Do not have an account?
Already have an account?

1. ಹಲವು ಡಿಮ್ಯಾಟ್ ಖಾತೆಗಳಿಗೆ EVC ಅನ್ನು ನಾನು ಸಕ್ರಿಯಗೊಳಿಸಬಹುದೇ?
ಇಲ್ಲ. ಯಾವುದೇ ಸಮಯದಲ್ಲಿ ಕೇವಲ ಒಂದು ಡಿಮ್ಯಾಟ್ ಖಾತೆಗೆ EVCಯನ್ನು ಸಕ್ರಿಯಗೊಳಿಸಬಹುದು. ನೀವು ಮತ್ತೊಂದು ಡಿಮ್ಯಾಟ್ ಖಾತೆಗೆ EVCಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಿದರೆ, ಅಸ್ತಿತ್ವದಲ್ಲಿರುವ ಖಾತೆಗೆ EVC ಆಯ್ಕೆಯನ್ನು ನಿಷ್ಕ್ರಿಯಗೊಳಿಸುವ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ. ಅಸ್ತಿತ್ವದಲ್ಲಿರುವ ಖಾತೆಯಿಂದ EVC ಆಯ್ಕೆಯನ್ನು ನೀವು ನಿಷ್ಕ್ರಿಯಗೊಳಿಸಿದ ನಂತರ ನೀವು ಅದನ್ನು ಮತ್ತೊಂದು ಖಾತೆಗೆ ಸಕ್ರಿಯಗೊಳಿಸಬಹುದು.

2. ಡಿಮ್ಯಾಟ್ ಖಾತೆಯನ್ನು ಸೇರಿಸಲು ಪೂರ್ವಾಪೇಕ್ಷಿತಗಳು ಯಾವುವು?
ಡಿಮ್ಯಾಟ್ ಖಾತೆಯನ್ನು ಸೇರಿಸಲು:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೀವು ನೋಂದಾಯಿತ ಬಳಕೆದಾರರಾಗಿರಬೇಕು
  • ನೀವು NSDL ಹೊಂದಿರುವ ಮಾನ್ಯ ಡಿಮ್ಯಾಟ್ ಖಾತೆ ಅಥವಾ PAN ಜೊತೆಗೆ ಲಿಂಕ್ ಮಾಡಲಾದ CDSL ಹೊಂದಿರಬೇಕು
  • NSDL ಡಿಪಾಸಿಟರಿ ವಿಧಕ್ಕೆ, ನೀವು DP ID ಮತ್ತು ಗ್ರಾಹಕರ ID ಯನ್ನು ಹೊಂದಿರಲೇಬೇಕು
  • CSDL ಡಿಪಾಸಿಟರಿ ವಿಧಕ್ಕೆ, ನೀವು ಡಿಮ್ಯಾಟ್ ಖಾತೆ ಸಂಖ್ಯೆಯನ್ನು ಹೊಂದಿರಲೇಬೇಕು
  • OTP ಸಂಖ್ಯೆಯನ್ನು ಸ್ವೀಕರಿಸಲು ನೀವು ಮಾನ್ಯವಾದ ಮೊಬೈಲ್ ಸಂಖ್ಯೆ ಅಥವಾ ಡಿಮ್ಯಾಟ್ ಖಾತೆಯೊಂದಿಗೆ ಲಿಂಕ್ ಮಾಡಿದ ಇಮೇಲ್ ID ಯನ್ನು ಹೊಂದಿರಬೇಕು

