1. ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ನೋಂದಾಯಿಸಿದ ನನ್ನ ಮೊಬೈಲ್ ಸಂಖ್ಯೆಯ ಅಗತ್ಯವಿದೆಯೇ?
ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ಅನೇಕ ಮಾರ್ಗಗಳಿವೆ. ನೋಂದಾಯಿತ ಮೊಬೈಲ್ ಸಂಖ್ಯೆ ಇರಬೇಕಾದ ಅಗತ್ಯವಿಲ್ಲ ಆದಾಗ್ಯೂ, ನಿಮ್ಮ ಪಾಸ್‌ವರ್ಡ್ ಮರೆತುಹೋದರೆ ನೋಂದಾಯಿತ ಮೊಬೈಲ್ ಸಂಖ್ಯೆ ಉಪಯುಕ್ತವಾಗಬಹುದು.
2. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನನ್ನ PAN ಅನ್ನು ನೋಂದಾಯಿಸಬೇಕೇ?
ಪಠ್ಯ ಬಾಕ್ಸ್‌ಗಳಲ್ಲಿ ನಮೂದಿಸಿದ PAN ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಇಲ್ಲದಿದ್ದರೆ, ನೀವು ಈ ಕೆಳಗಿನ ಸಂದೇಶ ನೋಡುತ್ತೀರಿ - PAN ಅಸ್ತಿತ್ವದಲ್ಲಿಲ್ಲ, ದಯವಿಟ್ಟು ಈ PAN ಅನ್ನು ನೋಂದಾಯಿಸಿ ಅಥವಾ ಬೇರೆ PAN ಮೂಲಕ ಪ್ರಯತ್ನಿಸಿ. PAN ಗೆ ಲಿಂಕ್ ಮಾಡಲಾದ ಇ-ಫೈಲಿಂಗ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ದಯವಿಟ್ಟು ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ಮರುಸಕ್ರಿಯಗೊಳಿಸಿ.
3. ನಾನು ತಪ್ಪಾದ ಪಾಸ್‌ವರ್ಡ್ ನಮೂದಿಸಿದರೆ ನನ್ನ ಖಾತೆ ಲಾಕ್ ಆಗುತ್ತದೆಯೇ?
ಹೌದು, ಲಾಗಿನ್ ಮಾಡಲು ವಿಫಲವಾದ 5 ಪ್ರಯತ್ನಗಳನ್ನು ಮಾಡಿದ ನಂತರ ಖಾತೆಯು ಲಾಕ್ ಆಗುತ್ತದೆ. "ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಿ" ಕಾರ್ಯವನ್ನು ಬಳಸಿಕೊಂಡು ಖಾತೆಯನ್ನುಅನ್‌ಲಾಕ್ ಮಾಡಬಹುದು ಅಥವಾ ಅದು 30 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಅನ್‌ಲಾಕ್ ಆಗುತ್ತದೆ.
4. ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ನನ್ನ PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಬೇಕೇ?
ನಿಮ್ಮ PAN ಜೊತೆ ಆಧಾರ್ ಲಿಂಕ್ ಮಾಡದಿದ್ದರೂ ನೀವು ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ಸಾಧ್ಯವಾಗುತ್ತದೆ, ಆದರೆ ನೀವು ಸೀಮಿತ ಪ್ರವೇಶವನ್ನು ಮಾತ್ರವೇ ಹೊಂದಿರುತ್ತೀರಿ. ಆದ್ದರಿಂದ PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ.
5. ಎಲ್ಲಾ ಬ್ಯಾಂಕುಗಳು ಇ-ಫೈಲಿಂಗ್ ಖಾತೆಗೆ ಲಾಗಿನ್ ಮಾಡಲು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತವೆಯೇ?
ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸುತ್ತವೆ. ಆದರೂ, ಸುರಕ್ಷಿತವಾಗಿರಲು, ಬ್ಯಾಂಕ್‌ನ ವೆಬ್‌ಸೈಟ್ ಅನ್ನು ಪರಿಶೀಲಿಸಲು ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ. ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಮಾನ್ಯತೆ ಪಡೆದ ಬ್ಯಾಂಕ್‌ಗಳ ಪಟ್ಟಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ.
6. OTP ಗಾಗಿ ನನ್ನ ಬಳಿ ಮೊಬೈಲ್ ಸಂಪರ್ಕವಿಲ್ಲ. ನನ್ನ ಇ-ಫೈಲಿಂಗ್ ಖಾತೆಗೆ ನಾನು ಹೇಗೆ ಲಾಗಿನ್ ಮಾಡಬಹುದು?
ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ನಿಮಗೆ OTP ಯ ಅಗತ್ಯವಿರುವುದಿಲ್ಲ. "ಇ-ಫೈಲಿಂಗ್ ವಾಲ್ಟ್ ಹೆಚ್ಚಿನ ಭದ್ರತೆ" ಸೇವೆಯಿಂದ ನೀವು ಯಾವುದೇ ಹೆಚ್ಚಿನ ಭದ್ರತಾ ಆಯ್ಕೆಯನ್ನು ಸಕ್ರಿಯಗೊಳಿಸಿದ್ದರೆ, 2ನೇ ಅಂಶದ ದೃಢೀಕರಣಕ್ಕಾಗಿ ಕೆಳಗಿನ ಯಾವುದೇ ವಿಧಾನವನ್ನುಆರಿಸಿದರೆ ನೀವು ಕೆಳಗಿನ ವಿಧಾನಗಳೊಂದಿಗೆ ಲಾಗಿನ್ ಮಾಡಬಹುದು:
- ಬ್ಯಾಂಕ್ ಖಾತೆ EVC (ನೀವು ಈಗಾಗಲೇ EVC ಹೊಂದಿದ್ದರೆ), ಅಥವಾ
- ಡಿಮ್ಯಾಟ್ ಖಾತೆ EVC (ನೀವು ಈಗಾಗಲೇ EVC ಹೊಂದಿದ್ದರೆ), ಅಥವಾ
- DSC ಅಥವಾ
- ಅಸ್ತಿತ್ವದಲ್ಲಿರುವ ಆಧಾರ್ OTP.
7. ಇ - ಫೈಲಿಂಗ್ ವಾಲ್ಟ್ ಎಂದರೇನು? ಇದು ನನಗೆ ಹೇಗೆ ಸಹಾಯ ಮಾಡುತ್ತದೆ?
ಇ-ಫೈಲಿಂಗ್ ವಾಲ್ಟ್ ಆಯ್ಕೆಯು ಲಾಗಿನ್ ಮತ್ತು ಪಾಸ್‌ವರ್ಡ್ ಮರುಹೊಂದಿಸಲು ಬಹು-ಅಂಶದ ದೃಢೀಕರಣವನ್ನು ಒದಗಿಸುತ್ತದೆ. ಲಾಗಿನ್ ಮಾಡುವಾಗ ಹೆಚ್ಚುವರಿ ದೃಢೀಕರಣದ ಹಂತವನ್ನು ಒದಗಿಸಲು ನೀವು ಬ್ಯಾಂಕ್ ಖಾತೆ EVC, ಡಿಮ್ಯಾಟ್ ಖಾತೆ EVC ಮತ್ತು DSC ಎಂಬಂತಹ ಅನೇಕ ಆಯ್ಕೆಗಳಿಂದ ಆರಿಸಬಹುದು.
8. ಹೊಸ ಪೋರ್ಟಲ್‌ನಲ್ಲಿ ಇರುವ ಲಾಗಿನ್ ಸೇವೆಯ ಸುಧಾರಣೆಗಳು ಯಾವುವು?
ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ, ಅಡಚಣೆ ಮುಕ್ತ ಲಾಗಿನ್ ಅನ್ನು ಖಚಿತಪಡಿಸಿಕೊಳ್ಳಲು ಕ್ಯಾಪ್ಚಾವನ್ನು ತೆಗೆದುಹಾಕಲಾಗಿದೆ. ಫಿಶಿಂಗ್ ವೆಬ್‌ಸೈಟ್‌ಗಳಿಂದ ರಕ್ಷಿಸಲು ಸುರಕ್ಷಿತ ಪ್ರವೇಶ ಸಂದೇಶವನ್ನು ಸೇರಿಸಲಾಗಿದೆ. ಹೆಚ್ಚುವರಿಯಾಗಿ, ಇ-ವಾಲ್ಟ್ ಭದ್ರತೆಯನ್ನು ಬಳಸಿಕೊಂಡು ನೀವು ಬಹು-ಅಂಶದ ದೃಢೀಕರಣವನ್ನು ಹೊಂದಿಸಬಹುದು.
9. ನಾನು ಒಬ್ಬ ವೈಯಕ್ತಿಕ ತೆರಿಗೆ ಪಾವತಿದಾರ. ಲಾಗಿನ್‌ಗೆ ನನ್ನ ಬಳಕೆದಾರ ID ಯಾವುದು?
ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಬಳಕೆದಾರ ID PAN ಆಗಿದೆ.
10. CA, ERI, ಬಾಹ್ಯ ಏಜೆನ್ಸಿ, ITDREIN ಬಳಕೆದಾರರು ಮತ್ತು TIN 2.0 ಬಳಕೆದಾರರಿಗೆ ಬಳಕೆದಾರರ ID ಯಾವುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿದಾಗ ಮೇಲಿನ ಬಳಕೆದಾರರಿಗೆ ಬಳಕೆದಾರ IDಯನ್ನು ರಚಿಸಲಾಗುತ್ತದೆ. ಆಯಾ ಬಳಕೆದಾರರ ID ಗಳು ಹೀಗಿವೆ:
- CA - ARCA ನಂತರ ನೋಂದಣಿ ಸಮಯದಲ್ಲಿ ರಚಿಸಲಾದ 6-ಅಂಕಿಯ ಸಂಖ್ಯೆ
- ERI - ನೋಂದಣಿ ಮಾಡುವ ಸಮಯದಲ್ಲಿ ERIP ಜೊತೆಗೆ 6-ಅಂಕಿಯ ಸಂಖ್ಯೆಯನ್ನು ರಚಿಸಲಾಗಿದೆ
- ಬಾಹ್ಯ ಏಜೆನ್ಸಿ - ನೋಂದಣಿ ಮಾಡುವ ಸಮಯದಲ್ಲಿ EXTA ಜೊತೆಗೆ 6-ಅಂಕಿಯ ಸಂಖ್ಯೆಯನ್ನು ರಚಿಸಲಾಗಿದೆ
- ITDREIN ಬಳಕೆದಾರರು - ನೋಂದಣಿ ಮಾಡುವಾಗ ಬಳಕೆದಾರರ IDಯನ್ನು ರಚಿಸಲಾಗಿದೆ
- TIN2.0 ಬಳಕೆದಾರರು - TINP ನಂತರ ನೋಂದಣಿ ಸಮಯದಲ್ಲಿ ರಚಿಸಲಾದ 6-ಅಂಕಿಯ ಸಂಖ್ಯೆ
11. ನನ್ನ ಇ-ಫೈಲಿಂಗ್ ಖಾತೆಯನ್ನು ಕೆಲವು ಅನಧಿಕೃತ ವ್ಯಕ್ತಿ ಪ್ರವೇಶಿಸಿದ್ದಾರೆಂದು ನಾನು ಭಾವಿಸಿದರೆ, ನಾನು ಏನು ಮಾಡಬಹುದು?
