Do not have an account?
Already have an account?

1. ನಾನು ಯಾಕೆ ಕಂಪನಿಯಾಗಿ ನೋಂದಣಿ ಮಾಡಬೇಕು?
ನೋಂದಣಿ ಸೇವೆಯು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಬಳಕೆದಾರರ ಖಾತೆಯನ್ನು ರಚಿಸಲು ಸಹಾಯ ಮಾಡುತ್ತದೆ. ಒಂದು ಕಂಪನಿ ತನ್ನ ITR ಸಲ್ಲಿಸಲು, ತೆರಿಗೆ ಕಡಿತ ವಿವರಗಳನ್ನು ಸಲ್ಲಿಸಲು, ಆದಾಯ ತೆರಿಗೆ ರಿಫಂಡ್ ಸ್ಟೇಟಸ್ ಬಗ್ಗೆ ಮಾಹಿತಿ ಇತ್ಯಾದಿ ಸೇವೆಗಳನ್ನು ಪಡೆಯಲು, ಕಂಪನಿಯನ್ನು ಪೋರ್ಟಲ್‌ನಲ್ಲಿ ನೋಂದಾಯಿಸಬೇಕಾಗಿದೆ. ನೋಂದಣಿ ನಂತರದಲ್ಲಿ ಮಾತ್ರ ಇ-ಫೈಲಿಂಗ್ ಪೋರ್ಟಲ್ ಮೂಲಕ ಎಲ್ಲಾ ತೆರಿಗೆ ಸಂಬಂಧಿತ ಚಟುವಟಿಕೆಗಳು ಟ್ರ್ಯಾಕ್ ಮಾಡಬಹುದು.

2. ಕಂಪನಿ ಹಾಗೆ ನೋಂದಾಯಿಸಿಕೊಳ್ಳಲು ಪೂರ್ವಾಪೇಕ್ಷಿತಗಳು ಯಾವುವು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಕಂಪನಿ ನೋಂದಣಿ ಮಾಡಲು, ಕಂಪನಿಯ ಮಾನ್ಯ ಮತ್ತು ಸಕ್ರಿಯ PAN ಹಾಗೂ ಪ್ರಧಾನ ಸಂಪರ್ಕ ಅಧಿಕಾರಿಯ ನೋಂದಾಯಿತ ಡಿಜಿಟಲ್ ಸಿಗ್ನೇಚರ್ (DSC) ಹೊಂದಿರಬೇಕು. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರಧಾನ ಸಂಪರ್ಕ ಅಧಿಕಾರಿಯ PAN ಅನ್ನು ನೋಂದಾಯಿಸಿಕೊಳ್ಳಬೇಕು.

3. ಪ್ರಧಾನ ಸಂಪರ್ಕ ಅಧಿಕಾರಿ ಎಂದರೆ ಯಾರು?
ಪ್ರಧಾನ ಸಂಪರ್ಕ ಅಧಿಕಾರಿ ಎಂದರೆ, ಕಂಪನಿಯ ಮುಖ್ಯ ಪ್ರತಿನಿಧಿಯ ಹಾಗೆ ಕಾರ್ಯನಿರ್ವಹಿಸುವ ವ್ಯಕ್ತಿ ಆಗಿರುತ್ತಾರೆ. ಸಹಿ ಮಾಡುವ ಅಧಿಕಾರವಿರುವ ವ್ಯಕ್ತಿ ಹಾಗೂ ಕಂಪನಿಯನ್ನು ನಿರ್ಬಂಧದಲ್ಲಿಡುವ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಯನ್ನು ಪ್ರಧಾನ ಸಂಪರ್ಕ ಅಧಿಕಾರಿ ಎಂದು ನಿಯೋಜಿಸಲಾಗುತ್ತದೆ. ಪ್ರಧಾನ ಸಂಪರ್ಕ ಅಧಿಕಾರಿಯು ಕಂಪನಿಗೆ ಸಂಬಂಧಪಟ್ಟ ಎಲ್ಲಾ ಸಂವಹನಗಳನ್ನು (ನೋಟಿಸ್‌ಗಳನ್ನು/ಆದೇಶಗಳನ್ನು ಒಳಗೊಂಡಂತೆ) ಆದಾಯ ತೆರಿಗೆ ಇಲಾಖೆಯಿಂದ ಪಡೆಯುತ್ತಾರೆ. ಪ್ರಧಾನ ಸಂಪರ್ಕ ಅಧಿಕಾರಿಯು ತನ್ನ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಇತರ ವಿವರಗಳನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

4. ನನ್ನ ಕಂಪನಿಯ /ವ್ಯವಹಾರ ಸಂಸ್ಥೆಯ ಪ್ರಧಾನ ಸಂಪರ್ಕ ಅಧಿಕಾರಿಯ ಹತ್ತಿರ ಅವರ PAN ಇಲ್ಲ. ಅವರ ಡಿಜಿಟಲ್ ಸಿಗ್ನೇಚರ್ (DSC) ಪ್ರಮಾಣಪತ್ರವು ದೋಷಪೂರ್ಣ PAN ಜೊತೆಗೆ ಕೂಡಿದೆ. ನಾನು DSC ಅನ್ನು ಅಪ್‌ಲೋಡ್/ನೋಂದಣಿ ಮಾಡಲು ಪ್ರಯತ್ನಿಸಿದಾಗ, PAN ಹೊಂದಾಣಿಕೆಯಾಗಿಲ್ಲ ಎಂಬ ದೋಷವು ಕಾಣುತ್ತದೆ. ಏನು ಮಾಡಬೇಕು?
ಇ-ಫೈಲಿಂಗ್ ಪೋರ್ಟಲ್ ನಲ್ಲಿ, ಡಿಜಿಟಲ್ ಸಿಗ್ನೇಚರ್ (DSC) ಪ್ರಮಾಣಪತ್ರವು ದೋಷಪೂರ್ಣ PAN ಜೊತೆಗೆ ಕೂಡಿದಲ್ಲಿ, ಪ್ರಮಾಣಪತ್ರವನ್ನು ಸ್ವೀಕರಿಸುವುದಿಲ್ಲ. ಈ ಸಂದರ್ಭದಲ್ಲಿ, PAN ಎನ್‌ಕ್ರಿಪ್ಶನ್ ಇಲ್ಲದಿರುವ ಡಿಜಿಟಲ್ ಹಸ್ತಾಕ್ಷರ ಪ್ರಮಾಣಪತ್ರವನ್ನು ಬಳಸಬೇಕು.