗೆ ಜೀವನದಲ್ಲಿ ಒಂದೇ ಬಾರಿ ಮಾತ್ರ ಈ ಅವಕಾಶ ಲಭ್ಯ.

 

1.ಹಿಂದಿನ ಹಣಕಾಸು ವರ್ಷದಲ್ಲಿ ಯಾವಾಗಲಾದರೂ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವಾಸಿ ಅಥವಾ ಅನಿವಾಸಿ ವ್ಯಕ್ತಿಗಳಿಗೆ ಅನ್ವಯಿಸುವ ತೆರಿಗೆ ದರಗಳು ಕೆಳಗಿನಂತಿವೆ:
 

ಹಳೆಯ ತೆರಿಗೆ ಪದ್ಧತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿ

ಆದಾಯ ತೆರಿಗೆ ಶ್ರೇಣಿ(Slab)

ಆದಾಯ ತೆರಿಗೆ ದರ

ಆದಾಯ ತೆರಿಗೆ ಶ್ರೇಣಿ(Slab)

ಆದಾಯ ತೆರಿಗೆ ದರ

₹ 2,50,000 ವರೆಗೆ

ಶೂನ್ಯ

 

₹ 4,00,000 ಗಳವರೆಗೆ

ಶೂನ್ಯ

₹ 2,50,001 – ₹ 5,00,000

₹ 2,50,000 ಕ್ಕಿಂತ ಮೇಲ್ಪಟ್ಟ ಆದಾಯಕ್ಕೆ 5%

₹ 4,00,001 – ₹ 8,00,000

₹ 4,00,000 ಮೇಲ್ಪಟ್ಟ ಆದಾಯಕ್ಕೆ 5%

₹ 5,00,001 – ₹ 10,00,000

₹ 5,00,000 ಮೇಲ್ಪಟ್ಟ ಆದಾಯಕ್ಕೆ 20% + ₹ 12,500

₹ 8,00,001 – ₹ 12,00,000

₹ 8,00,000 ಮೇಲ್ಪಟ್ಟ ಆದಾಯಕ್ಕೆ 10% + ₹ 20,000

₹ 10,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ

₹ 10,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 1,12,500

₹ 12,00,001 – ₹ 16,00,000

₹ 12,00,000 ಕ್ಕೂ ಮೇಲ್ಪಟ್ಟು 15%₹ + 60,000

 

₹ 16,00,001 - ₹ 20,00,000

₹ 16,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% + ₹ 1,20,000

 

₹ 20,00,001 - ₹ 24,00,000

₹ 20,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 25%₹ + 2,00,000

 

₹ 24,00,000 ಕ್ಕೂ ಮೇಲ್ಪಟ್ಟು

₹ 24,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 3,00,000

 

2. ಹಿಂದಿನ ವರ್ಷದ ಯಾವುದೇ ಸಮಯದಲ್ಲಿ 60 ವರ್ಷಕ್ಕಿಂತ ಹೆಚ್ಚು ಅಥವಾ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ (ನಿವಾಸಿ ಅಥವಾ ಅನಿವಾಸಿ) ತೆರಿಗೆ ದರಗಳು ಈ ಕೆಳಗಿನಂತಿವೆ:

 

ಹಳೆಯ ತೆರಿಗೆ ಪದ್ಧತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿ

ಆದಾಯ ತೆರಿಗೆ ಶ್ರೇಣಿ (slab)

ಆದಾಯ ತೆರಿಗೆ ದರ

 

ಆದಾಯ ತೆರಿಗೆ ಶ್ರೇಣಿ (slab)

ಆದಾಯ ತೆರಿಗೆ ದರ

₹ 3,00,000 ಗಳವರೆಗೆ

 

ಶೂನ್ಯ

 

₹ 4,00,000 ಗಳವರೆಗೆ

 

ಶೂನ್ಯ

₹ 3,00,001 – ₹ 5,00,000

₹ 3,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 5%

₹ 4,00,001 – ₹ 8,00,000

₹ 4,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 5%

₹ 5,00,001 – ₹ 10,00,000

₹ 5,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% + ₹ 10,000

₹ 8,00,001 – ₹ 12,00,000

₹ 8,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 10% + ₹ 20,000

₹ 10,00,000 ಕ್ಕೂ ಮೇಲ್ಪಟ್ಟು

₹ 10,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 1,10,000

₹ 12,00,001 – ₹ 16,00,000

₹ 12,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 15% + ₹ 60,000

 

₹ 16,00,001 – ₹ 20,00,000

₹ 16,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% + ₹ 1,20,000

 

₹ 20,00,001 – ₹ 24,00,000

₹ 20,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 25% + ₹ 2,00,000

 

₹ 24,00,000 ಕ್ಕೂ ಮೇಲ್ಪಟ್ಟು

₹ 24,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 3,00,000

 

3. ಹಿಂದಿನ ವರ್ಷದ ಯಾವುದೇ ಸಮಯದಲ್ಲಿ 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗೆ (ನಿವಾಸಿ ಅಥವಾ ಅನಿವಾಸಿ) ತೆರಿಗೆ ದರಗಳು ಈ ಕೆಳಗಿನಂತಿವೆ:

 

ಹಳೆಯ ತೆರಿಗೆ ಪದ್ಧತಿ

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ದತಿ

ಆದಾಯ ತೆರಿಗೆ ಶ್ರೇಣಿ (slab)

ಆದಾಯ ತೆರಿಗೆ ದರ

ಆದಾಯ ತೆರಿಗೆ ಶ್ರೇಣಿ (slab)

ಆದಾಯ ತೆರಿಗೆ ದರ

₹ 5,00,000 ಗಳವರೆಗೆ

ಶೂನ್ಯ

₹ 4,00,000 ಗಳವರೆಗೆ

ಶೂನ್ಯ

₹ 5,00,001 – ₹ 10,00,000**

₹5,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20%

₹ 4,00,001 – ₹ 8,00,000**

₹ 4,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 5%

₹ 10,00,000 ಕ್ಕೂ ಮೇಲ್ಪಟ್ಟು

₹ 10,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 1,00,000

₹ 8,00,001 – ₹ 12,00,000

₹ 8,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 10% + ₹ 20,000

 

 

₹ 12,00,001 – ₹ 16,00,000

₹ 12,00,000 ಕ್ಕೂ ಮೇಲ್ಪಟ್ಟು 15% + ₹ 60,000

 

  ₹ 16,00,001 – ₹ 20,00,000 ₹ 16,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 20% + ₹ 1,20,000
 

 

₹ 20,00,001 – ₹ 24,00,000

₹ 20,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 25% + ₹ 2,00,000
    ₹ 24,00,000 ಕ್ಕೂ ಮೇಲ್ಪಟ್ಟು ₹ 24,00,000 ಕ್ಕೂ ಮೇಲ್ಪಟ್ಟ ಆದಾಯಕ್ಕೆ 30% + ₹ 3,00,000

 

 

