Do not have an account?
Already have an account?

1. 15CA ಫಾರ್ಮ್ ಎಂದರೇನು?

  • ಸೆಕ್ಷನ್ 195 ರ ಪ್ರಕಾರ, ಒಂದುವೇಳೆ ಮೊತ್ತವನ್ನು ಆದಾಯ ತೆರಿಗೆಗೆ ವಿಧಿಸಬಹುದಾದರೆ ಮತ್ತು ವಿವರಗಳನ್ನು ಫಾರ್ಮ್ 15 CA ಯಲ್ಲಿ ಒದಗಿಸಬೇಕಾದರೆ, ಅನಿವಾಸಿಗಳಿಗೆ (ಕಂಪನಿಯಾಗಿರಬಾರದು) ಅಥವಾ ವಿದೇಶಿ ಕಂಪನಿಗೆ ಪಾವತಿಸುವ ಪ್ರತಿಯೊಬ್ಬ ವ್ಯಕ್ತಿಯು TDS ಅನ್ನು ಕಡಿತಗೊಳಿಸಬೇಕು.
  • ಹಣ ರವಾನೆ (ಪಾವತಿ) ಮಾಡುವ ಒಬ್ಬ ಜವಾಬ್ದಾರಿಯುತ ವ್ಯಕ್ತಿಯು ಫಾರ್ಮ್ 15CA ಸಲ್ಲಿಸಬೇಕು. ಈ ಫಾರ್ಮ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನದಲ್ಲೂ ಸಲ್ಲಿಸಬಹುದು. ರವಾನೆಯಾಗುವ ಹಣ 5 ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭಗಳಲ್ಲಿ ಆನ್‌ಲೈನ್‌ನಲ್ಲಿ ಫಾರ್ಮ್ 15CA ಅಪ್‍ಲೋಡ್ ಮಾಡುವ ಮುನ್ನ, ಫಾರ್ಮ್ 15CB ಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಇಂದ ಒಂದು ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.

2. ನಾನು ಫಾರ್ಮ್ 15CA ಯ ಯಾವ ಭಾಗವನ್ನು ಭರ್ತಿ ಮಾಡಬೇಕು?


ಅನಿವಾಸಿಗಳಿಗೆ, ಒಂದು ಕಂಪನಿಯಾಗಿ ಇರದವರಿಗೆ, ಅಥವಾ ಒಂದು ವಿದೇಶಿ ಕಂಪನಿಗೆ ಪಾವತಿ ನೀಡುವ ಮಾಹಿತಿಯುಳ್ಳ ಫಾರ್ಮ್ 15 CA ಅನ್ನು 4 ಭಾಗಗಳನ್ನಾಗಿ ವರ್ಗೀಕರಿಸಲಾಗಿದೆ. ಸಂದರ್ಭಾನುಸಾರ, ನೀವು ಸಂಬಂಧಿತ ಭಾಗವನ್ನು ಭರ್ತಿ ಮಾಡಬೇಕಾಗುತ್ತದೆ:


ಭಾಗ A: ಹಣಕಾಸು ವರ್ಷದ ಅವಧಿಯಲ್ಲಿ ರವಾನೆ ಮಾಡುವ ಹಣ ಅಥವಾ ಅಂತಹ ರವಾನೆಯ ಒಟ್ಟು ಮೊತ್ತವು 5 ಲಕ್ಷ ರೂಪಾಯಿಗಳನ್ನು ಮೀರುವುದಿಲ್ಲವಾದರೆ.
ಭಾಗ B: ಆ ಹಣಕಾಸು ವರ್ಷದಲ್ಲಿ ರವಾನೆ ಮಾಡುವ ಹಣ ಅಥವಾ ಹಣದ ರವಾನೆ ಮಾಡುವ ಒಟ್ಟು ಮೊತ್ತವು 5 ಲಕ್ಷ ರೂಪಾಯಿಗಳು ಮೀರಿದಂತಹ ಸಂದರ್ಭದಲ್ಲಿ ಮತ್ತು ಕಾಯ್ದೆಯ ಸೆಕ್ಷನ್ 195 (2)/ 195 (3)/197 ರ ಅಡಿಯಲ್ಲಿ ಒಂದು ಆದೇಶ / ಪ್ರಮಾಣಪತ್ರವನ್ನು ತೆರಿಗೆ ಮೌಲ್ಯಮಾಪನ ಅಧಿಕಾರಿಯಿಂದ ಪಡೆಯಬೇಕಾಗುತ್ತದೆ.
ಭಾಗ C: ಹಣಕಾಸು ವರ್ಷದ ರವಾನೆಯಾಗುವ ಹಣ ಅಥವಾ ಹಣ ರವಾನೆ ಮಾಡುವುದರ ಒಟ್ಟು ಮೊತ್ತವು 5 ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭದಲ್ಲಿ ಮತ್ತು ಅಕೌಂಟೆಂಟ್ ಇಂದ ಫಾರ್ಮ್ ಸಂಖ್ಯೆ 15CB ಯಲ್ಲಿ ಒಂದು ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
ಭಾಗ D: ಆದಾಯ ತೆರಿಗೆ ಕಾಯ್ದೆ, 1961ಅಡಿಯಲ್ಲಿ ರವಾನೆಯಾಗುವ ಹಣಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ

3. ಯಾರಿಗೆ ಫಾರ್ಮ್ 15CA ಫೈಲ್ ಮಾಡುವ ಅಗತ್ಯವಿದೆ?
ನಿಯಮ 37BB ಪ್ರಕಾರ, ಅನಿವಾಸಿಗಳಿಗೆ, ಕಂಪನಿಯಾಗಿರದವರಿಗೆ, ಅಥವಾ ವಿದೇಶಿ ಕಂಪನಿಗೆ ಪಾವತಿಸುವ ಜವಾಬ್ದಾರಿಯುತ ಯಾವುದೇ ವ್ಯಕ್ತಿಯು, ಫಾರ್ಮ್ 15 CA ನಲ್ಲಿ ಅಂತಹ ಮಾಹಿತಿಯನ್ನು ಒದಗಿಸತಕ್ಕದ್ದು.

4. ಫಾರ್ಮ್ 15CB ಸಲ್ಲಿಸುವುದು ಕಡ್ಡಾಯವೇ?
ಇಲ್ಲ, ಫಾರ್ಮ್ 15CB ಸಲ್ಲಿಸುವುದು ಕಡ್ಡಾಯವಲ್ಲ. ಫಾರ್ಮ್ 15CB ಎನ್ನುವುದು ಒಂದು ಹಣಕಾಸು ವರ್ಷದಲ್ಲಿ ಹಣದ ರವಾನೆ ಮಾಡುವ ಮೊತ್ತವು ರೂ. 5 ಲಕ್ಷ ಮೀರಿದ ಸಂದರ್ಭದಲ್ಲಿ ಮಾತ್ರ ಭರ್ತಿ ಮಾಡಬೇಕಾದ ಒಂದು ಸಂದರ್ಭ-ಆಧಾರಿತ ಫಾರ್ಮ್ ಆಗಿದೆ ಮತ್ತು ಸೆಕ್ಷನ್ 288 ರ ಪ್ರಕಾರ ವ್ಯಾಖ್ಯಾನಿಸಲಾದ ಅಕೌಂಟೆಂಟ್‌ನಿಂದ ನೀವು ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.

5. ಫಾರ್ಮ್15CA ಅನ್ನು ಹಿಂಪಡೆಯಲು ಸಾಧ್ಯವೇ?
ಇಲ್ಲ, ಫಾರ್ಮ್ 15CA ಅನ್ನು ಹಿಂಪಡೆಯಲು ಯಾವುದೇ ಆಯ್ಕೆ ಇಲ್ಲ.


