Do not have an account?
Already have an account?

1. ಅವಲೋಕನ

ತೆರಿಗೆ ಮೌಲ್ಯಮಾಪನ ಅಧಿಕಾರಿ (AO) ಆದೇಶದಿಂದ ನೊಂದ ಯಾವುದೇ ತೆರಿಗೆದಾರರಿಗೆ / ಕಡಿತಗೊಳಿಸುವವರಿಗೆ ಫಾರ್ಮ್ 35 ಲಭ್ಯವಿದೆ. ಅಂತಹ ಸಂದರ್ಭದಲ್ಲಿ, ಫಾರ್ಮ್ 35 ಅನ್ನು ಬಳಸಿಕೊಂಡು ಜಂಟಿ ಕಮಿಷನರ್ (ಅಪೀಲುಗಳು) ಅಥವಾ ಆದಾಯ ತೆರಿಗೆ (ಅಪೀಲುಗಳು) ಆಯುಕ್ತರ ಮುಂದೆ AO ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.

ಆದಾಯದ ಇ-ಫೈಲಿಂಗ್ ಕಡ್ಡಾಯವಾಗಿರುವ ವ್ಯಕ್ತಿಗಳಿಗೆ ಫಾರ್ಮ್ 35 ರ ಇ-ಫೈಲಿಂಗ್ ಅನ್ನು ಕಡ್ಡಾಯಗೊಳಿಸಲಾಗಿದೆ.ಆದಾಯದ ರಿಟರ್ನ್‌ನ ಇ-ಫೈಲಿಂಗ್ ಅನ್ನು ಕಡ್ಡಾಯಗೊಳಿಸಿರದ ವ್ಯಕ್ತಿಗಳಿಗಾಗಿ, ಫಾರ್ಮ್ 35 ಅನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಕಾಗದದ ರೂಪದಲ್ಲಿ ಸಲ್ಲಿಸಬಹುದು. ಮೇಲ್ಮನವಿಯ ನಿವೇದನಾ ಪತ್ರ, ಸತ್ಯಸಂಗತಿಗಳ ಹೇಳಿಕೆ ಮತ್ತು ಮೇಲ್ಮನವಿಯ ಆಧಾರಗಳೊಂದಿಗೆ ಮೇಲ್ಮನವಿಯನ್ನು ಸಲ್ಲಿಸುವ ಅಗತ್ಯವಿದೆ ಮತ್ತು ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಆದೇಶದ ಪ್ರತಿ ಮತ್ತು ಬೇಡಿಕೆಯ ಸೂಚನೆಯನ್ನು ಲಗತ್ತಿಸಬೇಕು.

2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು

• ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು
• PAN ಮತ್ತು ಆಧಾರ್ ಲಿಂಕ್ ಆಗಿದೆ (ಶಿಫಾರಸು ಮಾಡಲಾಗಿದೆ)
• ಆದಾಯದ ರಿಟರ್ನ್ ಅನ್ನು DSC ಬಳಸಿ ಪರಿಶೀಲಿಸಬೇಕಾಗಿದ್ದರೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಅವಧಿ ಮೀರಿರದ ಮಾನ್ಯ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಬೇಕಾಗುತ್ತದೆ, ಬೇರೆ ಯಾವುದೇ ಸಂದರ್ಭದಲ್ಲಿ, EVC ಅಗತ್ಯವಿದೆ.

3. ಫಾರ್ಮ್ ಬಗ್ಗೆ

3.1 ಉದ್ದೇಶ

ನಿಮ್ಮ AO ರವರು ಅಂಗೀಕರಿಸಿದ ಆದೇಶದಿಂದ ನೀವು ತೃಪ್ತರಾಗಿಲ್ಲದಿದ್ದರೆ ಮತ್ತು ಯಾವುದೇ ಸೇರ್ಪಡೆಗಳು, ಅನುಮತಿಗಳು, ಪ್ರಯೋಜನಗಳ ಕಡಿತ, ವಿನಾಯಿತಿಗಳು ಅಥವಾ ನಷ್ಟಗಳ ಪ್ರಯೋಜನಗಳಿಗೆ ಸಂಬಂಧಿಸಿದಂತೆ ನೀವು ಬಾಧಿತವಾಗಿದ್ದರೆ, ನೀವು ಫಾರ್ಮ್ 35 ಅನ್ನು ಬಳಸಿಕೊಂಡು ಜಂಟಿ ಕಮಿಷನರ್ (ಮೇಲ್ಮನವಿಗಳು) ಅಥವಾ ಆದಾಯ ತೆರಿಗೆ (ಮೇಲ್ಮನವಿಗಳು) ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬಹುದು.