ಅನ್ವಯಿಸುವ ಸರ್‌ಚಾರ್ಜ್ ದರಗಳು:

ಆದಾಯ ಮಿತಿ

ಆದಾಯ ತೆರಿಗೆ ಮೊತ್ತದ ಮೇಲಿನ ಸರ್ಚಾರ್ಜ್ ದರ

(ಹೊಸ ತೆರಿಗೆ ಪದ್ದತಿ)

ಆದಾಯ ತೆರಿಗೆ ಮೊತ್ತದ ಮೇಲಿನ ಸರ್‌ಚಾರ್ಜ್ ದರ

(ಹಳೆಯ ತೆರಿಗೆ ಪದ್ಧತಿ)

ರೂ.50 ಲಕ್ಷ ಗಳವರೆಗೆ

ಶೂನ್ಯ

ಶೂನ್ಯ

₹50 ಲಕ್ಷದಿಂದ ₹1 ಕೋಟಿವರೆಗೆ

10%

10%

₹1 ಕೋಟಿಯಿಂದ ₹2 ಕೋಟಿವರೆಗೆ

15%

15%

₹2 ಕೋಟಿಯಿಂದ ₹5 ಕೋಟಿವರೆಗೆ

25%

25%

ರೂ. 5 ಕೋಟಿಗೂ ಮೇಲ್ಪಟ್ಟು

25%

37%

 

*ಗಮನಿಸಿ: ಹೆಚ್ಚಿಸಿದ ಸರ್‌ಚಾರ್ಜ್ ದರವಾದ 25% ಮತ್ತು 37% ಅನ್ನು, ಸಂದರ್ಭಾನುಸಾರವಾಗಿ, ಸೆಕ್ಷನ್ 111A, 112, 112A ಅಡಿಯಲ್ಲಿ ತೆರಿಗೆಗೊಳಪಟ್ಟ ಆದಾಯ ಹಾಗೂ ಲಾಭಾಂಶ ಆದಾಯದ (Dividend Income) ಮೇಲೆ ವಿಧಿಸಲಾಗುವುದಿಲ್ಲ. ಆದ್ದರಿಂದ, ಇಂತಹ ಆದಾಯಗಳ ಮೇಲೆ ಪಾವತಿಸಬೇಕಾದ ತೆರಿಗೆಯ ಗರಿಷ್ಠ ಹೆಚ್ಚುವರಿ ತೆರಿಗೆ ದರ 15% ಆಗಿರುತ್ತದೆ. ಆದರೆ ಆದಾಯವು ಸೆಕ್ಷನ್ 115A, 115AB, 115AC, 115ACA ಮತ್ತು 115E ಅಡಿಯಲ್ಲಿ ತೆರಿಗೆಗೊಳಪಟ್ಟ ಸಂದರ್ಭಗಳಲ್ಲಿ ಇದು ಅನ್ವಯಿಸುವುದಿಲ್ಲ


**ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 87A ಅಡಿಯಲ್ಲಿ ಅನ್ವಯಿಸುವ ರಿಯಾಯಿತಿ: ನಿವಾಸಿ ವ್ಯಕ್ತಿಗಳು, ಕೆಳಗಿನ ತೆರಿಗೆ ಪದ್ಧತಿಗಳ ಪ್ರಕಾರ ಗರಿಷ್ಠ ಮಿತಿಯೊಳಗೆ ಆದಾಯ ತೆರಿಗೆಯ ಮೇಲೆ 100% ವರೆಗೆ ರಿಯಾಯಿತಿಗೆ ಅರ್ಹರಾಗಿರುತ್ತಾರೆ:**

ತೆರಿಗೆ ಪದ್ದತಿ

ರಿಯಾಯತಿ ಮಿತಿ

ರಿಯಾಯತಿ ಷರತ್ತು

ಹೊಸ ತೆರಿಗೆ ಪದ್ಧತಿ

₹ 60,000

ತೆರಿಗೆಗೊಳಪಡುವ ಆದಾಯವು 12,00,000 ಮೀರಬಾರದು

ಹಳೆಯ ತೆರಿಗೆ ಪದ್ಧತಿ

₹ 12,500

ತೆರಿಗೆಗೊಳಪಡುವ ಆದಾಯವು 5,00,000 ಮೀರಬಾರದು

 

***ಸೂಚನೆ : ಎರಡೂ ತೆರಿಗೆ ಪದ್ದತಿಗಳಲ್ಲಿಯೂ ಆದಾಯ ತೆರಿಗೆ ಮೊತ್ತ ಹಾಗೂ ಸರ್‌ಚಾರ್ಜ್ (ಇದ್ದರೆ) ಮೇಲಿಗೆ 4% ಆರೋಗ್ಯ ಮತ್ತು ಶಿಕ್ಷಣ ಸೆಸ್ ಪಾವತಿಸಬೇಕು.

ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯವು ಕ್ರಮವಾಗಿ ₹50 ಲಕ್ಷ, ₹1 ಕೋಟಿ, ₹2 ಕೋಟಿ ಅಥವಾ ₹5 ಕೋಟಿಯನ್ನು ಮೀರಿದಲ್ಲಿ ಹಾಗೂ ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯವು ಕ್ರಮವಾಗಿ ₹50 ಲಕ್ಷ, ₹1 ಕೋಟಿ ಅಥವಾ ₹2 ಕೋಟಿಯನ್ನು ಮೀರಿದಲ್ಲಿ, ಸರ್‌ಚಾರ್ಜ್ ಮೇಲಿನ ಮಾರ್ಜಿನಲ್ ರಿಲೀಫ್ ಅನ್ನು ಈ ಕೆಳಗಿನಂತೆ ಪಡೆಯಬಹುದು:

ನಿವ್ವಳ ಆದಾಯದ ಶ್ರೇಣಿ

 

ಕನಿಷ್ಠ ಪರಿಹಾರ

ಮೀರಿದ (₹)

ಮೀರದ (₹)

50 ಲಕ್ಷ

1 ಕೋಟಿ

ಆದಾಯ ತೆರಿಗೆ ಮತ್ತು ಸರ್‌ಚಾರ್ಹ್ ರೂಪದಲ್ಲಿ ಪಾವತಿಸಬೇಕಾದ ಮೊತ್ತವು, ಒಟ್ಟು ಆದಾಯ ₹50 ಲಕ್ಷಕ್ಕೆ ವಿಧಿಸಲ್ಪಡುವ ಆದಾಯ ತೆರಿಗೆಯ ಮೊತ್ತಕ್ಕಿಂತ, ₹50 ಲಕ್ಷ ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಆಗಬಾರದು.

1 ಕೋಟಿ

2 ಕೋಟಿಗಳು

ಆದಾಯ ತೆರಿಗೆ ಮತ್ತು ಸರ್ಚಾರ್ಜ್ ರೂಪದಲ್ಲಿ ಪಾವತಿಸಬೇಕಾದ ಮೊತ್ತವು, ಒಟ್ಟು ಆದಾಯ ₹1 ಕೋಟಿಗೆ ವಿಧಿಸಲ್ಪಡುವ ಆದಾಯ ತೆರಿಗೆಯ ಮೊತ್ತಕ್ಕಿಂತ, ₹1 ಕೋಟಿ ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಆಗಬಾರದು.

