Do not have an account?
Already have an account?

ಆನ್ಲೈನ್‌ನಲ್ಲಿ ITR-1 (ಸಹಜ್) ಫೈಲ್ ಮಾಡುವ ಕುರಿತು ಬಳಕೆದಾರರ ಕೈಪಿಡಿ

 

1. ಪಕ್ಷಿನೋಟ

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಿಗೆ ITR-1 ಸಲ್ಲಿಸಲು ಸೇವೆ ಲಭ್ಯವಿದೆ. ಈ ಸೇವೆ ವೈಯಕ್ತಿಕ ತೆರಿಗೆದಾರರಿಗೆ ITR-1ಅನ್ನು ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಆಫ್‌ಲೈನ್ ಬಳಸಿಕೊಂಡು ಸಲ್ಲಿಸಲು ಸಾಧ್ಯವಾಗಿಸುತ್ತದೆ. ಈ ಬಳಕೆದಾರ ಕೈಪಿಡಿ ಆನ್‌ಲೈನ್ ಮೋಡ್ ನಲ್ಲಿ ITR-1 ಸಲ್ಲಿಸುವ ಹಂತ ಹಂತದ ಪ್ರಕ್ರಿಯೆಯನ್ನು ವಿವರಿಸುತ್ತದೆ.

2.ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

                                                                       ಸಾಮಾನ್ಯ

  • ಮಾನ್ಯತೆ ಹೊಂದಿದ ಬಳಕೆದಾರರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಇ-ಫೈಲಿಂಗ್ ಪೋರ್ಟ್‌ಲ್‌ನಲ್ಲಿ ನೋಂದಾಯಿತ ಬಳಕೆದಾರ
  • PAN ನ ಸ್ಥಿತಿ ಸಕ್ರಿಯವಾಗಿದೆ
  • ವ್ಯಕ್ತಿಯ ವಸತಿ ಸ್ಥಿತಿ ನಿವಾಸಿ ಎಂದಾಗಿದೆ
  • ಒಂದು ದೃಢೀಕರಿಸಿದ ಬ್ಯಾಂಕ್ ಖಾತೆಇ-ಫೈಲಿಂಗ್‌ ಪೋರ್ಟಲ್‌ ನಲ್ಲಿದೆ
  • ಪರಿಶೀಲನಾ ವಿಧಾನಗಳಿಗೆ ಪ್ರವೇಶ: ಆಧಾರ್ OTP/ DSC/ EVC ಅನ್ನು ನೆಟ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಖಾತೆ ಅಥವಾ ಡಿಮ್ಯಾಟ್ ಖಾತೆ ಮೂಲಕ

ಇತರೆ

  • PAN ಮತ್ತು ಆಧಾರ್ ಲಿಂಕ್ ಮಾಡಲಾಗಿದೆ (ಶಿಫಾರಸು ಮಾಡಲಾಗಿದೆ)

3. ಫಾರ್ಮ್ ಕುರಿತು

3.1 ಉದ್ದೇಶ

ಆದಾಯ ತೆರಿಗೆ ರಿಟರ್ನ್ ಎಂಬುದು ತೆರಿಗೆದಾರರು ತಮ್ಮ ಆದಾಯ ಮತ್ತು ಅದರ ತೆರಿಗೆಯ ಬಗ್ಗೆ ವಾರ್ಷಿಕವಾಗಿ ಆದಾಯ ತೆರಿಗೆ ಇಲಾಖೆಗಳಿಗೆ ನೀಡುವ ಫಾರ್ಮ್ ಆಗಿದೆ. ಕೆಳಗಿನ ಪ್ಯಾರಾ 3.2ನ ಪ್ರಕಾರ ಮಾನದಂಡಗಳನ್ನು ಪೂರೈಸುವ ನಿವಾಸಿ ನೈಸರ್ಗಿಕವ್ಯಕ್ತಿಗಳು ಫಾರ್ಮ್ ITR-1 ಅನ್ನು ಹಳೆಯ ಅಥವಾ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಅವರ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಳಸಬಹುದು.

3.2 ಇದನ್ನು ಯಾರು ಬಳಸಬಹುದು?

ITR-1 ಅನ್ನು ನಿವಾಸಿ ನೈಸರ್ಗಿಕವ್ಯಕ್ತಿಯೊಬ್ಬರು ಫೈಲ್‌ ಮಾಡಬಹುದು ಎಂದರೆ:

  • ಒಟ್ಟು ಆದಾಯವು ಹಣಕಾಸು ವರ್ಷದಲ್ಲಿ 50 ಲಕ್ಷ ರೂಪಾಯಿಗಳನ್ನು ಮೀರಬಾರದು
  • ಸಂಬಳ, ಎರಡು ಮನೆ ಆಸ್ತಿ, ಕುಟುಂಬ ಪಿಂಚಣಿ ಆದಾಯ, ಕೃಷಿ ಆದಾಯ (₹5000/- ವರೆಗೆ), 112A ಸೆಕ್ಷನ್ ಅಡಿಯಲ್ಲಿ ರೂ.1.25 ಲಕ್ಷಗಳವರೆಗಿನ ದೀರ್ಘಾವಧಿಯ ಬಂಡವಾಳ ಲಾಭ ಮತ್ತು ಇತರ ಮೂಲಗಳ ಆದಾಯ, ಅವುಗಳೆಂದರೆ:
    • ಉಳಿತಾಯ ಖಾತೆಗಳಿಂದ ಬಡ್ಡಿ
    • ಠೇವಣಿಗಳಿಂದ ಬಡ್ಡಿ (ಬ್ಯಾಂಕ್ / ಅಂಚೆ ಕಚೇರಿ / ಸಹಕಾರಿ ಸಂಘ)
    • ಆದಾಯ ತೆರಿಗೆ ಮರುಪಾವತಿಯ ಬಡ್ಡಿ
    • ಹೆಚ್ಚುವರಿ ಪರಿಹಾರದ ಮೇಲೆ ಪಡೆದ ಬಡ್ಡಿ
    • ಯಾವುದೇ ಇತರ ಬಡ್ಡಿ ಆದಾಯ
    • ಕುಟುಂಬ ಪಿಂಚಣಿ
  • ಸಂಗಾತಿಯ (ಪೋರ್ಚುಗೀಸ್ ಸಿವಿಲ್ ಕೋಡ್ ವ್ಯಾಪ್ತಿಗೆ ಬರುವವರನ್ನು ಹೊರತುಪಡಿಸಿ) ಅಥವಾ ಅಪ್ರಾಪ್ತ ವಯಸ್ಕರ ಆದಾಯವನ್ನು ಒಟ್ಟುಗೂಡಿಸಲಾಗುತ್ತದೆ (ಆದಾಯದ ಮೂಲವು ಮೇಲೆ ತಿಳಿಸಿದಂತೆ ನಿಗದಿತ ಮಿತಿಯಲ್ಲಿದ್ದರೆ ಮಾತ್ರ).