3. ಈಗಾಗಲೇ ಡಿಪಾಸಿಟರಿನಿಂದ ಪರಿಶೀಲಿಸಲ್ಪಟ್ಟ, ಡಿಮ್ಯಾಟ್ ಸಂಪರ್ಕ ವಿವರಗಳೊಂದಿಗೆ ಲಿಂಕ್ ಮಾಡಿದ ನನ್ನ ಮೊಬೈಲ್ ಸಂಖ್ಯೆ/ಇಮೇಲ್ ID ಯನ್ನು ಬದಲಿಸಿದರೆ ಏನಾಗುತ್ತದೆ?
ಅಂತಹ ಸಂದರ್ಭದಲ್ಲಿ, ನಿಮ್ಮ ಸೇರಿಸಿದ ಡಿಮ್ಯಾಟ್ ಖಾತೆಗಳ ಪೇಜ್‌ನಲ್ಲಿ ಸಂಬಂಧಿತ ಮೊಬೈಲ್ ನಂಬರ್/ಇಮೇಲ್ ID ಮುಂದೆ ! ಎಚ್ಚರಿಕೆ ಚಿಹ್ನೆ. ನಿಮ್ಮ ವಿವರಗಳನ್ನು ಡಿಪಾಸಿಟರಿಯೊಂದಿಗೆ ನೋಂದಾಯಿಸಿದ ವಿವರಗಳ ಜೊತೆ ಹೊಂದಿಸಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ಅಪ್ಡೇಟ್ ಮಾಡುವಂತೆ ನಿಮಗೆ ಸಲಹೆ ನೀಡಲಾಗುತ್ತದೆ.

4. ನನ್ನ ಡಿಮ್ಯಾಟ್‌ ಖಾತೆಯಲ್ಲಿ ಪರಿಶೀಲನೆ ವಿಫಲವಾಗಿದೆ ಎಂದು ಹೇಳಿದರೆ ನಾನು ಏನು ಮಾಡಬೇಕು?
ಪರಿಶೀಲನೆ ವಿಫಲವಾದರೆ, ತೆಗೆದುಕೊಳ್ಳಬೇಕಾದ ಕ್ರಮದೊಂದಿಗೆ ವಿಫಲವಾದ ಕಾರಣವಿರುವ ಸಂದೇಶವು ಸ್ಕ್ರೀನ್ ಮೇಲೆ ಕಾಣಿಸುತ್ತದೆ. ನೀವು ವಿವರಗಳನ್ನು ಮರು - ಪರಿಶೀಲಿಸಬಹುದು, ಅಪ್ಡೇಟ್ ಮಾಡಬಹುದು ಮತ್ತು ಪುನಃ ವಿನಂತಿಯನ್ನು ಸಲ್ಲಿಸಬಹುದು.

5. ಡಿಮ್ಯಾಟ್‌ ಖಾತೆಯಲ್ಲಿನ ಹೆಸರು ನನ್ನ PAN‌ನ ಹೆಸರಿನೊಂದಿಗೆ ಹೊಂದಿಕೆಯಾಗುತ್ತಿಲ್ಲ ಅದರಿಂದ ನನ್ನ ಡಿಮ್ಯಾಟ್‌ ಖಾತೆಯನ್ನು ದೃಢೀಕರಿಸಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
ಒಂದು ವೇಳೆ ಹೆಸರು ಹೊಂದಾಣಿಕೆಯಾಗದಿದ್ದರೆ, PAN‌ ಪ್ರಕಾರ ಹೆಸರನ್ನು ಅಪ್ಡೇಟ್ ಮಾಡಲು ಡಿಪಾಸಿಟರಿಯನ್ನು ಸಂಪರ್ಕಿಸಿ. ಅಪ್ಡೇಟ್ ಮಾಡಿದ ನಂತರ, ನನ್ನ ಡಿಮ್ಯಾಟ್‌ ಖಾತೆಯನ್ನು ಮತ್ತೆ- ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ, ವಿವರಗಳನ್ನು ಅಪ್ಡೇಟ್ ಮಾಡಿ ಮತ್ತು ಮೌಲ್ಯೀಕರಣಕ್ಕಾಗಿ ವಿನಂತಿಯನ್ನು ಸಲ್ಲಿಸಿ.

