Do not have an account?
Already have an account?

ERI ಗಳ ಸೇವಾ ವಿನಂತಿಯನ್ನು ಪರಿಶೀಲಿಸಿ > ಬಳಕೆದಾರರ ಕೈಪಿಡಿ

1. ಅವಲೋಕನ

ಇ-ಫೈಲಿಂಗ್ ಪೋರ್ಟಲ್‌ನಲ್ಲಿಪರಿಶೀಲನಾ ಸೇವಾ ವಿನಂತಿಯು ಒಂದು ಲಾಗಿನ್ ಪೂರ್ವ ಕ್ರಿಯಾತ್ಮಕತೆಯಾಗಿದೆ. ಈ ಸೇವೆಯೊಂದಿಗೆ, ನಿಮ್ಮ ಪರವಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ರಿಟರ್ನ್‌ಗಳು ಮತ್ತು ಫಾರ್ಮ್‌ಗಳನ್ನು ಸಲ್ಲಿಸುವುದು ಸೇರಿದಂತೆ ನಿರ್ದಿಷ್ಟ ಕ್ರಿಯೆಗಳನ್ನು ನಿರ್ವಹಿಸುವಾಗ ಇ-ರಿಟರ್ನ್ ಇಂಟರ್‌ಮೀಡಿಯೇಟರಿ ಸಲ್ಲಿಸಿದ ವಿನಂತಿಯನ್ನು ನೀವು (ERI ಯ ಗ್ರಾಹಕರು) ಪರಿಶೀಲಿಸಲು ಸಾಧ್ಯವಾಗುತ್ತದೆ.

ERIಗಳು ಈ ಕೆಳಗಿನ ಸೇವೆಗಳನ್ನು ತಮ್ಮ ಗ್ರಾಹಕರ ಪರವಾಗಿ ಕಾರ್ಯಗತಗೊಳಿಸಬಹುದು:

  • ಗ್ರಾಹಕನನ್ನು ಸೇರಿಸಿ (ನೋಂದಾಯಿತ ಮತ್ತು ನೋಂದಾಯಿಸದ ಬಳಕೆದಾರರು)
  • ಗ್ರಾಹಕನನ್ನು ಸಕ್ರಿಯಗೊಳಿಸಿ
  • ಗ್ರಾಹಕರ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆಯನ್ನು ಸೇರಿಸಿ
  • ಆದಾಯ ತೆರಿಗೆ ಫಾರ್ಮ್‍ಗಳ ಫೈಲ್ ಸಲ್ಲಿಸಿ
  • ಮರುಪಾವತಿ ಮರು-ವಿತರಣೆ ವಿನಂತಿ

ಗ್ರಾಹಕರಿಂದ ಪರಿಶೀಲನೆಯಾದ ನಂತರವೇ, ERI ಸಲ್ಲಿಸಿದ ವಿನಂತಿಯನ್ನು ಪೂರ್ಣಗೊಳಿಸಲಾಗುತ್ತದೆ.

