Do not have an account?
Already have an account?

ರಿಟರ್ನ್ಸ್‌ನ ಇ-ಪರಿಶಿಲನೆಗಾಗಿ 30 ದಿನಗಳ ಕಾಲಮಿತಿ' ಕುರಿತು ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

1. ITR ಪರಿಶೀಲನೆಗಾಗಿ 30 ದಿನಗಳ ಹೊಸ ಕಾಲಮಿತಿ ಬಗ್ಗೆ ಹೊಸ ಅಧಿಸೂಚನೆ ಏನಿದೆ ಮತ್ತು 30 ದಿನಗಳ ಹೊಸ ಕಾಲಮಿತಿ ಯಾರಿಗೆ ಅನ್ವಯಿಸುತ್ತದೆ?

ಪರಿಹಾರ: ಆಗಸ್ಟ್ 1 ರಿಂದ, ಆದಾಯ ತೆರಿಗೆ ಇಲಾಖೆಯು ITR-V ನ ಇ-ಪರಿಶೀಲನೆ ಅಥವಾ ಹಾರ್ಡ್ ಕಾಪಿ ಸಲ್ಲಿಕೆಗೆ ಸಮಯದ ಮಿತಿಯನ್ನು ಜುಲೈ 29 ದಿನಾಂಕದ ಅಧಿಸೂಚನೆಯ ಮೂಲಕ 30 ದಿನಗಳಿಗೆ ಇಳಿಸಿದೆ. ಅಂದರೆ, ತೆರಿಗೆದಾರರು ಈಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಸಲ್ಲಿಸಿದ ದಿನಾಂಕದಿಂದ 30 ದಿನಗಳಲ್ಲಿ ತಮ್ಮ ರಿಟರ್ನ್ಸ್ ಪರಿಶೀಲಿಸಬೇಕಾಗಿದೆ.

ಅಧಿಸೂಚನೆ ಜಾರಿಗೆ ಬರುವ ದಿನಾಂಕದ ಮೊದಲು ಅಂದರೆ, 01, ಆಗಸ್ಟ್ 2022 ರ ಮೊದಲು, ವಿದ್ಯುನ್ಮಾನವಾಗಿ ಸಲ್ಲಿಸಿದ ರಿಟರ್ನ್ಸ್ ಸಂದರ್ಭದಲ್ಲಿ 120 ದಿನಗಳ ಹಿಂದಿನ ಸಮಯದ ಮಿತಿ ಅನ್ವಯಿಸುವುದನ್ನು ಮುಂದುವರಿಸುತ್ತದೆ ಎಂದು ಅಧಿಸೂಚನೆಯು ಸ್ಪಷ್ಟಪಡಿಸುತ್ತದೆ.

ಆದ್ದರಿಂದ, ನೀವು ITR ಅನ್ನು 31ನೇ ಜುಲೈ 2022 ರಂದು ಅಥವಾ ಅದಕ್ಕೂ ಮೊದಲು ಸಲ್ಲಿಸಿದ್ದರೆ 120 ದಿನಗಳ ಹಿಂದಿನ ಸಮಯದ ಮಿತಿ ಅನ್ವಯವಾಗುತ್ತದೆ.

(ಇನ್ನಷ್ಟು ತಿಳಿದುಕೊಳ್ಳಲು ನೋಡಿ: ಅಧಿಸೂಚನೆ ಸಂಖ್ಯೆ 5/2022 ದಿನಾಂಕ 29.07.2022, 01/08/2022ರಿಂದ ಜಾರಿಗೆ ಬರುವಂತೆ)

 

2. ಇ-ಪರಿಶೀಲನೆ ಅಥವಾ ITR-V ಸಲ್ಲಿಸಲು ಹೊಸ ಸಮಯದ ಮಿತಿ ಏನಿದೆ?

