1. ಅವಲೋಕನ
1962 ರ ಆದಾಯ ತೆರಿಗೆ ನಿಯಮಗಳಲ್ಲಿನ ನಿಯಮ, 128 ರ ಪ್ರಕಾರ, ನಿವಾಸಿ ತೆರಿಗೆದಾರರು, ಒಂದು ದೇಶದಲ್ಲಿ ಅಥವಾ ಭಾರತದ ಹೊರಗಿನ ನಿರ್ದಿಷ್ಟ ಭೂಪ್ರದೇಶದಲ್ಲಿ ಪಾವತಿಸಿದ ಯಾವುದೇ ವಿದೇಶಿ ತೆರಿಗೆಗೆ ಕ್ರೆಡಿಟ್ ಅನ್ನು ಕ್ಲೈಮ್ ಮಾಡಲು ಅರ್ಹರಾಗಿದ್ದಾರೆ. ನಿಗದಿತ ಸಮಯಾವಧಿಗಳಲ್ಲಿ ಅಗತ್ಯ ವಿವರಗಳನ್ನು ತೆರಿಗೆದಾರರು ಫಾರ್ಮ್ 67 ನಲ್ಲಿ ಒದಗಿಸಿದರೆ ಮಾತ್ರ ಕ್ರೆಡಿಟ್ ಅನ್ನು ಅನುಮತಿಸಲಾಗುತ್ತದೆ.
ಫಾರ್ಮ್ 67 ಅನ್ನು ಆನ್‌ಲೈನ್ ಮೋಡ್ ಮೂಲಕ ಮಾತ್ರ ಸಲ್ಲಿಸಬಹುದು. ಈ ಸೇವೆಯು ನೋಂದಾಯಿತ ಬಳಕೆದಾರರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಫಾರ್ಮ್ 67 ಫೈಲ್ ಮಾಡಲು ಅನುಮತಿಸುತ್ತದೆ.
2. ಈ ಸೇವೆಯನ್ನು ಪಡೆಯಲು ಬೇಕಾದ ಪೂರ್ವಾಪೇಕ್ಷಿತಗಳು
• ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು.
• ತೆರಿಗೆದಾರರ PAN ಮತ್ತು ಆಧಾರ್ ಜೋಡಣೆ ಆಗಿದೆ. (ಶಿಫಾರಸು ಮಾಡಲಾಗಿದೆ)
• ತೆರಿಗೆದಾರರ PAN ಸ್ಥಿತಿ "ಸಕ್ರಿಯ" ಆಗಿರಬೇಕು
3. ಫಾರ್ಮ್ ಕುರಿತು
3.1 ಉದ್ದೇಶ
ಕಡಿತದ ಮೂಲಕ ಅಥವಾ ಇತರ ರೀತಿಯಲ್ಲಿ ಭಾರತದ ಹೊರಗಿನ ದೇಶದಲ್ಲಿ ಪಾವತಿಸಿದ ಯಾವುದೇ ವಿದೇಶಿ ತೆರಿಗೆಯ ಮೊತ್ತಕ್ಕೆ ಕ್ರೆಡಿಟ್ ಹೊಂದಿರುವ ನಿವಾಸಿ ತೆರಿಗೆದಾರರು ಫಾರ್ಮ್ 67 ರಲ್ಲಿ ಹೇಳಿಕೆಯನ್ನು ಅಂತಹ ತೆರಿಗೆಗಳ ಕ್ರೆಡಿಟ್ ಅನ್ನು ಪಡೆಯಲು ಸೆಕ್ಷನ್ 139 ರ ಸಬ್-ಸೆಕ್ಷನ್ (1) ರ ಅಡಿಯಲ್ಲಿ ಆದಾಯದ ರಿಟರ್ನ್ ಅನ್ನು ಒದಗಿಸುವುದಕ್ಕಾಗಿ ನಿರ್ದಿಷ್ಟಪಡಿಸಿದ ದಿನಾಂಕದಂದು ಅಥವಾ ಮೊದಲು ಒದಗಿಸಬೇಕಾಗುತ್ತದೆ
ಯಾವುದೇ ಹಿಂದಿನ ವರ್ಷಗಳಲ್ಲಿ ಕ್ರೆಡಿಟ್ ಕ್ಲೈಮ್ ಮಾಡಲಾದ ವಿದೇಶಿ ತೆರಿಗೆಯ ಮರುಪಾವತಿಗೆ ಕಾರಣವಾದ ಪ್ರಸಕ್ತ ವರ್ಷದ ನಷ್ಟವನ್ನು ಹಿಂದಕ್ಕೆ ಸಾಗಿಸುವ ಸಂದರ್ಭದಲ್ಲಿ ಫಾರ್ಮ್ 67 ಅನ್ನು ಸಹ ಒದಗಿಸಬೇಕಾಗುತ್ತದೆ.