ನಿಮ್ಮ ಇ-ಫೈಲಿಂಗ್ ಖಾತೆಯು ಅನಧಿಕೃತ ರೀತಿಯಲ್ಲಿ ಅಪಾಯಕ್ಕೀಡಾಗಿರಬಹುದು ಅಥವಾ ಪ್ರವೇಶಿಸಿರಬಹುದು ಎಂದು ನೀವು ಭಾವಿಸಿದರೆ, ನೀವು ಸೈಬರ್ ಕ್ರೈಮ್‌ಗೆ ಬಲಿಯಾಗಿರಬಹುದು. ದಯವಿಟ್ಟು ಘಟನೆಯನ್ನು ಮೊದಲ ಹೆಜ್ಜೆಯಾಗಿ ಸಂಬಂಧಪಟ್ಟ ಪೊಲೀಸ್ ಅಥವಾ ಸೈಬರ್-ಸೆಲ್ ಅಧಿಕಾರಿಗಳಿಗೆ ವರದಿ ಮಾಡಿ. https://cybercrime.gov.in ಗೆ ಭೇಟಿ ನೀಡುವ ಮೂಲಕ ಕ್ರಿಮಿನಲ್ ದೂರನ್ನು / FIR ಅನ್ನು ಆನ್‌ಲೈನ್‌ನಲ್ಲಿ ವರದಿ ಮಾಡಬಹುದು/, ಇದು ಭಾರತ ಸರ್ಕಾರದ ಉಪಕ್ರಮವಾಗಿದ್ದು, ಸಂತ್ರಸ್ತರಿಗೆ / ದೂರುದಾರರಿಗೆ ಅನುಕೂಲವಾಗುವಂತೆ ಸೈಬರ್ ಕ್ರೈಮ್ ದೂರುಗಳನ್ನು ಆನ್‌ಲೈನ್‌ನಲ್ಲಿ ವರದಿ ಮಾಡಲು ಅವಕಾಶ ನೀಡುತ್ತದೆ. ಸಂಬಂಧಪಟ್ಟ ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಕೇಳಿದಾಗ ಆದಾಯ ತೆರಿಗೆ ಇಲಾಖೆಯು ಸೂಕ್ತ ಮಾಹಿತಿಯನ್ನು ಸಂಬಂಧಪಟ್ಟ ತನಿಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಸಾಮಾನ್ಯ ಮುನ್ನೆಚ್ಚರಿಕೆಯಾಗಿ, ದಯವಿಟ್ಟು ನಿಮ್ಮ ಲಾಗಿನ್ ರುಜುವಾತುಗಳು ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
12. ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ನನ್ನ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನ ಅಗತ್ಯವಿದೆಯೇ?
ಲಾಗಿನ್‌ನ ಹೆಚ್ಚಿನ ವಿಧಾನಗಳಿಗಾಗಿ, ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ಬಳಕೆದಾರರ ID ಮತ್ತು ಪಾಸ್‌ವರ್ಡ್‌ನ ಅಗತ್ಯವಿದೆ. ನೆಟ್ ಬ್ಯಾಂಕಿಂಗ್‌ನಂತಹ ಸಂದರ್ಭಗಳಲ್ಲಿ, ಬಳಕೆದಾರರ ID ಮತ್ತು ಪಾಸ್‌ವರ್ಡ್ ಅಗತ್ಯವಿಲ್ಲ.
13. ನನ್ನ ಇ-ಫೈಲಿಂಗ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆಕ್ಸೆಸ್ ಇಲ್ಲದಿದ್ದಲ್ಲಿ ನಾನು ಹೊಸ ಪೋರ್ಟಲ್‌ಗೆ ಹೇಗೆ ಲಾಗಿನ್ ಮಾಡಬಹುದು?
