1. ಫಾರ್ಮ್ 10-ID ಎಂದರೇನು?
ಹೊಸ ಉತ್ಪಾದನಾ ದೇಶೀಯ ಕಂಪನಿಗಳು ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎನ್ನುವ 1961 ರ ಆದಾಯ ತೆರಿಗೆ ಕಾಯ್ದೆಯ ವಿಭಾಗ 115BAB ಅಡಿಯಲ್ಲಿ, 15% (ಜೊತೆಗೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಮತ್ತು ಸೆಸ್ಸು) ರಿಯಾಯಿತಿ ಮಾಡಬಹುದಾದ ಕಂದಾಯ/ತೆರಿಗೆ ನಿರ್ಧಾರಣ ದರದಲ್ಲಿ ತೆರಿಗೆ ಪಾವತಿ ಮಾಡುವ ಆಯ್ಕೆ ಮಾಡಬಹುದು. ಹಾಗೆ ಮಾಡಲು, 2020 ಏಪ್ರಿಲ್, 1ನೇ ದಿನದಂದು ಅಥವಾ ನಂತರದಲ್ಲಿ ಪ್ರಾರಂಭವಾಗುವ ಮೊದಲನೇ ತೆರಿಗೆ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ಸಲ್ಲಿಕೆಗಳನ್ನು ಮರುಪಾವತಿಸಲು ವಿಭಾಗ 139 ರ ಉಪ-ವಿಭಾಗ (1) ರ ಅಡಿಯಲ್ಲಿ ನಿಗದಿತ ದಿನಾಂಕದಂದು ಅಥವಾ ಅದಕ್ಕೂ ಮೊದಲು ಫಾರ್ಮ್ 10-ID ಫೈಲ್ ಮಾಡುವುದು ಅಗತ್ಯವಾಗಿದೆ.
2. ಫಾರ್ಮ್ 10-ID ಫೈಲ್ ಸಲ್ಲಿಸಲು ಯಾರ ಅಗತ್ಯವಿದೆ?
2019 ರ ಅಕ್ಟೋಬರ್, 1ನೇ ದಿನದಂದು ಅಥವಾ ನಂತರ ಸಂಯೋಜಿಸಲಾಗಿದೆ ಎನ್ನುವ ಹೊಸ ಉತ್ಪಾದನಾ ದೇಶೀಯ ಕಂಪನಿಯು ಒಂದು ವಸ್ತು/ ವಿಧಿಯ ಉತ್ಪಾದನೆ ಅಥವಾ ತಯಾರಿಕೆಯನ್ನು 2023 ಮಾರ್ಚ್, 31ನೇ ದಿನದಂದು ಅಥವಾ ಅದಕ್ಕೂ ಮೊದಲು ಪ್ರಾರಂಭಿಸಿದೆ ಮತ್ತು ರಿಯಾಯಿತಿ ನೀಡಬಹುದಾದ ಕಂದಾಯ/ತೆರಿಗೆ ನಿರ್ಧಾರಣ ದರದಲ್ಲಿ, ತೆರಿಗೆ ವಿಧಿಸಲು ನಿರ್ಧರಿಸಿದೆ, ಫಾರ್ಮ್ 10-ID ಫೈಲ್ ಸಲ್ಲಿಸಬೇಕಾಗಿದೆ.
3. ಅನ್ವಯಿಸುವ ಎಲ್ಲಾ ತೆರಿಗೆದಾರರು (ದೇಶೀಯ ಕಂಪನಿಗಳು) ಫಾರ್ಮ್ 10-ID ಫೈಲ್ ಸಲ್ಲಿಸುವುದು ಕಡ್ಡಾಯವೇ?
ಆದಾಯ ತೆರಿಗೆ ಕಾಯ್ದೆ, 1961 ರ ವಿಭಾಗ 115BAB ಅಡಿಯಲ್ಲಿ ದೇಶೀಯ ಕಂಪನಿಯು 15% (ಜೊತೆಗೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಮತ್ತು ಸೆಸ್ಸು) ರಿಯಾಯಿತಿ ಮಾಡಬಹುದಾದ ಕಂದಾಯ/ತೆರಿಗೆ ನಿರ್ಧಾರಣ ದರವನ್ನು ಆರಿಸಿದರೆ ಮಾತ್ರ ಫಾರ್ಮ್ 10-ID ಫೈಲ್ಅನ್ನು ಸಲ್ಲಿಸಬೇಕಾಗುತ್ತದೆ.
4. ನಾನು ಫಾರ್ಮ್ 10-ID ಯನ್ನು ಹೇಗೆ ಫೈಲ್ ಮಾಡಬಹುದು ಮತ್ತು ಸಲ್ಲಿಸಬಹುದು?