ITR-1 ಅನ್ನು ಯಾವ ನೈಸರ್ಗಿಕವ್ಯಕ್ತಿಗೆ ಫೈಲ್‌ ಮಾಡಲು ಆಗುವದಿಲ್ಲ ಎಂದರೆ:

  • ಯಾರು ನಿವಾಸಿಯಾಗಿದ್ದೂ ಸಾಮಾನ್ಯವಾಗಿ ವಾಸಿಸುತ್ತಿಲ್ಲ (RNOR), ಮತ್ತು ಅನಿವಾಸಿ ಭಾರತೀಯರು (NRI)
  • ಒಟ್ಟು ಆದಾಯವು 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಇರುವವರು
  • ಕೃಷಿ ಆದಾಯವು 5000/- ರೂಪಾಯಿಗಳಿಗಿಂತ ಹೆಚ್ಚು ಇರುವಾಗ
  • ಲಾಟರಿ, ಕುದುರೆ ರೇಸ್, ಕಾನೂನುಬದ್ಧ ಜೂಜಾಟ ಇತ್ಯಾದಿಗಳಿಂದ ಆದಾಯವನ್ನು ಹೊಂದಿದ್ದರೆ.
  • ಅಲ್ಪಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ
  • ಸೆಕ್ಷನ್ 112A ರ ಅಡಿಯಲ್ಲಿ.1.25 ಲಕ್ಷ ರೂಪಾಯಿಗಳನ್ನು ಮೀರಿದ ದೀರ್ಘಾವಧಿಯ ಬಂಡವಾಳ ಲಾಭವನ್ನು ಹೊಂದಿದ್ದರೆ
  • ಅನ್‌ಲಿಸ್ಟೆಡ್ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ
  • ವ್ಯಾಪಾರ ಅಥವಾ ವೃತ್ತಿಯಿಂದ ಆದಾಯವನ್ನು ಹೊಂದಿದ್ದರೆ
  • ಒಂದು ಕಂಪನಿಯ ನಿರ್ದೇಶಕರಾಗಿದ್ಧರೆ
  • ಆದಾಯ ತೆರಿಗೆ ಕಾಯಿದೆ‌,1961ರ ಸೆಕ್ಷನ್ 194N ಅಡಿಯಲ್ಲಿ ತೆರಿಗೆ ಕಡಿತವನ್ನು ಹೊಂದಿದ್ದರೆ
  • ಅರ್ಹ ಸ್ಟಾರ್ಟ್‌ಅಪ್ ಆಗಿರುವ ಉದ್ಯೋಗದಾತರಿಂದ ಪಡೆದ ESOP ಮೇಲಿನ ವಿಳಂಬಿತ ಆದಾಯ ತೆರಿಗೆಯನ್ನು ಹೊಂದಿದ್ದಾರೆ.
  • ಎರಡು ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳನ್ನು ಹೊಂದಿ ಅದರಿಂದ ಆದಾಯ ಬರುತ್ತಿದ್ದರೆ
  • ITR-1ರ ಅರ್ಹತಾ ಷರತ್ತುಗಳ ಅಡಿಯಲ್ಲಿ ಬರದಿದ್ದರೆ

4. ಫಾರ್ಮ್‌ನ ಸಂಕ್ಷಿಪ್ತ ಮಾಹಿತಿ

ITR-1 ಗೆ ಸಲ್ಲಿಸುವ ಮೊದಲು ಪರಿಶೀಲನೆ/ತಿದ್ದುಪಡಿ ಮಾಡಬೇಕಾದ ಐದು ಪೂರ್ವ-ಫೈಲ್ ವಿಭಾಗಗಳಿವೆ, ಮತ್ತು ತೆರಿಗೆ ಲೆಕ್ಕ ಹಾಕುವದಕ್ಕಾಗಿ ಪರಿಶೀಲಿಸಬೇಕಾದ ಒಬ್ಬ ಸಾರಾಂಶ ವಿಭಾಗವೂ ಇದೆ.ಈ ವಿಭಾಗಗಳು ಹೀಗಿವೆ:

  1. ವೈಯಕ್ತಿಕ ಮಾಹಿತಿ
  2. ಒಟ್ಟು ನಿವ್ವಳ ಆದಾಯ
  3. ಒಟ್ಟು ಆದಾಯ ತೆರಿಗೆ ಕಡಿತಗಳು
  4. ಪಾವತಿಸಲ್ಪಟ್ಟ ತೆರಿಗೆ
  5. ಒಟ್ಟು ತೆರಿಗೆ ಬಾಧ್ಯತೆ

ITR-1 ರ ವಿವಿಧ ‌ಭಾಗಗಳ ತ್ವರಿತ ಅವಲೋಕನ ಇಲ್ಲಿದೆ:

4.1 ವೈಯಕ್ತಿಕ ಮಾಹಿತಿ

ITRನ ವೈಯಕ್ತಿಕ ಮಾಹಿತಿಯವಿಭಾಗದಲ್ಲಿ, ನಿಮ್ಮ e-ಫೈಲಿಂಗ್ ಪ್ರೊಫೈಲ್‌ನಿಂದ ಸ್ವಯಂಚಾಲಿತವಾಗಿ ಭರ್ತಿಯಾಗಿರುವ ಡೇಟಾವನ್ನು ನೀವು ಪರಿಶೀಲಿಸಬೇಕಾಗುತ್ತದೆ. ಫಾರ್ಮ್‌ನಲ್ಲಿ ನಿಮ್ಮ ಕೆಲವು ವೈಯಕ್ತಿಕ ಡೇಟಾವನ್ನು ನೇರವಾಗಿ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಅದಾಗ್ಯೂ, ಪ್ರೊಫೈಲ್ ವಿಭಾಗಕ್ಕೆ ಹೋಗಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು. ಫಾರ್ಮ್‌ನಲ್ಲಿ ನಿಮ್ಮ ಪ್ರೊಫೈಲ್ (ಆಧಾರ್ ಸಂಖ್ಯೆಯನ್ನು ಮಾತ್ರ), ಸಂಪರ್ಕ ವಿವರಗಳು, ಫೈಲಿಂಗ್ ರೀತಿಯ ವಿವರಗಳು ಮತ್ತು ಬ್ಯಾಂಕ್ ವಿವರಗಳನ್ನು ಬದಲಾವಣೆ ಮಾಡಬಹುದು

