1.ಇ-ಪ್ರಕ್ರಿಯೆಗಳು ಎಂದರೇನು?
ಇ-ಪ್ರಕ್ರಿಯೆಗಳು ಎನ್ನುವುದು ಇ-ಫೈಲಿಂಗ್ ಪೋರ್ಟಲ್ ಅನ್ನು ಬಳಸಿಕೊಂಡು ಸಂಪೂರ್ಣ ಪ್ರಕ್ರಿಯೆಗಳನ್ನು ನಡೆಸುವ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಆಗಿದೆ. ಈ ಸೇವೆಯನ್ನು ಬಳಸಿಕೊಂಡು, ಯಾವುದೇ ನೋಂದಾಯಿತ ಬಳಕೆದಾರರು (ಅಥವಾ ಅವರ ಅಧಿಕೃತ ಪ್ರತಿನಿಧಿ) ಆದಾಯ ತೆರಿಗೆ ಇಲಾಖೆ ನೀಡಿದ ಯಾವುದೇ ನೋಟಿಸ್ / ಮಾಹಿತಿ / ಪತ್ರಕ್ಕೆ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು ಮತ್ತು ಸಲ್ಲಿಸಬಹುದು.
2.ಇ-ಪ್ರಕ್ರಿಯೆಗಳ ಪ್ರಯೋಜನಗಳೇನು?
ಇ-ಪ್ರಕ್ರಿಯೆ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಎಲ್ಲಾ ನೋಟಿಸ್‌ಗಳು / ಮಾಹಿತಿಗಳು / ಪತ್ರಗಳಿಗೆ ವಿದ್ಯುನ್ಮಾನವಾಗಿ ಪ್ರತಿಕ್ರಿಯಿಸಲು ಸರಳವಾದ ಮಾರ್ಗವಾಗಿದೆ. ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದ ಕಾರಣ ಇದು ತೆರಿಗೆದಾರರ ಅನುಸರಣೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಕೆಗಳು ಮತ್ತು ದಾಖಲೆಗಳನ್ನು ಟ್ರ್ಯಾಕ್ ಮಾಡುವುದು ಸುಲಭವಾಗಿದೆ.
3. ನನಗೆ ನೀಡಿದ ನೋಟಿಸ್‌ಗೆ ನನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ನಾನು ಪ್ರತಿಕ್ರಿಯೆಯನ್ನು ವೀಕ್ಷಿಸಬಹುದೇ?
ಹೌದು, ನೀವು ಅಥವಾ ನಿಮ್ಮ ಅಧಿಕೃತ ಪ್ರತಿನಿಧಿ ಸಲ್ಲಿಸಿದ ಪ್ರತಿಕ್ರಿಯೆಯನ್ನು ನೀವು ವೀಕ್ಷಿಸಬಹುದು.
4. 143(1)(a) ಸೆಕ್ಷನ್ ಅಡಿಯಲ್ಲಿ ನನಗೆ ನೀಡಲಾದ ಹೊಂದಾಣಿಕೆಯ ಕುರಿತು ನನ್ನ ಪ್ರತಿಕ್ರಿಯೆಯ ವಿರುದ್ಧ ಯಾವುದೇ ಪ್ರಶ್ನೆಯನ್ನು ದಾಖಲಿಸಲಾಗಿದೆಯೇ ಎಂದು ನಾನು ಎಲ್ಲಿ ನೋಡಬಹುದು?
ಇ-ಪ್ರಕ್ರಿಯೆಗಳ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ದಾಖಲಿಸಿರುವ ಪ್ರಶ್ನೆಗಳನ್ನು ನೀವು ವೀಕ್ಷಿಸಬಹುದು.
5. ನನ್ನ ಪ್ರತಿಕ್ರಿಯೆ ಬಟನ್ ಏಕೆ ನಿಷ್ಕ್ರಿಯವಾಗಿದೆ?
