1. ನಾನು ಫಾರ್ಮ್ 67 ಅನ್ನು ಏಕೆ ಸಲ್ಲಿಸಬೇಕು?
ಒಂದು ದೇಶದಲ್ಲಿ ಅಥವಾ ಭಾರತದ ಹೊರಗಿನ ನಿರ್ದಿಷ್ಟ ಪ್ರಾಂತ್ಯದಲ್ಲಿ ಪಾವತಿಸಿದ ವಿದೇಶಿ ತೆರಿಗೆಯ ಕ್ರೆಡಿಟ್ ಅನ್ನು ಪಡೆಯಲು ನೀವು ಬಯಸಿದರೆ ನಮೂನೆ 67 ಅನ್ನು ಸಲ್ಲಿಸಬೇಕು. ಪ್ರಸ್ತುತ ವರ್ಷದ ನಷ್ಟವನ್ನು ಹಿಂದಕ್ಕೆ ಒಯ್ಯವ ಸಂದರ್ಭದಲ್ಲಿ ಫಾರ್ಮ್ 67 ಅನ್ನು ಸಹ ಸಲ್ಲಿಸಬೇಕಾಗುವುದರಿಂದ ಇದರ ಪರಿಣಾಮವಾಗಿ ಹಿಂದಿನ ಯಾವುದೇ ವರ್ಷಗಳಲ್ಲಿ ಕ್ರೆಡಿಟ್ ಪಡೆದಿದ್ದರೆ, ವಿದೇಶಿ ತೆರಿಗೆಯನ್ನು ರೀಫಂಡ್ ಮಾಡಲಾಗುತ್ತದೆ.
2. ಫಾರ್ಮ್ 67 ಅನ್ನು ಯಾವ ಮೋಡ್‌ಗಳಲ್ಲಿ ಸಲ್ಲಿಸಬಹುದು?
ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾತ್ರ ಫಾರ್ಮ್ 67 ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಆದ ನಂತರ, ಫಾರ್ಮ್ 67 ಅನ್ನು ಆಯ್ಕೆ ಮಾಡಿ, ಫಾರ್ಮ್ ಅನ್ನು ಸಿದ್ಧಪಡಿಸಿ ಮತ್ತು ಸಲ್ಲಿಸಿ.
3. ಫಾರ್ಮ್ 67 ಅನ್ನು ಹೇಗೆ ಇ-ಪರಿಶೀಲನೆ ಮಾಡಬಹುದು?
ತೆರಿಗೆದಾರರು ಆಧಾರ್ OTP, EVC ಅಥವಾ DSC ಬಳಸಿಕೊಂಡು ಫಾರ್ಮ್ ಅನ್ನು ಇ-ಪರಿಶೀಲಿಸಬಹುದು. ಇನ್ನಷ್ಟು ತಿಳಿದುಕೊಳ್ಳಲು ಇ-ಪರಿಶೀಲಿಸುವುದು ಹೇಗೆ ಎಂಬ ಬಳಕೆದಾರರ ಕೈಪಿಡಿಯನ್ನು ನೀವು ನೋಡಬಹುದು.
4. ಫಾರ್ಮ್ 67 ಅನ್ನು ಸಲ್ಲಿಸಲು CA ಪ್ರಮಾಣಪತ್ರ ಕಡ್ಡಾಯವಾಗಿದೆಯೇ?
ಇಲ್ಲ, ನೀವು ಕ್ಲೈಮ್ ಮಾಡಿದ ವಿದೇಶಿ ತೆರಿಗೆ ಕ್ರೆಡಿಟ್‌ನ ವಿವರಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು CA ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯವಲ್ಲ.
5. ನನ್ನ ಪರವಾಗಿ ಫಾರ್ಮ್ 67 ಅನ್ನು ಫೈಲ್ ಮಾಡಲು ನಾನು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದೇ?
ಹೌದು, ನಿಮ್ಮ ಪರವಾಗಿ ಫಾರ್ಮ್ 67 ಅನ್ನು ಫೈಲ್ ಮಾಡಲು ನೀವು ಅಧಿಕೃತ ಪ್ರತಿನಿಧಿಯನ್ನು ಸೇರಿಸಬಹುದು.
6. ಫಾರ್ಮ್ 67 ಸಲ್ಲಿಸಲು ಸಮಯದ ಮಿತಿ ಎಷ್ಟು?
139(1) ಸೆಕ್ಷನ್ ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ರಿಟರ್ನ್ ಫೈಲ್ ಮಾಡುವ ನಿಗದಿತ ದಿನಾಂಕಕ್ಕೆ ಮೊದಲು ಫಾರ್ಮ್ 67 ಅನ್ನು ಸಲ್ಲಿಸಬೇಕು.