ನೀವು ಆಧಾರ್ OTP ಬಳಸಿಕೊಂಡು ಲಾಗಿನ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿಕೊಂಡು ಹೊಸ ಪೋರ್ಟಲ್‌ಗೆ ಲಾಗಿನ್ ಮಾಡಬಹುದು, ನಿಮ್ಮ PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ ಮತ್ತು ಆಧಾರ್ OTP ರಚಿಸಲು ಮತ್ತು ಇ-ಫೈಲಿಂಗ್ ಪೋರ್ಟಲ್ಗೆ ಲಾಗಿನ್ ಮಾಡಲು ನೀವು ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಪ್ರವೇಶಾವಕಾಶ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
14. ನೆಟ್ ಬ್ಯಾಂಕಿಂಗ್ ಲಾಗಿನ್‌ಗಾಗಿ ಹಲವು ಬ್ಯಾಂಕ್ ಖಾತೆಗಳನ್ನು ಬಳಸಬಹುದೇ?
ಇಲ್ಲ, ನೆಟ್ ಬ್ಯಾಂಕಿಂಗ್ ಲಾಗಿನ್‌ಗಾಗಿ ಒಂದು ದೃಢೀಕರಿಸಿದ ಬ್ಯಾಂಕ್ ಖಾತೆಯನ್ನು ಮಾತ್ರ ಸಕ್ರಿಯಗೊಳಿಸಬಹುದು. ಯಾವುದೇ ದೃಢೀಕರಿಸಿದ ಖಾತೆಯನ್ನು ಆಯ್ಕೆ ಮಾಡದಿದ್ದರೆ, ಸಿಸ್ಟಮ್ 'ಪ್ರವೇಶ ನಿರಾಕರಣೆ' ಸಂದೇಶವನ್ನು ತೋರಿಸುತ್ತದೆ.
15. ಪ್ರವೇಶ ನಿರಾಕರಣೆ ಸಮಸ್ಯೆಯನ್ನು ಪರಿಹರಿಸಲು ನನ್ನ ಪ್ರೊಫೈಲ್‌ನಲ್ಲಿ 'ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್' ಆಯ್ಕೆಯನ್ನು ನಾನು ಹೇಗೆ ಸಕ್ರಿಯಗೊಳಿಸಬಹುದು?
'ಪ್ರವೇಶ ನಿರಾಕರಿಸಲಾಗಿದೆ' ಸಮಸ್ಯೆಗೆ ಸಂಬಂಧಿಸಿದಂತೆ, ದಯವಿಟ್ಟು ನಿಮ್ಮ ಪ್ರೊಫೈಲ್ ವಿಭಾಗದಲ್ಲಿ ನನ್ನ ಬ್ಯಾಂಕ್ ಖಾತೆಯಲ್ಲಿ ನೆಟ್ ಬ್ಯಾಂಕಿಂಗ್ ಆಯ್ಕೆಯ ಮೂಲಕ ಲಾಗಿನ್ ಅನ್ನು ಸಕ್ರಿಯಗೊಳಿಸಿ. ಒಮ್ಮೆ ಸಕ್ರಿಯಗೊಳಿಸಿದ ನಂತರ, ನೀವು ನೆಟ್ ಬ್ಯಾಂಕಿಂಗ್ ವಿಧಾನ ಬಳಸಿ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ.
ನೆಟ್ ಬ್ಯಾಂಕಿಂಗ್ ಲಾಗಿನ್ ಅನ್ನು ಸಕ್ರಿಯಗೊಳಿಸಲು ಪ್ರಕ್ರಿಯೆ ಈ ಕೆಳಗಿನಂತಿದೆ:
- ನಿಮ್ಮ ಖಾತೆಗೆ ಲಾಗಿನ್ ಮಾಡಿ
- ಪ್ರೊಫೈಲ್‌ಗೆ ಹೋಗಿ
- ನನ್ನ ಬ್ಯಾಂಕ್ ಖಾತೆಯನ್ನು ಸೇರಿಸಿ ಆಯ್ಕೆಮಾಡಿ
- ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಆಯ್ಕೆಯನ್ನು ಸಕ್ರಿಯಗೊಳಿಸಿ
16. ನೆಟ್ ಬ್ಯಾಂಕಿಂಗ್‌ಗಾಗಿ ಇ-ವಾಲ್ಟ್ ಹೆಚ್ಚಿನ ಭದ್ರತಾ ಲಾಗಿನ್ ಆಯ್ಕೆಯನ್ನು ಸಕ್ರಿಯಗೊಳಿಸಲು ಪೂರ್ವಾಪೇಕ್ಷಿತಗಳು ಯಾವುವು?
