ನಿಮ್ಮ ಐ.ಟಿ.ಡಿ.ಆರ್.ಇ.ಐ.ಎನ್. ಅನ್ನು ನಿರ್ವಹಿಸಿ - ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ಐ.ಟಿ.ಡಿ.ಆರ್.ಇ.ಐ.ಎನ್. ಎಂದರೇನು?
ಆದಾಯ ತೆರಿಗೆ ಇಲಾಖೆ ವರದಿ ಮಾಡುವ ಘಟಕದ ಗುರುತಿನ ಸಂಖ್ಯೆ (ಐ.ಟಿ.ಡಿ.ಆರ್.ಇ.ಐ.ಎನ್.) ಎನ್ನುವುದು ಆದಾಯ ತೆರಿಗೆ ಇಲಾಖೆ (ಐ.ಟಿ.ಡಿ.) ವರದಿ ಮಾಡುವ ಘಟಕಕ್ಕೆ ನಿಗದಿಪಡಿಸಿದ ಗುರುತಿನ ಸಂಖ್ಯೆಯಾಗಿದೆ. ಐ.ಟಿ.ಡಿ.ಆರ್.ಇ.ಐ.ಎನ್. ಅನ್ನು ರಚಿಸಿದ ನಂತರ ಮತ್ತು ರಚನೆಗೊಂಡ ಐ.ಟಿ.ಡಿ.ಆರ್.ಇ.ಐ.ಎನ್.ಗೆ ವಿರುದ್ಧವಾಗಿ ಅಧಿಕೃತ ವ್ಯಕ್ತಿಯನ್ನು ಸೇರಿಸಿದ ನಂತರ, ಅಧಿಕೃತ ವ್ಯಕ್ತಿಯು ಫಾರ್ಮ್ 15CC ಮತ್ತು ಫಾರ್ಮ್ V ಅನ್ನು ಅಪ್‌ಲೋಡ್ ಮಾಡಬಹುದು ಮತ್ತು/ಅಥವಾ ನೋಡಬಹುದು.
2. ಫಾರ್ಮ್ 15CC ಎಂದರೇನು? ಅದನ್ನು ಯಾರು ಸಲ್ಲಿಸಬೇಕು?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 195(6)ರ ಪ್ರಕಾರ, ಹಣಕಾಸು ವರ್ಷದ ತ್ರೈಮಾಸಿಕದಲ್ಲಿನ ಹಣದ ರವಾನೆಗಳಿಗೆ ಸಂಬಂಧಿಸಿದಂತೆ ಅಧಿಕೃತ ವ್ಯಕ್ತಿಯು ತ್ರೈಮಾಸಿಕ ಸ್ಟೇಟ್‌ಮೆಂಟ್‌ಗಳನ್ನು ಫಾರ್ಮ್ 15CC ಯಲ್ಲಿ ನೀಡಬೇಕಾಗುತ್ತದೆ.
ವರದಿ ಮಾಡುವ ಘಟಕದ ಅಧಿಕೃತ ವ್ಯಕ್ತಿಯು ವರದಿ ಮಾಡುವ ಘಟಕದಿಂದ ರಚಿಸಿದ ಐ.ಟಿ.ಡಿ.ಆರ್.ಇ.ಐ.ಎನ್.ಗೆ ಮ್ಯಾಪ್ ಮಾಡಿದ ನಂತರ, ಅಧಿಕೃತ ವ್ಯಕ್ತಿಯು ಐ.ಟಿ.ಡಿ.ಆರ್.ಇ.ಐ.ಎನ್., ಪ್ಯಾನ್ ಮತ್ತು ಪಾಸ್‌ವರ್ಡ್‌ನೊಂದಿಗೆ ಪೋರ್ಟಲ್‌ಗೆ ಲಾಗಿನ್ ಆಗಬೇಕು ಮತ್ತು ಫಾರ್ಮ್ 15CC ಅನ್ನು ಸಲ್ಲಿಸಬೇಕು.
3. ಫಾರ್ಮ್ V ಎಂದರೇನು? ಅದನ್ನು ಯಾರು ಸಲ್ಲಿಸಬೇಕು?
ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಠೇವಣಿ ಯೋಜನೆ (ಪಿ.ಎಂ.ಜಿ.ಕೆ.), 2016ರ ಪ್ರಕಾರ, ಅಧಿಕೃತ ಬ್ಯಾಂಕುಗಳು ಫಾರ್ಮ್ V ರಲ್ಲಿ ಪಿ.ಎಂ.ಜಿ.ಕೆ. ಅಡಿಯಲ್ಲಿ ಮಾಡಿದ ಠೇವಣಿಗಳ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಬೇಕು.
4. ನಿಯೋಜಿತ ನಿರ್ದೇಶಕರು ಮತ್ತು ಪ್ರಧಾನ ಅಧಿಕಾರಿಯು ಒಬ್ಬರೇ ಆಗಿರಬಹುದೇ?
ಹೌದು. ನಿಯೋಜಿತ ನಿರ್ದೇಶಕರು ಮತ್ತು ಪ್ರಧಾನ ಅಧಿಕಾರಿಯ ಪಾತ್ರವನ್ನು ನೀವು ಒಂದೇ ಅಧಿಕೃತ ವ್ಯಕ್ತಿಗೆ ನಿಯೋಜಿಸಬಹುದು.
5. ಒಂದು ವರದಿ ಮಾಡುವ ಘಟಕವು ಎಷ್ಟು ಐ.ಟಿ.ಡಿ.ಆರ್.ಇ.ಐ.ಎನ್.ಗಳನ್ನು ಪಡೆಯಬಹುದು?
ಫಾರ್ಮ್ ಪ್ರಕಾರ ಮತ್ತು ವರದಿ ಮಾಡುವ ಘಟಕದ ಪ್ರತಿಯೊಂದು ವಿಶಿಷ್ಟ ಸಂಯೋಜನೆಗಾಗಿ, ಒಂದು ವಿಶಿಷ್ಟ ಐ.ಟಿ.ಡಿ.ಆರ್.ಇ.ಐ.ಎನ್. ಅನ್ನು ರಚಿಸಲಾಗುತ್ತದೆ.
6. ಐ.ಟಿ.ಡಿ.ಆರ್.ಇ.ಐ.ಎನ್. ಅನ್ನು ನಾನು ಹೇಗೆ ರಚಿಸಬಹುದು ಮತ್ತು ವರದಿ ಮಾಡುವ ಘಟಕದ ಅಧಿಕೃತ ವ್ಯಕ್ತಿಯನ್ನು ಸಕ್ರಿಯಗೊಳಿಸಬಹುದು?
ಫಾರ್ಮ್ 15CC/ಫಾರ್ಮ್ V ಅನ್ನು ಸಲ್ಲಿಸಲು ಅಗತ್ಯವಿರುವ ವರದಿ ಮಾಡುವ ಘಟಕವು ಐ.ಟಿ.ಡಿ.ಆರ್.ಇ.ಐ.ಎನ್. (ಆದಾಯ ತೆರಿಗೆ ಇಲಾಖೆ ವರದಿ ಮಾಡುವ ಘಟಕ ಗುರುತಿನ ಸಂಖ್ಯೆ) ಅನ್ನು ರಚಿಸಬಹುದು ಮತ್ತು ಹಾಗೆ ರಚಿಸಿದ ಐ.ಟಿ.ಡಿ.ಆರ್.ಇ.ಐ.ಎನ್. ಗೆ ಸಂಬಂಧಿಸಿದಂತೆ ಫಾರ್ಮ್ 15CC ಮತ್ತು ಫಾರ್ಮ್ V ಅನ್ನು ಅಪ್‌ಲೋಡ್ ಮಾಡಲು ಯಾವುದೇ ಅಧಿಕೃತ ವ್ಯಕ್ತಿಗೆ ಅನುವು ಮಾಡಿಕೊಡುತ್ತದೆ. ಪ್ರಕ್ರಿಯೆಗಾಗಿ ನೀವು ಐ.ಟಿ.ಡಿ.ಆರ್.ಇ.ಐ.ಎನ್. ನಿರ್ವಹಿಸಿ (ಬಳಕೆದಾರ ಕೈಪಿಡಿ) ಅನ್ನು ರೆಫರ್ ಮಾಡಬಹುದು.
7. ಅಧಿಕೃತ ವ್ಯಕ್ತಿಯನ್ನು ನಿಷ್ಕ್ರಿಯ / ಸಕ್ರಿಯಗೊಳಿಸಬಹುದೇ?
