Do not have an account?
Already have an account?

1. ಅವಲೋಕನ


ಇ-ಫೈಲಿಂಗ್ ಪೋರ್ಟಲ್ ನೋಂದಣಿ ಮಾಡಲು ಮತ್ತು ಪ್ರವೇಶಿಸಲು ಬಯಸುವ ಎಲ್ಲಾ ಕಂಪನಿಗಳಿಗೆ ಈ ಪೂರ್ವ-ಲಾಗಿನ್ ಸೌಲಭ್ಯ ಲಭ್ಯವಿದೆ. ನೋಂದಣಿ ಸೇವೆಯು ಎಲ್ಲಾ ತೆರಿಗೆ ಸಂಬಂಧಿತ ಚಟುವಟಿಕೆಗಳನ್ನು ಪ್ರವೇಶಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

 

  • ಕಂಪನಿಯ ಮಾನ್ಯ ಮತ್ತು ಸಕ್ರಿಯ PAN
  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರಧಾನ ಸಂಪರ್ಕದ PAN ಅನ್ನು ನೋಂದಾಯಿಸಿಕೊಳ್ಳಬೇಕು
  • ನಿಗದಿತ PAN ಗೆ ನೋಂದಾಯಿತ ಪ್ರಧಾನ ಸಂಪರ್ಕದ ಡಿಜಿಟಲ್ ಸಹಿ/ಹಸ್ತಾಕ್ಷರ ಪ್ರಮಾಣಪತ್ರ (DSC)

3. ಹಂತ-ಹಂತದ ಮಾರ್ಗದರ್ಶಿ


ಹಂತ 1: ಇ-ಫೈಲಿಂಗ್ ಪೋರ್ಟಲ್ ಮುಖಪುಟಕ್ಕೆ ಹೋಗಿ, ನೋಂದಣಿ ಕ್ಲಿಕ್ ಮಾಡಿ.

Data responsive


ಹಂತ 2: ತೆರಿಗೆದಾರರ ಹಾಗೆ ನೋಂದಣಿ ಮಾಡಿಎಂದು ಆಯ್ಕೆಮಾಡಿ ಮತ್ತು ಕಂಪನಿಯ PAN ನಮೂದಿಸಿ. ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ. PAN ಈಗಾಗಲೇ ನೋಂದಾಯಿಸಲಾಗಿದೆ ಅಥವಾ ಅಮಾನ್ಯವಾಗಿದೆ ಎಂದಾದರೆ, ದೋಷ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

Data responsive


ಹಂತ3: ಮೂಲ ವಿವರಗಳು ಪೇಜ್‍ನಲ್ಲಿ ಸಂಸ್ಥೆಯ ಹೆಸರು, DOI, ಕಂಪನಿಯ ಪ್ರಕಾರ ಮತ್ತು CIN ನಂತಹ ಎಲ್ಲಾ ಕಡ್ಡಾಯ ವಿವರಗಳನ್ನ ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಹಂತ 4: PAN ಅನ್ನು ದೃಢೀಕರಿಸಿದ ನಂತರ, ಪ್ರಧಾನ ಸಂಪರ್ಕ ವಿವರಗಳು ಪೇಜ್ ಅನ್ನು ಪ್ರದರ್ಶಿಸಲಾಗುತ್ತದೆ. ಪ್ರಾಥಮಿಕ ಮೊಬೈಲ್ ಸಂಖ್ಯೆ, ಪ್ರಾಥಮಿಕ ಇಮೇಲ್ ID ಮತ್ತು ಪ್ರಧಾನ ಸಂಪರ್ಕದ ಅಂಚೆ ವಿಳಾಸದಂತಹಕಡ್ಡಾಯ ವಿವರಗಳನ್ನು ನಮೂದಿಸಿ ಮತ್ತು ಮುಂದುವರಿಯಿರಿ ಎಂದು ಕ್ಲಿಕ್ ಮಾಡಿ.

Data responsive


ಸೂಚನೆ:

  • ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರಧಾನ ಸಂಪರ್ಕದ PAN ನೋಂದಣಿ ಆಗಿದ್ದರೆ ವ್ಯವಸ್ಥೆ ಪರಿಶೀಲಿಸುತ್ತದೆ, ಇಲ್ಲದಿದ್ದರೆ, ಪ್ರಧಾನ ಸಂಪರ್ಕವು ಮೊದಲು PAN ಅನ್ನು ನೋಂದಾಯಿಸಲಾಗಿದೆ ಎನ್ನುವಂತಿರಬೇಕು.
  • ಒದಗಿಸಿದ PAN ಗೆ ಮಾನ್ಯ ಮತ್ತು ಸಕ್ರಿಯ DSC ಅನ್ನು ನೋಂದಾಯಿಸಲಾಗಿದೆ ಎಂದಾದರೆ ವ್ಯವಸ್ಥೆಯು ಪರಿಶೀಲಿಸುತ್ತದೆ. ಇಲ್ಲದಿದ್ದರೆ, ಮೊದಲು PANಗಾಗಿ DSC ಅನ್ನು ನೋಂದಾಯಿಸಲಾಗಿದೆ ಎನ್ನುವಂತಿರಬೇಕು / ನವೀಕರಿಸಬೇಕು.