3.2 ಇದನ್ನು ಯಾರು ಬಳಸಬಹುದು?
ಭಾರತದ ಹೊರಗಿನ ದೇಶದಲ್ಲಿ ಕಡಿತದ ಮೂಲಕ ಅಥವಾ ಬೇರೆ ರೀತಿಯಲ್ಲಿ ಪಾವತಿಸಿದ ಯಾವುದೇ ವಿದೇಶಿ ತೆರಿಗೆಯ ಮೊತ್ತಕ್ಕೆ ಕ್ರೆಡಿಟ್ ಹೊಂದಿರುವ ದೇಶವಾಸಿ ತೆರಿಗೆದಾರರು.
4. ಫಾರ್ಮ್‌ನ ಸಂಕ್ಷಿಪ್ತ ಮಾಹಿತಿ
ಫಾರ್ಮ್ 67 ರಲ್ಲಿ 4 ಭಾಗಗಳಿವೆ:
- ಭಾಗ A
- ಭಾಗ B
- ಪರಿಶೀಲನೆ
- ಲಗತ್ತುಗಳು
4.1. ಭಾಗ A
ಫಾರ್ಮ್‌ನ ಭಾಗ A ನಿಮ್ಮ ಹೆಸರು, PAN ಅಥವಾ ಆಧಾರ್, ವಿಳಾಸ ಮತ್ತು ಮೌಲ್ಯಮಾಪನ ವರ್ಷದಂತಹ ಮೂಲ ಮಾಹಿತಿಯನ್ನು ಒಳಗೊಂಡಿದೆ.
ಭಾರತದ ಹೊರಗಿನ ದೇಶ ಅಥವಾ ನಿರ್ದಿಷ್ಟ ಪ್ರದೇಶದಿಂದ ಬಂದ ಆದಾಯದ ರಶೀದಿ ವಿವರಗಳು ಮತ್ತು ಕ್ಲೈಮ್ ಮಾಡಲಾದ ವಿದೇಶಿ ತೆರಿಗೆ ಕ್ರೆಡಿಟ್ ವಿವರಗಳನ್ನು ಸಹ ನೀವು ಸೇರಿಸಬೇಕು.
4.2. ಭಾಗ B
ಫಾರ್ಮ್‌ನ ಭಾಗ B, ಹಿಂದುಳಿದ ನಷ್ಟಗಳ ಕಾರಣದಿಂದ ರೀಫಂಡ್ ಪಡೆದ ವಿದೇಶಿ ತೆರಿಗೆ ಮತ್ತು ವಿವಾದಿತ ವಿದೇಶಿ ತೆರಿಗೆಯ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ.
4.3. ದೃಢೀಕರಣ
ದೃಢೀಕರಣ ವಿಭಾಗವು, 1962 ರ ಆದಾಯ ತೆರಿಗೆ ನಿಯಮಗಳಲ್ಲಿನ ನಿಯಮ 128 ರ ಪ್ರಕಾರ ಮಾನದಂಡವನ್ನು ಹೊಂದಿರುವ ಲಿಖಿತ ಘೋಷಣೆ ಫಾರ್ಮ್ ಅನ್ನು ಒಳಗೊಂಡಿರುತ್ತದೆ.
4.4. ಲಗತ್ತುಗಳು
ಫಾರ್ಮ್ 67 ರ ಕೊನೆಯ ವಿಭಾಗವೆಂದರೆ ಲಗತ್ತುಗಳು, ಇಲ್ಲಿ ನೀವು ಪ್ರಮಾಣಪತ್ರ ಅಥವಾ ಲೆಕ್ಕ ವಿವರಣೆಯ ನಕಲು ಪ್ರತಿ ಮತ್ತು ವಿದೇಶಿ ತೆರಿಗೆಯ ಪಾವತಿ / ಕಡಿತದ ಪುರಾವೆಯನ್ನು ಲಗತ್ತಿಸಬೇಕು.
