1. ಬಾಕಿಯಿರುವ ತೆರಿಗೆ ಬಾಬ್ತುಗೆ ನಾನು ಏಕೆ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು?
ಆದಾಯ ತೆರಿಗೆ ಇಲಾಖೆಯು ನಿಮ್ಮ PAN ಗೆ ಸಂಬಂಧಿಸಿದಂತೆ ಕೆಲವು ಬಾಕಿಯಿರುವ ತೆರಿಗೆ ಬಾಬ್ತು ಅನ್ನು ಕಾಣಬಹುದು. ತಿಳಿಸಲಾದ ಬೇಡಿಕೆ ಸರಿಯಾಗಿದೆಯೇ ಎಂದು ಖಚಿತಪಡಿಸಿ, ಪ್ರತಿಕ್ರಿಯಿಸಲು ನಿಮಗೆ ಒಂದು ಅವಕಾಶ ನೀಡಲಾಗುತ್ತದೆ. ನೀವು ಇದಕ್ಕೆ ಪ್ರತಿಕ್ರಿಯಿಸದಿದ್ದರೆ, ಬೇಡಿಕೆಯನ್ನು ದೃಢಪಡಿಸಲಾಗುತ್ತದೆ ಮತ್ತು ನಿಮ್ಮ ಮರುಪಾವತಿಯ ಜೊತೆ ಸರಿಹೊಂದಿಸಲಾಗುತ್ತದೆ (ಯಾವುದಾದರೂ ಇದ್ದರೆ) ಅಥವಾ ನಿಮ್ಮ PAN ಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಬೇಡಿಕೆಯ ಹಾಗೆ ತೋರಿಸಲಾಗುತ್ತದೆ (ಒಂದು ವೇಳೆ, ಯಾವುದೇ ಮರುಪಾವತಿ ಬಾಕಿ ಇಲ್ಲದ ಸಂದರ್ಭದಲ್ಲಿ).
2. ನನ್ನ PAN ಗೆ ಸಂಬಂಧಿಸಿದಂತೆ ಬಾಕಿಯಿರುವ ತೆರಿಗೆ ಬಾಬ್ತು ಇದೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?
ಇ-ಫೈಲಿಂಗ್ ಪೋರ್ಟಲ್ ಮೂಲಕ ಯಾವುದೇ ಬಾಕಿಯಿರುವ ತೆರಿಗೆ ಬಾಬ್ತುಗಳನ್ನು ನೀವು ಪರಿಶೀಲಿಸಬಹುದು. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ಬಾಕಿ ಉಳಿದಿರುವ ಕ್ರಮಗಳು>ಬಾಕಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆಅನ್ನು ಕ್ಲಿಕ್ ಮಾಡಿ ಮತ್ತು ಬಾಕಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ನಿಮ್ಮ PAN ವಿರುದ್ಧ ತೆರಿಗೆ ಬಾಬ್ತುಗಳು ಬಾಕಿ ಉಳಿದಿದ್ದರೆ, ಹಿಂದಿನ/ಅಸ್ತಿತ್ವದಲ್ಲಿರುವ ಬಾಕಿಯಿರುವ ಪ್ರತಿಯೊಂದು ತೆರಿಗೆ ಬಾಬ್ತುಗಳ ಎದುರು ಪ್ರಸ್ತುತ ಸ್ಥಿತಿಯನ್ನು ಬಾಕಿಯಿರುವ ಪಾವತಿ / ಪ್ರತಿಕ್ರಿಯೆ ಎಂದು ನವೀಕರಿಸಲಾಗುತ್ತದೆ. ಅದಕ್ಕನುಗುಣವಾಗಿ, ನೀವು ಈಗಲೇ ಪಾವತಿಸಿ / ಪ್ರತಿಕ್ರಿಯೆ ಸಲ್ಲಿಸಿ ಅನ್ನು ಕ್ಲಿಕ್ ಮಾಡಬಹುದು. ಇದಲ್ಲದೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲಿ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ.
3. ಬಾಕಿಯಿರುವ ತೆರಿಗೆ ಬಾಬ್ತುಗಳ ಮೊತ್ತವನ್ನು ಕುರಿತು ನನಗೆ ಅಸಮ್ಮತಿ ಇದ್ದರೆ ನಾನೇನು ಮಾಡಬಹುದು?