ಕೆಳಗಿನ ಕಾರಣಗಳಿಂದಾಗಿ ಪ್ರತಿಕ್ರಿಯೆ ಬಟನ್ ಅನ್ನು ನಿಷ್ಕ್ರಿಯಗೊಳಿಸಿರಬಹುದು
CPC ನೋಟೀಸ್‌ಗಳಿಗಾಗಿ - ಪ್ರತಿಕ್ರಿಯೆಯ ನಿಗದಿತ ದಿನಾಂಕ ಮುಗಿದು ಹೋಗಿದ್ದರೆ
ITBA ನೋಟೀಸ್‌ಗಳಿಗಾಗಿ - ಆದಾಯ ತೆರಿಗೆ ಪ್ರಾಧಿಕಾರವು ಪ್ರಕ್ರಿಯೆಗಳ ಸ್ಥಿತಿಯನ್ನು ಅಂತ್ಯಗೊಳಿಸಿದ್ದರೆ/ನಿರ್ಬಂಧಿಸಿದ್ದರೆ.
6. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಟೀಸಿಗೆ ಪ್ರತಿಕ್ರಿಯಿಸಿದ ನಂತರ ನನ್ನ ಪ್ರತಿಕ್ರಿಯೆಯನ್ನು ನಾನು ತಿದ್ದುಪಡಿ ಮಾಡಬಹುದೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಮ್ಮೆ ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ನೀವು ತಿದ್ದುಪಡಿ ಮಾಡಲು ಸಾಧ್ಯವಿಲ್ಲ.
7.ಇ-ಪ್ರಕ್ರಿಯೆಗಳ ಅಡಿಯಲ್ಲಿ ನಾನು ಯಾವ ನೋಟೀಸ್‌ಗಳಿಗೆ ಪ್ರತಿಕ್ರಿಯಿಸಬಹುದು?
ಆದಾಯ ತೆರಿಗೆ ಇಲಾಖೆ ಮತ್ತು CPC ನೀಡಿದ ಎಲ್ಲಾ ನೋಟಿಸ್‌ಗಳು / ಮಾಹಿತಿಗಳು / ಪತ್ರಗಳು ಇ-ಪ್ರಕ್ರಿಯೆಗಳು ಅಡಿಯಲ್ಲಿ ಲಭ್ಯವಿರುತ್ತವೆ, ಅಲ್ಲಿ ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಟ್ಯಾಚ್ಮೆಂಟ್ ಜೊತೆಗೆ ಪ್ರತಿಕ್ರಿಯೆಯನ್ನು ವೀಕ್ಷಿಸಬಹುದು ಮತ್ತು ಸಲ್ಲಿಸಬಹುದು. ಈ ಸೇವೆಯ ಮೂಲಕ ನೀವು ಈ ಕೆಳಗಿನ ನೋಟಿಸ್‌ಗಳನ್ನು ವೀಕ್ಷಿಸಬಹುದು ಮತ್ತು ಪ್ರತಿಕ್ರಿಯೆಯನ್ನು ಸಲ್ಲಿಸಬಹುದು
- 139(9) ಸೆಕ್ಷನ್ ಅಡಿಯಲ್ಲಿ ದೋಷಪೂರಿತ ನೋಟಿಸ್
- ಸೆಕ್ಷನ್ 143(1)(a)ರ ಅಡಿಯಲ್ಲಿ ಪ್ರಾಥಮಿಕ ಹೊಂದಾಣಿಕೆ
- 154 ಸೆಕ್ಷನ್ ಅಡಿಯಲ್ಲಿ ಸುಯೋ-ಮೋಟೋ ತಿದ್ದುಪಡಿ
- ಆದಾಯ ತೆರಿಗೆ ಅಧಿಕಾರಿಗಳು ನೀಡಿದ ನೋಟಿಸ್
- ಸ್ಪಷ್ಟೀಕರಣ ಸಂವಹನ ವಿನಂತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಾರ್ಗ
ಡ್ಯಾಶ್‌ಬೋರ್ಡ್/ಬಾಕಿಯಿರುವ ಕ್ರಮ/ಇ-ಪ್ರತಿಕ್ರಿಯೆ
8.ಪ್ರತಿಕ್ರಿಯೆ ಸಲ್ಲಿಕೆ ಕ್ರಿಯಾತ್ಮಕತೆಯ ಅಡಿಯಲ್ಲಿ ಅನುಮತಿಸಲಾದ ಮಿತಿಗಿಂತ ಅಟ್ಯಾಚ್ಮೆಂಟ್ಗಳ ಸಂಖ್ಯೆ/ಗಾತ್ರವು ಹೆಚ್ಚಿದೆ, ನಾನು ಏನು ಮಾಡಬೇಕು?