ಪ್ರೊಫೈಲ್:

Data responsive

ಸಂಪರ್ಕ ವಿವರಗಳು:

Data responsive

ಫೈಲಿಂಗ್ ಪ್ರಕಾರದ ವಿವರಗಳು:

Data responsive

ಬ್ಯಾಂಕ್ ವಿವರಗಳು:

Data responsive

 ಸೂಚನೆ:

  1. ನೈಸರ್ಗಿಕವ್ಯಕ್ತಿ, HUF, AOP, BOI ಅಥವಾ AJP ಆಗಿರುವ ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯನ್ನೇ ನಿಯೋಜಿತ ತೆರಿಗೆ ಪದ್ಧತಿಯನ್ನಾಗಿ ಮಾಡಲು ಹಣಕಾಸು ಕಾಯಿದೆ 2023 ಸೆಕ್ಷನ್ 115BAC ನ ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ. ನೀವು ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆ ಪಾವತಿಸಲು ಬಯಸದಿದ್ದರೆ, ನೀವು ಈ ಆಯ್ಕೆಯಿಂದ ಹೊರಗುಳಿದು ಮತ್ತು ಹಳೆಯ ತೆರಿಗೆ ಪದ್ಧತಿಯಡಿಯಲ್ಲಿಯೇ ತೆರಿಗೆ ಪಾವತಿಯನ್ನು ಆಯ್ಕೆ ಮಾಡಬೇಕು.
  2. ನೀವು ಹೊಸ ತೆರಿಗೆ ಪದ್ಧತಿಯಿಂದ ಹೊರಗುಳಿಯಲು ಬಯಸಿದರೆ ಫೈಲಿಂಗ್ ವಿಭಾಗದಲ್ಲಿ ರೇಡಿಯೋ ಬಟನ್‌ನಲ್ಲಿ “ಹೌದು” ಎಂಬುದನ್ನು ಆಯ್ಕೆಮಾಡಿ.ಈ ಆಯ್ಕೆಯನ್ನು ಬಳಸಲು, ಸೆಕ್ಷನ್ 139(1) ಅಡಿಯಲ್ಲಿ ಆದಾಯ ಹೊಂದಿರುವ ತೆರಿಗೆದಾರನು(ವ್ಯಾಪಾರ ಅಥವಾ ವೃತ್ತಿ ಆದಾಯವಲ್ಲದ) ಸಂಬಂಧಿತ ನಿರ್ಧರಣಾ ವರ್ಷದ ರಿಟರ್ನ್‌ ನಲ್ಲಿ ತೆರಿಗೆ ಪದ್ಧತಿಯ ಆಯ್ಕೆಯನ್ನು ಸೂಚಿಸಬೇಕು.

4.2 ಒಟ್ಟು ನಿವ್ವಳ ಆದಾಯ

ಈ ಒಟ್ಟು ನಿವ್ವಳ ಆದಾಯವಿಭಾಗದಲ್ಲಿ, ನೀವು ಪೂರ್ವ ಭರ್ತಿಯಾದ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಆದಾಯದ ಮೂಲ ವಿವರವಾದ ಸಂಬಳ/ಪಿಂಚಣಿ, ಆಸ್ತಿಯು, ಸೆಕ್ಷನ್ 112A‌ ಅಡಿಯಲ್ಲಿ ದೀರ್ಘಕಾಲದ ಬಂಡವಾಳ ಲಾಭ , ಮತ್ತು ಇತರೆ ವಿವರ(ಉದಾಹರಣೆಗಾಗಿ ಬಡ್ಡಿ ಆದಾಯ, ಕುಟುಂಬ ಪಿಂಚಣಿ, ಇತ್ಯಾದಿ) ಗಳನ್ನು ದೃಢೀಕರಿಸಲು/ತಿದ್ದಲು ಅವಕಾಶವಿದೆ.ವಿನಾಯಿತಿಗೆ ಅರ್ಹವಾದ ಆದಾಯಗಳು ಯಾವುದಾದರೂ ಇದ್ದರೆ ಅದರ ವಿವರಗಳನ್ನೂ ಸಹ ಸೇರಿಸಬಹುದು.

ಸಂಬಳದಿಂದ ಬಂದ ಆದಾಯ:

Data responsive

ಎರಡರವರೆಗೆ ಇರುವ ಮನೆ ಆಸ್ತಿಯಿಂದ ಬಂದ ಆದಾಯ ಹಾಗೂ ಸಾಲ ಬಂಡವಾಳದ ಮೇಲಿನ ಬಡ್ಡಿಯ ವಿವರ:

Data responsiveData responsive

ಇತರ ಮೂಲಗಳಿಂದ ಆದಾಯ:

Data responsive

 

Data responsive

ವಿನಾಯಿತಿಗೊಳಪಟ್ಟ ಆದಾಯ:

Data responsive

ಸೆಕ್ಷನ್ 112A ಅಡಿಯಲ್ಲಿ ದೀರ್ಘಾವಧಿಯ ಬಂಡವಾಳ ಲಾಭಗಳು:

Data responsive

4.3 ಒಟ್ಟು ಆದಾಯ ತೆರಿಗೆ ಕಡಿತಗಳು

ಈ ಒಟ್ಟು ಆದಾಯ ತೆರಿಗೆ ಕಡಿತಗಳು  ವಿಭಾಗದಲ್ಲಿ, ಆದಾಯ ತೆರಿಗೆ ಅಧಿನಿಯಮ, 1961 ರ ಅಧ್ಯಾಯ VI-A ಅಡಿಯಲ್ಲಿ ಬಯಸುವ ತೆರಿಗೆ ಕಡಿತಗಳನ್ನು ಸೇರಿಸಬಹುದು, ಅಳಿಸಬಹುದು ಮತ್ತು ದೃಢೀಕರಿಸಬಹುದು. 