ಹಂತ 5: ಹಂತ 4 ರಲ್ಲಿ ನಮೂದಿಸಿದ ಹಾಗೆ ಪ್ರಾಥಮಿಕ ಮೊಬೈಲ್ ನಂಬರ್/ಸಂಖ್ಯೆ ಮತ್ತು ಪ್ರಧಾನ ಸಂಪರ್ಕದ ಇಮೇಲ್ IDಗೆ ಎರಡು ಪ್ರತ್ಯೇಕ OTPಗಳನ್ನು ಕಳುಹಿಸಲಾಗಿದೆ. ಮೊಬೈಲ್ ನಂಬರ್/ಸಂಖ್ಯೆ ಮತ್ತು ಇಮೇಲ್ IDಗಳಲ್ಲಿ ಸ್ವೀಕರಿಸಿದ ಎರಡು ಪ್ರತ್ಯೇಕ 6-ಅಂಕಿಯ OTPಗಳನ್ನು ನಮೂದಿಸಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಸೂಚನೆ:

  • OTP 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.
  • ಸರಿಯಾದ OTP ನಮೂದಿಸಲು ನೀವು 3 ಪ್ರಯತ್ನಗಳನ್ನು ಹೊಂದಿದ್ದೀರಿ.
  • ಸ್ಕ್ರೀನ್ ಮೇಲೆ OTP ಮುಕ್ತಾಯ ಕೌಂಟ್‌ಡೌನ್ ಟೈಮರ್ OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂದು ನಿಮಗೆ ತಿಳಿಸುತ್ತದೆ.
  • OTP ಅನ್ನು ಮರುಕಳುಹಿಸಿ ಕ್ಲಿಕ್ ಮಾಡಿದಾಗ, ಹೊಸ OTP ಅನ್ನು ರಚಿಸಿ, ಕಳುಹಿಸಲಾಗುತ್ತದೆ.

ಹಂತ 6: ಅಗತ್ಯವಿದ್ದರೆ, ವಿವರಗಳು ಪರಿಶೀಲಿಸಿಪೇಜ್‍ನಲ್ಲಿ ವಿವರಗಳನ್ನು ತಿದ್ದು/ಸಂಪಾದನೆ ಮಾಡಿ ಮತ್ತು ಖಚಿತಪಡಿಸಿ ಎಂದು ಕ್ಲಿಕ್ ಮಾಡಿ.

Data responsive


ಹಂತ 7: ಪಾಸ್‌ವರ್ಡ್ ಹೊಂದಿಸಿಪೇಜ್‍ನಲ್ಲಿ, ನಿಮ್ಮ ಅಪೇಕ್ಷಿತ ಗುಪ್ತಪದ/ಪಾಸ್ವರ್ಡ್ಅನ್ನುಪಾಸ್‌ವರ್ಡ್ ಹೊಂದಿಸಿ ಮತ್ತು ಪಾಸ್‌ವರ್ಡ್ ಖಚಿತಪಡಿಸಿ ಎರಡೂ ಫೀಲ್ಡ್‌ಗಳಲ್ಲೂ ನಮೂದಿಸಿ. ನಿಮ್ಮ ವೈಯಕ್ತಿಕ ಸಂದೇಶವನ್ನು ಒದಗಿಸಿ ಮತ್ತು ನೋಂದಣಿ ಕ್ಲಿಕ್ ಮಾಡಿ.

Data responsive


ಸೂಚನೆ:

  • ರಿಫ್ರೆಶ್ ಅಥವಾ ಹಿಂದಿರುಗಿ ಆಯ್ಕೆಯನ್ನು ಕ್ಲಿಕ್ ಮಾಡಬೇಡಿ.
  • ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸುವಾಗ, ಪಾಸ್‌ವರ್ಡ್ ನಿಯಮಗಳು ಕುರಿತು ಜಾಗರೂಕರಾಗಿರಿ:
    • ಇದು ಕನಿಷ್ಠ 8 ಅಕ್ಷರಗಳು ಮತ್ತು ಹೆಚ್ಚೆಂದರೆ 14 ಅಕ್ಷರಗಳಾಗಿರಬೇಕು.
    • ಇದರಲ್ಲಿ ದೊಡ್ಡ ಅಕ್ಷರ ಮತ್ತು ಸಣ್ಣ ಅಕ್ಷರಗಳು ಇರಬೇಕು.
    • ಇದು ಒಂದಾದರೂ ಸಂಖ್ಯೆಯನ್ನು ಹೊಂದಿರಬೇಕು.
    • ಇದು ವಿಶೇಷ ಅಕ್ಷರವನ್ನು ಹೊಂದಿರಬೇಕು (ಉದಾ. @#$%).

ಹಂತ 8: ನೀವು ಯಶಸ್ವಿಯಾಗಿ ನೋಂದಾಯಿಸಿದಾಗ, ಲಾಗಿನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಲಾಗಿನ್‌ಗೆ ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive


ಸೂಚನೆ: ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ ಮತ್ತು ಲಭ್ಯವಿರುವ ಎಲ್ಲಾ ಸೇವೆಗಳನ್ನು ಪ್ರವೇಶಿಸಲು ನಿಮ್ಮ ಪ್ರೊಫೈಲ್ ಅನ್ನು ನವೀಕರಿಸಿ.

4. ಸಂಬಂಧಿಸಿದ ವಿಷಯಗಳು