2 ಕೋಟಿಗಳು

5 ಕೋಟಿಗಳು

ಆದಾಯ ತೆರಿಗೆ ಮತ್ತು ಸರ್ಚಾರ್ಜ್ ರೂಪದಲ್ಲಿ ಪಾವತಿಸಬೇಕಾದ ಮೊತ್ತವು, ಒಟ್ಟು ಆದಾಯ ₹2 ಕೋಟಿಗೆ ವಿಧಿಸಲ್ಪಡುವ ಆದಾಯ ತೆರಿಗೆಯ ಮೊತ್ತಕ್ಕಿಂತ, ₹2 ಕೋಟಿ ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಆಗಬಾರದು.

5 ಕೋಟಿಗಳು

-

ಆದಾಯ ತೆರಿಗೆ ಮತ್ತು ಸರ್ಚಾರ್ಜ್ ರೂಪದಲ್ಲಿ ಪಾವತಿಸಬೇಕಾದ ಮೊತ್ತವು, ಒಟ್ಟು ಆದಾಯ ₹5 ಕೋಟಿಗೆ ವಿಧಿಸಲ್ಪಡುವ ಆದಾಯ ತೆರಿಗೆಯ ಮೊತ್ತಕ್ಕಿಂತ, ₹5 ಕೋಟಿ ಮೀರಿದ ಆದಾಯದ ಪ್ರಮಾಣಕ್ಕಿಂತ ಹೆಚ್ಚು ಆಗಬಾರದು.

 

 

ನಾನು ತೆರಿಗೆ ಸೌಲಭ್ಯ ಪಡೆಯಬಹುದಾದ ಹೂಡಿಕೆಗಳು / ಪಾವತಿಗಳು / ಆದಾಯಗಳು

A. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಕಡಿತಗಳು ಲಭ್ಯವಿರುತ್ತವೆ.

 

 

1.ಸೆಕ್ಷನ್ 24(b) – ವಸತಿ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಮನೆ ಆಸ್ತಿಯಿಂದ ಬರುವ ಆದಾಯದ ಮೇಲಿನ ತೆರಿಗೆ ಕಡಿತ:

1.ಸೆಕ್ಷನ್ 24(b) – ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಗೃಹ ಆಸ್ತಿಯಿಂದ ಬರುವ ಆದಾಯದ ಮೇಲಿನ ತೆರಿಗೆ ಕಡಿತ:

ಆಸ್ತಿಯ ಸ್ವರೂಪ

ಸಾಲದ ಉದ್ದೇಶ

ಅನುಮತಿಸಬಹುದಾದ (ಗರಿಷ್ಠ ಮಿತಿ)

ITR ಅನ್ನು ಭರ್ತಿ ಮಾಡಲು ಅಗತ್ಯವಿರುವ ವಿವರಗಳು

ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

ಯಾವುದೇ ಮಿತಿಯಿಲ್ಲದ ವಾಸ್ತವಿಕ ಮೌಲ್ಯ (ಆದರೆ "ಮನೆ ಆಸ್ತಿಯಿಂದ ಬರುವ ಆದಾಯ" ಎಂಬ ಶೀರ್ಷಿಕೆಯಡಿಯಲ್ಲಿ ನಷ್ಟವಿದ್ದರೆ ಅದನ್ನು CYLA ವೇಳಾಪಟ್ಟಿಯಲ್ಲಿರುವ ಯಾವುದೇ ಇತರ ಶೀರ್ಷಿಕೆಗಳ ವಿರುದ್ಧ ಹೊಂದಿಸಲಾಗುವುದಿಲ್ಲ ಮತ್ತು ಮುಂದಿನ ವರ್ಷಗಳಿಗೆ ಸಾಗಿಸಲಾಗುವುದಿಲ್ಲ)

  • ಬ್ಯಾಂಕ್‌ನಿಂದ / ಬ್ಯಾಂಕ್ ಹೊರತುಪಡಿಸಿ ಇತರರಿಂದ ಪಡೆದ ಸಾಲ
  • ಸಾಲವನ್ನು ಪಡೆದ ಬ್ಯಾಂಕ್ / ಸಂಸ್ಥೆ / ವ್ಯಕ್ತಿಯ ಹೆಸರು
  • ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ.
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲಗಳ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 24(b) ಅಡಿಯಲ್ಲಿ ಸಾಲವಾಗಿ ಪಡೆದ ಬಂಡವಾಳದ ಮೇಲಿನ ಬಡ್ಡಿ

 

 

2. ಆದಾಯ ತೆರಿಗೆ ಕಾಯ್ದೆ, 1961 ರ ಅಧ್ಯಾಯ VIA ಅಡಿಯಲ್ಲಿ ನಿರ್ದಿಷ್ಟಪಡಿಸಿದ ತೆರಿಗೆ ಕಡಿತಗಳು

ಸೆಕ್ಷನ್ 80CCD (2)

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ

ಎಲ್ಲಾ ವರ್ಗದ ಉದ್ಯೋಗದಾತರಿಗೆ

ವೇತನದ 14% ವರೆಗೆ ಕಡಿತ ಮಿತಿ

 

 

 

ಸೆಕ್ಷನ್ 80CCH

ಅಗ್ನಿಪಥ್ ಯೋಜನೆಗೆ ನೀಡಿದ ಕೊಡುಗೆಗೆ ಸಂಬಂಧಿಸಿದ ಕಡಿತ

ಅಗ್ನಿಪಥ್ ಯೋಜನೆಯಲ್ಲಿ ನೋಂದಾಯಿತ ವ್ಯಕ್ತಿಯಾಗಿರುವ ತೆರಿಗೆದಾರ 2022ರ ನವೆಂಬರ್ 1 ಅಥವಾ ನಂತರ ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ಚಂದಾದಾರರಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಆ ಫಂಡ್‌ನ ತನ್ನ ಖಾತೆಗೆ ಯಾವುದೇ ಮೊತ್ತವನ್ನು ಪಾವತಿಸಿದ ಅಥವಾ ಠೇವಣಿ ಮಾಡಿದ್ದರೆ.

ಈ ರೀತಿಯಾಗಿ ಪಾವತಿಸಿದ ಅಥವಾ ಠೇವಣಿ ಮಾಡಿದ ಮೊತ್ತದ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ

ಅಗ್ನಿವೀರ್ ಕಾರ್ಪಸ್ ನಿಧಿಯ ತೆರಿಗೆಗಾರನ ಖಾತೆಗೆ ಕೇಂದ್ರಸರ್ಕಾರ ಯಾವುದೇ ದೇಣಿಗೆ ನೀಡಿದ್ದರೆ

ಒಟ್ಟು ಆದಾಯದ ಲೆಕ್ಕಾಚಾರದಲ್ಲಿ, ಕೇಂದ್ರ ಸರ್ಕಾರವು ನೀಡಿದ ಆ ಕೊಡುಗೆ ಮೊತ್ತದ ಸಂಪೂರ್ಣ ಪ್ರಮಾಣಕ್ಕೆ ತೆರಿಗೆ ಕಡಿತವನ್ನು ಅನುಮತಿಸಲಾಗುತ್ತದೆ.

