ಫಾರ್ಮ್ 1 (52/2023) ಕುರಿತು ಬಳಕೆದಾರರ ಕೈಪಿಡಿ
1. ಪಕ್ಷಿನೋಟ
ಫಾರ್ಮ್ ಸಂಖ್ಯೆ 1 ಎಂಬುದು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ (IFSC)ದಲ್ಲಿ ನೆಲೆಗೊಂಡಿದ್ದು, ವಿಮಾನ ಗುತ್ತಿಗೆ (ಲೀಸಿಂಗ್) ವ್ಯವಹಾರ ನಡೆಸುವ ಕಂಪನಿಗಳು ಬಳಸುವ ಸರಳ ಘೋಷಣೆ ಫಾರ್ಮ್ ಆಗಿದೆ.
ಈ ಫಾರ್ಮ್‌ನ ಮೂಲಕ, IFSCಯಲ್ಲಿ ನೆಲೆಗೊಂಡಿರುವ ಕಂಪನಿಯಿಂದ ತಮಗೆ ದೊರೆಯುವ ನಿರ್ದಿಷ್ಟ ಲಾಭಾಂಶ (ಡಿವಿಡೆಂಡ್) ಪಾವತಿಗಳ ಮೇಲೆ ಮೂಲದಲ್ಲೇ ತೆರಿಗೆ ಕಡಿತ (TDS) ಆಗುವುದನ್ನು ತಪ್ಪಿಸಿಕೊಳ್ಳಬಹುದು.
ಈ ನಮೂನೆಯನ್ನು ಕಂಪನಿಗಳು ಹಾಗೂ IFSCಯಲ್ಲಿರುವ ತಮ್ಮ ಘಟಕಗಳನ್ನು ಹೊಂದಿರುವ ಅವರ ಅಧಿಕೃತ ಸಹಿದಾರರು / ಅಧಿಕೃತ ಪ್ರತಿನಿಧಿ ತೆರಿಗೆದಾರರು ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಆನ್‌ಲೈನ್ ವಿಧಾನದಲ್ಲಿ ಸಲ್ಲಿಸಬಹುದು. ಸಲ್ಲಿಸಿದ ನಂತರ, ಸ್ವೀಕರಿಸುವವರು ಸಲ್ಲಿಸಲಾದ ಫಾರ್ಮ್‌ನ PDF ಪ್ರತಿಯನ್ನು ಹಾಗೂ ಸ್ವೀಕೃತಿ ಪತ್ರವನ್ನು ಪಾವತಿದಾರರಿಗೆ ಒದಗಿಸಬೇಕು. ಅದರ ಆಧಾರದ ಮೇಲೆ, ಪಾವತಿದಾರರು ತಾವು ಮಾಡುವ ಲಾಭಾಂಶ ಪಾವತಿಗಳ ಮೇಲೆ TDS ಅನ್ನು ಕಡಿತಗೊಳಿಸುವುದನ್ನು ನಿಲ್ಲಿಸುತ್ತಾರೆ.
2. ಫಾರ್ಮ್ಅನ್ನು ಸಲ್ಲಿಸುವ ಮೊದಲು ಪೂರೈಸಬೇಕಾದ ಪೂರ್ವಾಪೇಕ್ಷಿತಗಳು
ಫಾರ್ಮ್ ಸಂಖ್ಯೆ 1 ಅನ್ನು ಸಲ್ಲಿಸುವ ಮೊದಲು, ಈ ಕೆಳಗಿನ ಷರತ್ತುಗಳು ಪೂರೈಸಲ್ಪಟ್ಟಿರಬೇಕು:
✔ ಕಂಪನಿಯು:
• ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ (IFSC) ನೆಲೆಗೊಂಡಿರಬೇಕು.
• ಮುಖ್ಯವಾಗಿ ವಿಮಾನ ಗುತ್ತಿಗೆ (ಲೀಸಿಂಗ್) ವ್ಯವಹಾರ ನಡೆಸುತ್ತಿರಬೇಕು.
✔ ಕಂಪನಿಗೆ ದೊರೆಯುವ ಲಾಭಾಂಶ Dividend):
• ಆದಾಯ ತೆರಿಗೆ ಕಾಯ್ದೆ, 2025 ರ ಅನುಸೂಚಿ VI (ಕೋಷ್ಟಕದ ಕ್ರಮ ಸಂಖ್ಯೆ 11) ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿರಬೇಕು.
✔ ಫಾರ್ಮ್ ಕಡ್ಡಾಯವಾಗಿ:
• ಅಧಿಕೃತ ವ್ಯಕ್ತಿಯಿಂದ ಸಹಿ ಮಾಡಿರಬೇಕು (ಆದಾಯ ತೆರಿಗೆ ಕಾಯ್ದೆ 2025 ರ ಸೆಕ್ಷನ್ 265 ರ ಪ್ರಕಾರ).:
• ಲಾಭಾಂಶವನ್ನು ಪಾವತಿಸುವ ಕಂಪನಿಗೆ ನೀಡಬೇಕು. ಪಾವತಿಸುವ ಕಂಪನಿಯು ಈ ಸಲ್ಲಿಸಿದ ಫಾರ್ಮ್ ಅನ್ನು ಸ್ವೀಕರಿಸಿದ ನಂತರ, ಆ ಲಾಭಾಂಶ ಪಾವತಿಗಳ ಮೇಲೆ ಅದು ಟಿಡಿಎಸ್ ಅನ್ನು ಕಡಿತಗೊಳಿಸುವುದಿಲ್ಲ.
3. ಫಾರ್ಮ್ ಕುರಿತು
ಫಾರ್ಮ್ ಸಂಖ್ಯೆ 1ರ ಉದ್ದೇಶ
ಈ ಫಾರ್ಮ್ ಅನ್ನು ಈ ಕೆಳಗಿನ ವಿಷಯಗಳನ್ನು ಘೋಷಿಸಲು ಬಳಸಲಾಗುತ್ತದೆ:
• ಫಾರ್ಮ್ ಅನ್ನು ಸಲ್ಲಿಸುವ ಕಂಪನಿಯು ತಾನು ಪಡೆಯುವ ಲಾಭಾಂಶದ ಮೇಲಿನ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.
• ಅದು ಇನ್ನೂ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ (IFSC) ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಮುಖ್ಯವಾಗಿ ವಿಮಾನ ಗುತ್ತಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.
• ಈ ಫಾರ್ಮ್ ಅನ್ನು ಸಲ್ಲಿಸಿದ ನಂತರ, ಪಾವತಿದಾರ ಕಂಪನಿಯು ಲಾಭಾಂಶ ಪಾವತಿಗಳ ಮೇಲೆ ಮೂಲದಲ್ಲೇ ತೆರಿಗೆ ಕಡಿತ (TDS) ಮಾಡುವುದನ್ನು ನಿಲ್ಲಿಸಬಹುದು.
ಈ ಫಾರ್ಮ್ ಏಕೆ ಅಸ್ತಿತ್ವದಲ್ಲಿದೆ
ಅಧಿಸೂಚನೆ 52/2023 ಅನ್ನು ಸರ್ಕಾರವು IFSCಯಲ್ಲಿ ವಿಮಾನ ಗುತ್ತಿಗೆ (ಲೀಸಿಂಗ್) ವ್ಯವಹಾರ ನಡೆಸುವ ಘಟಕಗಳ ನಡುವೆ ನಡೆಯುವ ನಿರ್ದಿಷ್ಟ ಲಾಭಾಂಶ (Dividend) ಪಾವತಿಗಳ ಮೇಲೆ ಮೂಲದಲ್ಲೇ ತೆರಿಗೆ ಕಡಿತ (TDS) ಆಗದಂತೆ ಖಚಿತಪಡಿಸಿಕೊಳ್ಳಲು ಹೊರಡಿಸಿದೆ.
ಫಾರ್ಮ್ ಸಂಖ್ಯೆ 1 (52/2023) ಅನ್ನು ಯಾರು ಸಲ್ಲಿಸಬಹುದು
✔ ಸ್ವೀಕರಿಸುವ (Payee) ಕಂಪನಿ
ಕಂಪನಿ ಅದು:
• ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ (IFSC) ನೆಲೆಗೊಂಡಿರಬೇಕು.
• ಮುಖ್ಯವಾಗಿ ವಿಮಾನ ಗುತ್ತಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರಬೇಕು.
• IFSCಯಲ್ಲಿ ನೆಲೆಗೊಂಡಿರುವ ಇದೇ ರೀತಿಯ ಮತ್ತೊಂದು ಕಂಪನಿಯಿಂದ ಲಾಭಾಂಶ ಪಡೆಯುತ್ತಿರಬೇಕು.
✔ ಈ ಫಾರ್ಮ್‌ಗೆ ಸಹಿ ಮಾಡಲು ಅಧಿಕಾರ ಹೊಂದಿರುವ ವ್ಯಕ್ತಿ
(ಆದಾಯ ತೆರಿಗೆ ಅಧಿನಿಯಮ, 2025 ರ ಸೆಕ್ಷನ್ 265 ರ ಪ್ರಕಾರ) ಆ ಕಂಪನಿಯ ಆದಾಯ ತೆರಿಗೆ ವಿವರವನ್ನು ದೃಢೀಕರಿಸಲು ಅಧಿಕಾರ ಹೊಂದಿರುವ ವ್ಯಕ್ತಿಯು ಸಹಿ ಮಾಡಿರಬೇಕು.
4. ಫಾರ್ಮ್ ಸಂಖ್ಯೆ 1ಅನ್ನು ಸಲ್ಲಿಸುವ ಹಂತ-ಹಂತದ ಮಾರ್ಗದರ್ಶಿ
ಹಂತ 1: ನಿಮ್ಮ ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಆಗಿರಿ.
ಹಂತ 2: ಬಳಕೆದಾರರ ID (PAN) ಮತ್ತು ಪಾಸ್‌ವರ್ಡ್ಅನ್ನು ನಮೂದಿಸಿ.
ಹಂತ 3: ಇ-ಸಲ್ಲಿಕೆ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್ ಸಲ್ಲಿಸಿ ಗೆ ಹೋಗಿ.
ಹಂತ 4: "ಆದಾಯ ತೆರಿಗೆ ಕಾಯಿದೆ, 2025 ರ ಅನ್ವಯ ನಮೂನೆಗಳು" ಟ್ಯಾಬ್ ಅನ್ನು ಆಯ್ಕೆಮಾಡಿ.
ಹಂತ 5: ಫಾರ್ಮ್ 1 (52/2023) [ಅನುಸೂಚಿ VI(ಕೋಷ್ಟಕ: ಕ್ರಮ ಸಂಖ್ಯೆ 11)ರಡಿ ತೆರಿಗೆ ವಿನಾಯಿತಿ ಹೊಂದಿರುವ ಲಾಭಾಂಶ] ಅನ್ನು ಆಯ್ಕೆಮಾಡಿ/ಹುಡುಕಿ.
ಹಂತ 6: ತೆರಿಗೆ ವರ್ಷವನ್ನು ಆಯ್ಕೆಮಾಡಿ, ನಂತರ "ಮುಂದುವರಿಸಿ" ಮೇಲೆ ಕ್ಲಿಕ್ ಮಾಡಿ.
ಹಂತ 7: ಪ್ರಾರಂಭಿಸೋಣ ಮೇಲೆ ಕ್ಲಿಕ್ ಮಾಡಿ.
ಹಂತ 8: ಬಳಕೆದಾರರು “ಪ್ರಾರಂಭಿಸೋಣ” ಮೇಲೆ ಕ್ಲಿಕ್ ಮಾಡಿದಾಗ, ಫಾರ್ಮ್ 1 (52/2023) ಪ್ರದರ್ಶಿಸಲಾಗುತ್ತದೆ.
ಬಳಕೆದಾರರು ಎಲ್ಲಾ ಖಾಲಿ ಇರುವ ಕ್ಷೇತ್ರಗಳನ್ನು ಭರ್ತಿ ಮಾಡಬೇಕು. ಚುಕ್ಕಿ ಗುರುತು (*) ಇರುವ ಕ್ಷೇತ್ರಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.
ಕಡ್ಡಾಯ ಮಾಹಿತಿ
ಬಳಕೆದಾರರು ಈ ಕೆಳಗಿನ ಮಾಹಿತಿಯನ್ನು ನಮೂದಿಸಬೇಕು:
• IFSCಯಲ್ಲಿರುವ ಸ್ವೀಕರಿಸುವವರ ಘಟಕದ ಹೆಸರು, ವಿಳಾಸ ವಿಭಾಗದಲ್ಲಿರುವ ಕಡ್ಡಾಯ ಕ್ಷೇತ್ರಗಳು.
ಪೂರ್ವಭರ್ತಿಯಾದ ಮಾಹಿತಿ
ಈ ಕೆಳಗಿನ ಕೆಲವು ವಿವರಗಳು ಫಾರ್ಮ್‌ನಲ್ಲಿ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತವೆ:
• ಪಾವತಿಯನ್ನು ಪಡೆಯುವವರ ಹೆಸರು, PAN, ವಿಳಾಸ, ಇ-ಮೇಲ್ ID ಹಾಗೂ ಮೊಬೈಲ್ ಸಂಖ್ಯೆ.
ಪೂರ್ವಭರ್ತಿಯಾದ ವಿವರಗಳನ್ನು ನವೀಕರಿಸುವುದು
ಬಳಕೆದಾರರು ಮುಂಚಿತವಾಗಿ ಭರ್ತಿ ಮಾಡಲಾದ ಯಾವುದೇ ಮಾಹಿತಿಯನ್ನು ನವೀಕರಿಸಲು ಬಯಸಿದರೆ:
• “ನನ್ನ ಪ್ರೊಫೈಲ್” ಹೈಪರ್‌ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಮೂಲಭೂತ ವಿವರಗಳನ್ನು ನವೀಕರಿಸಿ.
• ನವೀಕರಿಸಿದ ವಿವರಗಳು ಫಾರ್ಮ್‌ನಲ್ಲಿ ಪ್ರತಿಬಿಂಬಿಸುತ್ತವೆ.
ಹೇಳಿಕೆಯ ಜೊತೆ ಘೋಷಣೆ
ಪ್ರಧಾನ ಸಂಪರ್ಕ ವ್ಯಕ್ತಿಯ ವಿವರಗಳು ನನ್ನ ಪ್ರೊಫೈಲ್ನಲ್ಲಿರುವ ಪ್ರಮುಖ ವ್ಯಕ್ತಿಯ ಮಾಹಿತಿಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತವೆ.
ಬಳಕೆದಾರರು ಪ್ರಧಾನ ಸಂಪರ್ಕ ವ್ಯಕ್ತಿಯ ವಿವರಗಳನ್ನು ನವೀಕರಿಸಬೇಕಾದರೆ:
• ಪ್ಯಾನೆಲ್‌ನಲ್ಲಿ ನೀಡಿರುವ ಹೈಪರ್‌ಲಿಂಕ್ ಮೂಲಕ ನನ್ನ ಪ್ರೊಫೈಲ್ಗೆ ಹೋಗಿ.
• ಅಗತ್ಯವಿರುವ ಮಾಹಿತಿಯನ್ನು ನವೀಕರಿಸಿ.


ಹಂತ 9: "ಪೂರ್ವವೀಕ್ಷಣೆ" ಮೇಲೆ ಕ್ಲಿಕ್ ಮಾಡಿದಾಗ, ನೀವು "ಪೂರ್ವವೀಕ್ಷಣೆ" ಪರದೆಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಭರ್ತಿ ಮಾಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ, ನಂತರ ಇ-ಪರಿಶೀಲನೆಗೆ ಮುಂದುವರಿಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 10: ಇ-ಪರಿಶೀಲನೆಗೆ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿದ ನಂತರ, ಒಂದು ಪಾಪ್-ಅಪ್ ಸಂದೇಶ ಕಾಣಿಸುತ್ತದೆ, ಮುಂದುವರಿಯಲು ಹೌದು ಅನ್ನು ಆಯ್ಕೆಮಾಡಿ.
ಹಂತ 11: ಹೌದು ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮನ್ನು ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲಾಗುತ್ತದೆ.

ಡ್ರಾಪ್‌ಡೌನ್‌ನಿಂದ DSC ಪೂರೈಕೆದಾರ ಮತ್ತು DSC ಪ್ರಮಾಣಪತ್ರವನ್ನು ಆಯ್ಕೆಮಾಡಿ, ನಂತರ DSCಯ ಪಾಸ್‌ವರ್ಡ್ ಅನ್ನು ನಮೂದಿಸಿ ಮತ್ತು ಸಹಿ ಮಾಡಿ ಮೇಲೆ ಕ್ಲಿಕ್ ಮಾಡಿ.
ಸಹಿ ಮಾಡಿ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ದೃಢೀಕರಣಕ್ಕಾಗಿ ಪಾಪ್-ಅಪ್ ಸಂದೇಶ ಕಾಣಿಸುತ್ತದೆ, ಮುಂದುವರಿಯಲು ಬಳಕೆದಾರರು ಹೌದು ಅನ್ನು ಆಯ್ಕೆಮಾಡಬೇಕು.
ಸೂಚನೆ: ಹೆಚ್ಚಿನ ತಿಳಿವಳಿಕೆಗಾಗಿ ಇ-ಪರಿಶೀಲನೆ ಮಾಡುವುದು ಹೇಗೆ ಎಂಬ ಬಳಕೆದಾರರ ಕೈಪಿಡಿಯನ್ನು ನೋಡಿ.
ಇ-ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಟ್ರಾನ್ಸಾಕ್ಷನ್ ID ಮತ್ತು ಸ್ವೀಕೃತಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಟ್ರಾನ್ಸಾಕ್ಷನ್ ID ಮತ್ತು ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಂಡಿರಿ. ನಿಮ್ಮ ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿತ ಇಮೇಲ್ ID ಮತ್ತು ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನೂ ಕಳುಹಿಸಲಾಗುತ್ತದೆ.
ಹಂತ 12: ಹೌದು ಮೇಲೆ ಕ್ಲಿಕ್ ಮಾಡಿದ ನಂತರ, ಫಾರ್ಮ್ ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.