3.2 ಇದನ್ನು ಯಾರು ಬಳಸಬಹುದು?

ಯಾವುದೇ ತೆರಿಗೆದಾರ/ ಕಡಿತದಾರರು ಫಾರ್ಮ್ 35 ಅನ್ನು ಬಳಸಬಹುದು. ಪ್ರತಿ ಮೇಲ್ಮನವಿಯೊಂದಿಗೆ ಮೇಲ್ಮನವಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಇದನ್ನು ಫಾರ್ಮ್ 35 ಅನ್ನು ಸಲ್ಲಿಸುವ ಮೊದಲು ಪಾವತಿಸಬೇಕು. ಮೇಲ್ಮನವಿ ಶುಲ್ಕದ ಪರಿಮಾಣವು AO ಲೆಕ್ಕಚಾರ ಮಾಡಿದ ಅಥವಾ ಮೌಲ್ಯಮಾಪನ ಮಾಡಲಾದ ಒಟ್ಟು ಆದಾಯವನ್ನು ಅವಲಂಬಿತವಾಗಿರುತ್ತದೆ.

4. ಒಂದು ನೋಟದಲ್ಲಿ ಫಾರ್ಮ್

ಫಾರ್ಮ್ 35 ಅನ್ನು ಸಲ್ಲಿಸುವ ಮೊದಲು ನೀವು ಭರ್ತಿ ಮಾಡಬೇಕಾದ ಒಂಬತ್ತು ವಿಭಾಗಗಳಿವೆ. ಇವುಗಳು:

  • ಮೂಲ ಮಾಹಿತಿ
  • ಮೇಲ್ಮನವಿ ಸಲ್ಲಿಸಿರುವ ವಿರುದ್ಧದ ಆದೇಶ
  • ಬಾಕಿ ಉಳಿದಿರುವ ಮೇಲ್ಮನವಿ
  • ಮೇಲ್ಮನವಿ ವಿವರಗಳು
  • ಪಾವತಿಸಿದ ತೆರಿಗೆಗಳ ವಿವರಗಳು
  • ಸತ್ಯಾಂಶಗಳ ಲೆಕ್ಕ ವಿವರಣೆ, ಮೇಲ್ಮನವಿ ಮತ್ತು ಹೆಚ್ಚುವರಿ ಪುರಾವೆಗಳ ಆಧಾರಗಳು
  • ಮೇಲ್ಮನವಿ ಸಲ್ಲಿಸುವ ವಿವರಗಳು
  • ಲಗತ್ತುಗಳು
  • ಪರಿಶೀಲನೆಯ ಫಾರ್ಮ್
Data responsive


4.1 ಮೂಲ ಮಾಹಿತಿ

ಮೂಲ ಮಾಹಿತಿ ಪುಟವೆಂದರೆ PAN ಮತ್ತು ಸಂಪರ್ಕ ವಿವರಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ಪರಿಶೀಲಿಸಬಹುದಾದ ಪುಟವಾಗಿದೆ. ಸಂಪರ್ಕ ವಿವರಗಳನ್ನು ಫಾರ್ಮ್‌ನಲ್ಲಿ ಮುಂಗಡವಾಗಿ ಭರ್ತಿ ಮಾಡಲಾಗಿದೆ.

Data responsive


4.2 ಮೇಲ್ಮನವಿ ಸಲ್ಲಿಸಿರುವ ವಿರುದ್ಧದ ಆದೇಶ

ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಪುಟದಲ್ಲಿ, ತೆರಿಗೆ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ ಮತ್ತು ಆದೇಶದ ಅಗತ್ಯ ವಿವರಗಳನ್ನು ಒದಗಿಸಿ.

