1. ಫಾರ್ಮ್ 10E ಎಂದರೇನು?
ಸಂಬಳದ ಸ್ವರೂಪದಲ್ಲಿ ಬಾಕಿಗಳು ಅಥವಾ ಮುಂಗಡದ ಯಾವುದೇ ಮೊತ್ತವನ್ನು ಸ್ವೀಕರಿಸಿದ ಪಕ್ಷದಲ್ಲಿ, ಸೆಕ್ಷನ್ 89 ರ ಅಡಿಯಲ್ಲಿ ಪರಿಹಾರವನ್ನು ಪಡೆಯಬಹುದು. ಅಂತಹ ಪರಿಹಾರದ ಹಕ್ಕು ಸಾಧಿಸುವ ಸಲುವಾಗಿ, ಮೌಲ್ಯಮಾಪಿತನು ಫಾರ್ಮ್ 10E ಫೈಲ್ ಅನ್ನು ಸಲ್ಲಿಸಬೇಕು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಫಾರ್ಮ್ 10E ಅನ್ನು ಸಲ್ಲಿಸುವುದು ಸೂಕ್ತವಾಗಿದೆ.
2. ನಾನು ಫಾರ್ಮ್ 10E ಅನ್ನು ಡೌನ್ ಲೋಡ್ ಮಾಡಿ ಸಲ್ಲಿಸುವ ಅಗತ್ಯವಿದೆಯೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡಬಹುದಾದ್ದರಿಂದ ಫಾರ್ಮ್ 10E ಡೌನ್ ಲೋಡ್ ಮಾಡುವ ಅಗತ್ಯವಿಲ್ಲ.
3. ನಾನು ಯಾವಾಗ ಫಾರ್ಮ್ 10E ಫೈಲ್ ಸಲ್ಲಿಸಬೇಕು?
ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೊದಲು ಫಾರ್ಮ್ 10E ಅನ್ನು ಸಲ್ಲಿಸುವುದು ಸೂಕ್ತವಾಗಿದೆ.
4. ಫಾರ್ಮ್ 10E ಫೈಲ್ ಮಾಡುವುದು ಕಡ್ಡಾಯವೇ?
ಹೌದು, ನಿಮ್ಮ ಬಾಕಿ / ಮುಂಗಡ ಆದಾಯದಲ್ಲಿನ ತೆರಿಗೆ ಪರಿಹಾರಕ್ಕಾಗಿ ನೀವು ಹಕ್ಕು ಸಾಧಿಸಲು ಬಯಸಿದರೆ ಫಾರ್ಮ್ 10E ಸಲ್ಲಿಸುವುದು ಕಡ್ಡಾಯವಾಗಿದೆ.
5. ನೀವು ಫಾರ್ಮ್ 10E ಅನ್ನು ಫೈಲ್ ಮಾಡಲು ವಿಫಲವಾದರೆ ಮತ್ತು ITR ನಲ್ಲಿ ಸೆಕ್ಷನ್ 89 ಅಡಿಯಲ್ಲಿ ಪರಿಹಾರವನ್ನು ಕ್ಲೈಮ್ ಮಾಡಿದರೆ ಏನಾಗುತ್ತದೆ?
ನೀವು ಫಾರ್ಮ್ 10E ಅನ್ನು ಸಲ್ಲಿಸಲು ವಿಫಲವಾದರೆ, ಮತ್ತು ನಿಮ್ಮ ITR ನಲ್ಲಿ ಸೆಕ್ಷನ್ 89 ರ ಅಡಿಯಲ್ಲಿ ಪರಿಹಾರವನ್ನು ಕ್ಲೈಮ್ ಮಾಡಿದರೆ, ನಿಮ್ಮ ITR ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಆದರೆ ಸೆಕ್ಷನ್ 89 ರ ಅಡಿಯಲ್ಲಿ ಕ್ಲೈಮ್ ಮಾಡಿದ ಪರಿಹಾರವನ್ನು ಅನುಮತಿಸಲಾಗುವುದಿಲ್ಲ.
6. ನನ್ನ ITR ನಲ್ಲಿ ನಾನು ಹಕ್ಕುಸಾಧಿಸಿದ ಪರಿಹಾರವನ್ನು ITD ಅನುಮತಿಸಿಲ್ಲವೆಂದು ನನಗೆ ಹೇಗೆ ಗೊತ್ತಾಗುತ್ತದೆ?
ಒಂದು ವೇಳೆ ನೀವು ಸೆಕ್ಷನ್ 89 ರ ಅಡಿಯಲ್ಲಿ ಹಕ್ಕು ಸಾಧಿಸಿದ ಪರಿಹಾರಕ್ಕೆ ಅನುಮತಿಸದೇ ಇದ್ದಲ್ಲಿ, ನಿಮ್ಮ ITR ಪ್ರಕ್ರಿಯೆ ಪೂರ್ಣಗೊಂಡ ನಂತರ, ಸೆಕ್ಷನ್ 143(1) ರ ಅಡಿಯಲ್ಲಿ ಒಂದು ಮಾಹಿತಿ ಮೂಲಕ ಅದನ್ನೇ ITD ನಿಂದ ತಿಳಿಸಲಾಗುವುದು.
7. ಸಿಸ್ಟಮ್ ತೆರಿಗೆಗಳನ್ನು ಹೇಗೆ ಲೆಕ್ಕಾಚಾರ ಮಾಡುತ್ತಿದೆ?
A.Y. 2024-25 (F.Y. 2023-24) ನಂತರಕ್ಕೆ ಸಂಬಂಧಿಸಿದ ತೆರಿಗೆ ಲೆಕ್ಕಾಚಾರಗಳಿಗಾಗಿ, "ಸಿಸ್ಟಮ್ ಲೆಕ್ಕಾಚಾರದ ತೆರಿಗೆ"ಯು ಡೀಫಾಲ್ಟ್ ತೆರಿಗೆ ಪದ್ಧತಿಯ ಪ್ರಕಾರ ಅಂದರೆ ಹೊಸ ತೆರಿಗೆ ಪದ್ಧತಿ ಅಗಿರುತ್ತದೆ (ಸೆಕ್ಷನ್ 115BAC(1A)). ಆದಾಗ್ಯೂ, A.Y. 2023-24 (F.Y. 2022-23) ಕ್ಕೂ ಹಿಂದಿನ ವರ್ಷಗಳಿಗೆ ತೆರಿಗೆ ಲೆಕ್ಕಾಚಾರವು ಹಳೆ ತೆರಿಗೆ ಪದ್ದತಿಯ ಪ್ರಕಾರವಿರುತ್ತದೆ.