ಒಂದೇ ಅಟ್ಯಾಚ್ಮೆಂಟಿಗೆ ಅನುಮತಿಸುವ ಗರಿಷ್ಠ ಗಾತ್ರ 5 MB. ನೀವು ಅಪ್‌ಲೋಡ್ ಮಾಡಲು 1 ಕ್ಕಿಂತ ಹೆಚ್ಚು ದಾಖಲೆಯನ್ನು ಹೊಂದಿದ್ದರೆ, ಗರಿಷ್ಠ 10 ಸಂಖ್ಯೆಯ ಅಟ್ಯಾಚ್ಮೆಂಟನ್ನು ಆಯ್ಕೆ ಮಾಡಬಹುದು. ಎಲ್ಲಾ ಅಟ್ಯಾಚ್ಮೆಂಟ್ಗಳ ಗರಿಷ್ಠ ಗಾತ್ರವು 50 MB ಗಿಂತ ಹೆಚ್ಚಿರಬಾರದು. ಒಂದು ದಾಖಲೆ ಗಾತ್ರವು ಅನುಮತಿಸಲಾದ ಮಿತಿಯನ್ನು ಮೀರಿದರೆ, ಫೈಲ್ ಗಾತ್ರವನ್ನು ಕಡಿಮೆ ಮಾಡುವ ಮೂಲಕ ನೀವು ದಾಖಲೆಯನ್ನು ಸರಿದೂಗಿಸಬಹುದು.
9. ದೋಷಪೂರಿತ ರಿಟರ್ನ್ ಎಂದರೇನು?
ರಿಟರ್ನ್‌ನಲ್ಲಿನ ಅಥವಾ ಅನುಸೂಚಿಗಳಲ್ಲಿನ ಅಪೂರ್ಣ ಅಥವಾ ಅಸಮಂಜಸ ಮಾಹಿತಿಯ ಕಾರಣದಿಂದಾಗಿ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ರಿಟರ್ನ್ ಅನ್ನು ದೋಷಪೂರಿತವೆಂದು ಪರಿಗಣಿಸಬಹುದು.
10. ನನ್ನ ರಿಟರ್ನ್ ದೋಷಪೂರಿತವಾಗಿದ್ದರೆ ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ ರಿಟರ್ನ್ ದೋಷಪೂರಿತವಾಗಿದ್ದರೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ನೋಂದಾಯಿತ ಇಮೇಲ್ IDಗೆ ಇಮೇಲ್ ಮೂಲಕ ದೋಷಪೂರಿತ ನೋಟಿಸ್ ಅನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(9) ಅಡಿಯಲ್ಲಿ ಕಳುಹಿಸುತ್ತದೆ ಮತ್ತು ಅದನ್ನು ಅದನ್ನು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ ವೀಕ್ಷಿಸಬಹುದು.
11. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸಿದ ನಂತರ ನಾನು ನನ್ನ ಪ್ರತಿಕ್ರಿಯೆಯನ್ನು ನವೀಕರಿಸಬಹುದೇ ಅಥವಾ ಹಿಂಪಡೆಯಬಹುದೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಮ್ಮೆ ಸಲ್ಲಿಸಿದ ನಿಮ್ಮ ಪ್ರತಿಕ್ರಿಯೆಯನ್ನು ನೀವು ನವೀಕರಿಸಲು ಅಥವಾ ಹಿಂಪಡೆಯಲು ಸಾಧ್ಯವಿಲ್ಲ.
12. ನನ್ನ ದೋಷಪೂರಿತ ನೋಟಿಸ್‌ಗೆ ಪ್ರತಿಕ್ರಿಯಿಸಲು ನಾನು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಬಹುದೇ?
ಹೌದು, 139(9) ಸೆಕ್ಷನ್ ಅಡಿಯಲ್ಲಿ ದೋಷಪೂರಿತ ನೋಟಿಸ್‌ಗೆ ಪ್ರತಿಕ್ರಿಯಿಸಲು ನೀವು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಬಹುದು.
13. ITR ಫಾರ್ಮ್‌ನಲ್ಲಿನ ದೋಷವನ್ನು ನಾನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದೇ?
ಹೌದು, ITR ಫಾರ್ಮ್‌ನಲ್ಲಿನ ದೋಷವನ್ನು ಆನ್‌ಲೈನ್‌ನಲ್ಲಿ ಸರಿಪಡಿಸುವ ಮೂಲಕ ನೀವು ಪ್ರತಿಕ್ರಿಯೆಯನ್ನು ಸಲ್ಲಿಸಬಹುದು.