 

B. ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೆ ಲಭ್ಯವಿರುವ ತೆರಿಗೆ ಕಡಿತಗಳು

ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 24(b) – ಗೃಹ ಆಸ್ತಿಯಿಂದ ಆದಾಯದ ಮೇಲೆ ಗೃಹ ಸಾಲ ಮತ್ತು ಗೃಹ ಸುಧಾರಣಾ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಕಡಿತ. ಸ್ವಯಂ ವಾಸದ ಆಸ್ತಿಯ ಸಂದರ್ಭದಲ್ಲಿ, ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಗರಿಷ್ಠ ₹2 ಲಕ್ಷದವರೆಗೆ ಕಡಿತ ಲಭ್ಯ. ಸೆಕ್ಷನ್ 24(b) ಅಡಿಯಲ್ಲಿ ಅನುಮತಿಸಲ್ಪಡುವ ಸಾಲದ ಮೇಲಿನ ಬಡ್ಡಿಯನ್ನು ಕೆಳಗಿನಂತೆ ಪಟ್ಟಿಮಾಡಲಾಗಿದೆ:

ಆಸ್ತಿಯ ಸ್ವರೂಪ

ಸಾಲ ಪಡೆದ ಸಮಯ

ಸಾಲದ ಉದ್ದೇಶ

ಅನುಮತಿಸಬಹುದಾದ (ಗರಿಷ್ಠ ಮಿತಿ)

ಅಗತ್ಯವಿರುವ ವಿವರಗಳು

ಸ್ವಯಂ - ವಾಸ

1/04/1999 ರಂದು ಅಥವಾ ನಂತರ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

₹ 2,00,000

  • ಬ್ಯಾಂಕ್‌ನಿಂದ / ಬ್ಯಾಂಕ್ ಹೊರತುಪಡಿಸಿ ಇತರರಿಂದ ಪಡೆದ ಸಾಲ
  • ಸಾಲವನ್ನು ಪಡೆದ ಬ್ಯಾಂಕ್ / ಸಂಸ್ಥೆ / ವ್ಯಕ್ತಿಯ ಹೆಸರು
  • ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ.
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲದ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 24(b) ಅಡಿಯಲ್ಲಿ ಸಾಲವಾಗಿ ಪಡೆದ ಬಂಡವಾಳ ಮೇಲಿನ ಬಡ್ಡಿ

1/04/1999 ರಂದು ಅಥವಾ ನಂತರ

ಗೃಹ ಆಸ್ತಿಯ ದುರಸ್ತಿಗಳಿಗಾಗಿ

₹ 30,000

1/04/1999 ರ ಮೊದಲು

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

₹ 30,000

1/04/1999 ರ ಮೊದಲು

ಗೃಹ ಆಸ್ತಿಯ ದುರಸ್ತಿಗಳಿಗಾಗಿ

₹ 30,000

ಬಾಡಿಗೆಗೆ ಕೊಟ್ಟಿರುವ ಗೃಹ ಆಸ್ತಿ

ಯಾವುದೇ ಸಮಯದಲ್ಲಿಯೂ

ಗೃಹ ಆಸ್ತಿಯ ನಿರ್ಮಾಣ ಅಥವಾ ಖರೀದಿ

ಯಾವುದೇ ಮಿತಿಯಿಲ್ಲದೆ ವಾಸ್ತವ ಮೌಲ್ಯ.

ಮೌಲ್ಯಮಾಪನ ವರ್ಷದ (AY) ಅವಧಿಯಲ್ಲಿ ಇತರ ಆದಾಯ ಶೀರ್ಷಿಕೆಗಳ ವಿರುದ್ಧ ಹೊಂದಿಸಲು ಅನುಮತಿಸಲಾದ ಗರಿಷ್ಠ ನಷ್ಟ ₹2,00,000 ಆಗಿದ್ದು, ಉಳಿದ ಮೊತ್ತವನ್ನು ಮುಂದಿನ 8 ಮೌಲ್ಯಮಾಪನ ವರ್ಷಗಳವರೆಗೆ ಸಾಗಿಸಬಹುದು.

 

2.ಆದಾಯ ತೆರಿಗೆ ಕಾಯ್ದೆ, 1961 ರ ಅಧ್ಯಾಯ VIA ಅಡಿಯಲ್ಲಿ ನಿರ್ದಿಷ್ಟಪಡಿಸಿದ ತೆರಿಗೆ ಕಡಿತಗಳು

 

ಸೆಕ್ಷನ್ 80C, 80CCC, 80CCD (1)

ಈ ಕೆಳಗಿನವರಿಗೆ ಮಾಡಿದ ಪಾವತಿಗಳ ಮೇಲಿನ ಕಡಿತ

80C

  • ಜೀವ ವಿಮಾ ಪ್ರೀಮಿಯಂ
  • ಭವಿಷ್ಯ ನಿಧಿ
  • ಕೆಲವು ಇಕ್ವಿಟಿ ಷೇರುಗಳ ಚಂದಾದಾರಿಕೆ
  • ಬೋಧನಾ ಶುಲ್ಕ
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
  • ಗೃಹ ಸಾಲದ ಮೂಲಧನ
  • ಇತರ ವಿವಿಧ ಅಂಶಗಳು

ಒಟ್ಟು ಕಡಿತದ ಗರಿಷ್ಠ ಮಿತಿ ₹ 1,50,000

 

ಪ್ರತಿ ಅರ್ಹ ಪಾವತಿಗಾಗಿ ITR ನಲ್ಲಿ ಭರ್ತಿ ಮಾಡಬೇಕಾದ ವಿವರಗಳು:

  • ಪಾಲಿಸಿ ಸಂಖ್ಯೆ ಅಥವಾ ದಾಖಲೆ ಗುರುತಿನ ಸಂಖ್ಯೆ
  • ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾದ ಮೊತ್ತ

80CCC

ಪಿಂಚಣಿ ಯೋಜನೆಯತ್ತ LIC ಅಥವಾ ಇತರ ವಿಮಾ ಸಂಸ್ಥೆಯ ಅನ್ಯುಯಿಟಿ ಯೋಜನೆ (Annuity plan)

 

80CCD (1)

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ

 

 

 

ಸೆಕ್ಷನ್ 80CCD(1B)

80CCD (1) ಅಡಿಯಲ್ಲಿ ಕ್ಲೈಮ್ ಮಾಡಿದ ಕಡಿತವನ್ನು ಹೊರತುಪಡಿಸಿ, ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಮಾಡಿದ ಪಾವತಿಗಳ ಮೇಲಿನ ಕಡಿತ