ಪರಿಹಾರ: ಇ-ಪರಿಶೀಲನೆ ಅಥವಾ ITR-V ಸಲ್ಲಿಕೆಗೆ ಹೊಸ ಸಮಯದ ಮಿತಿ ಈಗ ಆದಾಯದ ರಿಟರ್ನ್ ಸಲ್ಲಿಸುವ ದಿನಾಂಕದಿಂದ 30 ದಿನಗಳವರೆಗೆ ಇರುತ್ತದೆ. ಆದರೂ, 31.07.2022 ರಂದು ಅಥವಾ ಅದಕ್ಕೂ ಮೊದಲು ರಿಟರ್ನ್ ಸಲ್ಲಿಸಿದಲ್ಲಿ, 120 ದಿನಗಳ ಈ ಹಿಂದಿನ ಸಮಯದ ಮಿತಿ ಅನ್ವಯಿಸುತ್ತದೆ.

(ಇನ್ನಷ್ಟು ತಿಳಿದುಕೊಳ್ಳಲು ನೋಡಿ: ಅಧಿಸೂಚನೆ ಸಂಖ್ಯೆ 5/2022 ದಿನಾಂಕ 29.07.2022, 01/08/2022ರಿಂದ ಜಾರಿಗೆ ಬರುವಂತೆ)

 

3. ಯಾವ ಸಂದರ್ಭಗಳಲ್ಲಿ 120 ದಿನಗಳ ಹಿಂದಿನ ಸಮಯದ ಮಿತಿ ಅನ್ವಯವಾಗುತ್ತದೆ?

ಪರಿಹಾರ: ಈ ಅಧಿಸೂಚನೆಯು ಜಾರಿಗೆ ಬರುವ ದಿನಾಂಕದ ಮೊದಲು ಅಂದರೆ 1ನೇ ಆಗಸ್ಟ್ 2022 ಕ್ಕಿಂತ ಮೊದಲು ರಿಟರ್ನ್ ಡೇಟಾವನ್ನು ವಿದ್ಯುನ್ಮಾನವಾಗಿ ರವಾನಿಸಿದ್ದರೆ, ಅಂತಹ ರಿಟರ್ನ್‌ಗಳಿಗೆ ಸಂಬಂಧಿಸಿದಂತೆ 120 ದಿನಗಳ ಹಿಂದಿನ ಸಮಯದ ಮಿತಿಯು ಅನ್ವಯಿಸುತ್ತದೆ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]

 

4. ಡೇಟಾ ಪ್ರಸರಣದ 30 ದಿನಗಳಲ್ಲಿ ITR-V ಸಲ್ಲಿಸಿದರೆ ಆದಾಯದ ರಿಟರ್ನ್ ಸಲ್ಲಿಸುವ ದಿನಾಂಕ ಯಾವುದು?

ಪರಿಹಾರ: ITR ಡೇಟಾವನ್ನು ವಿದ್ಯುನ್ಮಾನವಾಗಿ ರವಾನಿಸಿದರೆ ಮತ್ತು ಡೇಟಾವನ್ನು ರವಾನಿಸಿದ 30 ದಿನಗಳಲ್ಲಿ ITR-V ಸಲ್ಲಿಸಿದರೆ ಅಂತಹ ಸಂದರ್ಭಗಳಲ್ಲಿ ಡೇಟಾವನ್ನು ವಿದ್ಯುನ್ಮಾನವಾಗಿ ರವಾನಿಸುವ ದಿನಾಂಕವನ್ನು ಆದಾಯದ ರಿಟರ್ನ್ ಸಲ್ಲಿಸಿದ ದಿನಾಂಕವೆಂದು ಪರಿಗಣಿಸಲಾಗುತ್ತದೆ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]

 

5. ಒಂದುವೇಳೆ ಇ-ಪರಿಶೀಲನೆ ಅಥವಾ ‌ITR-V ಅನ್ನು 30 ದಿನಗಳ ಸಮಯದ ಮಿತಿಯನ್ನು ಮೀರಿ ಸಲ್ಲಿಸಿದರೆ ಏನಾಗುತ್ತದೆ?

