ಫಾರ್ಮ್ 50 ಕುರಿತು ಬಳಕೆದಾರರ ಕೈಪಿಡಿ

 

1. ಅವಲೋಕನ

ಅಂತರರಾಷ್ಟ್ರೀಯ ವಹಿವಾಟುಗಳು ಒಳಗೊಂಡಿರುವಾಗ ವರ್ಗಾವಣೆ ಬೆಲೆ ನಿಗದಿಯು ಅನಿಶ್ಚಿತತೆಯನ್ನು ಉಂಟುಮಾಡಬಹುದು, ಏಕೆಂದರೆ ಭವಿಷ್ಯದ ವಿವಾದಗಳನ್ನು ತಪ್ಪಿಸಲು ಬೆಲೆಗಳು ಆರ್ಮ್ಸ್ ಲೆಂಗ್ತ್ (ಸಂಬಂಧರಹಿತ ಬೆಲೆ ನಿಗದಿ) ಆಧಾರದ ಮೇಲೆ ಇರಬೇಕು. ಮುಂಚಿತವಾಗಿ ಖಚಿತತೆಯನ್ನು ಒದಗಿಸಲು ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡಲು, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಅಂತಹ ವಹಿವಾಟುಗಳಿಗೆ ಮುಂಗಡ ಬೆಲೆ ಒಪ್ಪಂದವನ್ನು (APA) ಮಾಡಿಕೊಳ್ಳಲು ಅನುಮತಿಸುತ್ತದೆ.

ಫಾರ್ಮ್ ಸಂಖ್ಯೆ 50 ಎಂಬುದು ಅರ್ಹ ವ್ಯಕ್ತಿಯಿಂದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರಿಗೆ (ಅಂತರರಾಷ್ಟ್ರೀಯ ತೆರಿಗೆ) ಸಲ್ಲಿಸಲಾದ ಪೂರ್ವ-ಸಮಾಲೋಚನೆಗಾಗಿ ಅರ್ಜಿಯಾಗಿದೆ. ಅರ್ಜಿಯನ್ನು ಸ್ವೀಕರಿಸಿದ ನಂತರ, ಗೊತ್ತುಪಡಿಸಿದ ತಂಡವು ಅರ್ಜಿದಾರರೊಂದಿಗೆ ಪೂರ್ವ-ಸಮಾಲೋಚನೆಯನ್ನು ನಡೆಸುತ್ತದೆ. ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳನ್ನು ಒಳಗೊಂಡ ಪ್ರಕರಣಗಳಲ್ಲಿ, ಭಾರತೀಯ ಸಕ್ಷಮ ಪ್ರಾಧಿಕಾರ ಅಥವಾ ಅವರ ಪ್ರತಿನಿಧಿಯು ಸಹ ಭಾಗವಹಿಸುತ್ತಾರೆ.

ಒಬ್ಬ ವ್ಯಕ್ತಿಯು APA ನಿಯಮಗಳ ಅಡಿಯಲ್ಲಿ ಅರ್ಹ ವ್ಯಕ್ತಿಯಾಗಿ ಒಪ್ಪಂದ ಮಾಡಿಕೊಳ್ಳಲು ಅವನು:
(i) ಅಂತರರಾಷ್ಟ್ರೀಯ ವಹಿವಾಟನ್ನು ಕೈಗೊಂಡಿದ್ದರೆ; ಅಥವಾ 
(ii) ಅಂತರರಾಷ್ಟ್ರೀಯ ವಹಿವಾಟನ್ನು ಕೈಗೊಳ್ಳಲು ಯೋಚಿಸುತ್ತಿದ್ದರೆ.