ನೀವು ಬೇಡಿಕೆಯೊಂದಿಗೆ (ಪೂರ್ಣ ಅಥವಾ ಭಾಗಶಃ) ಅಸಮ್ಮತಿ ಅನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆಯನ್ನು ಆರಿಸಿದ ನಂತರ, ನೀವು ಬೇಡಿಕೆಯ ಮೊತ್ತವನ್ನು ಅಸಮ್ಮತಿಸುವ ಕಾರಣವನ್ನು ಪಟ್ಟಿಯಿಂದ ಆಯ್ಕೆ ಮಾಡಬೇಕು. ನೀವು ಸೂಚಿ ಪಟ್ಟಿಯಿಂದ ಆಯ್ಕೆ ಮಾಡಿದ ನಂತರ, ನಿಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವ ಮೊದಲು ನೀವು ಪ್ರತಿಯೊಂದು ಕಾರಣಕ್ಕಾಗಿ ವಿವರಗಳನ್ನು ಒದಗಿಸುವ ಅಗತ್ಯವಿದೆ. ಒಂದು ವೇಳೆ ನೀವು ಬೇಡಿಕೆಯನ್ನು ಭಾಗಶಃ ಅಸಮ್ಮತಿಸಿದರೆ, ನೀವು ನಿರ್ವಿವಾದವಾಗಿರುವ ಬೇಡಿಕೆಯ ಭಾಗಶಃವನ್ನು ಪಾವತಿಸಬೇಕು (ಅಂದರೆ ನೀವು ಒಪ್ಪಿರುವುದಕ್ಕೆ).
4. ಬಾಕಿಯಿರುವ ತೆರಿಗೆ ಬಾಬ್ತುಗೆ ಅಸಮ್ಮತಿಯ ಕಾರಣವು ಪಟ್ಟಿಯಲ್ಲಿ ಇಲ್ಲದಿದ್ದರೆ ನಾನು ಏನು ಮಾಡಬೇಕು?
ನೀವು ಬೇಡಿಕೆಯೊಂದಿಗೆ ಅಸಮ್ಮತಿ (ಪೂರ್ಣ ಅಥವಾ ಭಾಗಶಃವಾಗಿ) ಆಯ್ಕೆ ಮಾಡಿದ ನಂತರ ನೀವು ಇತರೆ ಯನ್ನು ಒಂದು ಕಾರಣವಾಗಿ ಆಯ್ಕೆ ಮಾಡಬಹುದು. ಆಯ್ಕೆ ಮಾಡಿದ ನಂತರ, ನೀವು ನಿಮ್ಮ ಕಾರಣಕ್ಕಾಗಿ ವಿವರಗಳನ್ನು ಮತ್ತು ಸೂಚಿಸಿದ ಕಾರಣದ ಕೆಳಗೆ ಪಾವತಿಸದ ಅನ್ವಯವಾಗುವ ಮೊತ್ತವನ್ನು ನಮೂದಿಸಬಹುದು.
5. ಈ ಹಿಂದೆ ನಾನು ಸಲ್ಲಿಸಿದ ಪ್ರತಿಕ್ರಿಯೆಗಳನ್ನು ಎಲ್ಲಿ ವೀಕ್ಷಿಸಬಹುದು?
ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನ೦ತರ, ಬಾಕಿ ಉಳಿದಿರುವ ಕ್ರಮಗಳು >ಬಾಕಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆಅನ್ನು ಕ್ಲಿಕ್ ಮಾಡಿ ಮತ್ತು ಬಾಕಿ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಹಿಂದಿನ ಮತ್ತು ಅಸ್ತಿತ್ವದಲ್ಲಿರುವ ಬಾಕಿಯಿರುವ ತೆರಿಗೆ ಬಾಬ್ತುಗಳ ಪಟ್ಟಿಯಲ್ಲಿ ನಿರ್ದಿಷ್ಟ ತೆರಿಗೆ ಬಾಬ್ತುಗೆ ಎದುರಿರುವ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ. ಈಗಾಗಲೇ ಕನಿಷ್ಠ ಒಂದು ಪ್ರತಿಕ್ರಿಯೆಯನ್ನು ಸಲ್ಲಿಸಿದ ಬೇಡಿಕೆಗಳಿಗಾಗಿ ಮಾತ್ರ ನೀವು ವೀಕ್ಷಿಸಿ ಆಯ್ಕೆಯನ್ನು ನೋಡಲು ಸಾಧ್ಯವಾಗುತ್ತದೆ.
6. ಬಾಕಿ ಇರುವ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ಪುಟದಲ್ಲಿ ಕಾರಣಗಳನ್ನು ಆಯ್ಕೆ ಮಾಡುವಾಗ, ನಾನು ಈ ಸಂದೇಶವನ್ನು ಪಡೆಯುತ್ತಿದ್ದೇನೆ - ಈ ಮೌಲ್ಯಮಾಪನ ವರ್ಷಕ್ಕೆ ಪರಿಷ್ಕೃತ / ತಿದ್ದುಪಡಿ ಮಾಡಿದ ಆದಾಯಕ್ಕಾಗಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ನಾನೇನು ಮಾಡಬೇಕು?
ದಯವಿಟ್ಟು ಪುನಃ ಪ್ರಯತ್ನಿಸಿ. ಸಮಸ್ಯೆ ಮುಂದುವರಿದರೆ, ದಯವಿಟ್ಟು ನಿಮ್ಮ ತಿದ್ದುಪಡಿ / ಪರಿಷ್ಕೃತ ರಿಟರ್ನ್ ವಿನಂತಿಯನ್ನು ಸಲ್ಲಿಸಿದ ನಂತರ ಪಡೆದ ಸ್ವೀಕೃತಿ ಸಂಖ್ಯೆಯನ್ನು ದೃಢೀಕರಿಸಿ.
