Do not have an account?
Already have an account?

1. ಎಲ್ಲಾ ಅನ್ವಯಿಸುವ ತೆರಿಗೆದಾರರು (ದೇಶೀಯ ಕಂಪನಿಗಳು) ಫಾರ್ಮ್ 10-IC ಫೈಲ್ ಸಲ್ಲಿಸುವುದು ಕಡ್ಡಾಯವೇ?
ಆದಾಯ ತೆರಿಗೆ ಕಾಯ್ದೆ ,1961 ರ ವಿಭಾಗ 115BAA ಅಡಿಯಲ್ಲಿ ಒಂದು ದೇಶೀಯ ಕಂಪನಿಯು 22% ರಿಯಾಯಿತಿ ಪಡೆಯಬಹುದಾದ ದರದಲ್ಲಿ ತೆರಿಗೆ ಪಾವತಿ ಮಾಡುವುದನ್ನು ಆಯ್ಕೆ ಮಾಡಿದರೆ ಮಾತ್ರ ಫಾರ್ಮ್ 10-IC ಅನ್ನು ಸಲ್ಲಿಸಬೇಕಾಗುತ್ತದೆ.

2. ನಾನು ಹೇಗೆ ಫಾರ್ಮ್ 10-IC ಫೈಲ್ ಸಲ್ಲಿಸಬಲ್ಲೆ?
ಇ-ಫೈಲಿಂಗ್ ಪೋರ್ಟಲ್‌ನೊಳಗೆ ಲಾಗಿನ್ ಮಾಡಿದ ನಂತರ ನೀವು ಫಾರ್ಮ್ 10-IC ಫೈಲ್ ಅನ್ನು ಆನ್‌ಲೈನ್ ವಿಧಾನದಲ್ಲಿ ಮಾತ್ರ ಸಲ್ಲಿಸಬಹುದು.

3. ಮುಂದಿನ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ನಾನು ಮತ್ತೊಮ್ಮೆ ಫಾರ್ಮ್‍ನ ಫೈಲ್ ಸಲ್ಲಿಸಬೇಕೇ?
 

4. ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ನನಗೆ ಹೇಗೆ ಗೊತ್ತಾಗುತ್ತದೆ?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ IDಗೆ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಹೆಚ್ಚುವರಿಯಾಗಿ, ನಿಮ್ಮ ಕಾರ್ಯಗಳಿಗಾಗಿ ಟ್ಯಾಬ್ ಅಡಿಯಲ್ಲಿ ನಿಮ್ಮ ವರ್ಕ್‌ಲಿಸ್ಟ್‌ನಲ್ಲಿರುವ ಸ್ಥಿತಿಯನ್ನು ಸಹ ನೀವು ವೀಕ್ಷಿಸಬಹುದು.

5. ಫಾರ್ಮ್ ಸಲ್ಲಿಸುವಾಗ ನಾನು ಇ-ಪರಿಶೀಲನೆ ಮಾಡಬೇಕು?
ಹೌದು. ನೀವು DSC ಬಳಸಿ ಮಾತ್ರ ಫಾರ್ಮ್‌ನ ಇ-ಪರಿಶೀಲನೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಫಾರ್ಮ್ ಅನ್ನು ಸಲ್ಲಿಸಲಾಗುತ್ತದೆ.

6. ಫಾರ್ಮ್ 10-IC ಸಲ್ಲಿಸುವ ಸಮಯ ಮಿತಿ ಎಷ್ಟು?
ಲಾಭ ಪಡೆಯಲು ಹಿಂದಿನ ವರ್ಷದ ಆದಾಯ ತೆರಿಗೆಗಳನ್ನು ಪೂರೈಸಲು ವಿಭಾಗ 139 ರ ಉಪವಿಭಾಗ (1) ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ನೀವು ಫಾರ್ಮ್ 10-IC ಫೈಲ್ಅನ್ನು ಸಲ್ಲಿಸುವ ಅಗತ್ಯವಿದೆ.

7. ಫಾರ್ಮ್ 10-IC ಅನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಬಹುದೇ?
ಇಲ್ಲ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆಫ್‌ಲೈನ್ ಉಪಯುಕ್ತತೆಯನ್ನು ಬಳಸಿಕೊಂಡು ನೀವು ಫಾರ್ಮ್ 10-IC ಅನ್ನು ಫೈಲ್ ಮಾಡಲು ಸಾಧ್ಯವಿಲ್ಲ. ನೀವು ಆನ್‌ಲೈನ್ ವಿಧಾನದ ಮೂಲಕ ಮಾತ್ರ ಫಾರ್ಮ್ 10-IC ಅನ್ನು ಫೈಲ್ ಮಾಡಬಹುದು.

8. ಫಾರ್ಮ್ 10-IC ಸಲ್ಲಿಸುವ ಉದ್ದೇಶವೇನು?
ಆದಾಯ ತೆರಿಗೆ ಕಾಯ್ದೆಯ ವಿಭಾಗ 115BAA ಪ್ರಕಾರ, ದೇಶೀಯ ಕಂಪನಿಗಳು 22% (ಜೊತೆಗೆ ಅನ್ವಯವಾಗುವ ಹೆಚ್ಚುವರಿ ಶುಲ್ಕ ಮತ್ತು ಸೆಸ್ಸು)ನಷ್ಟು ರಿಯಾಯಿತಿ ದರದಲ್ಲಿ ತೆರಿಗೆ ಪಾವತಿ ಮಾಡುವ ಆಯ್ಕೆಯನ್ನು ಹೊಂದಿವೆ, ಆದರೆ ಅವು ನಿರ್ದಿಷ್ಟ ಕಡಿತ ಮತ್ತು ಪ್ರೋತ್ಸಾಹಗಳನ್ನು ಪಡೆಯದಿದ್ದರೆ. ನಿಗದಿತ ಸಮಯದ ಮಿತಿಯೊಳಗೆ ಫಾರ್ಮ್ 10-IC ಅನ್ನು ಫೈಲ್‌ ಮಾಡಿದರೆ ಮಾತ್ರ ಕಂಪನಿಗಳು ಮೌಲ್ಯಮಾಪನ ವರ್ಷ 2020 - 21 ರಿಂದ ರಿಯಾಯಿತಿ ದರವನ್ನು ಆರಿಸಿಕೊಳ್ಳಬಹುದು.