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

•  ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ಯೂಸರ್/ಬಳಕೆದಾರರ ID ಮತ್ತು ಪಾಸ್‌ವರ್ಡ್ ಹೊಂದಿರುವ ನೋಂದಾಯಿತ ಬಳಕೆದಾರರಾಗಿರಬೇಕು.
•  ತೆರಿಗೆದಾರರ PAN ಸ್ಥಿತಿ ‘ಸಕ್ರಿಯ’ವಾಗಿರಬೇಕು.
•  PAN ಮತ್ತು ಆಧಾರ್ ಅನ್ನು ಲಿಂಕ್ ಮಾಡಿರಬೇಕು (ಶಿಫಾರಸು ಮಾಡಲಾಗಿದೆ).
•  ನೀವು DSC ಮೋಡ್ ಮೂಲಕ ಫಾರ್ಮ್ ಅನ್ನು ಪರಿಶೀಲಿಸಲು ಆಯ್ಕೆ ಮಾಡಿಕೊಂಡರೆ, ಅದನ್ನು ಪರಿಶೀಲಿಸಲು ನಿಮ್ಮ ಬಳಿ ಮಾನ್ಯವಾದ DSC ಇರಬೇಕು. ಅದು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿರಬೇಕು ಮತ್ತು ಅವಧಿ ಮೀರಿರಬಾರದು.

3. ಫಾರ್ಮ್ ಕುರಿತು

3.1 ಉದ್ದೇಶ

ಮುಂಗಡ ಬೆಲೆ ನಿಗದಿ ಒಪ್ಪಂದ (APA) ಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಕೋರಲು ಫಾರ್ಮ್ 50 ಅನ್ನು ಸಲ್ಲಿಸಲಾಗುತ್ತದೆ. ಇದು ನಿಯಂತ್ರಿತ ವಹಿವಾಟುಗಳಿಗೆ ಸೂಕ್ತವಾದ ವರ್ಗಾವಣೆ ಬೆಲೆ ನಿಯತಾಂಕಗಳನ್ನು ನಿರ್ಧರಿಸಲು ಬಹುರಾಷ್ಟ್ರೀಯ ಗುಂಪುಗಳಿಗೆ ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಫಾರ್ಮ್ ಪ್ರಸ್ತಾವಿತ ಒಪ್ಪಂದದ ವಿಶಾಲ ಚೌಕಟ್ಟಿನ ಕುರಿತು ಪ್ರಾಥಮಿಕ ಚರ್ಚೆಗಳನ್ನು ಸುಗಮಗೊಳಿಸುತ್ತದೆ ಮತ್ತು APA ಅನ್ನು ಅಂತಿಮಗೊಳಿಸುವ ಮೊದಲು ಪ್ರಮುಖ ವರ್ಗಾವಣೆ ಬೆಲೆ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅರ್ಜಿಯನ್ನು ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು ಮತ್ತು ಒದಗಿಸಲಾದ ಎಲ್ಲಾ ವಿವರಗಳು ಅರ್ಜಿದಾರರ ಅತ್ಯುತ್ತಮ ಜ್ಞಾನಕ್ಕೆ ಅನುಗುಣವಾಗಿ ನಿಖರ ಹಾಗೂ ಸತ್ಯವಾಗಿರಬೇಕು.

3.2 ಈ ಸೇವೆಯನ್ನು ಯಾರು ಬಳಸಬಹುದು?

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತ ಎಲ್ಲಾ ಬಳಕೆದಾರರು, ಆದಾಯ ತೆರಿಗೆ ಕಾಯ್ದೆ ಮತ್ತು ನಿಯಮಗಳ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅನುಮತಿಸಲಾದ ಫಾರ್ಮ್ 50 ಅರ್ಜಿಯಲ್ಲಿ ಪೂರ್ವ-ಫೈಲಿಂಗ್ ಸಮಾಲೋಚನೆಗಾಗಿ ಅಗತ್ಯ ವಿವರಗಳನ್ನು ಒದಗಿಸಬಹುದು.

3.3 ಫಾರ್ಮ್‌ನ ಒಂದು ಸಂಕ್ಷಿಪ್ತ ನೋಟ

ಫಾರ್ಮ್ 50 ನಾಲ್ಕು ಪ್ಯಾನೆಲ್‌/ಫಲಕಗಳನ್ನು ಹೊಂದಿದೆ:

1. Part A- ವ್ಯಕ್ತಿಯ ವಿವರಗಳು 2. Part B - ಇತರ ವಿವರಗಳು 3. ಲಗತ್ತುಗಳು 4. ಪರಿಶೀಲನೆ

 

4. 4. ಹಂತ ಹಂತವಾಗಿ ಮಾರ್ಗದರ್ಶನ

ಹಂತ 1: ನಿಮ್ಮ ಯೂಸರ್/ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive

ಹಂತ 2: ನಿಮ್ಮ ಯೂಸರ್/ಬಳಕೆದಾರರ ID (PAN) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

