1. ಫಾರ್ಮ್ 15CB ಎಂದರೇನು?
ಫಾರ್ಮ್ 15 CB ಎನ್ನುವುದು ಆ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಗೆ ವಿಧಿಸಲಾಗುವ, ಕಂಪನಿಯಾಗಿರದ ಅನಿವಾಸಿಗಳಿಗೆ, ಅಥವಾ ವಿದೇಶಿ ಕಂಪನಿಗೆ ಮಾಡಿದ ಯಾವುದೇ ಪಾವತಿ / ಒಟ್ಟು ಪಾವತಿಗಳ ಮೊತ್ತ 5 ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭದಲ್ಲಿ ಮತ್ತು ಸೆಕ್ಷನ್ 195/197 ಅಡಿಯಲ್ಲಿ AO ಯಿಂದ ಒಂದು ಪ್ರಮಾಣಪತ್ರವನ್ನು ಪಡೆಯದಿದ್ದಾಗ ಅಕೌಂಟೆಂಟ್ ಒದಗಿಸಬೇಕಾದ ಪ್ರಮಾಣಪತ್ರವಾಗಿದೆ.
ಫಾರ್ಮ್ 15CB ಯಲ್ಲಿ, ಪೇಮೆಂಟ್ ಅಥವಾ ಪಾವತಿ, TDS ದರ, TDS ಕಡಿತ ಮತ್ತು ಹಣಕಾಸಿನ ಸ್ವರೂಪದ ಇತರ ವಿವರಗಳು ಮತ್ತು ಹಣ ರವಾನೆ ಮಾಡುವುದು ಉದ್ದೇಶವನ್ನು CA ರವರು ಪ್ರಮಾಣೀಕರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಫಾರ್ಮ್ 15 CB ಯು ತೆರಿಗೆ ನಿರ್ಧರಿಸುವ ಪ್ರಮಾಣಪತ್ರವಾಗಿದೆ, ಇದರಲ್ಲಿ CA ಶುಲ್ಕ ವಿಧಿಸುವ ನಿಬಂಧನೆಗಳಿಗೆ ಸಂಬಂಧಿಸಿದಂತೆ ಹಣ ರವಾನೆಯನ್ನು ಪರಿಶೀಲಿಸುತ್ತಾರೆ.
2. ಫಾರ್ಮ್ 15CB ಅನ್ನು ಯಾರು ಬಳಕೆ ಮಾಡಬಹುದು?
ಫಾರ್ಮ್ 15CB ಯನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಚಾರ್ಟರ್ಡ್ ಅಕೌಂಟೆಂಟ್ ಪಡೆದುಕೊಂಡು ಭರ್ತಿಮಾಡಿ ಸಲ್ಲಿಸಬೇಕು. ಫಾರ್ಮ್ 15CB ಯಲ್ಲಿರುವ ವಿವರಗಳನ್ನು ಪ್ರಮಾಣೀಕರಿಸುವ ಸಲುವಾಗಿ ಒಬ್ಬ ತೆರಿಗೆ ಪಾವತಿದಾರರಿಂದ ಫಾರ್ಮ್ 15CA ಅನ್ನು CA ಗೆ ನಿಯೋಜಿಸಲೇಬೇಕಾಗಿರುತ್ತದೆ.
3. ಫಾರ್ಮ್ 15CB ಯಲ್ಲಿ ಪ್ರಮಾಣೀಕರಣದ ಉದ್ದೇಶವೇನು?
15CB ಎಂಬುದು ತೆರಿಗೆ ನಿರ್ಣಯ ಪ್ರಮಾಣಪತ್ರವಾಗಿದ್ದು, ಆದಾಯ ತೆರಿಗೆ ಕಾಯ್ದೆಯ 5 ಮತ್ತು 9 ಸೆಕ್ಷನ್ ಅಡಿಯಲ್ಲಿ ಜೊತೆಗೆ ಯಾವುದಾದರೂ ದುಪ್ಪಟ್ಟು ತೆರಿಗೆ ಸಂದಾಯ ಪದ್ಧತಿ ತಪ್ಪಿಸುವಿಕೆ ಒಪ್ಪಂದಗಳ (DTAA) ನಿಬಂಧನೆಗಳಿದ್ದರೆ, ಶುಲ್ಕ ವಿಧಿಸಬಹುದಾದ ನಿಬಂಧನೆಗಳಿಗೆ ಸಂಬಂಧಿಸಿದಂತೆ ಹಣ ರವಾನೆ ಮಾಡುವುದನ್ನು CA ರವರು ಪರೀಕ್ಷಿಸುತ್ತಾರೆ.
4. ಫಾರ್ಮ್ 15CA (ಭಾಗ C) ಸಲ್ಲಿಸುವ ಮುನ್ನ ಫಾರ್ಮ್ 15CB ಯ ಫೈಲ್ ಸಲ್ಲಿಸುವುದು ಕಡ್ಡಾಯವೇ?
ಫಾರ್ಮ್ 15CA ಯ ಭಾಗ C ಭರ್ತಿ ಮಾಡುವ ಮೊದಲು ಫಾರ್ಮ್ 15CB ಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಫಾರ್ಮ್ 15CA ಯ C ಭಾಗದಲ್ಲಿ ವಿವರಗಳನ್ನು ಪೂವ೯ ಭರ್ತಿ ಮಾಡಲು, ಇ-ಪರಿಶೀಲಿಸಲಾಗಿದೆ ಎನ್ನುವ ಫಾರ್ಮ್ 15CB ಯ ಸ್ವೀಕೃತಿ ರಶೀದಿ ಸಂಖ್ಯೆಯನ್ನು ಪರಿಶೀಲಿಸಬೇಕು.
5. ಆಫ್‌ಲೈನ್ ವಿಧಾನದಲ್ಲಿ ಮಾತ್ರ ಫಾರ್ಮ್ 15CB ಯನ್ನು ಫೈಲ್ ಮಾಡಬಹುದಾಗಿದೆಯೇ?
ಫಾರ್ಮ್ 15CB ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಶಾಸನಬದ್ಧ ಫಾರ್ಮ್‍ಗಳಿಗಾಗಿ ಆಫ್‌ಲೈನ್ ಯುಟಿಲಿಟಿ ಸೇವೆಯು ಆಫ್‌ಲೈನ್ ವಿಧಾನದಲ್ಲಿ ಫಾರ್ಮ್ 15CB ಅನ್ನು ಭರ್ತಿ ಮಾಡಿ ಸಲ್ಲಿಸುವುದಕ್ಕೆ ನಿಮಗೆ ಅನುವು ಮಾಡಿಕೊಡುತ್ತದೆ.
6. ಫಾರ್ಮ್ 15CB ಅನ್ನು ಹೇಗೆ ಪರಿಶೀಲಿಸಲಾಗುತ್ತದೆ? ಈ ಫಾರ್ಮ್ ಸಲ್ಲಿಸುವುದಕ್ಕೆ ಯಾವುದೇ ಸಮಯದ ಪರಿಮಿತಿ ಇದೆಯೇ?
ಈ ಫಾರ್ಮ್ಅನ್ನು ಕೇವಲ DSC ಬಳಸಿ ಮಾತ್ರ ಇ-ಪರಿಶೀಲಿಸಬಹುದಾಗಿದೆ. CA ಯ DSC ಯನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು. ಫಾರ್ಮ್ 15CB ಸಲ್ಲಿಸುವುದಕ್ಕೆ ಯಾವುದೇ ಸಮಯ ಪರಿಮಿತಿಯನ್ನು ನಿಗದಿಪಡಿಸಲಾಗಿಲ್ಲ. ಆದಾಗ್ಯೂ, ಹಣ ರವಾನೆ ಮಾಡುವುದಕ್ಕೂ ಮೊದಲು ಅದನ್ನು ಸಲ್ಲಿಸಬೇಕಾಗುತ್ತದೆ.