1. ನೋಂದಾಯಿತ ಇ-ಫೈಲಿಂಗ್ ಬಳಕೆದಾರರಿಗೆ ಆದಾಯ ಮತ್ತು ತೆರಿಗೆ ಅಂದಾಜು ಸೇವೆ ಹೇಗೆ ಪ್ರಯೋಜನಕಾರಿಯಾಗಿದೆ?
ಆದಾಯ ಮತ್ತು ತೆರಿಗೆ ಅಂದಾಜು ಮಾಡುವ ಸೇವೆಯು ನೋಂದಾಯಿತ ಇ-ಫೈಲಿಂಗ್ ಬಳಕೆದಾರರಿಗೆ ಈ ಕೆಳಗಿನ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ:
- ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಅವರ ತೆರಿಗೆ ಅಂದಾಜನ್ನು ತ್ವರಿತ ಮತ್ತು ಸುಲಭ ರೀತಿಯಲ್ಲಿ ಪಡೆಯಬಹುದು.
- ಹಳೆಯ ತೆರಿಗೆ ಆಡಳಿತ ಕ್ರಮ ಮತ್ತು 2020 ರ ಹಣಕಾಸು ಬಜೆಟ್ ನಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಆಡಳಿತ ಕ್ರಮದ ಪ್ರಕಾರ ಅವರ ಅಂದಾಜು ತೆರಿಗೆಯನ್ನು ಹೋಲಿಸಿ ನೋಡಬಹುದು.
2. ಪ್ರಸ್ತುತ ಆದಾಯ ಮತ್ತು ತೆರಿಗೆ ಅಂದಾಜು ಸೇವೆ ಹಳೆಯ ಇ-ಫೈಲಿಂಗ್ ಪೋರ್ಟಲ್ನಲ್ಲಿನ ಹಿಂದಿನ ಆವೃತ್ತಿಗಿಂತ ಹೇಗೆ ಭಿನ್ನವಾಗಿದೆ?
ಇತ್ತೀಚಿನ ಆದಾಯ ಮತ್ತು ತೆರಿಗೆ ಅಂದಾಜು ವಿವಿಧ ಮೂಲಗಳಿಂದ ನಿಮಗೆ ಪೂರ್ವ-ಭರ್ತಿ ಮಾಡಿದ ಡೇಟಾವನ್ನು (ಉದಾ. ಪ್ರಾಥಮಿಕ ಮಾಹಿತಿ ಟ್ಯಾಬ್‌ನಲ್ಲಿ TDS/TCS) ಒದಗಿಸಿ ಹೆಚ್ಚು ಬಳಕೆದಾರ ಸ್ನೇಹಿಯಾಗಿಸುತ್ತದೆ.
ಹೊಸ ತೆರಿಗೆ ಆಡಳಿತ ಕ್ರಮ ಮತ್ತು ಹಳೆಯ ತೆರಿಗೆ ಆಡಳಿತ ಕ್ರಮದ ಪ್ರಕಾರ ನೀವು ತೆರಿಗೆಯನ್ನು ಅಂದಾಜು ಮಾಡಬಹುದು ಮತ್ತು ಫಲಿತಾಂಶಗಳನ್ನು ಹೋಲಿಸಬಹುದು.
3. ನಾನು ಆದಾಯ ಮತ್ತು ತೆರಿಗೆ ಅಂದಾಜುದಾರರಿಂದ ಲೆಕ್ಕಾಚಾರವನ್ನು ನಿಖರವಾಗಿ ಪರಿಗಣಿಸಬಹುದೇ ಮತ್ತು ನನ್ನ ರಿಟರ್ನ್ ಅನ್ನು ಸಲ್ಲಿಸುವಾಗ ಅದನ್ನು ಬಳಸಬಹುದೇ?
ಇಲ್ಲ. ಆದಾಯ ಮತ್ತು ತೆರಿಗೆ ಅಂದಾಜುದಾರರು ನಿಮ್ಮ ಮೂಲ ತೆರಿಗೆ ಲೆಕ್ಕಾಚಾರದ ತ್ವರಿತ ನೋಟವನ್ನು ಹೊಂದಲು ನಿಮಗೆ ಅನುವು ಮಾಡಿಕೊಡುತ್ತದೆ ಮತ್ತು ಎಲ್ಲಾ ಸಂದರ್ಭಗಳಲ್ಲಿಯೂ ನಿಮ್ಮ ಅಂತಿಮ ತೆರಿಗೆ ಅಂದಾಜನ್ನು ನೀಡುವುದಿಲ್ಲ. ರಿಟರ್ನ್ಸ್ ಸಲ್ಲಿಸುವಾಗ, ಆದಾಯ ತೆರಿಗೆಗೆ ಸಂಬಂಧಿಸಿದ ಸಂಬಂಧಿತ ಕಾಯಿದೆಗಳು ಮತ್ತು ನಿಯಮಗಳಲ್ಲಿರುವ ನಿಬಂಧನೆಗಳ ಪ್ರಕಾರ ನೀವು ನಿಖರವಾದ ಲೆಕ್ಕಾಚಾರವನ್ನು ಪಡೆಯಬಹುದು.