Data responsive

ಹಂತ 3: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 4: ಆದಾಯ ತೆರಿಗೆ ಕಾಯ್ದೆ 2025 ಟ್ಯಾಬ್‌ನ ಅಡಿಯಲ್ಲಿ ಫಾರ್ಮ್‌ಗಳನ್ನು ಆಯ್ಕೆಮಾಡಿ, ಫಾರ್ಮ್ 50 ಅನ್ನು ಹುಡುಕಿ ಮತ್ತು ಈಗ ಫೈಲ್ ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5: ಪ್ಯಾನ್, ಸಲ್ಲಿಕೆ ವಿಧಾನ ಮತ್ತು ಫೈಲಿಂಗ್ ಪ್ರಕಾರವನ್ನು ಪರಿಶೀಲಿಸಿ ಮತ್ತು ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6: ಪ್ರಾರಂಭಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 7: ಪ್ರಾರಂಭಿಸಿ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ಯೂಸರ್/ಬಳಕೆದಾರರನ್ನು ಪ್ಯಾನೆಲ್ ಪರದೆಗೆ ಕರೆದೊಯ್ಯಲಾಗುತ್ತದೆ ಮತ್ತು ಮೊದಲ ಪ್ಯಾನಲ್ ಅನ್ನು ಆಯ್ಕೆ ಮಾಡುತ್ತಾರೆ: "ಭಾಗ A: ವ್ಯಕ್ತಿಯ ವಿವರಗಳು".

Data responsive

ಹಂತ 8: ಅಗತ್ಯವಿರುವ ವಿವರಗಳನ್ನು ನಮೂದಿಸಿ, ವಿವರಗಳನ್ನು ಖಚಿತಪಡಿಸಿ ಮತ್ತು save ಮೇಲೆ ಕ್ಲಿಕ್ ಮಾಡಿ.

ಗಮನಿಸಿ: ದಯವಿಟ್ಟು “ನನ್ನ ಪ್ರೊಫೈಲ್” ವಿಭಾಗದ ಅಡಿಯಲ್ಲಿ ವಿಳಾಸ ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ. ನೀವು “ನನ್ನ ಪ್ರೊಫೈಲ್” ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ಮತ್ತು ವಿಳಾಸ ವಿವರಗಳನ್ನು ನವೀಕರಿಸಬಹುದು.

Data responsive

ಹಂತ 9: ಮೊದಲ ಪ್ಯಾನೆಲ್‌ನ ಉಳಿಸುವಿಕೆ ಪೂರ್ಣಗೊಂಡಿದೆ ಎಂದು ತೋರಿಸುತ್ತದೆ. ನಂತರ 2ನೇ ಪ್ಯಾನೆಲ್ ಅನ್ನು ಆಯ್ಕೆಮಾಡಿ: “ಭಾಗ B: ಇತರ ವಿವರಗಳು”.

Data responsive

ಹಂತ 10: 2ನೇ ಪ್ಯಾನೆಲ್ “ಭಾಗ B: ಇತರ ವಿವರಗಳು” ನಲ್ಲಿ ವಿವರಗಳನ್ನು ನಮೂದಿಸಿ ಮತ್ತು save ಬಟನ್ ಮೇಲೆ ಕ್ಲಿಕ್ ಮಾಡಿ. ಫೀಲ್ಡ್ ಸಂಖ್ಯೆ 11 ಕ್ಕೆ ಯೂಸರ್/ಬಳಕೆದಾರರಿಗೆ ಎರಡು ಆಯ್ಕೆಗಳು ಇವೆ—ವಿವರಗಳನ್ನು ಸೇರಿಸುವುದು ಅಥವಾ CSV ಅಪ್‌ಲೋಡ್ ಮಾಡುವುದು. ಬಳಕೆದಾರರು ಫೀಲ್ಡ್ ಸಂಖ್ಯೆ 11 ಅನ್ನು ಪೂರ್ಣಗೊಳಿಸಲು ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.