ತೆರಿಗೆ ಕಡಿತದ ಮಿತಿ ₹ 50,000

 

ದಯವಿಟ್ಟು ಗಮನಿಸಿ:
1.80C ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು ಕೆಳಗಿನ ವಿವರಗಳನ್ನು ನೀಡಬೇಕು:

  • ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾದ ಮೊತ್ತ
  • ಪಾಲಿಸಿ ಸಂಖ್ಯೆ ಅಥವಾ ದಾಖಲೆ ಗುರುತಿನ ಸಂಖ್ಯೆ


2. 80CCD (1), 80CCD (1B) ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು ಕೆಳಗಿನ ವಿವರಗಳನ್ನು ನೀಡಬೇಕು:

  • ಕೊಡುಗೆಯ ಮೊತ್ತ
  • ತೆರಿಗೆದಾರರ PRAN

 

 

ಸೆಕ್ಷನ್ 80CCD (2)

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಗೆ ಉದ್ಯೋಗದಾತರು ನೀಡಿದ ಕೊಡುಗೆಗೆ ತೆರಿಗೆ ಕಡಿತ

ಉದ್ಯೋಗದಾತರು PSU ಅಥವಾ ಇತರರಾಗಿದ್ದರೆ

ವೇತನದ 10% ವರೆಗೆ ತೆರಿಗೆ ಕಡಿತದ ಮಿತಿ

ಉದ್ಯೋಗದಾತರು ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಿದ್ದರೆ

ವೇತನದ 14% ವರೆಗೆ ತೆರಿಗೆ ಕಡಿತದ ಮಿತಿ

 

 

 

ಸೆಕ್ಷನ್ 80CCH

ಅಗ್ನಿಪಥ್ ಯೋಜನೆಗೆ ನೀಡಿದ ಕೊಡುಗೆಗೆ ಸಂಬಂಧಿಸಿದ ಕಡಿತ

ಅಗ್ನಿಪಥ್ ಯೋಜನೆಯಲ್ಲಿ ನೋಂದಾಯಿತ ವ್ಯಕ್ತಿಯಾಗಿರುವ ತೆರಿಗೆದಾರ 2022ರ ನವೆಂಬರ್ 1 ಅಥವಾ ನಂತರ ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ಚಂದಾದಾರರಾಗಿದ್ದು, ಹಿಂದಿನ ವರ್ಷದ ಅವಧಿಯಲ್ಲಿ ಆ ಫಂಡ್‌ನ ತನ್ನ ಖಾತೆಗೆ ಯಾವುದೇ ಮೊತ್ತವನ್ನು ಪಾವತಿಸಿದ ಅಥವಾ ಠೇವಣಿ ಮಾಡಿದ್ದರೆ

ಹೀಗೆ ಪಾವತಿಸಿದ ಅಥವಾ ಠೇವಣಿ ಮಾಡಿದ ಮೊತ್ತದ ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ

ಅಗ್ನಿವೀರ್ ಕಾರ್ಪಸ್ ನಿಧಿಯ ತೆರಿಗೆಗಾರನ ಖಾತೆಗೆ ಕೇಂದ್ರಸರ್ಕಾರ ಯಾವುದೇ ದೇಣಿಗೆ ನೀಡಿದ್ದರೆ

ಒಟ್ಟು ಆದಾಯದ ಲೆಕ್ಕಾಚಾರದಲ್ಲಿ ಹೀಗೆ ಕೊಡುಗೆ ನೀಡಿದ ಮೊತ್ತದ ತೆರಿಗೆ ಕಡಿತವನ್ನು ಅನುಮತಿಸಲಾಗಿದೆ

 

 

ಸೆಕ್ಷನ್ 80D

ಆರೋಗ್ಯ ವಿಮಾ ಪ್ರೀಮಿಯಂ ಮತ್ತು ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆಗೆ ಮಾಡಿದ ಪಾವತಿಗಳ ಮೇಲಿನ ಕಡಿತ

ತನಗೆ/ಸಂಗಾತಿಗೆ ಅಥವಾ ಅವಲಂಬಿತ ಮಕ್ಕಳಿಗೆ

₹ 25,000 (ಯಾವುದೇ ವ್ಯಕ್ತಿ ಹಿರಿಯ ನಾಗರಿಕರಾಗಿದ್ದರೆ ₹ 50,000)

ಮುನ್ನೆಚ್ಚರಿಕೆಯ ಆರೋಗ್ಯ ತಪಾಸಣೆಗೆ ₹5,000, ಮೇಲಿನ ಮಿತಿಯೊಳಗೆ ಸೇರಿಸಲಾಗಿದೆ.

ಪೋಷಕರಿಗಾಗಿ

₹ 25,000 (ಯಾವುದೇ ವ್ಯಕ್ತಿ ಹಿರಿಯ ನಾಗರಿಕರಾಗಿದ್ದರೆ ₹ 50,000)

ಮುನ್ನೆಚ್ಚರಿಕೆ ಆರೋಗ್ಯ ತಪಾಸಣೆಗೆ ₹5,000 , ಮೇಲಿನ ಮಿತಿಯೊಳಗೆ ಸೇರಿಸಲಾಗಿದೆ.

ಆರೋಗ್ಯ ವಿಮೆಗೆ ಯಾವುದೇ ಪ್ರೀಮಿಯಂ ಪಾವತಿಸದಿದ್ದಲ್ಲಿ, ಹಿರಿಯ ನಾಗರಿಕರ ವೈದ್ಯಕೀಯ ವೆಚ್ಚಗಳಿಗೆ ನೀಡಲಾಗುವ ಕಡಿತ

ತನಗೆ/ಸಂಗಾತಿಗೆ ಅಥವಾ ಅವಲಂಬಿತ ಮಕ್ಕಳಿಗೆ

ತೆರಿಗೆ ಕಡಿತದ ಮಿತಿ ₹ 50,000

ಪೋಷಕರಿಗಾಗಿ

ತೆರಿಗೆ ಕಡಿತದ ಮಿತಿ ₹ 50,000

ಸೂಚನೆ:

ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೈಮ್ ಮಾಡುವ ತೆರಿಗೆದಾರರು, ಕೆಳಗಿನಂತೆ ವಿವರಗಳನ್ನು ಒದಗಿಸಬೇಕು:

  • ವಿಮೆದಾತರ ಹೆಸರು (ವಿಮಾ ಕಂಪನಿ)
  • ಪಾಲಿಸಿ ಸಂಖ್ಯೆ
  • ಆರೋಗ್ಯ ವಿಮೆಯ ಮೊತ್ತ

 

ಸೆಕ್ಷನ್ 80DD

ಅಂಗವಿಕಲ ಅವಲಂಬಿತರ ನಿರ್ವಹಣೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಮಾಡಿದ ಪಾವತಿಗಳು ಅಥವಾ ಸಂಬಂಧಿತ ಅನುಮೋದಿತ ಯೋಜನೆಯಡಿಯಲ್ಲಿ ಮಾಡಿದ ಯಾವುದೇ ಮೊತ್ತದ ಪಾವತಿ / ಠೇವಣಿ ಮೇಲಿನ ತೆರಿಗೆ ಕಡಿತ

₹ 75,000 ದ ಸ್ಥಿರವಾದ ತೆರಿಗೆ ಕಡಿತ

ಖರ್ಚಾದ ವೆಚ್ಚವನ್ನು ಲೆಕ್ಕಿಸದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ಲಭ್ಯವಿರುತ್ತದೆ.