2. ಈ ಸೇವೆಯನ್ನು ಪಡೆಯುವ ಪೂರ್ವಾಪೇಕ್ಷಿತಗಳು

  • ಮಾನ್ಯವಾದ ಮತ್ತು ಸಕ್ರಿಯ ಪ್ಯಾನ್
  • ಇ-ರಿಟರ್ನ್ ಇಂಟರ್‌ಮೀಡಿಯೇಟರಿ ತನ್ನ ಗ್ರಾಹಕರಿಗಾಗಿ (ತೆರಿಗೆದಾರರು) ವಿನಂತಿಯನ್ನು ಪ್ರಾರಂಭಿಸಿರಬೇಕು
  • ERI ಸಲ್ಲಿಸಿದ ವಿನಂತಿಯ ವಹಿವಾಟಿನ ID
  • ಸಲ್ಲಿಸಿದ ವಿನಂತಿಯ ವಹಿವಾಟಿನ ID ಮನವಿಯನ್ನು ಪರಿಶೀಲಿಸುವ ಸಮಯದಲ್ಲಿ ಮಾನ್ಯ / ಸಕ್ರಿಯವಾಗಿರಬೇಕು
  • OTP ಸ್ವೀಕರಿಸಲು ಪ್ರಾಥಮಿಕ ಮೊಬೈಲ್ ಸಂಖ್ಯೆ/ ಪ್ರಾಥಮಿಕ ಇಮೇಲ್ ID ಯನ್ನು ಸಕ್ರಿಯಗೊಳಿಸಿ
  • ಫಾರ್ಮ್‌ಗಳ ಪರಿಶೀಲನೆಗಾಗಿ/ಮರುಪಾವತಿ ಮರು-ವಿತರಣೆ ವಿನಂತಿಗಾಗಿ, ತೆರಿಗೆದಾರರು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರಬೇಕು: ಆಧಾರ್ ಲಿಂಕ್ ಮಾಡಿದ PAN ಅಥವಾ EVC ಸಕ್ರಿಯಗೊಳಿಸಲಾದ ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆ/ ನೆಟ್‌ಬ್ಯಾಂಕಿಂಗ್ ಲಾಗಿನ್/ ನೋಂದಾಯಿತ DSC.

3. ಹಂತ-ಹಂತದ ಮಾರ್ಗದರ್ಶಿ

ಹಂತ 1 : ಇ-ಫೈಲಿಂಗ್ ಪೋರ್ಟಲ್ ಹೋಮ್‌ಪೇಜ್‌ಗೆ ಹೋಗಿ ಮತ್ತು ಸೇವಾ ವಿನಂತಿಯನ್ನು ಪರಿಶೀಲಿಸಿ ಕ್ಲಿಕ್ ಮಾಡಿ.

Data responsive

ಹಂತ 2: ಸೇವಾ ವಿನಂತಿಯನ್ನು ಪರಿಶೀಲಿಸಿ ಪುಟದಲ್ಲಿ, ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯು (ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ) ಸ್ವೀಕರಿಸಿದ ವಿನಂತಿಯ ವಹಿವಾಟಿನ ID ಮತ್ತು PAN ಅನ್ನು ನಮೂದಿಸಿ. ಮೌಲ್ಯೀಕರಿಸಿ ಅನ್ನು ಕ್ಲಿಕ್ ಮಾಡಿ.

Data responsive

ಸೂಚನೆ: ಪೋರ್ಟಲ್‌ನಲ್ಲಿ ನೋಂದಣಿಗಾಗಿ ಒಂದುವೇಳೆ ಪರಿಶೀಲನೆ ವಿನಂತಿಯನ್ನು ಮಾಡಿದ್ದರೆ, ನೋಂದಣಿ ವಿನಂತಿಯನ್ನು ಸಲ್ಲಿಸುವಾಗ ERI ಒದಗಿಸಿದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯು ಸ್ವೀಕರಿಸಿದ ವಹಿವಾಟು IDಯನ್ನು ನಮೂದಿಸಿ.

ಹಂತ 3: ಯಶಸ್ವಿ ದೃಢೀಕರಣದ ನಂತರ, ಮುಂದುವರಿಸಿ ಕ್ಲಿಕ್ ಮಾಡಿ.

Data responsive

ಹಂತ 4: ಪರಿಶೀಲನೆಯ ವಿಧಾನವು ERI ಸಲ್ಲಿಸಿದ ವಿನಂತಿಯ ಪ್ರಕಾರವನ್ನು ಅವಲಂಬಿಸಿರುತ್ತದೆ.