6. ಫಾರ್ಮ್ 15CA ಅನ್ನು ಯಾವಾಗ ಒದಗಿಸಬೇಕಾಗಿಲ್ಲ?
ನಿಯಮ 37BB ಯ ಉಪ-ನಿಯಮ (3) ಕ್ಕೆ ಅನುಗುಣವಾಗಿ, ಈ ಕೆಳಗಿನ ವಹಿವಾಟುಗಳ ಸಂದರ್ಭದಲ್ಲಿ ಫಾರ್ಮ್ 15CA ಯ ಭಾಗ-D ದಲ್ಲಿ ಮಾಹಿತಿಯನ್ನು ಒದಗಿಸಬೇಕಾದ ಅಗತ್ಯವಿಲ್ಲ:

  • ವ್ಯಕ್ತಿಯಿಂದ ಹಣ ರವಾನೆ ಮಾಡಲಾಗುತ್ತದೆ ಮತ್ತು ಅದಕ್ಕೆ RBI ನ ಪೂರ್ವ ಅನುಮೋದನೆ ಬೇಕಾಗಿಲ್ಲ
  • RBI ಪ್ರಕಾರ ಸಂಬಂಧಿತ ಉದ್ದೇಶಗಳ ಕೋಡ್ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಹಣ ರವಾನೆ

7. ಫಾರ್ಮ್ 15CA ಅನ್ನು ನಾನು ಇ-ಪರಿಶೀಲಿಸುವುದು ಹೇಗೆ ?

ಈ ಫಾರ್ಮ್ ಅನ್ನು DSC ಅಥವಾ EVC ಬಳಸಿ ಇ-ಪರಿಶೀಲಿಸಬಹುದಾಗಿದೆ. DSC ಯನ್ನು ನೊಂದಾಯಿಸಿದ್ದರೆ ನೀವು DSC ಬಳಸಿ ಇ-ಪರಿಶೀಲಿಸಬೇಕಾಗುತ್ತದೆ. ಇ-ಪರಿಶೀಲನಾ ಪ್ರಕ್ರಿಯೆಯನ್ನು ಹಂತ-ಹಂತವಾಗಿ ಅರ್ಥಮಾಡಿಕೊಳ್ಳಲು ಇ-ಪರಿಶೀಲನೆ ಮಾಡುವುದು ಹೇಗೆಎಂಬುದರ ಕುರಿತು ತಿಳಿಸುವ ಬಳಕೆದಾರರ ಕೈಪಿಡಿಯನ್ನು ಪರಾಮರ್ಶೆ ಮಾಡಿನೋಡಿ.

8. ನಾನು ಆನ್‌ಲೈನ್‌ನಲ್ಲಿ ಮಾತ್ರ 15CA ಫೈಲ್ ಮಾಡಬಹುದೇ? ನಾನು ಈ ಫಾರ್ಮ್ ಅನ್ನು ಯಾವಾಗ ಸಲ್ಲಿಸಬೇಕು?

ಈ ಫಾರ್ಮ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿಯೂ ಸಲ್ಲಿಸಬಹುದು. ಆಫ್‌ಲೈನ್ ಉಪಯುಕ್ತತೆ ಸೇವೆಯು ಆಫ್‌ಲೈನ್ ಮೋಡ್‌ನಲ್ಲಿ 15CA ಅನ್ನು ಸಲ್ಲಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಫಾರ್ಮ್ ಸಲ್ಲಿಸಲು ಯಾವುದೇ ಸಮಯದ ಮಿತಿಯನ್ನು ಸೂಚಿಸಲಾಗಿಲ್ಲ. ಹಾಗಿದ್ದರೂ, ಹಣ ರವಾನೆ ಆಗುವ ಮೊದಲು ಅದನ್ನು ಸಲ್ಲಿಸಬೇಕು.