Data responsiveData responsiveData responsiveData responsiveData responsive

ಸೂಚನೆ:

ಮೌಲ್ಯಮಾಪನ ವರ್ಷ 2025-26 ದಿಂದ ನೀವು ಕಡಿತದ ಕ್ಲೈಮ್ ಗಳಿಗೆ ಹೆಚ್ಚುವರಿ ಮಾಹಿತಿಯನ್ನು ನೀಡಬೇಕಿರುತ್ತದೆ.

ಸೆಕ್ಷನ್‌ 80 C ಅಡಿಯಲ್ಲಿನ ತೆರಿಗೆ ಕಡಿತಗಳು:

Data responsive

ಸೆಕ್ಷನ್ 80 CCC‌ ಅಡಿಯಲ್ಲಿನ ತೆರಿಗೆ ಕಡಿತಗಳು:

Data responsive

ಸೆಕ್ಷನ್‌ 80 DD ಅಡಿಯಲ್ಲಿನ ತೆರಿಗೆ ಕಡಿತಗಳು:

Data responsive

ಸೆಕ್ಷನ್‌ 80 E ಅಡಿಯಲ್ಲಿನ ತೆರಿಗೆ ಕಡಿತಗಳು:

Data responsive

ಸೆಕ್ಷನ್‌ 80 GG ಅಡಿಯಲ್ಲಿನ ತೆರಿಗೆ ಕಡಿತಗಳು:

Data responsive

 ಸೂಚನೆ:

ಮೌಲ್ಯಮಾಪನ ವರ್ಷ 26-27ದಲ್ಲಿ, ನೀವು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡದಿದ್ದರೆ, ಸೆಕ್ಷನ್ 80CCD (2)ಅಡಿಯಲ್ಲಿನ ತೆರಿಗೆ ಕಡಿತಗಳು - ಶ್ರೇಣಿ -1 NPS ಖಾತೆ ಮತ್ತು ಸೆಕ್ಷನ್ 80CCH ಗೆ ಉದ್ಯೋಗದಾತರ ಕೊಡುಗೆ - ಅಗ್ನಿವೀರ್ ಕಾರ್ಪಸ್ ಫಂಡ್‌ನಲ್ಲಿ ಠೇವಣಿ ಮಾಡಿದ ಮೊತ್ತಗಳು ಮಾತ್ರ ನಿಮಗೆ ಗೋಚರಿಸುತ್ತದೆ.

Data responsive

4.4 ಪಾವತಿಸಲಾದ ತೆರಿಗೆ

ಈ ಪಾವತಿಸಲಾದ ತೆರಿಗೆ ವಿಭಾಗದಲ್ಲಿ, ಹಿಂದಿನ ವರ್ಷ ನೀವು ಪಾವತಿಸಿದ ತೆರಿಗೆಗಳನ್ನು ದೃಢೀಕರಿಸಬೇಕು. ವೇತನದ ಮೇಲಿನ TDS / ವೇತನ ಹೊರತುಪಡಿಸಿದ ಆದಾಯದ ಮೇಲಿನ TDS, TCS, ಮುಂಗಡ ತೆರಿಗೆ ಮತ್ತು ಸ್ವಯಂ-ಮೌಲ್ಯಮಾಪನ ತೆರಿಗೆ ವಿವರಗಳನ್ನು ಒಳಗೊಂಡಿರುತ್ತದೆ.

Data responsive

4.5 ಒಟ್ಟು ತೆರಿಗೆ ಬಾಧ್ಯತೆ

ಈ ಒಟ್ಟು ತೆರಿಗೆ ಬಾಧ್ಯತೆ ವಿಭಾಗದಲ್ಲಿ, ನೀವು ಮಾನ್ಯತೆ ಪಡೆದ ಸೆಕ್ಷನ್‌ ಗಳಾನುಸಾರ ಲೆಕ್ಕ ಹಾಕಿದ ತೆರಿಗೆ ಬಾಧ್ಯತೆಯನ್ನು ಮತ್ತು ಆಯ್ಕೆಮಾಡಿದ ತೆರಿಗೆ ಪದ್ಧತಿಯನ್ನು ಪರಿಶೀಲಿಸುವ ಅಗತ್ಯವಿದೆ.

Data responsiveData responsive

5. ITR - 1ಗೆ ಪ್ರವೇಶ ಪಡೆಯುವುದು ಮತ್ತು ಸಲ್ಲಿಸುವುದು ಹೇಗೆ:

ಈ ಕೆಳಗಿನ ವಿಧಾನಗಳ ಮೂಲಕ ನಿಮ್ಮ ITR ಅನ್ನು ನೀವು ಫೈಲ್ ಮಾಡಬಹುದು ಮತ್ತು ಸಲ್ಲಿಸಬಹುದು:

  • ಆನ್‌ಲೈನ್ ಮೋಡ್ - ಇ-ಫೈಲಿಂಗ್ ಪೋರ್ಟಲ್ ಮೂಲಕ
  • ಆಫ್‌ಲೈನ್ ಮೋಡ್ - ಆಫ್‌ಲೈನ್ ಯುಟಿಲಿಟಿ ಅಥವಾ ಎಕ್ಸೆಲ್ ಯುಟಿಲಿಟಿ ಮೂಲಕ

ಆನ್ಲೈನ್‌ ಮೋಡ್‌ ನಲ್ಲಿ ನಿಮ್ಮ ITR ಫೈಲ್‌ ಮಾಡಲು ಹಾಗೂ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ 1:  ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

 ಹಂತ 2:  ನಿಮ್ಮ ಡ್ಯಾಶ್‌ ಬೋರ್ಡ್‌ ನಲ್ಲಿ ʼಇ-ಫೈಲ್‌ʼ ನಂತರ ʼಆದಾಯ ತೆರಿಗೆ ರಿಟರ್ನ್‌ʼ ತದನಂತರ ʼಫೈಲ್‌ ಆದಾಯ ತೆರಿಗೆ ರಿಟರ್ನ್‌ʼ ಕ್ಲಿಕ್‌ ಮಾಡಿರಿ.

Data responsive

ಹಂತ 3: ನಿರ್ಧರಣಾ ವರ್ಷ 2026–27ನ್ನು ಸೆಲೆಕ್ಟ್‌ ಮಾಡಿ ನಂತರ ಫೈಲಿಂಗ್‌ ಮೋಡ್‌ ನಲ್ಲಿ ʼಆನ್ಲೈನ್‌ʼ ತದನಂತರ ʼಮುಂದುವರೆಯಿರಿʼಯನ್ನು ಕ್ಲಿಕ್‌ ಮಾಡಿ.