Data responsive


4.3 ಬಾಕಿಯಿರುವ ಮೇಲ್ಮನವಿ

ಹಿಂದಿನ ತೆರಿಗೆ ಮೌಲ್ಯಮಾಪನ ವರ್ಷದಿಂದ (AY) ಯಾವುದಾದರೂ ಇದ್ದರೆ, ಬಾಕಿಯಿರುವ ಮೇಲ್ಮನವಿ ವಿಭಾಗವು, ನಿಮ್ಮ ಬಾಕಿಯಿರುವ ಮೇಲ್ಮನವಿಯ ಕುರಿತು ವಿವರಗಳನ್ನು ಒದಗಿಸುತ್ತದೆ. ನೀವು ಮಾಹಿತಿಯನ್ನು ಪರಿಶೀಲಿಸಲು ಮತ್ತು ಅಗತ್ಯವಿರುವ ಹಾಗೆ ತಿದ್ದುಪಡಿ ಮಾಡಲು ಅವಕಾಶ ಹೊಂದಿದ್ದೀರಿ.

Data responsive

4.4 ಮೇಲ್ಮನವಿಯ ವಿವರಗಳು

ಮೇಲ್ಮನವಿ ವಿವರಗಳು ಪುಟದಲ್ಲಿ, ಆದಾಯ ತೆರಿಗೆ ಇಲಾಖೆಯು ವಿಧಿಸುವ ತೆರಿಗೆ ಮೌಲ್ಯಮಾಪನ ಅಥವಾ ದಂಡಕ್ಕೆ ಮೇಲ್ಮನವಿಯು ಸಂಬಂಧಿಸಿದೆಯೇ ಎಂದು ನೀವು ಹೇಳಬಹುದು.

Data responsive

4.5 ಪಾವತಿಸಿದ ತೆರಿಗೆಗಳ ವಿವರಗಳು

ಪಾವತಿಸಿದ ತೆರಿಗೆಗಳ ವಿವರಗಳು ಪುಟವೆಂದರೆ ನೀವು ತೆರಿಗೆ ಮೌಲ್ಯಮಾಪನ ವರ್ಷಕ್ಕಾಗಿ ಪಾವತಿಸಿದ ತೆರಿಗೆಗಳ ವಿವರಗಳನ್ನು ಒದಗಿಸುವ ಪುಟವಾಗಿದೆ

Data responsive


4.6 ಸತ್ಯಾಂಶಗಳ ಲೆಕ್ಕ ವಿವರಣೆ, ಮೇಲ್ಮನವಿ ಮತ್ತು ಹೆಚ್ಚುವರಿ ಪುರಾವೆಗಳ ಆಧಾರಗಳು

ಅಂಖ್ಯಾಂಶಗಳ ಹೇಳಿಕೆ, ಮೇಲ್ಮನವಿಯ ಆಧಾರಗಳು ಮತ್ತು ಹೆಚ್ಚುವರಿ ಪುರಾವೆಗಳ ಪುಟದಲ್ಲಿ, ನಿಮ್ಮ ಪ್ರಕರಣದ ಬಗ್ಗೆ ಅಂಖ್ಯಾಂಶಗಳನ್ನು ಮತ್ತು ನೀವು ಯಾವ ಆಧಾರದ ಮೇಲೆ ಮೇಲ್ಮನವಿಯನ್ನು ಸಲ್ಲಿಸುತ್ತಿರುವಿರಿ ಎಂದು ನೀವು ಚಿಕ್ಕ ಪ್ಯಾರಾಗ್ರಾಫ್‌ನಲ್ಲಿ ಒದಗಿಸಬಹುದು

Data responsive


4.7 ಮೇಲ್ಮನವಿ ಸಲ್ಲಿಸಲು ವಿವರಗಳು

ವಿಳಂಬದ ಕ್ಷಮಾದಾನದ ಆಧಾರಗಳ ವಿವರಗಳು (ಒಂದುವೇಳೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾಗಿದ್ದರೆ) ಮತ್ತು ಮೇಲ್ಮನವಿ ಶುಲ್ಕವನ್ನು ಮೇಲ್ಮನವಿ ಸಲ್ಲಿಸುವ ವಿವರಗಳು ಪುಟದಲ್ಲಿ ಒದಗಿಸಲಾಗಿದೆ.

Data responsive

4.8 ಲಗತ್ತುಗಳು

ಈ ವಿಭಾಗದಲ್ಲಿ, ಮೇಲ್ಮನವಿ ಸಲ್ಲಿಸಿದ ಆದೇಶದ ಪ್ರತಿಯನ್ನು ಮತ್ತು ಬೇಡಿಕೆಯ ಸೂಚನೆಯನ್ನು ಲಗತ್ತಿಸಬೇಕು.