 

Data responsive

ಟಿಪ್ಪಣಿಗಳು

  1. ಫೀಲ್ಡ್ ಸಂಖ್ಯೆ 9 ರಲ್ಲಿ (ಮುಂಗಡ ಬೆಲೆ ಒಪ್ಪಂದದ ಪ್ರಕಾರ (APA)) ದ್ವಿಪಕ್ಷೀಯ ಅಥವಾ ಬಹುಪಕ್ಷೀಯ APA ಅನ್ನು ಆಯ್ಕೆ ಮಾಡಿದರೆ ಮಾತ್ರ ಫೀಲ್ಡ್ ಸಂಖ್ಯೆ 10 ಅನ್ವಯಿಸುತ್ತದೆ.
  2. ನೀವು ಏಕಪಕ್ಷೀಯ APA ಗೆ ಅರ್ಜಿ ಸಲ್ಲಿಸುತ್ತಿದ್ದರೆ, ದಯವಿಟ್ಟು ‘ಪ್ರಸ್ತುತ ಅರ್ಜಿಯನ್ನು ಮೊದಲು ಸಲ್ಲಿಸಲಾಗಿದೆ’ ಎಂಬ ಫೀಲ್ಡ್‌ ನ ಅಡಿಯಲ್ಲಿ ‘ಪ್ರ. CCIT (IT)’ ಅನ್ನು ಆಯ್ಕೆಮಾಡಿ. ಬಹುಪಕ್ಷೀಯ ಅಥವಾ ದ್ವಿಪಕ್ಷೀಯ APA ಕೆರಿಬಿಯನ್ ದ್ವೀಪಗಳು ಮತ್ತು ಯುರೋಪ್ ಸೇರಿದಂತೆ ಉತ್ತರ ಅಮೆರಿಕಾದ ದೇಶಗಳೊಂದಿಗೆ ಇದ್ದರೆ, ದಯವಿಟ್ಟು ‘ಭಾರತದ ಸಕ್ಷಮ ಪ್ರಾಧಿಕಾರ (ಜಂಟಿ ಕಾರ್ಯದರ್ಶಿ FT&TR-I)’ ಅನ್ನು ಆಯ್ಕೆಮಾಡಿ. ಬೇರೆ ಯಾವುದೇ ದೇಶದೊಂದಿಗೆ ಇದ್ದರೆ, ‘ಪ್ರಸ್ತುತ ಅರ್ಜಿಯನ್ನು ಮೊದಲು ಸಲ್ಲಿಸಲಾಗಿದೆ’ ಎಂಬ ಫೀಲ್ಡ್ ನ ಅಡಿಯಲ್ಲಿ ‘ಭಾರತದ ಸಕ್ಷಮ ಪ್ರಾಧಿಕಾರ (ಜಂಟಿ ಕಾರ್ಯದರ್ಶಿ FT&TR-II)’ ಅನ್ನು ಆಯ್ಕೆಮಾಡಿ.
  3. ಟಿಪ್ಪಣಿಯ ಫೀಲ್ಡ್ ಸಂಖ್ಯೆ 11 ರ ಅಡಿಯಲ್ಲಿ ನಮೂದಿಸಿರುವ ಸೂಚನೆಗಳನ್ನು ದಯವಿಟ್ಟು ಓದಿ: ಪ್ರಸ್ತಾಪಿಸಲಾದ ಅಂತರರಾಷ್ಟ್ರೀಯ ವಹಿವಾಟುಗಳ ವಿವರಗಳನ್ನು ಒಳಗೊಳ್ಳಬೇಕು.
Data responsive

1. ಕ್ರಮ ಸಂಖ್ಯೆ 11 ರ ಅಡಿಯಲ್ಲಿ ಸೇರಿಸಬೇಕಾದ AE ವಿವರಗಳ ದಾಖಲೆಗಳು 50 ಕ್ಕಿಂತ ಹೆಚ್ಚಿದ್ದರೆ, “ಡೌನ್‌ಲೋಡ್ ಎಕ್ಸೆಲ್ ಟೆಂಪ್ಲೇಟ್” ಬಟನ್ ಅನ್ನು ಬಳಸಿ. ಎಕ್ಸೆಲ್ ಫೈಲ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದರಲ್ಲಿ ಒದಗಿಸಲಾದ ಕಾಲಮ್‌ಗಳ ಪ್ರಕಾರ ವಿವರಗಳನ್ನು ಭರ್ತಿ ಮಾಡಬೇಕು. ಎಕ್ಸೆಲ್ ಟೆಂಪ್ಲೇಟ್ ಕಾಲಮ್‌ಗಳನ್ನು ಕೆಳಗೆ ವಿವರಿಸಲಾಗಿದೆ:

ಮೇಲಿನ ಎಕ್ಸೆಲ್ ಟೆಂಪ್ಲೇಟ್ ಅನ್ನು ಭರ್ತಿ ಮಾಡಲು ಕೆಳಗೆ ನೀಡಲಾದ ಸೂಚನೆಗಳನ್ನು ಅನುಸರಿಸಿ:

ಫೀಲ್ಡ್‌ ನ ಹೆಸರು

ಸೂಚನೆಗಳು

ಕಡ್ಡಾಯ ಫೀಲ್ಡ್ (ಹೌದು/ಇಲ್ಲ)

ಅಕ್ಷರ ಮಿತಿ

ಕ್ರಮ ಸಂಖ್ಯೆ

1 ರಿಂದ ಪ್ರಾರಂಭವಾಗುವ ಕ್ರಮ ಸಂಖ್ಯೆಗಳನ್ನು ನಮೂದಿಸಿ.

ಹೌದು

 

AE ಪ್ರಕಾರ

ಡ್ರಾಪ್‌ಡೌನ್ ಮೌಲ್ಯದಿಂದ ಆಯ್ಕೆಮಾಡಿ: a) ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 163(1) ಅಡಿಯಲ್ಲಿ AE ಹೊಂದಿರುವ ಅಂತರರಾಷ್ಟ್ರೀಯ ವಹಿವಾಟುಗಳು b) ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 163(2) ಅಡಿಯಲ್ಲಿ AE ಅಲ್ಲದ ಅಂತರರಾಷ್ಟ್ರೀಯ ವಹಿವಾಟುಗಳು
 

ಹೌದು

 

ವಿಧ

ಡ್ರಾಪ್‌ಡೌನ್ ಪಟ್ಟಿಯಿಂದ ಆಯ್ಕೆಮಾಡಿ: Section 163(1)(a)
Section 163(1)(b)
Section 163(1)(c)
Section 163(1)(d)
Section 163(1)(e)
Section 163(1)(f)
Section 163(1)(g)

ಹೌದು

 

ವಹಿವಾಟಿನ ವಿವರಣೆ

ವಿವರಣೆಯನ್ನು ಒದಗಿಸಿ

ಹೌದು

ಗರಿಷ್ಠ 4000 ಅಕ್ಷರಗಳು

ಹೆಸರು

AEಯ ಹೆಸರನ್ನು ನಮೂದಿಸಿ

ಹೌದು

ಗರಿಷ್ಠ 277 ಅಕ್ಷರಗಳು

AEಯ ಸ್ಥಳ (ದೇಶ/ಪ್ರದೇಶ)

ಡ್ರಾಪ್‌ಡೌನ್‌/‌ಆಯ್ಕೆಪಟ್ಟಿ ಯಿಂದ ಆಯ್ಕೆಮಾಡಿ

ಹೌದು

 

AEಯ ತೆರಿಗೆದಾರರ ಗುರುತಿನ ಸಂಖ್ಯೆ ಅಥವಾ ಅದಕ್ಕೆ ಸಮಾನವಾದ ಸಂಖ್ಯೆ

TIN ಅಥವಾ ಅದಕ್ಕೆ ಸಮಾನವಾದ ಸಂಖ್ಯೆಯನ್ನು ನಮೂದಿಸಿ.

ಹೌದು

ಗರಿಷ್ಠ 75 ಅಕ್ಷರಗಳು

PAN (ಲಭ್ಯವಿದ್ದರೆ)

ಮೊದಲ 5 ಅಕ್ಷರಗಳು, 4 ಸಂಖ್ಯೆಗಳು, 1 ಅಕ್ಷರ

ಇಲ್ಲ.