7. ನಾನು ಬಾಕಿಯಿರುವ ತೆರಿಗೆ ಬಾಬ್ತು ಅನ್ನು ಹೇಗೆ ಪಾವತಿಸಬೇಕು?
ಇ-ಫೈಲಿಂಗ್ ಪೋರ್ಟಲ್ ಮೂಲಕ ನಿಮ್ಮ ಆದಾಯ ತೆರಿಗೆ ಬೇಡಿಕೆಯನ್ನು ನೀವು ಈ ಕೆಳಗಿನ ರೀತಿಯಲ್ಲಿ ಪಾವತಿಸಬಹುದು:
- ಈಗಲೇ ಪಾವತಿಸಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಬಾಕಿಯಿರುವ ತೆರಿಗೆ ಬಾಬ್ತುಗೆ ಪ್ರತಿಕ್ರಿಯೆ ಪುಟದಲ್ಲಿ ಆಯಾ DRN (ಬೇಡಿಕೆ ಉಲ್ಲೇಖ ಸಂಖ್ಯೆ)ಗಾಗಿ ನೇರವಾಗಿ ತೆರಿಗೆಯನ್ನು ಪಾವತಿಸಿ; ಅಥವಾ
- ಬಾಕಿಯಿರುವ ತೆರಿಗೆ ಬಾಬ್ತುಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಾಗ ಈಗಲೇ ಪಾವತಿಸಿ ಆಯ್ಕೆಯನ್ನು ಬಳಸಿ (ಬಾಕಿಯಿರುವ ತೆರಿಗೆ ಬಾಬ್ತುಗೆ ನೀವು ಒಪ್ಪಿದರೆ ಅಥವಾ ಭಾಗಶಃ ಒಪ್ಪಿದರೆ).
8. ನಾನು ಬೇರೆ ಯಾವ ವಿಧಾನಗಳಲ್ಲಿ ಪಾವತಿಸಬಹುದು?
ನೀವು ಇ-ಫೈಲಿಂಗ್ ಪೋರ್ಟಲ್ ಮೂಲಕ ಪಾವತಿ ಮಾಡಬಹುದು. ತೆರಿಗೆ ಪಾವತಿಸಲು ನೀವು ಈ ಕೆಳಗಿನ ಆನ್‌ಲೈನ್ ವಿಧಾನಗಳನ್ನು ಬಳಸಬಹುದು:
- ನೆಟ್-ಬ್ಯಾಂಕಿಂಗ್; ಅಥವಾ
- ಡೆಬಿಟ್ ಕಾರ್ಡ್; ಅಥವಾ
- ಪೇಮೆಂಟ್ ಗೇಟ್ ವೇ (ಅನಧಿಕೃತ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಅನಧಿಕೃತ ಬ್ಯಾಂಕಿನ ನೆಟ್ ಬ್ಯಾಂಕಿಂಗ್ / UPI ಅನ್ನು ಬಳಸಿ)
ತೆರಿಗೆ ಪಾವತಿಸಲು ನೀವು ಈ ಕೆಳಗಿನ ಆಫ್‌ಲೈನ್ ವಿಧಾನಗಳನ್ನು ಬಳಸಬಹುದು:
- NEFT / RTGS (ರಚಿಸಿದ ಆಣತಿ ಫಾರ್ಮ್ ಅನ್ನು ಬ್ಯಾಂಕ್‌ಗೆ ಸಲ್ಲಿಸಬಹುದು ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ವರ್ಗಾವಣೆಗೆ ಬಳಸಬಹುದು); ಅಥವಾ
- ಕೌಂಟರ್‌ನಲ್ಲಿ ಪಾವತಿಸುವುದು (ನಗದು / ಚೆಕ್ / ಡಿಮ್ಯಾಂಡ್ ಡ್ರಾಫ್ಟ್ ಮೂಲಕ).
ಇನ್ನಷ್ಟು ತಿಳಿಯಲು ಆನ್‌ಲೈನ್‌ನಲ್ಲಿ ಪಾವತಿ ಮಾಡಿ ಮತ್ತು ಆಫ್‌ಲೈನ್‌ನಲ್ಲಿ ಪಾವತಿ ಮಾಡಿಬಳಕೆದಾರರ ಕೈಪಿಡಿಯನ್ನು ನೋಡಿ.
9. ಲಗತ್ತಿಸಬೇಕಾದ ಚಲನ್ ನಕಲು ಪ್ರತಿ ನನ್ನ ಬಳಿ ಇಲ್ಲದಿದ್ದರೆ ಏನಾಗಬಹುದು? ನಾನು ಅದನ್ನು ಎಲ್ಲಿ ಪಡೆಯಬಹುದು?
ನೆಟ್ ಬ್ಯಾಂಕಿಂಗ್ ಬಳಸಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಚಲನ್ ಅನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ನೀವು ಮತ್ತೆ ಪ್ರಿಂಟ್ ಮಾಡಬಹುದು / ಪುನರುತ್ಪಾದನೆ ಮಾಡಬಹುದು.