Data responsive

ಹಂತ 4: ಒಂದು ವೇಳೆ ನೀವು ಈಗಾಗಲೆ ಆದಾಯ ತೆರಿಗೆ ರಿಟರ್ನ್ ಭರ್ತಿಮಾಡಿ ಮತ್ತು ಅದನ್ನು ಸಲ್ಲಿಸುವುದು ಬಾಕಿ ಉಳಿದಿರುವದಾದರೆ, 'ಫೈಲಿಂಗ್‌ ಮುಂದುವರೆಸಿ' ಕ್ಲಿಕ್ ಮಾಡಿ. ಬಾಕಿ ಉಳಿಸಿಕೊಂಡ ರಿಟರ್ನ್ ಅನ್ನು ತ್ಯಜಿಸಿ ಹೊಸದಾಗಿ ರಿಟರ್ನ್ ತಯಾರಿಸಲು ಇಚ್ಛಿಸುತ್ತಿದ್ದರೆ, 'ಹೊಸ ಫೈಲಿಂಗ್‌ ಆರಂಭಿಸಿ ' ಕ್ಲಿಕ್ ಮಾಡಿ.

Data responsive

ಹಂತ 5: ನಿಮಗೆ ಅನ್ವಯಿಸುವ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ 'ಮುಂದುವರೆಯಿರಿ'ಯನ್ನು ಕ್ಲಿಕ್‌ ಮಾಡಿ.

Data responsive

ಹಂತ 6: ITR-1 ಫಾರ್ಮ್‌ ನ್ನು ಡ್ರಾಪ್‌ ಡೌನ್‌ ಮೆನುವಿನಿಂದ ಸೆಲೆಕ್ಟ್‌ ಮಾಡಿ ITR-1ಕ್ಕಾಗಿ 'ಮುಂದುವರೆಯಿರಿ'ಯನ್ನು ಕ್ಲಿಕ್‌ ಮಾಡಿ.

Data responsive

ಹಂತ 7: ನಿಮಗೆ ಅನ್ವಯಿಸುವ ITR ಸೆಲೆಕ್ಟ್‌ ಮಾಡಿದ ನಂತರ ನೀವು, ಬೇಕಾದ ದಾಖಲೆಗಳ ಪಟ್ಟಿಯನ್ನು ಗಮನಿಸಿರಿ ಮತ್ತೆ 'ಆರಂಭಿಸೋಣ ನಾವು'ನ್ನು ಕ್ಲಿಕ್‌ ಮಾಡಿ.

Data responsive

ಹಂತ 8:  ಯಾವ ಕಾರಣಕ್ಕಾಗಿ ನೀವು ITR ಫೈಲ್‌ ಮಾಡಲು ಬಯಸುವಿರೋ ಅದಕ್ಕೆ ಅನ್ವಯಿಸುವ ಚೆಕ್‌ ಬಾಕ್ಸ್‌ ನ್ನು ಆಯ್ಕೆ ಮಾಡಿ ನಂತರ 'ಮುಂದುವರೆಯಿರಿ'ಯನ್ನು ಕ್ಲಿಕ್‌ ಮಾಡಿ.

Data responsive

ಹಂತ 9:  ಮೌಲ್ಯಮಾಪನ ವರ್ಷ 2026-27 ಕ್ಕೆ ಹೊಸ ತೆರಿಗೆ ಪದ್ಧತಿಯೇ ಡಿಫಾಲ್ಟ್‌ ತೆರಿಗೆ ಪದ್ಧತಿಯಾಗಿದೆ.“ನೀವು ಹೊಸ ತೆರಿಗೆ ಪದ್ಧತಿಯನ್ನು ಬಿಟ್ಟು ಹೊರಬರುತ್ತೀರಾ” ಎಂಬ ಪ್ರಶ್ನೆಗೆ 'ಇಲ್ಲ' ಆಯ್ಕೆ ಸ್ವಯಂಚಾಲಿತವಾಗಿ ಆಯ್ಕೆಮಾಡಲಾಗುತ್ತದೆ. ನೀವು ಹಳೆಯ ತೆರಿಗೆ ಪದ್ಧತಿಯಡಿ ನಿಮ್ಮ ರಿಟರ್ನ್ ಸಲ್ಲಿಸಲು ಬಯಸಿದರೆ ವೈಯಕ್ತಿಕ ಮಾಹಿತಿಯ ವಿಭಾಗದಲ್ಲಿ ‘ಹೌದು’ ಆಯ್ಕೆಮಾಡಿ.

ನಿಮ್ಮ ಪೂರ್ವ-ಭರ್ತಿ ಮಾಡಿದ ಮಾಹಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಅದನ್ನು ತಿದ್ದುಪಡಿ ಮಾಡಿ. ಉಳಿದ/ಹೆಚ್ಚುವರಿ ದತ್ತಾಂಶವನ್ನು ನಮೂದಿಸಿ (ಆವಶ್ಯಕವಾದರೆ). ಪ್ರತಿ ವಿಭಾಗದ ಕೊನೆಯಲ್ಲಿ 'ದೃಢೀಕರಿಸಿ'ಯನ್ನು ಕ್ಲಿಕ್ ಮಾಡಿ.

Data responsiveData responsiveData responsiveData responsive

ಸೂಚನೆ:

ತೆರಿಗೆ ಪದ್ದತಿಯನ್ನು ಆಯ್ಕೆಮಾಡುವ ಮೊದಲು, ಹೊಸ ತೆರಿಗೆ ಪದ್ಧತಿಯಲ್ಲಿ ಕೆಲವು ತೆರಿಗೆ ಕಡಿತಗಳು ಮತ್ತು ವಿನಾಯಿತಿಗಳು ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಹೆಚ್ಚಿನ ಮಾಹಿತಿಗಾಗಿ ಹಳೆಯ ಮತ್ತು ಹೊಸ ಪದ್ಧತಿ (ಭಾಗ-1) ಕುರಿತು ವಿಡಿಯೋವನ್ನು ನೋಡಿ

ಹಂತ 10: ನಿಮ್ಮ ಆದಾಯ ಮತ್ತು ಒಟ್ಟಾರೆ ತೆರಿಗೆ ಕಡಿತ ವಿವರಗಳನ್ನು ವಿಭಿನ್ನ ವಿಭಾಗಗಳಲ್ಲಿ ನಮೂದಿಸಿ/ ತಿದ್ದಿರಿ. ಫಾರ್ಮಿನ ಎಲ್ಲಾ ವಿಭಾಗಗಳನ್ನು ಪೂರ್ಣಗೊಳಿಸಿ ಮತ್ತು ದೃಢೀಕರಿಸಿದ ನಂತರ, 'ತಪಾಸಣೆಗೆ ಮುಂದುವರೆಯಿರಿ'ಯನ್ನು ಕ್ಲಿಕ್ ಮಾಡಿ.

