Do not have an account?
Already have an account?

1. ಪಾವತಿ ಸ್ಥಿತಿ ತಿಳಿಯಿರಿ ಸೇವೆ ಎಂದರೇನು?
ಈ ಸೇವೆಯ ಮೂಲಕ, ಆನ್‌ಲೈನ್ / ಆಫ್‌ಲೈನ್ ಮೋಡ್‌ಗಳಿಂದ ವರ್ಗಾಯಿಸಿದ ತೆರಿಗೆಯ ಪಾವತಿ ಸ್ಥಿತಿಯನ್ನು ನೀವು ವೀಕ್ಷಿಸಬಹುದು.

2. ತೆರಿಗೆ ಪಾವತಿಯ ಆಯ್ಕೆಗಳು ಯಾವುವು?
ನೀವು ಈ‌ ಕೆಳಗಿನವುಗಳ ಮೂಲಕ ಪಾವತಿಸಬಹುದು:

  • ನೆಟ್ ಬ್ಯಾಂಕಿಂಗ್; ಅಥವಾ
  • ಕ್ರೆಡಿಟ್ ಕಾರ್ಡ್; ಅಥವಾ
  • ಡೆಬಿಟ್ ಕಾರ್ಡ್; ಅಥವಾ
  • ಬ್ಯಾಂಕ್ ಕೌಂಟರ್‌ನಲ್ಲಿ ಪಾವತಿ; ಅಥವಾ
  • RTGS / NEFT.

3. ಚಲನ್ ರಚಸಿದ ನಂತರ ತೆರಿಗೆ ಪಾವತಿಗೆ ಯಾವುದೇ ಸಮಯದ ಮಿತಿ ಇದೆಯೇ?
ಚಲನ್ ರಚಿಸಿದ (ಅಂದರೆ CRN ರಚನೆಯ ದಿನಾಂಕದಿಂದ 15 ದಿನಗಳು) 15 ದಿನಗಳೊಳಗೆ ನೀವು ತೆರಿಗೆ ಪಾವತಿಸಬೇಕು.
ಮುಂಗಡ ತೆರಿಗೆಯ ಸಂದರ್ಭದಲ್ಲಿ, ನೀವು CRN ರಚಿಸಿದ ದಿನಾಂಕದಿಂದ 15 ದಿನಗಳೊಳಗೆ ಅಥವಾ ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ 31 ರ ಮೊದಲು, ಯಾವುದು ಮೊದಲೋ ಅದರೊಳಗೆ ಪಾವತಿಸಬೇಕಾಗುತ್ತದೆ.

4. ನನ್ನ ಪಾವತಿಯನ್ನು ಸರ್ಕಾರದ ನೇರ ತೆರಿಗೆ ಖಾತೆಗೆ ಯಶಸ್ವಿಯಾಗಿ ವರ್ಗಾಯಿಸಲಾಗಿದೆ ಎಂದು ನನಗೆ ಹೇಗೆ ತಿಳಿಯುತ್ತದೆ?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ಐ.ಡಿ. ಮತ್ತು ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣ ಇಮೇಲ್ ಮತ್ತು SMS ಅನ್ನು ಸ್ವೀಕರಿಸುತ್ತೀರಿ. ಇದಲ್ಲದೆ, ದೃಢಪಡಿಸಿದ ಪಾವತಿಯ ಮೇಲೆ ಬ್ಯಾಂಕ್ ಒದಗಿಸುವ CIN ಜೊತೆಗೆ ಯಶಸ್ವಿ ಪಾವತಿಯ ಸ್ಥಿತಿಯನ್ನು ಪಾವತಿಯ ಇತಿಹಾಸವು ಪ್ರದರ್ಶಿಸುತ್ತದೆ.

5. ನನ್ನಿಂದ ಪಾವತಿಸದ CRN ಪಾವತಿಯ ಸ್ಥಿತಿಯನ್ನು ನಾನು ಪರಿಶೀಲಿಸಬಹುದೇ?
ನೀವು ಈ ಕೆಳಗಿನವುಗಳನ್ನು ಹೊಂದಿದ್ದರೆ ನೀವು ಯಾವುದೇ CRN/PAN ನ ಸ್ಥಿತಿಯನ್ನು ಪರಿಶೀಲಿಸಬಹುದು:

  • CRN ಅಥವಾ ಚಲನ್ ಉಲ್ಲೇಖ ಸಂಖ್ಯೆ;
  • (ಮಾನ್ಯ) PAN / TAN (ಇದಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಪಾವತಿ); ಮತ್ತು
  • ನಿಮ್ಮ ಬಳಿಯಲ್ಲಿರುವ ಒಂದು ಸಕ್ರಿಯ ಮೊಬೈಲ್ ಸಂಖ್ಯೆ.

6. ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ ನಾನು ಪಾವತಿಯನ್ನು ಪುನಃ ಪ್ರಾರಂಭಿಸಬೇಕೇ?
ಒಮ್ಮೆ ಬ್ಯಾಂಕಿನಿಂದ ವಿವರಗಳನ್ನು ಸ್ವೀಕರಿಸಿದ ನಂತರ ಸ್ಥಿತಿಯನ್ನು ಅಪ್‌‌ಡೇಟ್ ಮಾಡಲಾಗುತ್ತದೆ. ದಯವಿಟ್ಟು ಒಂದು ಗಂಟೆಯವರೆಗೆ ನಿರೀಕ್ಷಿಸಿ ಮತ್ತು CRN ಸ್ಥಿತಿಯನ್ನು ಪರಿಶೀಲಿಸಿ. ಮೊತ್ತವು ಡೆಬಿಟ್ ಆಗಿದ್ದರೆ, ದಯವಿಟ್ಟು ಬ್ಯಾಂಕ್ ಅನ್ನು ಸಂಪರ್ಕಿಸಿ.

7. ತೆರಿಗೆ ಪಾವತಿ ವಿಫಲವಾದರೆ ಅದೇ CRN‌ ನೊಂದಿಗೆ ನಾನು ಪಾವತಿಸಬಹುದೇ?
ಮೊತ್ತವು ಡೆಬಿಟ್ ಆಗಿದ್ದರೆ, ದಯವಿಟ್ಟು ಬ್ಯಾಂಕ್ ಅನ್ನು ಸಂಪರ್ಕಿಸಿ.
ನಕಲಿಸುವ ಸೌಲಭ್ಯವನ್ನು ಬಳಸುವ ಅಥವಾ ಹೊಸ ಪಾವತಿಯನ್ನು ಕ್ಲಿಕ್ ಮಾಡುವ ಮೂಲಕ ದಯವಿಟ್ಟು ಹೊಸ ಚಲನ್ ರಚಿಸಿ.

8. ವಹಿವಾಟು ಸ್ಥಗಿತಗೊಂಡರೆ ನಾನು ಏನು ಮಾಡಬೇಕು?
ಮೊತ್ತವು ಡೆಬಿಟ್ ಆಗಿದ್ದರೆ, ದಯವಿಟ್ಟು ಬ್ಯಾಂಕ್ ಅನ್ನು ಸಂಪರ್ಕಿಸಿ.

9. ಬ್ಯಾಂಕ್ ದೃಢೀಕರಣಕ್ಕಾಗಿ ನಿರೀಕ್ಷಿಸುತ್ತಿರುವ ಸಂದೇಶವನ್ನು ಪಡೆದರೆ ನಾನು ಏನು ಮಾಡಬೇಕು?
ಒಮ್ಮೆ ತನಿಖಾಧಿಕಾರಿಯು ವಹಿವಾಟನ್ನು ಅನುಮೋದಿಸಿದ ನಂತರ ವಹಿವಾಟಿನ ಸ್ಥಿತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

10. ಬ್ಯಾಂಕಿನಿಂದ ತಪ್ಪಾದ ವಿವರಗಳು ಎಂಬ ಸಂದೇಶವನ್ನು ನಾನು ಪಡೆದಿದ್ದೇನೆ, ನಾನು CRN ಗಾಗಿ ಪಾವತಿಯನ್ನು ಪುನಃ ಪ್ರಾರಂಭಿಸಬಹುದೇ?
ಮೊತ್ತವು ಡೆಬಿಟ್ ಆಗಿದ್ದರೆ, ದಯವಿಟ್ಟು ಬ್ಯಾಂಕ್ ಅನ್ನು ಸಂಪರ್ಕಿಸಿ.