ಹೌದು. ಈಗಾಗಲೇ ಸಕ್ರಿಯಗೊಳಿಸಲಾದ ಅಧಿಕೃತ ವ್ಯಕ್ತಿಯನ್ನು ಬಳಕೆದಾರರು (ವರದಿ ಮಾಡುವ ಘಟಕ) ನಿಷ್ಕ್ರಿಯಗೊಳಿಸಬಹುದು. ಅಂತೆಯೇ, ಸೇರಿಸಲಾದ ಆದರೆ ಇನ್ನೂ ಸಕ್ರಿಯವಾಗಿರದ ಅಧಿಕೃತ ವ್ಯಕ್ತಿಯನ್ನು ಬಳಕೆದಾರರು (ವರದಿ ಮಾಡುವ ಘಟಕ) ಸಕ್ರಿಯಗೊಳಿಸಬಹುದು.
8. ಐ.ಟಿ.ಡಿ.ಆರ್.ಇ.ಐ.ಎನ್. ಅನ್ನು ಬಳಸಿ ಯಾವ ಫಾರ್ಮ್‌ಗಳನ್ನು ಸಲ್ಲಿಸಬೇಕು/ಅಪ್‌ಲೋಡ್ ಮಾಡಬೇಕು?
ಐ.ಟಿ.ಡಿ.ಆರ್.ಇ.ಐ.ಎನ್. ನಿರ್ವಹಿಸಿ ಸೇವೆಯನ್ನು ಬಳಸಿಕೊಂಡು ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಫಾರ್ಮ್ 15 CCಮತ್ತು ಫಾರ್ಮ್ V ಅನ್ನು ಅಪ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು.
ಏಪ್ರಿಲ್, 2018 ರಿಂದ ಜಾರಿಗೆ ಬರುವಂತೆ, ಫಾರ್ಮ್ 61, ಫಾರ್ಮ್ 61A ಮತ್ತು ಫಾರ್ಮ್ 61B ಗಾಗಿ ನೋಂದಣಿ ಮತ್ತು ಸ್ಟೇಟ್‌ಮೆಂಟ್ ಅಪ್‌ಲೋಡ್ ಸೌಲಭ್ಯಗಳನ್ನು ಪ್ರಾಜೆಕ್ಟ್ ಇನ್ಸೈಟ್ ಅಡಿಯಲ್ಲಿ ವರದಿ ಮಾಡುವ ಪೋರ್ಟಲ್‌ಗೆ ಬದಲಾಯಿಸಲಾಗಿದೆ.
9. ನಾನು ಒಬ್ಬರಿಗಿಂತ ಹೆಚ್ಚು ಅಧಿಕೃತ ವ್ಯಕ್ತಿಯನ್ನು ಸೇರಿಸಬಹುದೇ? ಒಬ್ಬರಿಗಿಂತ ಹೆಚ್ಚು ಅಧಿಕೃತ ವ್ಯಕ್ತಿಯನ್ನು ಒಂದೇ ಸಮಯದಲ್ಲಿ ಸಕ್ರಿಯಗೊಳಿಸಬಹುದೇ?
ಹೌದು. ಒಂದು ಫಾರ್ಮ್‌ಗಾಗಿ ನೀವು ಒಬ್ಬರಿಗಿಂತ ಹೆಚ್ಚು ಅಧಿಕೃತ ವ್ಯಕ್ತಿಗಳ ವಿವರಗಳನ್ನು ಸೇರಿಸಬಹುದು. ಆದರೂ, ಒಂದು ಸಮಯದಲ್ಲಿ, ಒಂದು ನಿರ್ದಿಷ್ಟ ಫಾರ್ಮ್‌ಗೆ ಒಬ್ಬ ಅಧಿಕೃತ ವ್ಯಕ್ತಿಯನ್ನು ಮಾತ್ರ ಸಕ್ರಿಯಗೊಳಿಸಬಹುದು. ಹೊಸ ಅಧಿಕೃತ ವ್ಯಕ್ತಿಯನ್ನು ಯಶಸ್ವಿಯಾಗಿ ಸೇರಿಸಿದ ನಂತರ, ಈ ಹಿಂದೆ ಸಕ್ರಿಯಗೊಳಿಸಲಾದ ಅಧಿಕೃತ ವ್ಯಕ್ತಿಯ ಸ್ಟೇಟಸ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.