ವಿನಂತಿಯ ಪ್ರಕಾರವನ್ನು ಸಲ್ಲಿಸಲಾಗಿದೆ

ಪರಿಶೀಲನೆಯ ವಿಧಾನ

  • ಗ್ರಾಹಕನನ್ನು (ನೋಂದಾಯಿತ ಬಳಕೆದಾರರು) ಸೇರಿಸಿ
  • ಗ್ರಾಹಕನನ್ನು ಸಕ್ರಿಯಗೊಳಿಸಿ
  • ಗ್ರಾಹಕರ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆಯನ್ನು ಸೇರಿಸಿ

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಯಲ್ಲಿ 6-ಅಂಕಿಯ OTP ಯನ್ನು ಸ್ವೀಕರಿಸಲಾಗಿದೆ

  • ನೋಂದಾಯಿಸಿ ಮತ್ತು ಗ್ರಾಹಕರನ್ನು ಸೇರಿಸಿ (ನೋಂದಣಿ ಮಾಡದ ಬಳಕೆದಾರರು)

ಇಮೇಲ್ ID ಮತ್ತು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿ ಎರಡು ಪ್ರತ್ಯೇಕ 6-ಅಂಕಿಯ OTP ಗಳನ್ನು ಸ್ವೀಕರಿಸಲಾಗಿದೆ

  • ಆದಾಯ ತೆರಿಗೆ ಫಾರ್ಮ್‍ಗಳ ಫೈಲ್ ಸಲ್ಲಿಸಿ
  • ಮರುಪಾವತಿ ಮರು-ವಿತರಣೆ ವಿನಂತಿ

ಇ-ಪರಿಶೀಲನೆ

 

ಹಂತ 5a: 6-ಅಂಕಿಯ OTP/OTP ಗಳನ್ನು ನಮೂದಿಸಿ (ಹೆಚ್ಚಿನ ವಿವರಗಳಿಗಾಗಿ ಹಂತ 4 ರಲ್ಲಿನ ಕೋಷ್ಟಕವನ್ನು ನೋಡಿ). ಮುಂದುವರಿಸಿ ಕ್ಲಿಕ್ ಮಾಡಿ.

Data responsive

 

ಸೂಚನೆ

  • OTP ಗಳು 15 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ.
  • ಸರಿಯಾದ OTP ಅನ್ನು ನಮೂದಿಸಲು ನೀವು 3 ಬಾರಿ ಪ್ರಯತ್ನಿಸಬಹುದು
  • ಸ್ಕ್ರೀನ್ ಮೇಲಿರುವ OTP ಮುಕ್ತಾಯದ ಕೌಂಟ್‌ಡೌನ್ ಟೈಮರ್ OTP ಯಾವಾಗ ಮುಕ್ತಾಯಗೊಳ್ಳುತ್ತದೆ ಎಂದು ಹೇಳುತ್ತದೆ.
  • OTP ಯನ್ನು ಮರುಕಳುಹಿಸಿ ಕ್ಲಿಕ್ ಮಾಡಿದಾಗ, ಹೊಸ OTP ಯನ್ನು ರಚಿಸಿ ಕಳುಹಿಸಲಾಗುತ್ತದೆ.
  • ನೀವು ನೋಂದಾಯಿಸದ ಬಳಕೆದಾರರಾಗಿದ್ದರೆ, ನಿಮ್ಮನ್ನು ಗ್ರಾಹಕರನ್ನಾಗಿ ಸೇರಿಸುವಾಗ ನಿಮ್ಮ ERI ಒದಗಿಸಿದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆ ಸ್ವೀಕರಿಸಿದ ಎರಡು ಪ್ರತ್ಯೇಕ 6-ಅಂಕಿಯ OTP ಗಳನ್ನು ನೀವು ನಮೂದಿಸಬೇಕಾಗುತ್ತದೆ.

 

ಹಂತ 5b: ಒಂದುವೇಳೆ ERI ಯು ನಿಮ್ಮ ಪರವಾಗಿ, ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ, ಮರುಪಾವತಿ ಮರು-ವಿತರಣೆ ವಿನಂತಿಯಂತಹ ಸೇವೆಗಳಿಗಾಗಿ ವಿನಂತಿಸಿದ್ದರೆ ಲಭ್ಯವಿರುವ ಆಯ್ಕೆಗಳನ್ನು ಬಳಸಿಕೊಂಡು ನೀವು ವಿನಂತಿಯನ್ನು ಇ-ಪರಿಶೀಲನೆ ಮಾಡಬೇಕು.