Data responsive

ಹಂತ 10a: ಒಂದು ವೇಳೆ ತೆರಿಗೆ ಬಾಧ್ಯತೆ ಇದ್ದರೆ:

ನೀವು ಒದಗಿಸಿದ ವಿವರಗಳ ಆಧಾರದನ್ವಯ, ನಿಮ್ಮ ತೆರಿಗೆಯ ಲೆಕ್ಕಾಚಾರದ ಸಾರಾಂಶವನ್ನು ನಿಮಗೆ ತೋರಿಸಲಾಗುತ್ತದೆ. ಲೆಕ್ಕಾಚಾರದ ಅನ್ವಯ ಒಂದು ವೇಳೆ ತೆರಿಗೆ ಪಾವತಿಯ ಬಾಧ್ಯತೆ ಇದ್ದರೆ, ಪುಟದ ಕೊನೆಯಲ್ಲಿ ʼಈಗಲೇ ಪಾವತಿಸಿʼ ಮತ್ತು ʼನಂತರ ಪಾವತಿಸಿʼ ಆಯ್ಕೆಗಳು ಇರುತ್ತವೆ.

Data responsiveData responsiveData responsive

ಸೂಚನೆ: 

  • ಆದಷ್ಟು ಈಗಲೇ ಪಾವತಿಸಿ  ಆಯ್ಕೆಯನ್ನೇ ಬಳಸಲು ಶಿಫಾರಸ್ಸು ಮಾಡಲಾಗುತ್ತದೆ.
  • ನೀವು ನಂತರ ಪಾವತಿಸುವ ಆಯ್ಕೆಯನ್ನು ಬಳಸಿದರೆ, ನಿಮ್ಮ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಮಾಡಿದ ನಂತರ ನೀವು ಪಾವತಿ ಮಾಡಬಹುದು, ಆದರೆ ಹಿಂಬಾಕಿ ತೆರಿಗೆದಾರರೆಂದು ಪರಿಗಣಿಸಬಹುದಾದ ಅಪಾಯವಿದೆ,ಮತ್ತು ಬಾಕಿ ಇರುವ ತೆರಿಗೆ ಮೊತ್ತದ ಮೇಲೆ ಬಡ್ಡಿ ಆಕರಿಸಬಹುದು.

ಹಂತ10a(i) : ನೀವು'ಈಗಲೇ ಪಾವತಿಸಿ' ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ಇ-ಪಾವತಿ ತೆರಿಗೆ ಸೇವೆಗೆ ಮರುನಿರ್ದೇಶಿಸಲ್ಪಡುತ್ತಿರಿ. 'ಮುಂದುವರೆಯಿರಿ'ಯನ್ನು ಕ್ಲಿಕ್‌ ಮಾಡಿ.

Data responsive

ಸೂಚನೆ: ನೀವು ಮುಂದುವರೆಯಿರಿಯನ್ನು ಕ್ಲಿಕ್ ಮಾಡಿದ ನಂತರ ತೆರಿಗೆ ಪಾವತಿಗಾಗಿ ಇ-ಪಾವತಿ ತೆರಿಗೆ ಪೋರ್ಟ್‌ಲ್ ಗೆ ತೆಗೆದುಕೊಂಡು/ಕರೆದುಕೊಂಡು ಹೋಗಲಾಗುತ್ತದೆ. ಇನ್ನಷ್ಟು ತಿಳಿಯಲು ಇ-ಪಾವತಿ ತೆರಿಗೆ ಬಳಕೆದಾರ ಕೈಪಿಡಿಗಳನ್ನು ನೋಡಿ.

ಹಂತ 10a(ii): ಇ-ಫೈಲಿಂಗ್ ಪೋರ್ಟಲ್ ಮೂಲಕ ಯಶಸ್ವಿಯಾಗಿ ಪಾವತಿಸಿದ ನಂತರ ಯಶಸ್ವಿಯಾದ ಸಂದೇಶವನ್ನು ತೋರಿಸಲಾಗುತ್ತದೆ. ITR ಫೈಲಿಂಗ್ ಅನ್ನು ಪೂರ್ಣಗೊಳಿಸಲು 'ರಿಟರ್ನ್‌ ಫೈಲಿಂಗ್ ಗೆ ಹಿಂತಿರುಗಿ'ಯನ್ನು ಕ್ಲಿಕ್ ಮಾಡಿ.

Data responsive

ಹಂತ 10b: ಒಂದು ವೇಳೆ ತೆರಿಗೆ ಬಾಧ್ಯತೆ ಇರದಿದ್ದಲ್ಲಿ (ತೆರಿಗೆ ಇಲ್ಲ/ ರೀಫಂಡ್‌ ಇಲ್ಲ) ಅಥವಾ ನೀವು ರೀಫಂಡ್‌ ಗೆ ಅರ್ಹರಿದ್ದರೆ: ಪಾವತಿಸಬೇಕಾದ ತೆರಿಗೆ ಬಾಧ್ಯತೆ ಇರದಿದ್ದರೆ, ಅಥವಾ ತೆರಿಗೆ ಲೆಕ್ಕಾಚಾರ ಆಧಾರಿತವಾಗಿ ರೀಫಂಡ್ ಇದ್ದರೆ, ನಿಮ್ಮನ್ನು 'ನಿಮ್ಮ ರಿಟರ್ನ್ ಅನ್ನು ಅವಲೋಕಿಸಿ ಸಲ್ಲಿಸಿ' ಪುಟಕ್ಕೆ ಕೊಂಡೊಯ್ಯಲಾಗುವುದು.

Data responsiveData responsiveData responsive

ಹಂತ 11:  'ನಿಮ್ಮ ರಿಟರ್ನ್ಅನ್ನು ಅವಲೋಕಿಸಿ ಸಲ್ಲಿಸಿ' ಪುಟದಲ್ಲಿ, ಘೋಷಣಾ ಚೆಕ್‌ ಬಾಕ್ಸ್‌ ನ್ನು ಸೆಲೆಕ್ಟ್‌ ಮಾಡಿ ಮತ್ತು 'ದೃಢೀಕರಣಕ್ಕಾಗಿ ಮುಂದುವರೆಯಿರಿ'ನ್ನು ಕ್ಲಿಕ್‌ ಮಾಡಿ.

Data responsive

ಸೂಚನೆ: ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಿದ್ಧಪಡಿಸಲು ತೆರಿಗೆ ರಿಟರ್ನ್ ತಯಾರಕ ಅಥವಾ TRP ಅನ್ನು‌ ಸಿದ್ಧಪಡಿಸಲು ಸೇರಿಸದಿದ್ದರೆ, TRP ಗೆ ಸಂಬಂಧಿಸಿದ ಟೆಕ್ಸ್ಟ್ ಬಾಕ್ಸ್ ಗಳನ್ನು ಖಾಲಿ ಬಿಡಬಹುದು.


ಹಂತ 12: ಒಮ್ಮೆ ಆಂತರಿಕ ಮೌಲ್ಯೀಕರಣ ಯಶಸ್ವಿಯಾದರೆ 'ಪೂರ್ವವೀಕ್ಷಣೆ'ಯನ್ನು ಕ್ಲಿಕ್ ಮಾಡಿ.

Data responsive

ಸೂಚನೆ: ಒಂದು ವೇಳೆ ನಿಮ್ಮ ರಿಟರ್ನ್‌ನಲ್ಲಿ ದೋಷಗಳ ಸೂಚಿ ಕಂಡುಬಂದರೆ, ದೋಷಗಳನ್ನು ಸರಿಪಡಿಸಲು ನೀವು ಫಾರ್ಮ್‌ಗೆ ಹಿಂತಿರುಗಬೇಕು. ಒಂದು ವೇಳೆ ದೋಷಗಳು ಇರದಿದ್ದರೆ, ನೀವು ನಿಮ್ಮ ರಿಟರ್ನ್‌ಅನ್ನು ಅವಲೋಕಿಸಲು ಮುಂದುವರೆಯಬಹುದು.

ಹಂತ 13:  'ರಿಟರ್ನ್‌ ನ ಪೂರ್ವ ವೀಕ್ಷಣೆ'ದ ನಂತರ 'ದೃಢೀಕರಣಕ್ಕೆ ಮುಂದುವರಿಯಿರಿ'ಯನ್ನು ಕ್ಲಿಕ್‌ ಮಾಡಿ.

Data responsive

ಹಂತ 14:  ಒಮ್ಮೆ ರಿಟರ್ನ್ ಅಪ್‌ಲೋಡ್ ಮಟ್ಟದ ದೃಢೀಕರಣದೊಂದಿಗೆ ಯಶಸ್ವಿಯಾಗಿ ದೃಢೀಕರಣಗೊಂಡ ನಂತರ 'ಪರಿಶೀಲನೆಗೆ ಮುಂದುವರಿಯಿರಿ'ಯನ್ನು ಕ್ಲಿಕ್ ಮಾಡಿ.

Data responsive

ಹಂತ 15:  'ನಿಮ್ಮ ಪರಿಶೀಲನೆ ಪೂರ್ಣಗೊಳಿಸಿ ಪುಟ'ದಲ್ಲಿ, ನಿಮ್ಮ ಆದ್ಯತೆಯನ್ನು ಆಯ್ಕೆ ಮಾಡಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.

ನಿಮ್ಮ ರಿಟರ್ನ್ ಅನ್ನು ಪರಿಶೀಲಿಸುವುದು ಅವಶ್ಯಕವಾಗಿದೆ, ಮತ್ತು ಇ-ವೆರಿಫೈ(ಶಿಫಾರಸು ಮಾಡಲಾದ ಆಯ್ಕೆ – ಈಗ ಇ-ವೆರಿಫೈ) ನಿಮ್ಮ ITR ಪರಿಶೀಲಿಸಲು ಅತ್ಯಂತ ಸರಳವಾದ ವಿಧಾನವಾಗಿದೆ – ಇದು ವೇಗವಾಗಿ, ಕಾಗದ ರಹಿತವಾಗಿ, ಮತ್ತು ಸ್ಪೀಡ್ ಪೋಸ್ಟ್ ಮೂಲಕ CPCಗೆ ಸಹಿಹಾಕಿದ ಭೌತಿಕ ITR-V ಅನ್ನು ಕಳುಹಿಸುವುದಕ್ಕಿಂತ ಸುರಕ್ಷಿತವಾಗಿದೆ.

Data responsive

ಸೂಚನೆ: ಒಂದು ವೇಳೆ ನೀವು ನಂತರ ಇ-ವೆರಿಫೈ ಎಂಬುದನ್ನು ಆಯ್ಕೆ ಮಾಡಿದರೆ, ನೀವು ನಿಮ್ಮ ರಿಟರ್ನ್‌ ಅನ್ನು ಸಲ್ಲಿಸಬಹುದು, ಅದಾಗ್ಯೂ, ನಿಮ್ಮ ITR ಅನ್ನು ಫೈಲಿಂಗ್‌ ಮಾಡಿದ 30 ದಿನಗಳೊಳಗೆ ನೀವು ನಿಮ್ಮ ರಿಟರ್ನ್‌ ಅನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ.

ಹಂತ 16:  'ಇ-ವೆರಿಫೈ' ಪುಟದಲ್ಲಿ, ರಿಟರ್ನ್ಅನ್ನು ಯಾವ ಆಯ್ಕೆ ಬಳಸಿ ನೀವು ಇ-ವೆರಿಫೈ ಮಾಡಬೇಕು ಎಂದು ಆಯ್ಕೆಮಾಡಿ ಮತ್ತು 'ಮುಂದುವರೆಯಿರಿ'ಯನ್ನು ಕ್ಲಿಕ್ ಮಾಡಿ.

ಸೂಚನೆ:

  • ಹೆಚ್ಚಿನ ತಿಳುವಳಿಕೆಗಾಗಿ ಇ-ಪರಿಶೀಲನೆ ಹೇಗೆ ಮಾಡಬೇಕು ಕೈಪಿಡಿಯನ್ನು ನೋಡಿರಿ
  • ನೀವು ITR-V ಮೂಲಕ ಪರಿಶೀಲನೆ ಆಯ್ಕೆ ಮಾಡಿದರೆ, ನೀವು ಸಹಿಮಾಡಿದ ITR-Vರ ಭೌತಿಕ ಪ್ರತಿಯನ್ನು 30 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಕೇಂದ್ರೀಕೃತ ಪರಿಷ್ಕಾರಣಾ ಕೇಂದ್ರ, ಆದಾಯ ತೆರಿಗೆ ಇಲಾಖೆ, ಬೆಂಗಳೂರು 560500 ಗೆ ಕಳುಹಿಸಬೇಕು.
  • ನಿಮ್ಮ ಬ್ಯಾಂಕ್ ಖಾತೆಯನ್ನು ನೀವು ಮೊದಲೇ ದೃಢೀಕರಿಸಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ, ಇದರಿಂದ ಬಾಕಿ ಇರುವ ಯಾವುದೇ ರೀಫಂಡ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಬಹುದು.
  • ಹೆಚ್ಚಿನ ತಿಳುವಳಿಕೆಗಾಗಿ ನನ್ನ ಬ್ಯಾಂಕ್ ಖಾತೆ ಬಳಕೆದಾರರ ಕೈಪಿಡಿಯನ್ನು ನೋಡಿ

 ಸೂಚನೆ: ಅಧಿಸೂಚನೆ ಸಂಖ್ಯೆ. 2/2024 ದಿನಾಂಕ 31/03/2024ರನನ್ವಯ-

  1. ಯಾವಾಗ ಆದಾಯದ ರಿಟರ್ನ್‌ ಅಪ್‌ಲೋಡ್ ಮಾಡಿ ಮತ್ತು ಇ-ಪರಿಶೀಲನೆ/ ಅಪ್‌ಲೋಡ್‌ ಮಾಡಿದ lTR-Vನ್ನು 30 ದಿನದೊಳಗೆ ಸಲ್ಲಿಸಿದ್ದರೆ- ಇಂತಹ ಪ್ರಕರಣಗಳಲ್ಲಿ ಆದಾಯ ರಿಟರ್ನ್‌ ಅಪ್ಲೋಡ್ ಮಾಡಿದ ದಿನಾಂಕವನ್ನೇ ಆದಾಯ ರಿಟರ್ನ್‌ ಒದಗಿಸಿದ ದಿನವೆಂದು ಪರಿಗಣಿಸಲಾಗುತ್ತದೆ.
  2. ಯಾವಾಗ ಆದಾಯದ ರಿಟರ್ನ್‌ ಅಪ್‌ಲೋಡ್ ಮಾಡಿ ಆದರೆ ಇ-ವೆರಿಫೈ/ ಅಪ್‌ ಲೋಡ್‌ ಮಾಡಿದ lTR-Vನ್ನು 30 ದಿನದ ನಂತರ ಸಲ್ಲಿಸಿದರೆ- ಅಂತಹ ಪ್ರಕರಣಗಳಲ್ಲಿ ಇ-ಪರಿಶೀಲನೆ/ITR-V ಸಲ್ಲಿಕೆಯ ದಿನಾಂಕಗಳನ್ನು ಆದಾಯ ರಿಟರ್ನ್‌ ವರದಿ ದಿನಾಂಕವೆಂದು ಪರಿಗಣಿಸಲಾಗುವುದು ಮತ್ತು ಕಾಯ್ದೆಯ ಅಡಿಯಲ್ಲಿ ರಿಟರ್ನ್ ತಡವಾಗಿ ಸಲ್ಲಿಸುವ ಎಲ್ಲಾ ಪರಿಣಾಮಗಳು ಅನ್ವಯವಾಗುತ್ತವೆ.
  3. ನಿಗದಿತ ನಮೂನೆಯಲ್ಲಿ ಮತ್ತು ನಿಗದಿತ ರೀತಿಯಲ್ಲಿ ಸರಿಯಾಗಿ ಪರಿಶೀಲಿಸಿದ ITR-Vಅನ್ನು ಸಾಮಾನ್ಯ ಅಥವಾ ವೇಗದ ಪೋಸ್ಟ್ ಮೂಲಕ ಅಥವಾ ಯಾವುದೇ ಇತರ ಮೋಡ್‌ನಲ್ಲಿ ಈ ಕೆಳಗಿನ ವಿಳಾಸಕ್ಕೆ ಮಾತ್ರ ಕಳುಹಿಸಬೇಕು: ಕೇಂದ್ರೀಕೃತ ಸಂಸ್ಕರಣಾ ಕೇಂದ್ರ, ಆದಾಯ ತೆರಿಗೆ ಇಲಾಖೆ, ಬೆಂಗಳೂರು - 560500, ಕರ್ನಾಟಕ.
  4. ಸರಿಯಾಗಿ ಪರಿಶೀಲಿಸಲಾದ ITR-Vಅನ್ನು CPC ಗೆ ಸ್ವೀಕರಿಸಿದ ದಿನವನ್ನು ಆದಾಯ ತೆರಿಗೆ ರಿಟರ್ನ್ ಅಪ್‌ಲೋಡ್ ಮಾಡಿದ ದಿನದಿಂದ 30 ದಿನಗಳ ಅವಧಿಯನ್ನು ತೆರಿಗೆ ಮೌಲ್ಯಮಾಪನ ನಿರ್ಧರಿಸುವ ಉದ್ದೇಶಕ್ಕಾಗಿ ಪರಿಗಣಿಸಲಾಗುತ್ತದೆ.
  5. ನಿರ್ದಿಷ್ಟ ಸಮಯದ ಮಿತಿಯೊಳಗೆ ಅಪ್‌ಲೋಡ್ ಮಾಡಿದ ನಂತರ ಆದಾಯದ ರಿಟರ್ನ್ ಅನ್ನು ಪರಿಶೀಲನೆಗೆ ಒಳಪಡಿಸದಿದ್ದರೆ ಅಂತಹ ರಿಟರ್ನ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ನೀವು ನಿಮ್ಮ ರಿಟರ್ನ್ ಅನ್ನು ಇ-ಪರಿಶೀಲನೆ ಮಾಡಿದ ನಂತರ ವಹಿವಾಟು ಐಡಿ ಮತ್ತು ಸ್ವೀಕೃತಿ ಸಂಖ್ಯೆಯೊಂದಿಗೆ ಸಕ್ಸೆಸ್ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ನಂಬರ್‌ ಮತ್ತು ಇಮೇಲ್ ಐಡಿ‌ನಲ್ಲಿ ದೃಢೀಕರಣ ಸಂದೇಶವನ್ನು ಕೂಡ ಪಡೆಯುತ್ತೀರಿ.

Data responsive