5. ಪ್ರವೇಶಿಸುವುದು ಮತ್ತು ಸಲ್ಲಿಸುವುದು ಹೇಗೆ
- ನೀವು ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್ ವಿಧಾನದಲ್ಲಿ ಮಾತ್ರ ಫಾರ್ಮ್ 67 ಅನ್ನು ಭರ್ತಿ ಮಾಡಬಹುದು ಮತ್ತು ಸಲ್ಲಿಸಬಹುದು.
ಆನ್‌ಲೈನ್ ಮೋಡ್ ಮೂಲಕ ನಮೂನೆ 67 ಅನ್ನು ಭರ್ತಿ ಮಾಡಲು ಮತ್ತು ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1: ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ವೈಯಕ್ತಿಕ ಬಳಕೆದಾರರಿಗೆ, PAN ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ನಿಮ್ಮ PAN ನಿಷ್ಕ್ರಿಯವಾಗಿದೆ ಎಂದು ಪಾಪ್-ಅಪ್ ಸಂದೇಶವನ್ನು ನೀವು ನೋಡುತ್ತೀರಿ ಏಕೆಂದರೆ ಅದು ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ.
PAN ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು, ಈಗಲೇ ಲಿಂಕ್ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 2: ನಿಮ್ಮ ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ- ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ.
ಹಂತ 3: ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಪುಟದಲ್ಲಿ, ಫಾರ್ಮ್ 67 ಆಯ್ಕೆಮಾಡಿ. ಪರ್ಯಾಯವಾಗಿ, ಫಾರ್ಮ್ ಅನ್ನು ಹುಡುಕಲು ಸರ್ಚ್ ಬಾಕ್ಸ್‌ನಲ್ಲಿ ಫಾರ್ಮ್ 67 ಎಂದು ನಮೂದಿಸಿ.
ಹಂತ 4: ಫಾರ್ಮ್ 67 ಪುಟದಲ್ಲಿ, ತೆರಿಗೆ ಮೌಲ್ಯಮಾಪನ ವರ್ಷ (A.Y.) ಆಯ್ಕೆಮಾಡಿ ಮತ್ತು ಮುಂದುವರಿಸಿ ಕ್ಲಿಕ್ ಮಾಡಿ.
ಹಂತ 5: ಸೂಚನೆಗಳು ಪುಟದಲ್ಲಿ, ಪ್ರಾರಂಭಿಸೋಣ ಕ್ಲಿಕ್ ಮಾಡಿ.
ಹಂತ 6: ಪ್ರಾರಂಭಿಸೋಣ ಕ್ಲಿಕ್ ಮಾಡಿದ ನಂತರ, ಫಾರ್ಮ್ 67 ಕಾಣಿಸುತ್ತದೆ. ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.
ಹಂತ 7:ಪ್ರೀವ್ಯೂ ಪುಟದಲ್ಲಿ, ವಿವರಗಳನ್ನು ಪರಿಶೀಲಿಸಿ ಮತ್ತು ಇ-ಪರಿಶೀಲನೆಗೆ ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 8: ಇ-ಪರಿಶೀಲನೆಗೆ ಹೌದು ಎಂದು ಕ್ಲಿಕ್ ಮಾಡಿ.
ಹಂತ 9: ಹೌದು ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ.
ಗಮನಿಸಿ: ನಿಮ್ಮ PAN ನಿಷ್ಕ್ರಿಯವಾಗಿದ್ದರೆ, ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ತೆರಿಗೆದಾರರ PAN ನಿಷ್ಕ್ರಿಯವಾಗಿದೆ ಎಂಬ ಎಚ್ಚರಿಕೆ ಸಂದೇಶವನ್ನು ಪಾಪ್-ಅಪ್‌ನಲ್ಲಿ ನೀವು ನೋಡುತ್ತೀರಿ.
ಈಗ ಲಿಂಕ್ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು PAN ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು ಇಲ್ಲದಿದ್ದರೆ ಮುಂದುವರಿಸಿ ಕ್ಲಿಕ್ ಮಾಡಿ.
ಸೂಚನೆ: ಇನ್ನಷ್ಟು ತಿಳಿಯಲು, ಇ-ಪರಿಶೀಲನೆ ಮಾಡುವುದು ಹೇಗೆ ಎಂಬ ಬಳಕೆದಾರ ಕೈಪಿಡಿಯನ್ನು ನೋಡಿ.
ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟಿನ ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಹೊಂದಿರುವ ಯಶಸ್ವಿ ಸಂದೇಶವನ್ನು ತೋರಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ IDಯಲ್ಲಿ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.