ಸೂಚನೆ: ಇನ್ನಷ್ಟು ತಿಳಿದುಕೊಳ್ಳಲು ಇ-ಪರಿಶೀಲಿಸುವುದು ಹೇಗೆ ಎಂಬ ಬಳಕೆದಾರರ ಕೈಪಿಡಿಯನ್ನು ನೋಡಿ.

 

ಯಶಸ್ವಿ ಪರಿಶೀಲನೆಯಲ್ಲಿ, ಯಶಸ್ವಿ ಸಂದೇಶವನ್ನು ವಹಿವಾಟಿನ ID ಯೊಂದಿಗೆ ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ವಹಿವಾಟಿನ ID ಯನ್ನು ಬರೆದಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.

Data responsive

4. ಸಂಬಂಧಿತ ವಿಷಯಗಳು

ಲಾಗಿನ್

ಡ್ಯಾಶ್‌ಬೋರ್ಡ್

ಗ್ರಾಹಕರು ಮತ್ತು ವಿಧ 1 ರ ERI ಸೇವೆಗಳನ್ನು ವೀಕ್ಷಿಸಿ

ಇ-ಪರಿಶೀಲಿಸುವುದು ಹೇಗೆ

ನೋಂದಣಿ

ERI ಗಳ ಸೇವಾ ವಿನಂತಿಯನ್ನು ಪರಿಶೀಲಿಸಿ > ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1. 'ERI ಗಳ ಸೇವಾ ವಿನಂತಿಯನ್ನು ಪರಿಶೀಲಿಸಿ' ಸೇವೆ ಎಂದರೇನು?

ಈ ಸೇವೆಯೊಂದಿಗೆ, ವಿಧ 1 ರ ERI ನ ಗ್ರಾಹಕರು ತಮ್ಮ ಪರವಾಗಿ ERI ಸಲ್ಲಿಸಿದ ವಿನಂತಿಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

2. ERI ಸಲ್ಲಿಸಿದ ಸೇವಾ ವಿನಂತಿಗಳನ್ನು ಯಾರು ಪರಿಶೀಲಿಸಬಹುದು?

ERI ಗಳು ಸಲ್ಲಿಸಿದ ಸೇವಾ ವಿನಂತಿಗಳನ್ನು ಎಲ್ಲಾ ಬಳಕೆದಾರರು (ನೋಂದಾಯಿತ/ನೋಂದಾಯಿಸದ) ಪರಿಶೀಲಿಸಬಹುದು.

3. ನನ್ನ ಪರವಾಗಿ ERI ಯಾವ ರೀತಿಯ ಸೇವೆಗಳನ್ನು ನಿರ್ವಹಿಸಬಹುದು?

ERIಗಳು ಈ ಕೆಳಗಿನ ಸೇವೆಗಳನ್ನು ತಮ್ಮ ಗ್ರಾಹಕರ ಪರವಾಗಿ ಕಾರ್ಯಗತಗೊಳಿಸಬಹುದು:

  • ಗ್ರಾಹಕನನ್ನು ಸೇರಿಸಿ (ನೋಂದಾಯಿತ ಮತ್ತು ನೋಂದಾಯಿಸದ ಬಳಕೆದಾರರು)
  • ಗ್ರಾಹಕನನ್ನು ಸಕ್ರಿಯಗೊಳಿಸಿ
  • ಗ್ರಾಹಕರ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆ ಸಿಂಧುತ್ವ/ಮಾನ್ಯತೆಯನ್ನು ವಿಸ್ತರಿಸಿ
  • ಸೇವೆಯನ್ನು ಸೇರಿಸಿ
  • ITR-V ಸಲ್ಲಿಸಿದಾಗ ವಿಳಂಬಕ್ಕೆ ಕ್ಷಮೆಯಾಚನೆ ವಿನಂತಿಯನ್ನು ಮನ್ನಿಸುವುದು
  • ಅಧಿಕೃತ ಪ್ರತಿನಿಧಿಯನ್ನು ಸೇರಿಸಿ
  • ಸ್ವಯಂ ಪರವಾಗಿ ಕಾರ್ಯನಿರ್ವಹಿಸಲು ಇನ್ನೊಬ್ಬ ವ್ಯಕ್ತಿಗೆ ಅಧಿಕಾರ ನೀಡಿ
  • ತೆರಿಗೆದಾರನ ಪ್ರತಿನಿಧಿಯಾಗಿ ನೋಂದಾಯಿಸಿ
  • ಇತರ ವ್ಯಕ್ತಿಯ ಪರವಾಗಿ ಕಾರ್ಯನಿರ್ವಹಿಸಲು ನೋಂದಣಿ ಮಾಡಿ
  • ಆದಾಯ ತೆರಿಗೆ ಫಾರ್ಮ್‍ಗಳ ಫೈಲ್ ಸಲ್ಲಿಸಿ
  • ಮರುಪಾವತಿ ಮರು-ವಿತರಣೆ ವಿನಂತಿ
  • ತಿದ್ದುಪಡಿ ವಿನಂತಿ
  • ಸಮಯವನ್ನು ನಿರ್ಬಂಧಿಸಲಾದ ನಂತರ ITR ಸಲ್ಲಿಸಿದಕ್ಕಾಗಿ ಕ್ಷಮಾಪಣೆ ವಿನಂತಿ
  • ಬ್ಯಾಂಕ್ ಖಾತೆ ಪರಿಶೀಲಿಸಲಾಗಿದೆ ಎನ್ನುವ ಸಂಪರ್ಕ ವಿವರಗಳ ಪ್ರಕಾರದ ಹಾಗೆ ಪ್ರಾಥಮಿಕ ಸಂಪರ್ಕ ವಿವರಗಳು ನವೀಕರಿಸಿ
  • ಡಿಮ್ಯಾಟ್ ಖಾತೆ ಪರಿಶೀಲಿಸಲಾಗಿದೆ ಎನ್ನುವ ಸಂಪರ್ಕ ವಿವರಗಳ ಪ್ರಕಾರದ ಹಾಗೆ ಪ್ರಾಥಮಿಕ ಸಂಪರ್ಕ ವಿವರಗಳು ನವೀಕರಿಸಿ

4. ಒಂದುವೇಳೆ ERI ನನ್ನ ಪರವಾಗಿ ಮರುಪಾವತಿ ಮರುವಿತರಣೆ ವಿನಂತಿಯನ್ನು ಸಲ್ಲಿಸಿದ್ದರೆ, ಅದನ್ನು ನಾನು ಪರಿಶೀಲಿಸದಿದ್ದರೆ ವಿನಂತಿಯು ಮಾನ್ಯವಾಗಿರುತ್ತದೆಯೇ?

ಇಲ್ಲ. ನಿಮ್ಮಿಂದ ಪರಿಶೀಲಿಸಲಾಗಿಲ್ಲವಾದರೆ ERI ನಿಂದ ನಿಮ್ಮ ಪರವಾಗಿ ಸಲ್ಲಿಸಲಾದ ಯಾವುದೇ ವಿನಂತಿಯನ್ನು ಪೂರ್ಣಗೊಳಿಸಲಾಗುವುದಿಲ್ಲ.

5. ನನ್ನ ಪರವಾಗಿ ERI ಸಲ್ಲಿಸಿದ ವಿನಂತಿಯನ್ನು ನಾನು ಪರಿಶೀಲಿಸಲು ಯಾವುದೇ ಸೀಮಿತ ಸಮಯವಿದೆಯೇ?

ವಹಿವಾಟು ID ಯನ್ನು ರಚಿಸಿದ 7 ದಿನಗಳ ಒಳಗೆ ನೀವು ವಿನಂತಿಯನ್ನು ಪರಿಶೀಲಿಸಬೇಕು ನಂತರ ಅದು ಅಮಾನ್ಯವಾಗಿರುತ್ತದೆ.