ಪರಿಹಾರ: ಎಲ್ಲಿ ITR ಡೇಟಾವನ್ನು ವಿದ್ಯುನ್ಮಾನವಾಗಿ ರವಾನಿಸಲಾಗುತ್ತದೆ ಆದರೆ ಇ-ಪರಿಶಿಲನೆ ಅಥವಾ ITR-V ಅನ್ನು ಡೇಟಾದ ಪ್ರಸರಣದ 30 ದಿನಗಳ ಸಮಯ ಮಿತಿಯನ್ನು ಮೀರಿ ಸಲ್ಲಿಸಲಾಗುತ್ತದೆಯೋ ಅಂತಹ ಸಂದರ್ಭಗಳಲ್ಲಿ ಇ-ಪರಿಶೀಲನೆ/ITR-V ಸಲ್ಲಿಕೆಯ ದಿನಾಂಕವನ್ನು ಆದಾಯದ ರಿಟರ್ನ್ ನೀಡುವ ದಿನಾಂಕವೆಂದು ಪರಿಗಣಿಸಲಾಗುತ್ತದೆ ಮತ್ತು ಕಾಯಿದೆಯಡಿ ರಿಟರ್ನ್ ಅನ್ನು ತಡವಾಗಿ ಸಲ್ಲಿಸುವ ಎಲ್ಲಾ ಪರಿಣಾಮಗಳನ್ನು ಅನುಸರಿಸಬೇಕಾಗುತ್ತದೆ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]


6. ITR-V ಅನ್ನು ಕಳುಹಿಸಬೇಕಾದ ವಿಳಾಸ ಯಾವುದು?

ಪರಿಹಾರ: ಸರಿಯಾಗಿ ಪರಿಶೀಲಿಸಿದ ITR-V ಅನ್ನು ನಿಗದಿತ ಸ್ವರೂಪದಲ್ಲಿ ಮತ್ತು ನಿಗದಿತ ರೀತಿಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಬೇಕು:
ಕೇಂದ್ರೀಕೃತ ಸಂಸ್ಕರಣಾ ಕೇಂದ್ರ,
ಆದಾಯ ತೆರಿಗೆ ಇಲಾಖೆ,
ಬೆಂಗಳೂರು - 560500, ಕರ್ನಾಟಕ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]


7. ITR-V ಅನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾದ ಸಂದರ್ಭದಲ್ಲಿ ಪರಿಶೀಲನೆಯ ದಿನಾಂಕವೆಂದು ಯಾವ ದಿನಾಂಕವನ್ನು ಪರಿಗಣಿಸಲಾಗುತ್ತದೆ?

ಪರಿಹಾರ: ಸರಿಯಾಗಿ ಪರಿಶೀಲಿಸಿದ ITR-V ಅನ್ನು ಸ್ಪೀಡ್ ಪೋಸ್ಟ್ ಮೂಲಕ ರವಾನಿಸುವ ದಿನಾಂಕವನ್ನು, 30 ದಿನಗಳ ಅವಧಿಯನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]

 

8. ನಾನು ಜುಲೈ 31,2022 ರಂದು ನನ್ನ ರಿಟರ್ನ್ ಅನ್ನು ಸಲ್ಲಿಸಿದ್ದೇನೆ ನಾನು ಅದನ್ನು ಎಲ್ಲಿಯವರೆಗೆ ಇ-ಪರಿಶೀಲನೆ ಮಾಡಬಹುದು?

ಪರಿಹಾರ: ತೆರಿಗೆದಾರರು ಜುಲೈ 31, 2022 ರ ಗಡುವಿನೊಳಗೆ ITR ಅನ್ನು ಸಲ್ಲಿಸಿದರೆ, ಅವರ ರಿಟರ್ನ್‌ ಫೈಲ್ ಮಾಡಿದ ನಂತರ ಪರಿಶೀಲಿಸಲು 120 ದಿನಗಳ ಅವಕಾಶವಿರುತ್ತದೆ. ಆದರೆ ಗಡುವು ಮುಗಿದ ನಂತರ ರಿಟರ್ನ್ ಸಲ್ಲಿಸುವವರು (ಅಂದರೆ 31ನೇ ಜುಲೈ ನಂತರ) ಅದನ್ನು ಪರಿಶೀಲಿಸಲು ಕೇವಲ 30 ದಿನಗಳನ್ನು ಮಾತ್ರ ಪಡೆಯುತ್ತಾರೆ.

(ಇನ್ನಷ್ಟು ತಿಳಿಯಲು ನೋಡಿ: ದಿನಾಂಕ 29.07.2022 ರ ಅಧಿಸೂಚನೆ ಸಂಖ್ಯೆ 5/2022]