14. ಆದಾಯ ತೆರಿಗೆ ಇಲಾಖೆಯು ಕಳುಹಿಸಿದ ದೋಷಪೂರಿತ ನೋಟಿಸ್‌ಗೆ ನಾನು ಎಷ್ಟು ಸಮಯದ ಒಳಗೆ ಪ್ರತಿಕ್ರಿಯಿಸಬೇಕು?
ನಿಮ್ಮ ರಿಟರ್ನ್ ದೋಷಪೂರಿತವಾಗಿದೆ ಎಂದು ಕಂಡುಬಂದರೆ, ನೀವು ಸಲ್ಲಿಸಿದ ರಿಟರ್ನ್‌ನಲ್ಲಿನ ದೋಷವನ್ನು ತಿದ್ದುಪಡಿ ಮಾಡಲು ನೋಟಿಸ್ ಅನ್ನು ಸ್ವೀಕರಿಸಿದ ದಿನಾಂಕದಿಂದ ಅಥವಾ ನೋಟಿಸ್‌ನಲ್ಲಿ ನಿರ್ದಿಷ್ಟಪಡಿಸಿದ ಸಮಯದ ಅವಧಿಯಂತೆ ನೀವು 15 ದಿನಗಳ ಸಮಯವನ್ನು ಪಡೆಯುತ್ತೀರಿ. ಅಲ್ಲದೇ, ನೀವು ಮುಂದೂಡಿಕೆಯನ್ನು ಕೋರಬಹುದು ಮತ್ತು ವಿಸ್ತರಣೆಗಾಗಿ ವಿನಂತಿಸಬಹುದು.
15. ದೋಷಪೂರಿತ ನೋಟಿಸ್‌ಗೆ ನಾನು ಪ್ರತಿಕ್ರಿಯಿಸದಿದ್ದರೆ ಏನಾಗುತ್ತದೆ?
ನಿಗದಿತ ಅವಧಿಯೊಳಗೆ ದೋಷಯುಕ್ತ ನೋಟಿಸ್‌ಗೆ ನೀವು ಪ್ರತಿಕ್ರಿಯಿಸಲು ವಿಫಲವಾದರೆ, ಆಗ ಆದಾಯ ತೆರಿಗೆ ಕಾಯ್ದೆಯ ಅನುಗುಣವಾಗಿ ಸಂದರ್ಭಾನುಸಾರ ನಿಮ್ಮ ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಬಹುದು ಮತ್ತು ಅದರಿಂದಾಗಿ ದಂಡ, ಬಡ್ಡಿ, ನಷ್ಟಗಳನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಾಗದಿರುವುದು, ನಿರ್ದಿಷ್ಟ ವಿನಾಯತಿಗಳು ನಷ್ಟವಾಗಬಹುದು ಅಥವಾ ಪರಿಗಣಿಸದಿರಬಹುದು.
16. ಸೆಕ್ಷನ್ 139(9) ಅಡಿಯಲ್ಲಿ ದೋಷಪೂರಿತ ರಿಟರ್ನ್‌ಗಳ ಬಗ್ಗೆ ನನಗೆ ನೋಟಿಸ್ ನೀಡಲಾಗಿದೆ. ಆ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ ಅನ್ನು ನಾನು ಹೊಸ ರಿಟರ್ನ್‌ನಂತೆ ಫೈಲ್ ಮಾಡಬಹುದೇ?