6. ERI ಸಲ್ಲಿಸಿದ ಸೇವಾ ವಿನಂತಿಯನ್ನು ಪರಿಶೀಲಿಸಲು ನನಗೆ ಯಾವ ವಿವರಗಳು ಬೇಕು?

ನಿಮಗೆ ನೀವು ಸಲ್ಲಿಸಿದ ವಿನಂತಿಯ PAN ಮತ್ತು ವಹಿವಾಟಿನ ID ಅಗತ್ಯವಿದೆ.

 

ಪದಕೋಶ

ಸಂಕ್ಷೇಪಣ/ಸಂಕ್ಷಿಪ್ತರೂಪ

ವಿವರಣೆ/ಪೂರ್ಣ ಸ್ವರೂಪ

ಹಣಕಾಸು ವರ್ಷ

ತೆರಿಗೆ ಮೌಲ್ಯಮಾಪನ ವರ್ಷ

ITD

ಆದಾಯ ತೆರಿಗೆ ಇಲಾಖೆ

ITR

ಆದಾಯ ತೆರಿಗೆ ರಿಟರ್ನ್

HUF

ಹಿಂದೂ ಅವಿಭಾಜಿತ ಕುಟುಂಬ

ಟ್ಯಾನ್

TDS ಮತ್ತು TCS ಖಾತೆ ಸಂಖ್ಯೆ

ಇ.ಆರ್.ಐ.

ಇ-ರಿಟರ್ನ್ ಮಧ್ಯವರ್ತಿ

 

ಮೆಟಾಡೇಟಾ

ಕ್ಲೈಂಟ್ ಅನ್ನು ಸೇರಿಸಿ

ವಿಧ 1 ರ ERI

ವಿಧ 2 ರ ERI

ಸೇವಾ ವಿನಂತಿಯನ್ನು ಪರಿಶೀಲಿಸಿ

ERI ಗಳು

ವಿಶ್ಲೇಷಣಾ ಪ್ರಶ್ನೆಗಳು

(ಗಮನಿಸಿ: ಸರಿಯಾದ ಉತ್ತರವು ದಪ್ಪಕ್ಷರದಲ್ಲಿದೆ.)


Q1. ಗ್ರಾಹಕರನ್ನು ಸೇರಿಸುವ ವಿನಂತಿಯು (ERI ಗಳಿಂದ) ಎಷ್ಟು ಸಮಯದವರೆಗೆ ಸಕ್ರಿಯವಾಗಿರುತ್ತದೆ?

a) 24 ಗಂಟೆಗಳು

b) 5 ದಿನಗಳು

c) 7 ದಿನಗಳು

d) 30 ದಿನಗಳು

 

ಉತ್ತರ - c) 7 ದಿನಗಳು

 


Q1. ಒಂದುವೇಳೆ ERI ಮರುಪಾವತಿ ಮರುವಿತರಣೆ ವಿನಂತಿಯನ್ನು ಸಲ್ಲಿಸಿದ್ದರೆ, ತೆರಿಗೆದಾರರು ಹೇಗೆ ವಿನಂತಿಯನ್ನು ಪರಿಶೀಲಿಸಬಹುದು? (ನೀವು ಒಂದಕ್ಕಿಂತ ಹೆಚ್ಚು ಆಯ್ಕೆಗಳನ್ನು ಆಯ್ಕೆ ಮಾಡಬಹುದು)

a) ವಿನಂತಿಯನ್ನು ಸಲ್ಲಿಸುವಾಗ ನಮೂದಿಸಲಾದ ಮೊಬೈಲ್ ಸಂಖ್ಯೆಯ OTP

b) ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ OTP

c) EVC

d) ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಬಂದ OTP

 

ಉತ್ತರ - b) ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಬಂದ OTP ಮತ್ತು d) ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಬಂದ OTP