1. ಅವಲೋಕನ
ಈ ಸೇವೆಯು ವೈಯಕ್ತಿಕ ತೆರಿಗೆದಾರರು, HUF ಗಳು ಮತ್ತು ಕಂಪನಿಗಳಿಗೆ ಲಭ್ಯವಿದೆ. ಇ-ಫೈಲಿಂಗ್ ಪೋರ್ಟಲ್ ನಲ್ಲಿ AY 2014-15 ಮತ್ತು 2015-16 ಗೆ ಸಂಬಂಧಿಸಿದಂತೆ ಫಾರ್ಮ್ BB (ಸಂಪತ್ತಿನ ತೆರಿಗೆ ರಿಟರ್ನ್ಸ್) ಅನ್ನು ಅಪ್ಲೋಡ್ ಮಾಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿತ ಬಳಕೆದಾರರು
- ಸಂಪತ್ತಿನ ತೆರಿಗೆ ರಿಟರ್ನ್ (ಫಾರ್ಮ್ BB) ಅನ್ನು ಅಪ್ಲೋಡ್ ಮಾಡಲು ಆದಾಯ ತೆರಿಗೆ ಇಲಾಖೆಯಿಂದ ಸ್ವೀಕರಿಸಲಾದ ನೋಟಿಸ್
- ಇ- ಫೈಲಿಂಗ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಎಕ್ಸ್.ಎಂ.ಎಲ್. ಅನ್ನು ರಚಿಸಲು ಆಫ್‌ಲೈನ್ ಯುಟಿಲಿಟಿ
- ಸಕ್ರಿಯವಾಗಿರುವ ಹಾಗೂ ಅವಧಿ ಮುಗಿದಿರದ ನೋಂದಾಯಿತ DSC
3. ಹಂತ-ಹಂತದ ಮಾರ್ಗದರ್ಶಿ
3.1 ಫಾರ್ಮ್ BB ಅನ್ನು ಇ-ಫೈಲಿಂಗ್ ಪೋರ್ಟಲ್‌ಗೆ ಅಪ್ಲೋಡ್ ಮಾಡಿ
ಹಂತ 1: ನಿಮ್ಮ ಮಾನ್ಯ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ಇನ್ ಮಾಡಿ.
ಹಂತ 2: ಬಾಕಿ ಇರುವ ಕ್ರಮಗಳು > ಇ-ಪ್ರೊಸೀಡಿಂಗ್ಸ್ ಅನ್ನು ಕ್ಲಿಕ್ ಮಾಡಿ.
ಹಂತ 3: ಇ-ಪ್ರೊಸೀಡಿಂಗ್ ಪುಟದಲ್ಲಿ, ಸಂಬಂಧಿತ ಪ್ರೊಸೀಡಿಂಗ್‌ಗಾಗಿ ನೋಟಿಸ್ ವೀಕ್ಷಿಸಿ ಕ್ಲಿಕ್ ಮಾಡಿ.
ಹಂತ 4: ಇ- ಪ್ರೊಸೀಡಿಂಗ್ಸ್‌ಗಾಗಿ ನೋಟೀಸ್‌ಗಳನ್ನು ನೋಡಿ ನಲ್ಲಿ, ನೀವು ಆಯ್ಕೆ ಮಾಡಿದ ಪ್ರೊಸೀಡಿಂಗ್‌ಗೆ ಸಂಬಂಧಿಸಿದ ಸೂಚನೆಗಳನ್ನು ನೀವು ನೋಡುತ್ತೀರಿ. ಪ್ರತಿಕ್ರಿಯೆ ಸಲ್ಲಿಸಿ ಕ್ಲಿಕ್ ಮಾಡಿ.
ಹಂತ 5: ಹೌದು ಎಂದು ಕ್ಲಿಕ್ ಮಾಡಿ.
ಹಂತ 6: ಫಾರ್ಮ್ BB ಆಫ್ಲೈನ್ ಯುಟಿಲಿಟಿ (ಡೌನ್ಲೋಡ್‌ಗಳು ಇಂದ > ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಇತರ ಫಾರ್ಮ್‌ಗಳ ಸಿದ್ಧತಾ ಸಾಫ್ಟ್ವೇರ್ ) ಅನ್ನು XML ರಿಟರ್ನ್ ಫೈಲ್ ಅನ್ನು ರಚಿಸಿ ಅಪ್ಲೋಡ್ ಮಾಡಲು ಬಳಸಬೇಕು.