 

ಕಡಿತದ ಮೊತ್ತವು ₹1,25,000 ಆಗಿರುತ್ತದೆ

ವ್ಯಕ್ತಿಯು ತೀವ್ರ ಅಂಗವೈಕಲ್ಯ (80% ಅಥವಾ ಹೆಚ್ಚಿನ) ಹೊಂದಿದ್ದರೆ.

 

ದಯವಿಟ್ಟು ಗಮನಿಸಿ: ಸೆಕ್ಷನ್ 80DD ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:

  • ಅಂಗವೈಕಲ್ಯದ ಸ್ವರೂಪ
  • ಅಂಗವೈಕಲ್ಯದ ವಿಧ
  • ಕಡಿತದ ಮೊತ್ತ
  • ಅವಲಂಬಿತರ ವಿಧ
  • ಅವಲಂಬಿತರ PAN
  • ಅವಲಂಬಿತರ ಆಧಾರ್
  • ಸ್ವಲೀನತೆ (autism), ಮೆದುಳಿನ ಅಂಗವೈಕಲ್ಯ (cerebral palsy) ಅಥವಾ ಬಹು ಅಂಗವೈಕಲ್ಯಗಳ ಸಂದರ್ಭದಲ್ಲಿ ಫೈಲ್ ಮಾಡಲಾದ ಫಾರ್ಮ್ 10 IA ಸ್ವೀಕೃತಿ ಸಂಖ್ಯೆ
  • UDID ಸಂಖ್ಯೆ (ಲಭ್ಯವಿದ್ದರೆ)

 

ಸೆಕ್ಷನ್ 80DDB

ನಿರ್ದಿಷ್ಟ ರೋಗಗಳಿಗೆ ತನಗೆ ಅಥವಾ ಅವಲಂಬಿತರ ವೈದ್ಯಕೀಯ ಚಿಕಿತ್ಸೆಗೆ ಮಾಡಿದ ಪಾವತಿಗಳ ಮೇಲಿನ ತೆರಿಗೆ ಕಡಿತ

₹40,000 ವರೆಗೆ ಕಡಿತ ಮಿತಿ (ಹಿರಿಯ ನಾಗರಿಕರಿದ್ದರೆ ₹1,00,000)

 

 

 

ಸೆಕ್ಷನ್ 80E

ತನ್ನ ಅಥವಾ ಸಂಬಂಧಿಕರ ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಗಳಿಗೆ ಸಂಬಂಧಿಸಿದ ಕಡಿತ

ಪಡೆಯಲಾದ ಸಾಲಕ್ಕೆ ಪಾವತಿಸಿದ ಒಟ್ಟು ಬಡ್ಡಿ ಮೊತ್ತ

 

ಗಮನಿಸಿ:

ಸೆಕ್ಷನ್ 80E ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ITR ನಲ್ಲಿ ಕೆಳಗಿನ ವಿವರಗಳನ್ನು ಒದಗಿಸಬೇಕಾಗಿದೆ:

  • ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
  • ಸಾಲ ಪಡೆದ ಸಂಸ್ಥೆ / ಬ್ಯಾಂಕ್ ಹೆಸರು
  • ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲಗಳ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 80E ಅಡಿಯಲ್ಲಿ ಬಡ್ಡಿ

 

 

ಸೆಕ್ಷನ್ 80EE

ವಸತಿ ಗೃಹ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು 1 ಏಪ್ರಿಲ್ 2016 ರಿಂದ 31 ನೇ ಮಾರ್ಚ್ 2017 ರ ನಡುವೆ ಮಂಜೂರಾದ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲಿನ ತೆರಿಗೆ ಕಡಿತ

ಪಡೆದುಕೊಂಡ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲೆ ₹ 50,000 ಕಡಿತ ಮಿತಿ

 

ಗಮನಿಸಿ:
ಸೆಕ್ಷನ್ 80EE ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಕೆಳಗಿನ ವಿವರಗಳನ್ನು ITR ನಲ್ಲಿ ನೀಡಬೇಕು:

  • ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
  • ಸಾಲ ಪಡೆದ ಸಂಸ್ಥೆ / ಬ್ಯಾಂಕ್ ಹೆಸರು
  • ಬ್ಯಾಂಕ್ / ಸಂಸ್ಥೆ ಸಾಲ ಖಾತೆ ಸಂಖ್ಯೆ
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲಗಳ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 80EE ಅಡಿಯಲ್ಲಿ ಬಡ್ಡಿ

 

 

ಸೆಕ್ಷನ್ 80EEA

ಮೊದಲನೇ ಬಾರಿಗೆ ವಸತಿ ಗೃಹ ಆಸ್ತಿಯನ್ನು ಖರೀದಿಸಲು ಪಡೆದ ಸಾಲದ ಮೇಲಿನ ಬಡ್ಡಿ ಪಾವತಿಗಳಿಗೆ ಮಾತ್ರ ವ್ಯಕ್ತಿಗಳಿಗೆ ತೆರಿಗೆ ಕಡಿತ ಲಭ್ಯವಿರುತ್ತದೆ. ಈ ಸಾಲವು 2019ರ ಏಪ್ರಿಲ್ 1 ರಿಂದ 2022ರ ಮಾರ್ಚ್ 31ರೊಳಗೆ ಮಂಜೂರಾಗಿರಬೇಕು ಹಾಗೂ ಸೆಕ್ಷನ್ 80EE ಅಡಿಯಲ್ಲಿ ಈಗಾಗಲೇ ಕಡಿತವನ್ನು ಕ್ಲೈಮ್ ಮಾಡಿರಬಾರದು.‌

ಪಡೆದುಕೊಂಡ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲೆ ₹ 1,50,000 ಕಡಿತದ ಮಿತಿ

 

ಗಮನಿಸಿ:
ಸೆಕ್ಷನ್ 80EEA ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಕೆಳಗಿನ ವಿವರಗಳನ್ನು ‌ITR ನಲ್ಲಿ ನೀಡಬೇಕು:

  • ವಸತಿ ಗೃಹ ಆಸ್ತಿಯ ಮುದ್ರಾ೦ಕ ಮೌಲ್ಯ
  • ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
  • ಸಾಲ ಪಡೆದ ಸಂಸ್ಥೆ / ಬ್ಯಾಂಕ್ ಹೆಸರು
  • ಬ್ಯಾಂಕ್/ಸಂಸ್ಥೆಯ ಸಾಲ ಖಾತೆ ಸಂಖ್ಯೆ
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲಗಳ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 80EEA ಅಡಿಯಲ್ಲಿ ಬಡ್ಡಿ