 

ಪ್ರಸ್ತಾವಿತ ವರ್ಗಾವಣೆ ಬೆಲೆ ನಿಗದಿ ವಿಧಾನ

ಡ್ರಾಪ್‌ಡೌನ್‌/‌ಆಯ್ಕೆಪಟ್ಟಿ ಪಟ್ಟಿಯಿಂದ ಆಯ್ಕೆಮಾಡಿ: (a) ಹೋಲಿಸಬಹುದಾದ ಅನಿಯಂತ್ರಿತ ಬೆಲೆ ವಿಧಾನ; (b) ಮರುಮಾರಾಟ ಬೆಲೆ ವಿಧಾನ; (c) ವೆಚ್ಚ ಆಧಾರಿತ ವಿಧಾನ; (d) ಲಾಭ ವಿಭಜನಾ ವಿಧಾನ; (e) ವಹಿವಾಟಿನ ನಿವ್ವಳ ಲಾಭದ ವಿಧಾನ; (f) ಮಂಡಳಿಯು ಸೂಚಿಸಬಹುದಾದ ಇತರ ವಿಧಾನಗಳು.




 

 

 

ದಯವಿಟ್ಟು ಸ್ಪಷ್ಟಪಡಿಸಿ

ಮೇಲಿನ ಫೀಲ್ಡ್ ದಲ್ಲಿ ಆಯ್ಕೆ (f) ‘ಮಂಡಳಿಯು ಸೂಚಿಸಬಹುದಾದಂತಹ ಇತರ ವಿಧಾನ’ ವನ್ನು ಆಯ್ಕೆ ಮಾಡಿದ್ದರೆ,

ಹೌದು

ಗರಿಷ್ಟ 400 ಅಕ್ಷರಗಳು

ಹಿಂದಿನ 3 ವರ್ಷಗಳ ತೆರಿಗೆ ಅಂದಾಜು ಮೌಲ್ಯ

ಹಣಕಾಸಿನ ವರ್ಷ FY 2025-26

ಇಲ್ಲ.

ದಶಮಾಂಶವಿಲ್ಲದೆ 14 ಅಂಕೆಗಳು

 

ಹಣಕಾಸಿನ ವರ್ಷ FY 2024-25

ಇಲ್ಲ.

ದಶಮಾಂಶವಿಲ್ಲದೆ 14 ಅಂಕೆಗಳು

 

ಹಣಕಾಸಿನ ವರ್ಷ FY 2023-24

ಇಲ್ಲ.

ದಶಮಾಂಶವಿಲ್ಲದೆ 14 ಅಂಕೆಗಳು

ಹಂತ 11: 2ನೇ ಪ್ಯಾನೆಲ್ ಅನ್ನು ಉಳಿಸಿದ ನಂತರ ಅದು ಪೂರ್ಣಗೊಂಡಿದೆ ಎಂದು ತೋರಿಸುತ್ತದೆ. ನಂತರ 3ನೇ ಪ್ಯಾನೆಲ್ ಅನ್ನು ಆಯ್ಕೆಮಾಡಿ: “ಲಗತ್ತುಗಳು”. ಈ ಪ್ಯಾನೆಲ್‌ನಲ್ಲಿ 8 ಲಗತ್ತುಗಳಿದ್ದು, ಅದರಲ್ಲಿ 3 ಲಗತ್ತುಗಳು ಮತ್ತು 1 ವಿವರಗಳನ್ನು ಸೇರಿಸುವ ಕ್ಷೇತ್ರ ಕಡ್ಡಾಯವಾಗಿದೆ.

Data responsive

ಹಂತ 12: 3ನೇ ಪ್ಯಾನೆಲ್ “ಲಗತ್ತುಗಳು” ಅನ್ನು ಭರ್ತಿ ಮಾಡಿ ಮತ್ತು save ಬಟನ್ ಮೇಲೆ ಕ್ಲಿಕ್ ಮಾಡಿ.

Data responsiveData responsive

ಹಂತ 13: 3ನೇ ಪ್ಯಾನೆಲ್ ಅನ್ನು ಉಳಿಸಿದ ನಂತರ ಅದು ಪೂರ್ಣಗೊಂಡಿದೆ ಎಂದು ತೋರಿಸುತ್ತದೆ. ನಂತರ 4ನೇ ಪ್ಯಾನೆಲ್ ಅನ್ನು ಆಯ್ಕೆಮಾಡಿ: “ಪರಿಶೀಲನೆ”.