ನೀವು ಆನ್‌ಲೈನ್ ವಿಧಾನದ ಮೂಲಕ ಮಾತ್ರ (ಇ-ಫೈಲಿಂಗ್ ಪೋರ್ಟಲ್ ಮೂಲಕ) ಫಾರ್ಮ್ 10-IDಯನ್ನು ಫೈಲ್ ಮಾಡಬಹುದು.
5. ಈ ಫಾರ್ಮ್ ಸಲ್ಲಿಸಲು ಇರುವ ಟೈಮ್‌ಲೈನ್ ಏನು?
ITR ಸಲ್ಲಿಸಲು ನಿಗದಿತ ದಿನಾಂಕಕ್ಕೂ ಮೊದಲು ನೀವು ಫಾರ್ಮ್ 10-ID ಫೈಲ್ ಸಲ್ಲಿಸುವ ಅಗತ್ಯವಿದೆ.
6. ಮುಂದಿನ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ನಾನು ಮತ್ತೊಮ್ಮೆ ಫಾರ್ಮ್‍ನ ಫೈಲ್ ಸಲ್ಲಿಸಬೇಕೇ?
7. ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂದು ನನಗೆ ಹೇಗೆ ಗೊತ್ತು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಎನ್ನುವ ನಿಮ್ಮ ಇಮೇಲ್ ID ಮತ್ತು ಮೊಬೈಲ್ ನಂಬರ್‌ನಲ್ಲಿ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. ಹೆಚ್ಚುವರಿಯಾಗಿ, ನಿಮ್ಮ ಕ್ರಿಯೆಗಳಿಗಾಗಿ ಟ್ಯಾಬ್ ಅಡಿಯಲ್ಲಿ ನೀವು ನಿಮ್ಮ ವರ್ಕ್‍ಲಿಸ್ಟ್ ನಲ್ಲಿರುವ ಸ್ಥಿತಿಯನ್ನೂ ಸಹ ವೀಕ್ಷಿಸಬಹುದು.
8. ಫಾರ್ಮ್ 10-ID ಸಲ್ಲಿಸಲು ಇ-ಪರಿಶೀಲನೆಯು ಅಗತ್ಯವಿದೆಯೇ? ಹೌದು ಎಂದಾದಲ್ಲಿ, ನಾನು ಫಾರ್ಮ್ 10-ID ಯನ್ನು ಹೇಗೆ ಪರಿಶೀಲಿಸಬಹುದು?
ಹೌದು, ಫಾರ್ಮ್ 10-ID ಅನ್ನು ಇ-ಪರಿಶೀಲಿಸುವುದು ಅಗತ್ಯ. ಡಿಜಿಟಲ್ ಸಹಿ/ಹಸ್ತಾಕ್ಷರ ಪ್ರಮಾಣಪತ್ರವನ್ನು ಬಳಸಿಕೊಂಡು ನೀವು ಇ-ಪರಿಶೀಲಿಸಬಹುದು.
ಇ-ಫೈಲಿಂಗ್ ಮತ್ತು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ
ಆದಾಯ ತೆರಿಗೆ ರಿಟರ್ನ್ ಅಥವಾ ಫಾರ್ಮ್ಗಳ ಇ-ಫೈಲಿಂಗ್ ಮತ್ತು ಇತರೆ ಮೌಲ್ಯವರ್ಧಿತ ಸೇವೆಗಳು ಮತ್ತು ಮಾಹಿತಿ, ತಿದ್ದುಪಡಿ, ಮರುಪಾವತಿ ಮತ್ತು ಇತರೆ ಆದಾಯ ತೆರಿಗೆ ಸಂಸ್ಕರಣೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 0025 (ಅಥವಾ)
1800 419 0025
+91-80-46122000
+91-80-61464700
08:00 AM - 20:00 PM
(ಸೋಮವಾರದಿಂದ ಶುಕ್ರವಾರದವರೆಗೆ)
ತೆರಿಗೆ ಮಾಹಿತಿ ಜಾಲ - ಎನ್. ಎಸ್. ಡಿ. ಎಲ್
NSDL ಮೂಲಕ PAN ಮತ್ತು TAN ಅಪ್ಲಿಕೇಶನ್ ವಿತರಣೆ / ಅಪ್ಡೇಟ್ಗೆ ಸಂಬಂಧಿಸಿದ ಪ್ರಶ್ನೆಗಳು
+91-20-27218080
07:00 hrs - 23:00 hrs
(ಎಲ್ಲಾ ದಿನಗಳು)
AIS ಮತ್ತು ವರದಿ ಮಾಡುವ ಪೋರ್ಟಲ್
AIS, TIS, SFT ಪ್ರಾಥಮಿಕ ಪ್ರತಿಕ್ರಿಯೆ, ಇ-ಅಭಿಯಾನಗಳಿಗೆ ಪ್ರತಿಕ್ರಿಯೆ ಅಥವಾ ಇ-ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 4215
09:30 hrs - 18:00 hrs
(ಸೋಮವಾರದಿಂದ ಶುಕ್ರವಾರದವರೆಗೆ)