ಹೌದು, ನಿರ್ದಿಷ್ಟ ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ರಿಟರ್ನ್ ಸಲ್ಲಿಸಲು ಒದಗಿಸಿದ ಸಮಯವು ಮೀರಿರದಿದ್ದರೆ ನೀವು ರಿಟರ್ನ್ ಅನ್ನು ಹೊಸ/ಪರಿಷ್ಕೃತ ರಿಟರ್ನ್ ಆಗಿ ಫೈಲ್ ಮಾಡಬಹುದು ಅಥವಾ ಪರ್ಯಾಯವಾಗಿ ನೀವು ಸೆಕ್ಷನ್ 139ರ ಅಡಿಯಲ್ಲಿ ನೋಟಿಸ್‌ಗೆ ಪ್ರತಿಕ್ರಿಯಿಸಲು ಆಯ್ಕೆ ಮಾಡಬಹುದು. ಅಲ್ಲದೇ, ಒಮ್ಮೆ ನಿರ್ದಿಷ್ಟ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ ಸಲ್ಲಿಸಲು ಒದಗಿಸಲಾದ ಸಮಯ ಮೀರಿದಲ್ಲಿ, ನೀವು ಹೊಸ / ಪರಿಷ್ಕೃತ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ನೀವು 139(9) ಸೆಕ್ಷನ್ ಅಡಿಯಲ್ಲಿ ಮಾತ್ರ ನೋಟಿಸ್‌ಗೆ ಪ್ರತಿಕ್ರಿಯಿಸಬೇಕಾಗುತ್ತದೆ. ನೀವು ನೋಟಿಸ್‌ಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ, ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಅಥವಾ ಆ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ನೀವು ಯಾವುದೇ ರಿಟರ್ನ್ ಸಲ್ಲಿಸಿಲ್ಲವೆಂದು ಪರಿಗಣಿಸಲಾಗುತ್ತದೆ
17. ಒಂದು ರಿಟರ್ನ್ ಅನ್ನು ದೋಷಪೂರಿತಗೊಳಿಸುವ ಕೆಲವು ಸಾಮಾನ್ಯ ತಪ್ಪುಗಳು ದೋಷಗಳು ಯಾವುವು?
ರಿಟರ್ನ್ ಅನ್ನು ದೋಷಪೂರಿತಗೊಳಿಸುವ ಕೆಲವು ಸಾಮಾನ್ಯ ದೋಷಗಳು ಈ ಕೆಳಗಿನಂತಿವೆ:
- TDS ಗಾಗಿ ಕ್ರೆಡಿಟ್ ಅನ್ನು ಕ್ಲೈಮ್ ಮಾಡಲಾಗಿದೆ ಆದರೆ ತೆರಿಗೆ ಸಂದಾಯಕ್ಕೆ ಅನುಗುಣವಾಗಿರುವ ರಶೀದಿಗಳು/ಆದಾಯ ಘೋಷಿಸುವುದನ್ನು ಕೈ ಬಿಡಲಾಗಿದೆ
- TDS ಗೆ ಕ್ರೆಡಿಟ್ ಅನ್ನು ಕ್ಲೈಮ್ ಮಾಡಲಾಗಿರುವ ಫಾರ್ಮ್ 26AS ನಲ್ಲಿ ತೋರಿಸಿರುವ ಒಟ್ಟು ವರಮಾನಗಳು, ಆದಾಯದ ರಿಟರ್ನ್‌ನಲ್ಲಿ ಎಲ್ಲಾ ಆದಾಯದ ಶೀರ್ಷಿಕೆಯ ಅಡಿಯಲ್ಲಿ ತೋರಿಸಿರುವ ಒಟ್ಟು ವರಮಾನಗಳಿಗಿಂತ ಹೆಚ್ಚಾಗಿವೆ.
- ಒಟ್ಟಾರೆ ಸಮಸ್ತ ಆದಾಯ ಮತ್ತು ಎಲ್ಲಾ ಆದಾಯದ ಶೀರ್ಷಿಕೆಯನ್ನು ಶೂನ್ಯ ಅಥವಾ 0 ಎಂದು ನಮೂದಿಸಲಾಗಿದೆ ಆದರೆ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಹಾಕಲಾಗಿದೆ ಮತ್ತು ಪಾವತಿಸಲಾಗಿದೆ.
- ITR ನಲ್ಲಿ ತೆರಿಗೆದಾರರ ಹೆಸರು PAN ಡೇಟಾಬೇಸ್ ಪ್ರಕಾರ ಹೆಸರಿನೊಂದಿಗೆ ಹೊಂದಿಕೆಯಾಗುವುದಿಲ್ಲ.
- ತೆರಿಗೆದಾರರು ವ್ಯಾಪಾರ ಅಥವಾ ವೃತ್ತಿಯ ಲಾಭಗಳು ಮತ್ತು ಗಳಿಕೆಗಳ ಶೀರ್ಷಿಕೆ ಅಡಿಯಲ್ಲಿ ಆದಾಯವನ್ನು ಹೊಂದಿದ್ದಾರೆ ಆದರೆ ಬ್ಯಾಲೆನ್ಸ್ ಶೀಟ್ ಹಾಗೂ ಲಾಭ ಮತ್ತು ನಷ್ಟದ ಖಾತೆಯನ್ನು ಭರ್ತಿ ಮಾಡಿಲ್ಲ.