ದಯವಿಟ್ಟು ಗಮನಿಸಿ, ಸೆಕ್ಷನ್ 80EEA ಅಡಿಯಲ್ಲಿ ಕಡಿತವನ್ನು, ಸೆಕ್ಷನ್ 24(b) ಯ ಮಿತಿಯನ್ನು ಸಂಪೂರ್ಣವಾಗಿ ಬಳಸಿದ ನಂತರ ಮಾತ್ರ ಕ್ಲೈಮ್ ಮಾಡಬಹುದು. ಜೊತೆಗೆ, ಸಾಲ ಮಂಜೂರಾತಿ ದಿನಾಂಕ ಮತ್ತು ಇತರ ಅರ್ಹತಾ ಷರತ್ತುಗಳ ಆಧಾರದ ಮೇಲೆ ತೆರಿಗೆದಾರರು 80EE ಅಥವಾ 80EEA ಯಲ್ಲಿ ಯಾವುದಾದರೂ ಒಂದನ್ನು ಮಾತ್ರ ಕ್ಲೈಮ್ ಮಾಡಬಹುದು.

 

 

ಸೆಕ್ಷನ್ 80EEB

1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2023 ರ ನಡುವೆ ಸಾಲವನ್ನು ಮಂಜೂರು ಮಾಡಲಾದ, ಎಲೆಕ್ಟ್ರಿಕ್ ವಾಹನದ ಖರೀದಿಗಾಗಿ ಮಾಡಿದ ಸಾಲದ ಮೇಲಿನ ಬಡ್ಡಿ ಪಾವತಿಗಳ ಮೇಲಿನ ಕಡಿತ

ಪಡೆಯಲಾದ ಸಾಲದ ಮೇಲಿನ ಪಾವತಿಸಿದ ಬಡ್ಡಿಗೆ ₹1,50,000 ವರೆಗೆ ಕಡಿತ ಮಿತಿ.

 

ಗಮನಿಸಿ: ಸೆಕ್ಷನ್ 80EEB ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಕೆಳಗಿನ ವಿವರಗಳನ್ನು ‌ITR ನಲ್ಲಿ ನೀಡಬೇಕು:

  • ಬ್ಯಾಂಕ್ / ಸಂಸ್ಥೆಯಿಂದ ಪಡೆದ ಸಾಲ
  • ಸಾಲ ಪಡೆದ ಸಂಸ್ಥೆ / ಬ್ಯಾಂಕ್ ಹೆಸರು
  • ಬ್ಯಾಂಕ್ / ಸಂಸ್ಥೆಯ ಸಾಲ ಖಾತೆ ಸಂಖ್ಯೆ
  • ಸಾಲ ಮಂಜೂರಾತಿ ದಿನಾಂಕ
  • ಒಟ್ಟು ಸಾಲಗಳ ಮೊತ್ತ
  • ಆರ್ಥಿಕ ವರ್ಷದ ಕೊನೆಯ ದಿನಾಂಕಕ್ಕೆ ಬಾಕಿ ಇರುವ ಸಾಲ
  • ಸೆಕ್ಷನ್ 80EEB ಅಡಿಯಲ್ಲಿ ಬಡ್ಡಿ
  • ವಾಹನ ನೋಂದಣಿ ಸಂಖ್ಯೆ

 

 

ಸೆಕ್ಷನ್ 80G

ನಿರ್ದಿಷ್ಟಪಡಿಸಿದ ನಿಧಿಗಳು, ದತ್ತಿ ಸಂಸ್ಥೆಗಳು ಇತ್ಯಾದಿಗಳಿಗೆ ಮಾಡಿದ ದಾನಗಳ ಮೇಲಿನ ಕಡಿತ
ಕೆಳಗಿನ ವರ್ಗಗಳ ಅಡಿಯಲ್ಲಿ ದಾನಗಳಿಗೆ ಕಡಿತ ಲಭ್ಯವಿರುತ್ತದೆ

ಯಾವುದೇ ಮಿತಿಯಿಲ್ಲದೆ

100% ಕಡಿತ

50% ಕಡಿತ

ಅರ್ಹತಾ ಮಿತಿಗೆ ಒಳಪಟ್ಟಿರುತ್ತದೆ

100% ಕಡಿತ

50% ಕಡಿತ

ಸೂಚನೆ: ₹2000/- ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ಮಾಡಿದ ದಾನಗಳಿಗೆ ಈ ವಿಭಾಗದ ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ.

 

 

ಸೆಕ್ಷನ್ 80GG

ಮನೆಯ ಬಾಡಿಗೆಗೆ ಪಾವತಿಸಿದ ಮೊತ್ತದ ಮೇಲಿನ ಕಡಿತ & ಇದು ಸ್ವಯಂ ಉದ್ಯೋಗಿಗಳಿಗೆ ಅಥವಾ ವೇತನದಲ್ಲಿ HRA ಸೇರಿಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ. ಕೆಳಗಿನವುಗಳಲ್ಲಿ ಕನಿಷ್ಠ ಇರುವ ಮೊತ್ತವನ್ನು ಕಡಿತವಾಗಿ ಅನುಮತಿಸಲಾಗುತ್ತದೆ.

ಪಾವತಿಸಿದ ಬಾಡಿಗೆಯ ಮೊತ್ತದಲ್ಲಿ ಈ ತೆರಿಗೆ ಕಡಿತದ ಮೊದಲಿನ ನಿವ್ವಳ ಆದಾಯದ ಶೇ 10% ನ್ನು ಕಳೆದು ಉಳಿದ ಮೊತ್ತ.

ಪ್ರತಿ ತಿಂಗಳಿಗೆ ₹5,000

                

ಒಟ್ಟು ಆದಾಯದ 25% (ಸೆಕ್ಷನ್ 111A ಅಡಿಯಲ್ಲಿ ಅಲ್ಪಾವಧಿಯ ಬಂಡವಾಳ ಲಾಭಗಳು ಅಥವಾ ಸೆಕ್ಷನ್ 115A ಅಥವಾ 115D ಅಡಿಯಲ್ಲಿನ ಆದಾಯ ಹೊರತುಪಡಿಸಿ)

ಗಮನಿಸಿ:ಸೆಕ್ಷನ್ 80GG ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಫ಼ಾರ್ಮ್ 10BA ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಶೆಡ್ಯೂಲ್ 80GG ನಲ್ಲಿ ಫ಼ಾರ್ಮ್ 10BA ಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಬೇಕು.