Data responsive


4.9 ಪರಿಶೀಲನೆಯ ವಿಧಾನ

ಪರಿಶೀಲನೆಯ ವಿಧಾನದ ಪುಟವು ತೆರಿಗೆದಾರರು ಫಾರ್ಮ್ 35 ಅನ್ನು ಸಲ್ಲಿಸುವ ಘೋಷಣೆಯಾಗಿದೆ.

Data responsive

5. ಪ್ರವೇಶಿಸುವುದು ಮತ್ತು ಸಲ್ಲಿಸುವುದು ಹೇಗೆ

ಈ ಕೆಳಗಿನ ವಿಧಾನದ ಮೂಲಕ ನೀವು ಫಾರ್ಮ್ 35 ಅನ್ನು ಭರ್ತಿ ಮಾಡಿ ಸಲ್ಲಿಸಬಹುದು:
• ಆನ್‌ಲೈನ್ ವಿಧಾನ - ಇ-ಫೈಲಿಂಗ್ ಪೋರ್ಟಲ್ ಮೂಲಕ
• ಆಫ್‌ಲೈನ್ ವಿಧಾನ - ಆಫ್‌ಲೈನ್ ಯುಟಿಲಿಟಿ ಮೂಲಕ

ಗಮನಿಸಿ: ಇನ್ನಷ್ಟು ತಿಳಿದುಕೊಳ್ಳಲು ಆಫ್‌ಲೈನ್ ಯುಟಿಲಿಟಿ (ಕಾನೂನುಬದ್ಧ ಫಾರ್ಮ್‌ಗಳು) ಬಳಕೆದಾರರ ಕೈಪಿಡಿಯನ್ನು ನೋಡಿ.

ಆನ್‌ಲೈನ್ ವಿಧಾನದ ಮೂಲಕ ಫಾರ್ಮ್ 35 ಅನ್ನು ಭರ್ತಿ ಮಾಡಲು ಮತ್ತು ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

Data responsive

ವೈಯಕ್ತಿಕ ಬಳಕೆದಾರರಿಗೆ, PAN ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ PAN ನಿಷ್ಕ್ರಿಯವಾಗಿದೆ ಎಂದು ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ ಏಕೆಂದರೆ ಅದು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ.
PAN ಅನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು, ಈಗ ಜೋಡಣೆ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.

Data responsive

ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ಪುಟದಲ್ಲಿ, ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 3 : ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಪುಟದಲ್ಲಿ, ಫಾರ್ಮ್ 35 ಆಯ್ಕೆಮಾಡಿ. ಪರ್ಯಾಯವಾಗಿ, ಫಾರ್ಮ್ ಸಲ್ಲಿಸಲು ಸರ್ಚ್ ಬಾಕ್ಸ್‌ನಲ್ಲಿ ಫಾರ್ಮ್ 35 ಅನ್ನು ನಮೂದಿಸಿ.

Data responsive

ಹಂತ 4: ತೆರಿಗೆ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.

Data responsive

ಹಂತ 5: ಸೂಚನೆಗಳು ಪುಟದಲ್ಲಿ, ಪ್ರಾರಂಭಿಸೋಣ ಕ್ಲಿಕ್ ಮಾಡಿ.

Data responsive


ಹಂತ 6: ಅನ್ವಯವಾಗುವ ಆದೇಶದ ಪ್ರಕಾರವನ್ನು ಆಯ್ಕೆಮಾಡಿ:
a. DIN ಇಲ್ಲದೆಯೇ ಆದೇಶಕ್ಕಾಗಿ ಮೇಲ್ಮನವಿ ಸಲ್ಲಿಸಿ.
b. DIN ನೊಂದಿಗೆ ಆದೇಶಕ್ಕಾಗಿ ಮೇಲ್ಮನವಿ ಸಲ್ಲಿಸಿ (1ನೇ ಅಕ್ಟೋಬರ್ 2019 ರ ನಂತರ ಆದೇಶವನ್ನು ನೀಡಲಾಗಿದೆ).

Data responsive

ಹಂತ 6 (a) : ಒಂದುವೇಳೆ DIN ಇಲ್ಲದ ಆದೇಶಕ್ಕಾಗಿ ಮೇಲ್ಮನವಿಯನ್ನು ಫೈಲ್ ಮಾಡಿಗೆ ನೀವು ಆದೇಶದ ಪ್ರಕಾರವನ್ನು ಆಯ್ಕೆ ಮಾಡುತ್ತಿದ್ದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ಮತ್ತು ಸಬ್-ಸೆಕ್ಷನ್ ಆಯ್ಕೆಮಾಡಿ, ಆದೇಶ ಸಂಖ್ಯೆ/DIN, ಆದೇಶದ ದಿನಾಂಕ, ಆದೇಶದ ಸೇವೆಯ ದಿನಾಂಕ / ಬೇಡಿಕೆಯ ಸೂಚನೆ / ಸೆಕ್ಷನ್ 248 ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ತೆರಿಗೆ ಪಾವತಿಯ ದಿನಾಂಕವನ್ನು ನಮೂದಿಸಿ.

Data responsive

ಹಂತ 6 (b): ನೀವು DIN ನೊಂದಿಗೆ ಆದೇಶಕ್ಕಾಗಿ ಫೈಲ್ ಮೇಲ್ಮನವಿಗಾಗಿ ಆದೇಶದ ಪ್ರಕಾರವನ್ನು ಆಯ್ಕೆ ಮಾಡುತ್ತಿದ್ದರೆ (1 ಅಕ್ಟೋಬರ್, 2019 ರ ನಂತರ ಆದೇಶವನ್ನು ನೀಡಲಾಗಿದ್ಧರೆ), ಮೇಲ್ಮನವಿ ಸಲ್ಲಿಸಿದ ಆದೇಶದ DIN, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ ಮತ್ತು ಸಬ್-ಸೆಕ್ಷನ್, ಆದೇಶದ ದಿನಾಂಕ, ಆದೇಶದ ಸೇವೆಯ ದಿನಾಂಕ / ಬೇಡಿಕೆಯ ಸೂಚನೆ / ಸೆಕ್ಷನ್ 248 ಅಡಿಯಲ್ಲಿ ಮೇಲ್ಮನವಿ ಮಾಡುವ ಸಂದರ್ಭದಲ್ಲಿ ತೆರಿಗೆ ಪಾವತಿಯ ದಿನಾಂಕವನ್ನು ಆಯ್ಕೆ ಮಾಡಿ.

Data responsive

ಹಂತ 7: ಫಾರ್ಮ್ 35 ಅನ್ನು ಪ್ರದರ್ಶಿಸಲಾಗುತ್ತದೆ. ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 8: ಪೂರ್ವವೀಕ್ಷಣೆ ಪುಟದಲ್ಲಿ, ವಿವರಗಳನ್ನು ಪರಿಶೀಲಿಸಿ ಹಾಗೂ ಇ-ಪರಿಶೀಲನೆಗೆ ಮುಂದುವರಿಯಿರಿ ಕ್ಲಿಕ್ ಮಾಡಿ.

Data responsive

ಹಂತ 9: ಸಲ್ಲಿಸಲು ಹೌದು ಕ್ಲಿಕ್ ಮಾಡಿ.

Data responsive


ಹಂತ 10: ಹೌದು ಎಂದು ಕ್ಲಿಕ್ ಮಾಡುವ ಮೂಲಕ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ.

Data responsive

ಗಮನಿಸಿ: ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ತೆರಿಗೆದಾರರ PAN ನಿಷ್ಕ್ರಿಯವಾಗಿದೆ ಎಂಬ ಎಚ್ಚರಿಕೆ ಸಂದೇಶವನ್ನು ನೀವು ಪಾಪ್-ಅಪ್‌ನಲ್ಲಿ ನೋಡುತ್ತೀರಿ.

ಈಗ ಲಿಂಕ್ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಬಹುದು, ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.

Data responsive


ಸೂಚನೆ: ಇನ್ನಷ್ಟು ತಿಳಿಯಲು ಇ-ಪರಿಶೀಲನೆ ಮಾಡುವುದು ಹೇಗೆ ಎಂಬುದನ್ನು ನೋಡಿ.

ಯಶಸ್ವಿ ಇ-ಪರಿಶೀಲನೆಯ ನಂತರ, ಯಶಸ್ವಿ ಸಂದೇಶವನ್ನು ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟಿನ ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಗಮನದಲ್ಲಿರಿಸಿಕೊಳ್ಳಿ. ನಿಮ್ಮ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿರುವುದನ್ನು ದೃಢೀಕರಿಸುವ ಇಮೇಲ್ ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ಗೆ ಕಳುಹಿಸಲಾಗುತ್ತದೆ.

Data responsive


6. ಸಂಬಂಧಿತ ವಿಷಯಗಳು