18. ಸ್ಪಷ್ಟೀಕರಣ ಸಂವಹನಕ್ಕಾಗಿ ಕೋರಿಕೆ ಎಂದರೇನು?
ರಿಟರ್ನ್‌ನ ಅನುಸೂಚಿ ಅಥವಾ ಅನುಬಂಧಗಳ ಅಡಿಯಲ್ಲಿ ಒದಗಿಸಲಾದ ಮಾಹಿತಿಯು ಸಾಕಷ್ಟಿಲ್ಲದಿದ್ದರೆ ಅಥವಾ ಅಸಮರ್ಪಕವಾಗಿದ್ದರೆ ಮತ್ತು ತೆರಿಗೆದಾರರು ಮಾಡಿದ ಕೆಲವು ಕ್ಲೈಮ್‌ಗಳ ಕುರಿತು ಸ್ಪಷ್ಟೀಕರಣದ ಅಗತ್ಯವಿರುವ ಸಂದರ್ಭಗಳಿದ್ದರೆ, ಸ್ಪಷ್ಟೀಕರಣಕ್ಕಾಗಿ ಕೋರಿಕೆಯ ಸಂವಹನವನ್ನು ತೆರಿಗೆದಾರರಿಗೆ ಕಳುಹಿಸಲಾಗುತ್ತದೆ.
19. ಇ-ಪ್ರಕ್ರಿಯೆ ಸೇವೆಯನ್ನು ಬಳಸಿಕೊಂಡು ಪ್ರತಿಕ್ರಿಯೆಯನ್ನು ವೀಕ್ಷಿಸಲು ಮತ್ತು ಸಲ್ಲಿಸಲು ನಾನು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕೇ?
ಹೌದು, ಇ-ಪ್ರಕ್ರಿಯೆ ಸೇವೆಯನ್ನು ಬಳಸಿಕೊಂಡು ಪ್ರತಿಕ್ರಿಯೆಯನ್ನು ವೀಕ್ಷಿಸಲು ಮತ್ತು ಸಲ್ಲಿಸಲು ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ.
20. ನಾನು ಮಾಡಿದ ಪ್ರತಿಕ್ರಿಯೆ / ಸಲ್ಲಿಕೆಯನ್ನು ಇ-ಪರಿಶೀಲಿಸಬೇಕೇ?
ಇಲ್ಲ, ನೀವು ಸಲ್ಲಿಸಿದ ಪ್ರತಿಕ್ರಿಯೆಯನ್ನು ನೀವು ಇ-ಪರಿಶೀಲಿಸುವ ಅಗತ್ಯವಿಲ್ಲ.
21. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡದೆಯೇ ನಾನು ಸ್ಪಷ್ಟೀಕರಣದ ಕೋರಿಕೆಯ ನೋಟಿಸ್‌ಗೆ ಪ್ರತಿಕ್ರಿಯಿಸಬಹುದೇ?
ಇಲ್ಲ, ಸ್ಪಷ್ಟೀಕರಣ ಸಂವಹನಕ್ಕಾಗಿ ಕೋರಿಕೆಗೆ ಪ್ರತಿಕ್ರಿಯಿಸಲು ನೀವು ಲಾಗ್ ಇನ್ ಮಾಡಬೇಕಾಗುತ್ತದೆ. ನೋಟಿಸ್ ಅನ್ನು ವೀಕ್ಷಿಸಲು ಅಥವಾ ನಿಮಗೆ ನೀಡಿದ ನೋಟಿಸ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
22. ಆದಾಯ ತೆರಿಗೆ ಪ್ರಾಧಿಕಾರವು ನನಗೆ ನೀಡಿದ ನೋಟೀಸ್‌ಗಳಿಗೆ ಇ-ಪ್ರತಿಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ನನ್ನ ಪರವಾಗಿ ಬೇರೆ ಯಾರಾದರೂ ಪ್ರತಿಕ್ರಿಯಿಸಬಹುದೇ?