 

 

ಸೆಕ್ಷನ್ 80GGA

ವೈಜ್ಞಾನಿಕ ಸಂಶೋಧನೆ ಅಥವಾ ಗ್ರಾಮೀಣ ಅಭಿವೃದ್ಧಿಗಾಗಿ ನೀಡಿದ ದೇಣಿಗೆಗಳ ಮೇಲಿನ ತೆರಿಗೆ ಕಡಿತ

ದೇಣಿಗೆಗಳು ಈ ಕೆಳಗಿನ ವರ್ಗಗಳ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗುತ್ತವೆ

ಕೆಳಗಿನ ಉದ್ದೇಶಗಳಿಗಾಗಿ ಇರುವ ಸಂಶೋಧನಾ ಸಂಘ ಅಥವಾ ವಿಶ್ವವಿದ್ಯಾಲಯ, ಕಾಲೇಜು ಅಥವಾ ಇತರ ಸಂಸ್ಥೆ

  • ವೈಜ್ಞಾನಿಕ ಸಂಶೋಧನೆ
  • ಸಾಮಾಜಿಕ ವಿಜ್ಞಾನ ಅಥವಾ ಸಂಖ್ಯಾಶಾಸ್ತ್ರೀಯ ಸಂಶೋಧನೆ

ಕೆಳಗಿನ ಉದ್ದೇಶಕ್ಕಾಗಿ ಇರುವ ಸಂಘ ಅಥವಾ ಸಂಸ್ಥೆ

  • ಗ್ರಾಮೀಣಾಭಿವೃದ್ಧಿ
  • ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಅಥವಾ ಅರಣ್ಯೀಕರಣಕ್ಕಾಗಿ

ಅರ್ಹ ಯೋಜನೆಯನ್ನು ಕೈಗೊಳ್ಳಲು ರಾಷ್ಟ್ರೀಯ ಸಮಿತಿಯಿಂದ ಅನುಮೋದಿಸಲಾದ PSU ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಒಂದು ಸಂಘ ಅಥವಾ ಸಂಸ್ಥೆ

ಈ ಕೆಳಗಿನ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಸೂಚಿತ ನಿಧಿ

  • ಅರಣ್ಯೀಕರಣ
  • ಗ್ರಾಮೀಣಾಭಿವೃದ್ಧಿ

ಕೇಂದ್ರ ಸರ್ಕಾರವು ಸ್ಥಾಪಿಸಿ ಮತ್ತು ಅಧಿಸೂಚಿಸಿದಂತೆ ರಾಷ್ಟ್ರೀಯ ನಗರ ಬಡತನ ನಿರ್ಮೂಲನಾ ನಿಧಿ

ಗಮನಿಸಿ: ₹2000/- ಕ್ಕಿಂತ ಹೆಚ್ಚಿನ ನಗದು ರೂಪದಲ್ಲಿ ಮಾಡಿದ ದಾನಗಳಿಗೆ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ ಅಥವಾ ಒಟ್ಟು ಗಳಿಕೆಯ ಆದಾಯದಲ್ಲಿ ವ್ಯಾಪಾರ/ವೃತ್ತಿಯಿಂದ ಬಂದ ಲಾಭ/ಆದಾಯ ಒಳಗೊಂಡಿದ್ದರೆ ಈ ಕಡಿತವನ್ನು ಅನುಮತಿಸಲಾಗುವುದಿಲ್ಲ.

 

 

ಸೆಕ್ಷನ್ 80GGC

ರಾಜಕೀಯ ಪಕ್ಷ ಅಥವಾ ಚುನಾವಣಾ ಟ್ರಸ್ಟ್‌ಗೆ ನೀಡಿದ ಕೊಡುಗೆಗೆ ತೆರಿಗೆ ಕಡಿತ

ನಗದು ರೂಪದಲ್ಲಿ ಯಾವುದೇ ಕೊಡುಗೆ ನೀಡಿದರೆ ಯಾವುದೇ ತೆರಿಗೆ ಕಡಿತವನ್ನು ಅನುಮತಿಸಲಾಗುವುದಿಲ್ಲ.

 

 

ಸೆಕ್ಷನ್ 80TTA

ಹಿರಿಯ ನಾಗರಿಕರಲ್ಲದವರು ಬ್ಯಾ೦ಕ್ ಗಳಲ್ಲಿ ಉಳಿತಾಯ ಖಾತೆಗಳ ಮೂಲಕ ಪಡೆದ ಬಡ್ಡಿಯ ಮೇಲಿನ ತೆರಿಗೆ ಕಡಿತ

ತೆರಿಗೆ ಕಡಿತದ ಮಿತಿ ₹ 10,000/-

 

 

 

 

ಸೆಕ್ಷನ್ 80TTB

ನಿವಾಸಿ ಹಿರಿಯ ನಾಗರಿಕರು ಠೇವಣಿಗಳ ಮೇಲೆ ಪಡೆದ ಬಡ್ಡಿಯ ಮೇಲಿನ ತೆರಿಗೆ ಕಡಿತ

ತೆರಿಗೆ ಕಡಿತದ ಮಿತಿ₹ 50,000/-

 

 

ಸೆಕ್ಷನ್ 80U

ಅಂಗವೈಕಲ್ಯ ಹೊಂದಿರುವ ನಿವಾಸಿ ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುವ ಕಡಿತಗಳು

ಖರ್ಚು ಮಾಡಿದ ವೆಚ್ಚವನ್ನು ಪರಿಗಣಿಸದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗೆ ನಿಗದಿತ ₹75,000 ಕಡಿತ.

ಗಂಭೀರ ಅಂಗವೈಕಲ್ಯ (80% ಅಥವಾ ಹೆಚ್ಚು) ಹೊಂದಿರುವ ವ್ಯಕ್ತಿಗೆ, ಖರ್ಚಾದ ವೆಚ್ಚವನ್ನು ಪರಿಗಣಿಸದೆ ನಿಗದಿತ ₹1,25,000 ಕಡಿತ.

 

ಗಮನಿಸಿ:

ಸೆಕ್ಷನ್ 80U ಅಡಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಲು, ಕೆಳಗಿನ ವಿವರಗಳನ್ನು ನೀಡಬೇಕು:‌

  • ಅಂಗವೈಕಲ್ಯದ ಸ್ವರೂಪ
  • ಅಂಗವೈಕಲ್ಯದ ವಿಧ
  • ಕಡಿತದ ಮೊತ್ತ
  • ಸ್ವಲೀನತೆ (autism), ಮೆದುಳಿನ ಅಂಗವೈಕಲ್ಯ (Cerebral Palsy) ಅಥವಾ ಬಹು ಅಂಗವೈಕಲ್ಯಗಳ ಸಂದರ್ಭದಲ್ಲಿ ಫೈಲ್ ಮಾಡಲಾದ ಫಾರ್ಮ್ 10 IA ಸ್ವೀಕೃತಿ ಸಂಖ್ಯೆ
  • UDID ಸಂಖ್ಯೆ (ಲಭ್ಯವಿದ್ದರೆ)

 

ಪುಟವನ್ನು ಕೊನೆಯದಾಗಿ ಪರಿಶೀಲಿಸಲಾಗಿದೆ ಅಥವಾ ನವೀಕರಿಸಲಾಗಿದೆ: