1. ಅವಲೋಕನ
ತೆರಿಗೆ ತಪ್ಪಿಸುವುದು ಮತ್ತು ವಂಚನೆಯನ್ನು ಪ್ರೋತ್ಸಾಹಿಸದಿರಲು, 1985-86ರ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಹೊಸ ಸೆಕ್ಷನ್ 44AB ಅನ್ನು ಸೇರಿಸುವ ಮೂಲಕ 1984 ರ ಹಣಕಾಸು ಕಾಯಿದೆಯಿಂದ ತೆರಿಗೆ ಲೆಕ್ಕಪರಿಶೋಧನೆಯ ಅಗತ್ಯವನ್ನು ಪರಿಚಯಿಸಲಾಯಿತು.
ಒಂದು ತೆರಿಗೆ ಲೆಕ್ಕಪರಿಶೋಧನೆಯು ಎಲ್ಲಾ ಭತ್ಯೆಗಳು, ಕಡಿತಗಳು, ನಷ್ಟಗಳು, ಹೊಂದಾಣಿಕೆಗಳು, ವಿನಾಯಿತಿಗಳು ಇತ್ಯಾದಿಗಳನ್ನು ಪರಿಗಣಿಸಿ ಒಟ್ಟು ಆದಾಯದ ಸರಿಯಾದ ಮೌಲ್ಯಮಾಪನವನ್ನು ಸಕ್ರಿಯಗೊಳಿಸಲು, ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರು ಒದಗಿಸಿದ ಕೆಲವು ವಾಸ್ತವಿಕ ವಿವರಗಳ ಸತ್ಯ ಮತ್ತು ನಿಖರತೆಯ ಕುರಿತು ತೆರಿಗೆ ಲೆಕ್ಕಪರಿಶೋಧಕರ ಅಭಿಪ್ರಾಯದ ಅಭಿವ್ಯಕ್ತಿ ಮತ್ತು ಅದರ ಮೇಲಿನ ತೆರಿಗೆಯ ಅಂತಿಮ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಕೆಳಗಿನ ಗುರಿಗಳನ್ನು ಸಾಧಿಸಲು ಇದನ್ನು ನಡೆಸಲಾಗುತ್ತದೆ:
- CA ಯವರು ತೆರಿಗೆದಾರರ ಖಾತೆಗಳ ಪುಸ್ತಕಗಳ ಸರಿಯಾದ ನಿರ್ವಹಣೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಂಡು ಪ್ರಮಾಣೀಕರಿಸಬೇಕು
- ಲೆಕ್ಕಪರಿಶೋಧನೆಯ ಸಮಯದಲ್ಲಿ ಗಮನಿಸಿದ ಅವಲೋಕನಗಳು / ವ್ಯತ್ಯಾಸಗಳನ್ನು CA ಯವರು ವರದಿ ಮಾಡಬೇಕು
- ಫಾರ್ಮ್ 3CD ಯಲ್ಲಿ ಉಲ್ಲೇಖಿಸಿದಂತೆ ಆದಾಯ ತೆರಿಗೆ ಕಾಯಿದೆಯ ವಿವಿಧ ನಿಬಂಧನೆಗಳ ಅನುಸರಣೆಯಲ್ಲಿ ಸೂಚಿಸಲಾದ ಮಾಹಿತಿಯನ್ನು ವರದಿ ಮಾಡಬೇಕು.
ಈ ಫಾರ್ಮ್ ಅನ್ನು CA, ಅವರ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (DSC) ಬಳಸಿಕೊಂಡು ಅಪ್‌ಲೋಡ್ ಮಾಡಬೇಕು.
ನಿಯಮ 6G ಯು ಸೆಕ್ಷನ್ 44ABಯ ಅಡಿಯಲ್ಲಿ ಒದಗಿಸಬೇಕಾದ ಲೆಕ್ಕಪತ್ರಗಳ ಲೆಕ್ಕಪರಿಶೋಧನೆಯ ವರದಿಯನ್ನು ವರದಿ ಮಾಡುವ ಮತ್ತು ಪ್ರಸ್ತುತ ಪಡಿಸುವ ವಿಧಾನವನ್ನು ಸೂಚಿಸುತ್ತದೆ. ಫಾರ್ಮ್‌ಗಳಲ್ಲಿ ಎರಡು ವಿಧಗಳಿವೆ - 3CA-3CD ಮತ್ತು 3CB-3CD. ಆದ್ದರಿಂದ, ಪ್ರತಿ ತೆರಿಗೆದಾರರಿಗೆ ಎರಡರಲ್ಲಿ ಒಂದು ಮಾತ್ರ ಅನ್ವಯಿಸುತ್ತದೆ.
- ಫಾರ್ಮ್ 3CA-3CD ಯು ಯಾವುದೇ ಕಾನೂನಿನ ಪ್ರಕಾರ ಅಥವಾ ಅದರ ಅಡಿಯಲ್ಲಿ ಅವರ ಲೆಕ್ಕಪತ್ರ ಲೆಕ್ಕಪರಿಶೋಧನೆಯ ಅಗತ್ಯವಿರುವ ವ್ಯಕ್ತಿಯ ಸಂದರ್ಭದಲ್ಲಿ ಅನ್ವಯಿಸುತ್ತದೆ
- ಫಾರ್ಮ್ 3CB-3CD ಯು ಒಬ್ಬ ವ್ಯಕ್ತಿಯು ಮೇಲೆ ಉಲ್ಲೇಖಿಸಲಾದ ವ್ಯಕ್ತಿಯಲ್ಲದಿದ್ದಲ್ಲಿ ಅಂದರೆ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡುವ ಅಗತ್ಯವಿಲ್ಲದಿದ್ದಾಗ ಅನ್ವಯಿಸುತ್ತದೆ
2. ಈ ಸೇವೆಯನ್ನು ಪಡೆಯಲು ಪೂರ್ವಾಪೇಕ್ಷಿತಗಳು
- ತೆರಿಗೆದಾರ ಮತ್ತು CA ಮಾನ್ಯವಾದ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿದ್ದಾರೆ
- ತೆರಿಗೆದಾರ ಮತ್ತು CA ರವರ PAN ಸ್ಥಿತಿ ಸಕ್ರಿಯವಾಗಿದೆ
- ತೆರಿಗೆದಾರರು ಫಾರ್ಮ್ 3CB-CD ಗೆ CA ಅನ್ನು ನಿಯೋಜಿಸಿದ್ದಾರೆ
- CA ಮತ್ತು ತೆರಿಗೆದಾರರು ಮಾನ್ಯ ಹಾಗೂ ಸಕ್ರಿಯ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು ಹೊಂದಿದ್ದಾರೆ.
- ವೈಯಕ್ತಿಕ ತೆರಿಗೆದಾರರಾದ ಸಂದರ್ಭದಲ್ಲಿ ತೆರಿಗೆದಾರರ PAN ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲಾಗಿದೆ (ಶಿಫಾರಸು ಮಾಡಲಾಗಿದೆ)
3. ಫಾರ್ಮ್ ಬಗ್ಗೆ
3.1. ಉದ್ದೇಶ
ಯಾವುದೇ ಇತರ ಕಾನೂನಿನ ಅಡಿಯಲ್ಲಿ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡುವ ಅಗತ್ಯವಿಲ್ಲದ ವ್ಯಕ್ತಿಯ ಸಂದರ್ಭದಲ್ಲಿ ಫಾರ್ಮ್ 3CB-3CD ಯು ಅನ್ವಯಿಸುತ್ತದೆ. ಇದು ತೆರಿಗೆದಾರರು ನಿರ್ವಹಿಸುವ ಲೆಕ್ಕಪತ್ರದ ಪುಸ್ತಕಗಳ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸುವುದು, CA ಗಮನಿಸಿರುವ ವೀಕ್ಷಣೆಗಳು / ವ್ಯತ್ಯಾಸಗಳನ್ನು ವರದಿ ಮಾಡುವುದು ಮತ್ತು CA ಯುಫಾರ್ಮ್ 3CD ಯಲ್ಲಿ ಉಲ್ಲೇಖಿಸಿದಂತೆ ಆದಾಯ ತೆರಿಗೆ ಕಾಯ್ದೆಯ ವಿವಿಧ ನಿಬಂಧನೆಗಳ ಅನು ಸರಣೆಯಲ್ಲಿ ಸೂಚಿಸಲಾದ ಮಾಹಿತಿಯನ್ನು ವರದಿ ಮಾಡುವುದಕ್ಕೆ ಇದೆ.
3.2. ಇದನ್ನು ಯಾರು ಬಳಕೆ ಮಾಡಬಹುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಒಬ್ಬ CA ಮತ್ತು ಫಾರ್ಮ್ 3CB-3CD ಅನ್ನು ಲೆಕ್ಕಪರಿಶೋಧನೆ ಮಾಡಲು ತೆರಿಗೆದಾರರಿಂದ ನಿಯೋಜಿಸಲ್ಪಟ್ಟ ಯಾರೇ ಆದರೂ ಈ ಫಾರ್ಮ್ ಅನ್ನು ಪ್ರವೇಶಿಸಲು ಅರ್ಹರಾಗಿರುತ್ತಾರೆ.
4. ಒಂದು ನೋಟದಲ್ಲಿ ಫಾರ್ಮ್
ಫಾರ್ಮ್ 3CB-3CD ಯು 2 ವಿಭಾಗಗಳನ್ನು ಹೊಂದಿದ್ದು ಅದನ್ನು ಫಾರ್ಮ್ ಸಲ್ಲಿಸುವ ಮೊದಲು ಭರ್ತಿ ಮಾಡಬೇಕು. ಇವುಗಳು:
- ಫಾರ್ಮ್ ನಂ. 3CB
- ಫಾರ್ಮ್ ನಂ. 3CD
ಫಾರ್ಮ್ 3CB-3CD ಯ ವಿಭಾಗಗಳ ಒಂದು ಕಿರುಪರಿಚಯ ಇಲ್ಲಿದೆ.
- ಮೊದಲ ಪುಟ ನಿಮಗೆ ಫಾರ್ಮ್ 3CB ಮತ್ತು ಫಾರ್ಮ್ 3CD ಗಳಿಗೆ ನ್ಯಾವಿಗೇಟ್ ಮಾಡಲು ಸಹಾಯ್ ಮಾಡುತ್ತದೆ.
- ಫಾರ್ಮ್ ಸಂಖ್ಯೆ 3CB ಪುಟದಲ್ಲಿ ವ್ಯಕ್ತಿಯ ವ್ಯವಹಾರ ಅಥವಾ ವೃತ್ತಿಯ ಖಾತೆಯ ಲೆಕ್ಕಪರಿಶೋಧನೆಯ ವಿವರಗಳನ್ನು CA ನಮೂದಿಸುತ್ತಾರೆ.
- ಫಾರ್ಮ್ ಸಂಖ್ಯೆ 3CD ಯಲ್ಲಿ ಮುಂದುವರಿದು 5 ವಿಭಾಗಗಳಿವೆ, ಅಲ್ಲಿ CA ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 44AB ಅಡಿಯಲ್ಲಿ ಒದಗಿಸಬೇಕಾದ ವಿವರಗಳನ್ನು ನಮೂದಿಸುತ್ತಾರೆ.
- ಫಾರ್ಮ್ 3CD ಯ ಭಾಗ A (ಅಧಿನಿಯಮ 1 ರಿಂದ 8) ನಲ್ಲಿ ತೆರಿಗೆದಾರರ ಮೂಲ ವಿವರಗಳನ್ನು ಒದಗಿಸುವ ಅಗತ್ಯವಿದೆ. ಫಾರ್ಮ್‌ನ ಭಾಗ A ಅನ್ನು ಭರ್ತಿ ಮಾಡಿ ಸೇವ್ ಮಾಡಿದ ನಂತರ ಮಾತ್ರ ಬಳಕೆದಾರರು ಮುಂದುವರಿಯಬಹುದು.
- ಫಾರ್ಮ್ 3 CDಯ ಭಾಗ B ಆದಾಯ ತೆರಿಗೆ ಕಾಯ್ದೆ, 1961 ರ ಅಧಿನಿಯಮ 9 ರಿಂದ 44 ರ ಆಧಾರದ ಮೇಲೆ ಮತ್ತಷ್ಟು ವಿಭಾಗಗಳನ್ನು ಹೊಂದಿದೆ. ಈ ಸೆಕ್ಷನ್‌ನಲ್ಲಿ ಎಲ್ಲಾ ಅಧಿನಿಯಮಗಳ ವಿವರಗಳನ್ನು ಭರ್ತಿ ಮಾಡಬೇಕಾಗಿದೆ.
5. ಪ್ರವೇಶಿಸುವುದು ಮತ್ತು ಸಲ್ಲಿಸುವುದು ಹೇಗೆ
ನೀವು ಫಾರ್ಮ್ ಅನ್ನು CA ಗೆ ನಿಯೋಜಿಸಬಹುದು ಮತ್ತು ಆನ್‌ಲೈನ್ ಮೋಡ್ ಮೂಲಕ ಸಲ್ಲಿಸಿದ ಫಾರ್ಮ್ ಅನ್ನು ಪರಿಶೀಲಿಸಬಹುದು. CA ಯವರು ಆಫ್‌ಲೈನ್ ಯುಟಿಲಿಟಿ ಮೂಲಕ ಮಾತ್ರ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿದೆ.
ಸೂಚನೆ: ಮತ್ತಷ್ಟು ತಿಳಿಯಲು ಬಳಕೆದಾರರ ಕೈಪಿಡಿ ಶಾಸನಬದ್ಧ ಫಾರ್ಮ್‌ಗಳಿಗಾಗಿ ಆಫ್‌ಲೈನ್ ಯುಟಿಲಿಟಿ ಯನ್ನು ನೋಡಿ.
5.1. CA ಯವರಿಗೆ ಫಾರ್ಮ್ ಅನ್ನು ನಿಯೋಜಿಸುವುದು
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿದ್ದರೆ, ನಿಮ್ಮ ಆಧಾರ್ ಜೊತೆ ಲಿಂಕ್ ಮಾಡದ ಕಾರಣ ನಿಮ್ಮ PAN ನಿಷ್ಕ್ರಿಯಗೊಂಡಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.
PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಲು, ಈಗಲೇ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ನಲ್ಲಿ, ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ಹಂತ 3:ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಪುಟದಲ್ಲಿ, ಫಾರ್ಮ್ 3CB-3CD ಅನ್ನು ಕ್ಲಿಕ್ ಮಾಡಿ. ಪರ್ಯಾಯವಾಗಿ, ಫಾರ್ಮ್ ಸಲ್ಲಿಸಲು ಸರ್ಚ್ ಬಾಕ್ಸ್‌ನಲ್ಲಿ ಫಾರ್ಮ್ 3CB-3CD ಎಂದು ನಮೂದಿಸಿ.
ಹಂತ 4: ಫಾರ್ಮ್ 3CB-3CD ಪುಟದಲ್ಲಿ, ಫೈಲಿಂಗ್ ವಿಧ ಮತ್ತು ತೆರಿಗೆ ಮೌಲ್ಯಮಾಪನ ವರ್ಷ (A.Y.)ವನ್ನು ಆಯ್ಕೆ ಮಾಡಿ, ಚಾರ್ಟರ್ಡ್ ಅಕೌಂಟೆಂಟ್ ನಿಯೋಜಿಸಿ ಮತ್ತು ಯಾವುದೇ ಪೂರಕ ದಾಖಲೆಗಳನ್ನು ಲಗತ್ತಿಸಿ. ಮುಂದುವರೆಯಲು ಮುಂದುವರಿಸಿ ಕ್ಲಿಕ್ ಮಾಡಿ.
ಸೂಚನೆ:
- ನೀವು ಈಗಾಗಲೇ CA ಅನ್ನು ನಿಯೋಜಿಸಿದ್ದರೆ, ಫೈಲಿಂಗ್ ಅಥವಾ ಸ್ವೀಕಾರಕ್ಕಾಗಿ CA ನೊಂದಿಗೆ ಬಾಕಿ ಉಳಿದಿರುವ ಫಾರ್ಮ್ 3CB-3CD ನ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
- CA ಅನ್ನು ನಿಯೋಜಿಸದಿದ್ದರೆ, ಅಸ್ತಿತ್ವದಲ್ಲಿರುವCA ಗಳು ಲಿಂಕ್‌ನಿಂದ ಹಿಂದೆ ನಿಯೋಜಿಸಲಾದ CA ಗಳ ಅಸ್ತಿತ್ವದಲ್ಲಿರುವ ಪಟ್ಟಿಯಿಂದ ಆಯ್ಕೆ ಮಾಡುವ ಮೂಲಕ ನೀವು CA ಅನ್ನು ನಿಯೋಜಿಸಬಹುದು
- ಯಾವುದೇ CA ಗಳನ್ನು ಸೇರಿಸದಿದ್ದಲ್ಲಿ, ನೀವು ಡ್ಯಾಶ್‌ಬೋರ್ಡ್ > ಅಧಿಕೃತ ಪಾಲುದಾರರು > ನನ್ನ CA > ಹೊಸ CA ಯನ್ನು ಸೇರಿಸಿ ಕ್ಲಿಕ್ ಮಾಡುವ ಮೂಲಕ CA ಅನ್ನು ಸೇರಿಸಬಹುದು
ಫಾರ್ಮ್ ಅನ್ನು CA ಗೆ ನಿಯೋಜಿಸಿದ ನಂತರ, ವಹಿವಾಟಿನ ID ಜೊತೆಗೆ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯನ್ನು ಬರೆದಿಟ್ಟುಕೊಳ್ಳಿ.
5.2. CA ನಿಂದ ಫಾರ್ಮ್ ಅನ್ನು ಸಲ್ಲಿಸುವುದು
ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ನಲ್ಲಿ, ಕ್ಲಿಕ್ ಮಾಡಿ ಬಾಕಿ ಉಳಿದಿರುವ ಕ್ರಮಗಳು > ವರ್ಕ್‌ಲಿಸ್ಟ್ ಇದರಲ್ಲಿ ಬಾಕಿ ಇರುವ ಐಟಂಗಳ ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ.
ಹಂತ 3: ನೀವು ಕ್ರಮ ಕೈಗೊಳ್ಳುವುದಕ್ಕಾಗಿ ಟ್ಯಾಬ್ ಅಡಿಯಲ್ಲಿ, ನಿಮಗೆ ನಿಯೋಜಿಸಲಾದ ಫಾರ್ಮ್ 3CB-CD ವಿರುದ್ಧ, ಸ್ವೀಕರಿಸಿ ಅನ್ನು ಕ್ಲಿಕ್ ಮಾಡಿ.
ತೆರಿಗೆದಾರರ PAN ಜೊತೆ ಆಧಾರ್ ಲಿಂಕ್ ಮಾಡದಿದ್ದರೆ, ಫಾರ್ಮ್ ಅನ್ನು ಸ್ವೀಕರಿಸುವಾಗ ಅಥವಾ ತಿರಸ್ಕರಿಸುವಾಗ ಸ್ಕ್ರೀನ್ ಮೇಲೆ ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ತೆರಿಗೆದಾರರ PAN ನಿಷ್ಕ್ರಿಯವಾಗಿದೆ ಎಂಬ ಪಾಪ್-ಅಪ್ ಸಂದೇಶವನ್ನು CA ನೋಡುತ್ತಾರೆ.
ಫಾರ್ಮ್ ಅನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
ಸೂಚನೆ: ನೀವು ವಿನಂತಿಯನ್ನು ತಿರಸ್ಕರಿಸಲು ಆಯ್ಕೆ ಮಾಡಿದರೆ, ಸೇವಾ ವಿನಂತಿಯ ನಿರಾಕರಣೆಯ ಕಾರಣವನ್ನು ನೀವು ಒದಗಿಸಬೇಕಾಗುತ್ತದೆ.
ಹಂತ 4: ವಿನಂತಿಯನ್ನು ಯಶಸ್ವಿಯಾಗಿ ಸ್ವೀಕರಿಸಿದ ನಂತರ, ವಹಿವಾಟು ID ಜೊತೆಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯನ್ನು ಬರೆದಿಟ್ಟುಕೊಳ್ಳಿ. ಫಾರ್ಮ್ ಅನ್ನು ಫೈಲ್ ಮಾಡಲು ಕಾರ್ಯಪಟ್ಟಿಗೆ ಹಿಂತಿರುಗಿ ಕ್ಲಿಕ್ ಮಾಡಿ.
ಹಂತ 5: ನಿಮ್ಮ ವರ್ಕ್‌ಲಿಸ್ಟ್ ನಲ್ಲಿ, ಫೈಲಿಂಗ್‌ಗಾಗಿ ಬಾಕಿ ಉಳಿದಿದೆ ಟ್ಯಾಬ್ ಅಡಿಯಲ್ಲಿ, ನೀವು ಸ್ವೀಕರಿಸಿದ ಫಾರ್ಮ್ 3CB-3CD ವಿರುದ್ಧ. ಫಾರ್ಮ್ ಫೈಲ್ ಮಾಡಿ ಅನ್ನು ಕ್ಲಿಕ್ ಮಾಡಿ
ತೆರಿಗೆದಾರರ PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಫಾರ್ಮ್ ಅನ್ನು ಸಲ್ಲಿಸುವ/ಅಪ್‌ಲೋಡ್ ಮಾಡುವ ಸಮಯದಲ್ಲಿ ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ತೆರಿಗೆದಾರರ PAN ನಿಷ್ಕ್ರಿಯವಾಗಿದೆ ಎಂದು ಪಾಪ್-ಅಪ್ ಸಂದೇಶವನ್ನು CA ನೋಡುತ್ತಾರೆ. ಫಾರ್ಮ್ ಫೈಲ್/ಅಪ್ಲೋಡ್ ಮಾಡಲು ಮುಂದುವರಿಸಿ ಕ್ಲಿಕ್ ಮಾಡಿ
ಹಂತ 6: ಫಾರ್ಮ್ 3CB-3CD ಪುಟದಲ್ಲಿ, ಮುಂದುವರೆಯಲು ಮಂದುವರೆಯಿರಿ ಅನ್ನು ಕ್ಲಿಕ್ ಮಾಡಿ.
ಹಂತ 7: ಆಫ್‌ಲೈನ್ ಯುಟಿಲಿಟಿಯನ್ನು ಡೌನ್‌ಲೋಡ್ ಮಾಡಿ (ನಿಮ್ಮ ಮುಖಪುಟದಲ್ಲಿ ಡೌನ್‌ಲೋಡ್‌ಗಳು ವಿಭಾಗದಲ್ಲಿ ಸಹ ಲಭ್ಯವಿದೆ) ಮತ್ತು ಯುಟಿಲಿಟಿಯನ್ನು ಬಳಸಿಕೊಂಡು ಫಾರ್ಮ್ ಅನ್ನು ಫೈಲ್ ಮಾಡಿ. ಆಫ್‌ಲೈನ್ ಯುಟಿಲಿಟಿಯನ್ನು ಬಳಸಿಕೊಂಡು ರಚಿಸಲಾದ JSON ಫೈಲ್ ಅನ್ನು ಫಾರ್ಮ್ 3CB-3CD ಪುಟದಲ್ಲಿ ಅಪ್‌ಲೋಡ್ ಮಾಡಿ ಅಗತ್ಯ ಪೂರಕ ದಾಖಲೆಗಳನ್ನು ಲಗತ್ತಿಸಿ ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
ಹಂತ 8: ಅನನ್ಯ ಗುರುತಿನ ಸಂಖ್ಯೆ ಪುಟದಲ್ಲಿ, ಮುಂದುವರೆಯಿರಿ ಅನ್ನು ಕ್ಲಿಕ್ ಮಾಡಿ.
ಹಂತ 9: ಒಂದುವೇಳೆ ನೀವು ಮುಂದುವರೆಯಿರಿ ಅನ್ನು ಆಯ್ಕೆ ಮಾಡಿದರೆ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು ಬಳಸಿಕೊಂಡು ಪರಿಶೀಲಿಸಬಹುದು.
ಸೂಚನೆ: ಇನ್ನಷ್ಟು ತಿಳಿಯಲು ಇ-ಪರಿಶೀಲಿಸುವುದು ಹೇಗೆಬಳಕೆದಾರ ಕೈಪಿಡಿಯನ್ನು ನೋಡಿ.
ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟಿನ ID ಜೊತೆಗೆ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯನ್ನು ಬರೆದಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲಿ ತೆರಿಗೆದಾರರು ದೃಢೀಕರಣದ ಮೆಸೇಜ್ ಅನ್ನು ಸ್ವೀಕರಿಸುತ್ತಾರೆ.
5.3. ತೆರಿಗೆದಾರರಿಂದ ಪರಿಶೀಲನೆ
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ವೈಯಕ್ತಿಕ ಬಳಕೆದಾರರಿಗೆ, PAN ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿದ್ದರೆ, ನಿಮ್ಮ ಆಧಾರ್ ಜೊತೆ ಲಿಂಕ್ ಮಾಡದ ಕಾರಣ ನಿಮ್ಮ PAN ನಿಷ್ಕ್ರಿಯಗೊಂಡಿದೆ ಎಂಬ ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ.
PAN ಅನ್ನು ಆಧಾರ್ ಜೊತೆ ಲಿಂಕ್ ಮಾಡಲು, ಈಗಲೇ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಬಾಕಿ ಇರುವ ಕ್ರಿಯೆಗಳು > ಕಾರ್ಯಪಟ್ಟಿ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಕಾರ್ಯಪಟ್ಟಿಯಲ್ಲಿ, ಸ್ವೀಕಾರಕ್ಕಾಗಿ ಬಾಕಿಯಿದೆ ಟ್ಯಾಬ್ ಅಡಿಯಲ್ಲಿ, ನಿಮ್ಮ CA ಸಲ್ಲಿಸಿದ ಫಾರ್ಮ್ 3CB-3CD ಮುಂದೆ ಅಂಗೀಕರಿಸಿ ಕ್ಲಿಕ್ ಮಾಡಿ.
ಸೂಚನೆ: ನೀವು ವಿನಂತಿಯನ್ನು ತಿರಸ್ಕರಿಸಲು ಆಯ್ಕೆ ಮಾಡಿದರೆ, ಸೇವಾ ವಿನಂತಿಯ ನಿರಾಕರಣೆಯ ಕಾರಣವನ್ನು ನೀವು ಒದಗಿಸಬೇಕಾಗುತ್ತದೆ.
ಹಂತ 4: ವಿನಂತಿಯನ್ನು ಸ್ವೀಕರಿಸಿದ ನಂತರ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ನೀವು ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು ಬಳಸಿಕೊಂಡು ಪರಿಶೀಲಿಸಬಹುದು.
ಸೂಚನೆ: ಇನ್ನಷ್ಟು ತಿಳಿದುಕೊಳ್ಳಲು ಇ-ಪರಿಶೀಲಿಸುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೋಡಿ.
ಯಶಸ್ವಿ ಇ-ಪರಿಶೀಲನೆಯ ನಂತರ, ಯಶಸ್ವಿ ಸಂದೇಶವನ್ನು ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟಿನ ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲೂ ನೀವು ದೃಢೀಕರಣ ಮೆಸೇಜನ್ನು ಸ್ವೀಕರಿಸುತ್ತೀರಿ.
6. ಸಂಬಂಧಿತ ವಿಷಯಗಳು
- ಲಾಗಿನ್
- ಡ್ಯಾಶ್‌ಬೋರ್ಡ್ ಮತ್ತು ವರ್ಕ್‌ಲಿಸ್ಟ್
- ಆದಾಯ ತೆರಿಗೆ ಫಾರ್ಮ್‌ಗಳು (ಅಪ್ಲೋಡ್ ಮಾಡಿ)
- EVC ರಚಿಸಿ
- ನನ್ನ CA
- ಇ-ಪರಿಶೀಲಿಸುವುದು ಹೇಗೆ
- DSC ಅನ್ನು ನೋಂದಾಯಿಸಿ
- ಪ್ರತಿನಿಧಿಯಾಗಿ ಅಧಿಕೃತಗೊಳಿಸಿ / ನೋಂದಾಯಿಸಿ
- ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ
ಸೂಚನೆ: ಇದು ಕೇವಲ ಸಹಾಯಕ ದಾಖಲೆಯಾಗಿದೆ. ಕಾನೂನು ನಿಬಂಧನೆಗಳಿಗಾಗಿ ದಯವಿಟ್ಟು ಕಾಲಕಾಲಕ್ಕೆ ಹೊರಡಿಸಿದ ಆದಾಯ ತೆರಿಗೆ ಕಾಯಿದೆ 1961, ಆದಾಯ ತೆರಿಗೆ ನಿಯಮಗಳು, ಅಧಿಸೂಚನೆಗಳು, CBDT (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಹೊರಡಿಸಿದ ಸುತ್ತೋಲೆಗಳನ್ನು ನೋಡಿ.