Data responsive

ಹಂತ 14: 4ನೇ ಪ್ಯಾನೆಲ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು save ಬಟನ್ ಮೇಲೆ ಕ್ಲಿಕ್ ಮಾಡಿ.  

Data responsive

ಹಂತ 15: 4ನೇ ಪ್ಯಾನೆಲ್ ಅನ್ನು ಉಳಿಸಿದ ನಂತರ, ಪ್ಯಾನೆಲ್‌ನ ಸ್ಥಿತಿಯನ್ನು “ಪೂರ್ಣಗೊಂಡಿದೆ” ಎಂದು ಪ್ರದರ್ಶಿಸಲಾಗುತ್ತದೆ. ನಂತರ ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 16: ಪೂರ್ವವೀಕ್ಷಣೆ ಪುಟದಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ಇ-ಪರಿಶೀಲನೆಗೆ ಮುಂದುವರಿಯಿರಿ ‌ಬಟನ್ ಮೇಲೆ ಕ್ಲಿಕ್ ಮಾಡಿ. ಬಳಕೆದಾರರು ಪೂರ್ವವೀಕ್ಷಣೆ PDF ಅನ್ನು ಡೌನ್‌ಲೋಡ್ ಮಾಡಬಹುದು.

Data responsiveData responsive

ಹಂತ 17: “ಇ-ಪರಿಶೀಲನೆ ಮಾಡಿ” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಇ-ಪರಿಶೀಲನೆ ಮಾಡಲು ಮುಂದುವರಿಯಲು ಬಯಸುತ್ತೀರಿ ಎಂಬ ಪಾಪ್-ಅಪ್ ದೃಢೀಕರಣ ಕಾಣಿಸುತ್ತದೆ. “ಹೌದು” ಮೇಲೆ ಕ್ಲಿಕ್ ಮಾಡಿ.

Data responsive

ಹಂತ 18: “ಹೌದು” ಮೇಲೆ ಕ್ಲಿಕ್ ಮಾಡಿದಾಗ, ನೀವು ಇ-ಪರಿಶೀಲನೆ ಪುಟಕ್ಕೆ ನ್ಯಾವಿಗೇಟ್ ಆಗುತ್ತೀರಿ, ಅಲ್ಲಿ ನೀವು EVC/DSC (ಅನ್ವಯಿಸಿದಂತೆ) ಬಳಸಿಕೊಂಡು ಫಾರ್ಮ್ 50 ಅನ್ನು ಪರಿಶೀಲಿಸಬಹುದು.

ಗಮನಿಸಿ: ಇನ್ನಷ್ಟು ತಿಳಿದುಕೊಳ್ಳಲು ಇ-ಪರಿಶೀಲನೆ ಮಾಡುವುದು ಹೇಗೆ ಎಂಬ‌ ಯೂಸರ್/ಬಳಕೆದಾರ ಕೈಪಿಡಿಯನ್ನು ನೋಡಿ.

ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಗಮನಿಸಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ID(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು) ಗೆ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.

Data responsive

ಫಾರ್ಮ್ 50 ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಬಳಕೆದಾರರು ಭರ್ತಿ ಮಾಡಿದ ಫಾರ್ಮ್ ಅನ್ನು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ > ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ > ಆದಾಯ ತೆರಿಗೆ ಕಾಯ್ದೆ 2025 ರ ಅಡಿಯಲ್ಲಿ ಫೈಲ್ ಮಾಡಿದ ಫಾರ್ಮ್ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದು.
 
ಗಮನಿಸಿ:
ಇನ್ನಷ್ಟು ತಿಳಿದುಕೊಳ್ಳಲು ಭರ್ತಿ ಮಾಡಿದ ಫಾರ್ಮ್ ಬಳಕೆದಾರ ಕೈಪಿಡಿಯನ್ನು ನೋಡಿ.

5. ಸಂಬಂಧಿತ ವಿಷಯಗಳು

6.ಪದಕೋಶ

Acronym/Abbreviation Description/Full Form
DSC ಡಿಜಿಟಲ್ ಸಹಿ ಪ್ರಮಾಣಪತ್ರ
EVC ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ.
ARN ಸ್ವೀಕೃತಿ ರಸೀದಿ ಸಂಖ್ಯೆ.
TY ತೆರಿಗೆ ವರ್ಷ