ಹೌದು, ಇ-ಪ್ರತಿಕ್ರಿಯೆಗಳ ಸೇವೆಯನ್ನು ಬಳಸಿಕೊಂಡು ನಿಮ್ಮ ಪರವಾಗಿ ನೋಟೀಸ್‌ಗೆ ಪ್ರತಿಕ್ರಿಯಿಸಲು ನೀವು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದು.
23. ನಾನು ಈಗಾಗಲೇ ಸೇರಿಸಿದ / ಅಸ್ತಿತ್ವದಲ್ಲಿರುವ ಅಧಿಕೃತ ಪ್ರತಿನಿಧಿಯನ್ನು ತೆಗೆದುಹಾಕಬಹುದೇ?
ಹೌದು, ನಿಮ್ಮಿಂದ ಅಧಿಕೃತಗೊಂಡ ಪ್ರತಿನಿಧಿಯನ್ನು ನೀವು ತೆಗೆದುಹಾಕಬಹುದು ಅಥವಾ ರದ್ದುಗೊಳಿಸಬಹುದು.
24. ನನಗೆ ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಲು ನಾನು ಇಬ್ಬರು ಅಧಿಕೃತ ಪ್ರತಿನಿಧಿಗಳನ್ನು ಸೇರಿಸಬಹುದೇ?
ಇಲ್ಲ, ನೀವು ಒಂದು ಪ್ರಕ್ರಿಯೆಗಾಗಿ ಏಕಕಾಲದಲ್ಲಿ ಒಬ್ಬ ಅಧಿಕೃತ ಪ್ರತಿನಿಧಿಯನ್ನು ಮಾತ್ರ ಸಕ್ರಿಯವಾಗಿರಿಸಿಕೊಳ್ಳಬಹುದು.
25. ನಾನು ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಿದ್ದೇನೆ. ನನಗೆ ನೀಡಿದ ಸ್ಪಷ್ಟೀಕರಣ ಸಂವಹನಕ್ಕಾಗಿ ಕೋರಿಕೆಗೆ ನಾನು ಇನ್ನೂ ಪ್ರತಿಕ್ರಿಯಿಸಬೇಕೇ?
ಇಲ್ಲ, ಅದೇ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ನೀವು ಈಗಾಗಲೇ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಿದ್ದರೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಅನುಮತಿಸಲಾಗುವುದಿಲ್ಲ. 'ಈ ನೋಟಿಸ್‌ಗೆ ವಿರುದ್ಧ ಪರಿಷ್ಕೃತ ರಿಟರ್ನ್ ಅನ್ನು ಸಲ್ಲಿಸಲಾಗಿದೆ; ಯಾವುದೇ ಮುಂದಿನ ಕ್ರಮದ ಅಗತ್ಯವಿಲ್ಲ' ಎಂದು ಸಂದೇಶವನ್ನು ಡಿಸ್‍ಪ್ಲೇ ಮಾಡಲಾಗುತ್ತದೆ.
26. ನನಗೆ ನೀಡಿರುವ ಸ್ಪಷ್ಟೀಕರಣ ಸಂವಹನಕ್ಕಾಗಿ ಕೋರಿಕೆಗೆ ನಾನು ಪ್ರತಿಕ್ರಿಯಿಸುವುದು ಕಡ್ಡಾಯವೇ? ಹೌದು ಎಂದಾದರೆ, ನಾನು ನನ್ನ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾದ ಸಮಯದ ಮಿತಿ ಎಷ್ಟು?
ನಿಮಗೆ ನೀಡಲಾದ ಸಂವಹನದಲ್ಲಿ ತಿಳಿಸಲಾದ ನಿಗದಿತ ದಿನಾಂಕದ ಪ್ರಕಾರ ನಿಮ್ಮ ಪ್ರತಿಕ್ರಿಯೆಯನ್ನು ನೀವು ಸಲ್ಲಿಸಬೇಕು / ಒದಗಿಸಬೇಕು. ಒಂದು ವೇಳೆ ನಿಗದಿತ ದಿನಾಂಕ ಮುಗಿದಿದ್ದರೆ ಮತ್ತು ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಲ್ಲಿ, CPC ತಮ್ಮ ಬಳಿ ಲಭ್ಯವಿರುವ ಮಾಹಿತಿಯೊಂದಿಗೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸುತ್ತದೆ.