Do not have an account?
Already have an account?

1. ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್. ಎಂದರೇನು?
ಕಾಯಿದೆಯ ಸೆಕ್ಷನ್ 194N ಪ್ರಕಾರ, ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿಯು ನಗದು ರೂಪದಲ್ಲಿ ಹಿಂಪಡೆದ ಮೊತ್ತ ಅಥವಾ ಒಟ್ಟು ಮೊತ್ತವು ಕೆಳಗೆ ನೀಡಲಾಗಿರುವಂತೆ ಮೀರಿದರೆ ಟಿ.ಡಿ.ಎಸ್ ಅನ್ನು ಕಡಿತಗೊಳಿಸಬೇಕಾಗುತ್ತದೆ:

  • ₹ 20 ಲಕ್ಷ (ಹಿಂದಿನ ಎಲ್ಲಾ ಮೂರು ತೆರಿಗೆ ಮೌಲ್ಯಮಾಪನ ವರ್ಷಗಳಲ್ಲಿ ಯಾವುದೇ ITR ಫೈಲ್ ಮಾಡಿಲ್ಲದಿದ್ದರೆ), ಅಥವಾ
  • ₹ 1 ಕೋಟಿ (ಹಿಂದಿನ ಎಲ್ಲಾ ಮೂರು ಅಥವಾ ಯಾವುದಾದರೂ ಒಂದು ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ITR ಫೈಲ್ ಮಾಡಿದ್ದರೆ).

2. ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲೆ ಟಿ.ಡಿ.ಎಸ್. ಅನ್ನು ಯಾರು ಕಡಿತಗೊಳಿಸುತ್ತಾರೆ?
ಟಿ.ಡಿ.ಎಸ್. ಅನ್ನು ಬ್ಯಾಂಕುಗಳು (ಖಾಸಗಿ, ಸಾರ್ವಜನಿಕ ಮತ್ತು ಸಹಕಾರಿ) ಅಥವಾ ಅಂಚೆ ಕಚೇರಿಗಳು ಕಡಿತಗೊಳಿಸುತ್ತವೆ. ಯಾವುದೇ ವ್ಯಕ್ತಿಗೆ ಅಂತಹ ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳೊಂದಿಗೆ ನಿರ್ವಹಿಸಲಾದ ಅವನ/ಅವಳ ಖಾತೆಯಿಂದ ₹ 20 ಲಕ್ಷ ಅಥವಾ ₹ 1 ಕೋಟಿಗಿಂತ (ಪ್ರಕರಣದಂತೆ) ಹೆಚ್ಚಿನ ನಗದು ಪಾವತಿ ಮಾಡುವಾಗ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.

3. ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್. ಯಾರಿಗೆ ಅನ್ವಯಿಸುವುದಿಲ್ಲ?
ಈ ಕೆಳಗಿನ ವ್ಯಕ್ತಿಗಳು ಮಾಡಿದ ಹಿಂಪಡೆಯುವಿಕೆಗೆ ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್. ಅನ್ವಯಿಸುವುದಿಲ್ಲ:

  • ಕೇಂದ್ರ ಅಥವಾ ರಾಜ್ಯ ಸರ್ಕಾರ
  • ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್
  • ಯಾವುದೇ ಸಹಕಾರಿ ಬ್ಯಾಂಕ್
  • ಅಂಚೆ ಕಚೇರಿ
  • ಯಾವುದೇ ಬ್ಯಾಂಕಿನ ವ್ಯವಹಾರ ವರದಿಗಾರ
  • ಯಾವುದೇ ಬ್ಯಾಂಕಿನ ವೈಟ್ ಲೇಬಲ್ ATM ಆಪರೇಟರ್
  • ಕೃಷಿ ಉತ್ಪನ್ನಗಳನ್ನು ಖರೀದಿಸಿದ ಕಾರಣ ರೈತರಿಗೆ ಪಾವತಿ ಮಾಡಲು ಕೇಂದ್ರ ಸರ್ಕಾರ ನಿರ್ದಿಷ್ಟಪಡಿಸಿದ ಆಯೋಗದ ಏಜೆಂಟ್‌ಗಳು ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಅಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಾಪಾರಿಗಳು
  • ಅಧಿಕೃತ ವಿತರಕರು ಮತ್ತು ಅದರ ಫ್ರ್ಯಾಂಚೈಸಿ ಏಜೆಂಟ್ ಮತ್ತು ಉಪ-ಏಜೆಂಟ್ ಹಾಗೂ ಆರ್.‌ಬಿ.ಐ. ಮತ್ತು ಅದರ ಫ್ರ್ಯಾಂಚೈಸಿ ಏಜೆಂಟ್‌ಗಳಿಂದ ಪರವಾನಗಿ ಪಡೆದ ಪೂರ್ಣ ಪ್ರಮಾಣದ ಹಣದ ಬದಲಾವಣೆಕಾರರು (FFMC)
  • ಆರ್‌.ಬಿ.ಐ.ಯೊಂದಿಗೆ ಸಮಾಲೋಚಿಸಿ ಸರ್ಕಾರವು ಸೂಚಿಸಿದ ಯಾವುದೇ ವ್ಯಕ್ತಿ.

4. ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್ ಯಾವಾಗಿನಿಂದ ಅನ್ವಯವಾಗಿದೆ?
ಕಾಯಿದೆಯ ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್. ಸೆಪ್ಟೆಂಬರ್ 1 2019, ಅಥವಾ ಹಣಕಾಸು ವರ್ಷ 2019-2020ರಿಂದ ಅನ್ವಯವಾಗುತ್ತದೆ.

5. ಸೆಕ್ಷನ್ 194N ಅಡಿಯಲ್ಲಿ ನಗದು ಹಿಂಪಡೆಯುವಿಕೆಯ ಮೇಲಿನ ಟಿ.ಡಿ.ಎಸ್. ಅನ್ನು ಯಾವ ದರದಲ್ಲಿ ಕಡಿತಗೊಳಿಸಲಾಗುತ್ತದೆ?
ಹಣವನ್ನು ಹಿಂಪಡೆಯುವ ವ್ಯಕ್ತಿಯು ಹಿಂದಿನ ಎಲ್ಲಾ ಮೂರು ಅಥವಾ ಯಾವುದಾದರೂ ಒಂದು ತೆರಿಗೆ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದರೆ ₹ 1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಾಗ ಟಿ.ಡಿ.ಎಸ್. ಅನ್ನು 2% ದರದಲ್ಲಿ ಕಡಿತಗೊಳಿಸಲಾಗುತ್ತದೆ.
ನಗದು ಹಿಂಪಡೆಯುವ ವ್ಯಕ್ತಿಯು ಹಿಂದಿನ ಯಾವುದೇ ಮೂರು ತೆರಿಗೆ ಮೌಲ್ಯಮಾಪನ ವರ್ಷಗಳಿಗೆ ITR ಫೈಲ್ ಮಾಡಿಲ್ಲದಿದ್ದರೆ, ₹20ಲಕ್ಷಕ್ಕಿಂತ ಹೆಚ್ಚಿನ ನಗದು ಹಿಂಪಡೆಯುವಿಕೆಗೆ 2% ದರದಲ್ಲಿ ಮತ್ತು ₹1 ಕೋಟಿ ಮೀರಿದ ಹಿಂಪಡೆಯುವಿಕೆಗೆ 5% ದರದಲ್ಲಿ ಟಿ.ಡಿ.ಎಸ್. ಅನ್ನು ಕಡಿತಗೊಳಿಸಲಾಗುವುದು.