ನೆಟ್ ಬ್ಯಾಂಕಿಂಗ್‌ಗಾಗಿ ಇ-ವಾಲ್ಟ್ ಹೆಚ್ಚಿನ ಭದ್ರತಾ ಲಾಗಿನ್ ಆಯ್ಕೆಯನ್ನು ಸಕ್ರಿಯಗೊಳಿಸಲು, ನೀವು ಮೊದಲು 'ನನ್ನ ಬ್ಯಾಂಕ್ ಖಾತೆ' ಸ್ಕ್ರೀನ್‌ನಲ್ಲಿ ಲಭ್ಯವಿರುವ 'ನೆಟ್ ಬ್ಯಾಂಕಿಂಗ್ ನಾಮನಿರ್ದೇಶನದ ಮೂಲಕ ಲಾಗಿನ್' ಆಯ್ಕೆಯನ್ನು ಸಕ್ರಿಯಗೊಳಿಸಬೇಕು.
17. ನೆಟ್ ಬ್ಯಾಂಕಿಂಗ್‌ಗಾಗಿ ಇ-ವಾಲ್ಟ್ ಹೆಚ್ಚಿನ ಭದ್ರತಾ ಲಾಗಿನ್ ಆಯ್ಕೆಯನ್ನು ಈಗಾಗಲೇ ಸಕ್ರಿಯಗೊಳಿಸಿದರೆ ನಾನು 'ನೆಟ್ ಬ್ಯಾಂಕಿಂಗ್ ನಾಮನಿರ್ದೇಶನದ ಮೂಲಕ ಲಾಗಿನ್' ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರೆ ಏನಾಗುತ್ತದೆ?
ನೀವು "ನೆಟ್ ಬ್ಯಾಂಕಿಂಗ್ ನಾಮನಿರ್ದೇಶನದ ಮೂಲಕ ಲಾಗಿನ್" ಆಯ್ಕೆಯನ್ನು ನಿಷ್ಕ್ರಿಯಗೊಳಿಸುತ್ತಿದ್ದರೆ, ಅದು ನಿಮ್ಮ ನೆಟ್ ಬ್ಯಾಂಕಿಂಗ್ ಲಾಗಿನ್‌ಗೆ ಲಿಂಕ್ ಮಾಡಲಾದ ಸಕ್ರಿಯಗೊಳಿಸಿದ ಭದ್ರತಾ ಲಾಗಿನ್ ವೈಶಿಷ್ಟ್ಯಕ್ಕೆ ಪ್ರವೇಶವನ್ನು ಕಳೆದುಕೊಳ್ಳುತ್ತದೆ. ಒಮ್ಮೆ ನಿಷ್ಕ್ರಿಯಗೊಳಿಸಿದ ನಂತರ, ಈ ವಿಧಾನವನ್ನು ಬಳಸಿಕೊಂಡು ನೀವು ಇನ್ನು ಮುಂದೆ ಪೋರ್ಟಲ್‌ಗೆ ಲಾಗ್ ಇನ್ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ನೀವು ಯಾವುದೇ ಇತರ ಇ-ವಾಲ್ಟ್ ಲಾಗಿನ್ ಆಯ್ಕೆಗಳನ್ನು ಸಕ್ರಿಯಗೊಳಿಸಿದ್ದರೆ, ಅದೇ ಸಕ್ರಿಯವಾಗಿ ಉಳಿಯುತ್ತದೆ.