ಹಂತ 7: ಫಾರ್ಮ್ BB ಅಪ್ಲೋಡ್ ಮಾಡಿ ಪುಟದಲ್ಲಿ, ನಿಮ್ಮ PAN, AY, ನೋಟಿಸ್ ಸಂಖ್ಯೆ ಮತ್ತು ನೋಟಿಸ್ ದಿನಾಂಕದಂತಹ ವಿವರಗಳನ್ನು ನೀವು ನೋಡುತ್ತೀರಿ. ಫೈಲ್ ಲಗ್ಗತಿಸಿ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ರಿಟರ್ನ್‌ನ ಎಕ್ಸ್.ಎಂ.ಎಲ್. ಅನ್ನು ಅಪ್‌ಲೋಡ್ ಮಾಡಿ.
ಗಮನಿಸಿ: ಎಕ್ಸ್.ಎಂ.ಎಲ್. ಫೈಲ್ ಗಾತ್ರಕ್ಕೆ ಯಾವುದೇ ನಿರ್ದಿಷ್ಟ ಮಿತಿಯಿಲ್ಲ.
ಹಂತ 8: ನಿಮ್ಮ XML ಅನ್ನು ಯಶಸ್ವಿಯಾಗಿ ಮೌಲ್ಯೀಕರಿಸಿದ ನಂತರ ಡಿಜಿಟಲ್ ಸಹಿ ಪ್ರಮಾಣಪತ್ರವನ್ನು (DSC) ಬಳಸಿಕೊಂಡು ಇ-ಪರಿಶೀಲನೆ ಮಾಡಲು ಪರಿಶೀಲನೆಗೆ ಮುಂದುವರೆಯಿರಿ ಕ್ಲಿಕ್ ಮಾಡಿ.
ಸೂಚನೆ:
- ಮೌಲ್ಯೀಕರಣವು ವಿಫಲವಾದರೆ, ನೀವು ದೋಷದ ಸಂದೇಶವನ್ನು ವೀಕ್ಷಿಸುತ್ತೀರಿ. ಆ ಸಂದರ್ಭದಲ್ಲಿ, ನೀವು ಪ್ರತಿಯಾಗಿ ದೋಷವನ್ನು ಸರಿಪಡಿಸಬೇಕು, ಮತ್ತು ರಿಟರ್ನ್ ಎಕ್ಸ್.ಎಂ.ಎಲ್. ಅನ್ನು ಮರು-ಲಗತ್ತಿಸಬೇಕು.
- ಇನ್ನಷ್ಟು ತಿಳಿಯಲು ಇ-ಪರಿಶೀಲನೆ ಮಾಡುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೋಡಿ.
ಯಶಸ್ವಿ ಪರಿಶೀಲನೆಯ ನಂತರ, ವಹಿವಾಟಿನ IDಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯ ಟಿಪ್ಪಣಿಯನ್ನು ದಯವಿಟ್ಟು ಇರಿಸಿಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ IDಗೆ ನೀವು ದೃಢೀಕರಣವನ್ನೂ ಸಹ ಸ್ವೀಕರಿಸುತ್ತೀರಿ.
ನೀವು ರಿಟರ್ನ್ ಮತ್ತು ಸ್ವೀಕೃತಿಯನ್ನು ಡೌನ್ಲೋಡ್ ಮಾಡಿ ಮೇಲೆ ಕ್ಲಿಕ್ ಮಾಡಿದರೆ, ನೀವು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ (XML) ಅನ್ನು ಡೌನ್ಲೋಡ್ ಮಾಡಲು ಮತ್ತು ಅದನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂಬ ಸ್ವೀಕೃತಿಯನ್ನು ಡೌನ್ಲೋಡ್ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಇ-ಫೈಲ್ ಮೆನು>ಆದಾಯ ತೆರಿಗೆ ಫಾರ್ಮ್‌ಗಳು> ಸಲ್ಲಿಸಿದ ಫಾರ್ಮ್‌ಗಳನ್ನು ವೀಕ್ಷಿಸಿ ಅಡಿಯಲ್ಲಿ ಫಾರ್ಮ್ BB ಅನ್ನು ನಿಮ್ಮ ಸಲ್ಲಿಸಿದ ಫಾರ್ಮ್‌ಗಳ ಪಟ್ಟಿಯಲ್ಲಿ ಪ್ರದರ್ಶಿಸಲಾಗುತ್ತದೆ.