6. ಆದಾಯ ತೆರಿಗೆ ಪೋರ್ಟಲ್ ಮೂಲಕ ನನ್ನ ಡಿಮ್ಯಾಟ್ ಖಾತೆಯನ್ನು ಸಕ್ರಿಯಗೊಳಿಸುವ ಉದ್ದೇಶವೇನು?
ನಿಮ್ಮ ಡಿಮ್ಯಾಟ್ ಖಾತೆಯನ್ನು ನೀವು ಸಕ್ರಿಯಗೊಳಿಸಿದರೆ, ಇದನ್ನು ನೀವು ರಿಟರ್ನ್ಸ್/ಫಾರ್ಮ್‌ಗಳನ್ನು ಇ-ಪರಿಶೀಲನೆಗಳು, ಇ-ನಡಾವಳಿಗಳು, ಮರುಪಾವತಿ ಮರು-ಹಂಚಿಕೆ, ಪಾಸ್‌ವರ್ಡ್ ಮರುಹೊಂದಿಸಲು EVC ರಚಿಸಲು ಮತ್ತು ನಿಮ್ಮ ಡಿಮ್ಯಾಟ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಪರಿಶೀಲಿಸಿದ ಮೊಬೈಲ್ ಸಂಖ್ಯೆ/ಇಮೇಲ್ ID ಯಲ್ಲಿ ಕಳುಹಿಸಿದ OTP ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಸುರಕ್ಷಿತ ಲಾಗಿನ್ ಮಾಡಲು ಬಳಸಬಹುದು.

7. ಇ-ಫೈಲಿಂಗ್ ಪೋರ್ಟಲ್‌ನಲ್ಲಿರುವ ನನ್ನ ಸಂಪರ್ಕ ವಿವರಗಳು ನನ್ನ ಡಿಮ್ಯಾಟ್ ಖಾತೆಯೊಂದಿಗೆ ಲಿಂಕ್ ಮಾಡಲಾದ ನನ್ನ ಸಂಪರ್ಕ ವಿವರಗಳಿಗಿಂತ ಭಿನ್ನವಾಗಿವೆ. ಅದೇ ಸಂಪರ್ಕ ವಿವರಗಳನ್ನು ನಾನು ಹೊಂದಿರುವುದು ಕಡ್ಡಾಯವೇ?
ಇಲ್ಲ. ನಿಮ್ಮ ಡಿಮ್ಯಾಟ್ ಖಾತೆಗೆ ಲಿಂಕ್ ಮಾಡಿದ ಸಂಪರ್ಕದ ವಿವರಗಳನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಸಂಪರ್ಕದ ವಿವರಗಳೊಂದಿಗೆ ಹೊಂದಿಕೆ ಮಾಡುವುದಕ್ಕಾಗಿ ಅಪ್‌ಡೇಟ್ ಮಾಡುವುದು ಕಡ್ಡಾಯವಲ್ಲ.

8. ನನ್ನ ಡಿಮ್ಯಾಟ್ ಖಾತೆಗಾಗಿ EVC ಅನ್ನು ಸಕ್ರಿಯಗೊಳಿಸಿದ ನಂತರ ನನ್ನ ಇ - ಫೈಲಿಂಗ್ ಖಾತೆಯ ಪ್ರಾಥಮಿಕ ಸಂಪರ್ಕ ವಿವರಗಳನ್ನು ನಾನು ಬದಲಿಸಬಹುದೇ ಅಥವಾ ಅಪ್ದೇಟ್ ಮಾಡಬಹುದೇ?
ಹೌದು, EVC ಯನ್ನು ಸಕ್ರಿಯಗೊಳಿಸಿದ ನಂತರ ನಿಮ್ಮ ಪ್ರಾಥಮಿಕ ಸಂಪರ್ಕ ವಿವರಗಳನ್ನು ಬದಲಿಸಬಹುದು. ಪರಿಶೀಲಿಸಿದ ಮತ್ತು ನಿಮ್ಮ ಡಿಮ್ಯಾಟ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ/ಇಮೇಲ್ ID ಯಲ್ಲಿ ನೀವು EVC ಅನ್ನು ಸ್ವೀಕರಿಸುತ್ತೀರಿ.