ಫಾರ್ಮ್ 52 ಕುರಿತು ಬಳಕೆದಾರರ ಕೈಪಿಡಿ

 

1. ಅವಲೋಕನ

ತೆರಿಗೆದಾರರು ಆದಾಯ ತೆರಿಗೆ ಇಲಾಖೆಗೆ ಫಾರ್ಮ್ ಸಂಖ್ಯೆ 51 ಅನ್ನು ಸಲ್ಲಿಸುವ ಮೂಲಕ ಮುಂಗಡ ಬೆಲೆ ನಿಗದಿ ಒಪ್ಪಂದ (Advance Pricing Agreement - APA)ಕ್ಕೆ ಪ್ರವೇಶಿಸಿದ ನಂತರ, ಅವರು ವಾರ್ಷಿಕ ಅನುಸರಣೆ ವರದಿ (Annual Compliance Report)ಯನ್ನು ಸಲ್ಲಿಸಬೇಕು. ಈ ವರದಿಯ ಮೂಲಕ, ಒಳಗೊಂಡಿರುವ ವ್ಯವಹಾರಗಳಿಗೆ ಸಂಬಂಧಿಸಿದಂತೆ APAಯ ಷರತ್ತುಗಳನ್ನು ತೆರಿಗೆದಾರರು ಪಾಲಿಸಿರುವುದಾಗಿ APA ಅಧಿಕಾರಿಗಳಿಗೆ ತಿಳಿಸಲಾಗುತ್ತದೆ.

ಆದಾಯ ತೆರಿಗೆ ನಿಯಮಗಳು, 2026 ರ ನಿಯಮ 113ರ ಪ್ರಕಾರ, ಇಂತಹ ವಾರ್ಷಿಕ ಅನುಸರಣೆ ವರದಿಯನ್ನು ಫಾರ್ಮ್ ಸಂಖ್ಯೆ 52ರಲ್ಲಿ ಸಲ್ಲಿಸಬೇಕು. ತೆರಿಗೆದಾರರು ಒಪ್ಪಂದದ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ವರ್ಷದ ವಾರ್ಷಿಕ ಅನುಸರಣೆ ವರದಿಯನ್ನು, ಆ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ನಿಗದಿತ ದಿನಾಂಕದಿಂದ ಮೂವತ್ತು ದಿನಗಳೊಳಗೆ ಅಥವಾ ಒಪ್ಪಂದಕ್ಕೆ ಪ್ರವೇಶಿಸಿದ ದಿನಾಂಕದಿಂದ ತೊಂಬತ್ತು ದಿನಗಳೊಳಗೆ, ಇವೆರಡರಲ್ಲಿ ಯಾವುದು ನಂತರವಾಗುವುದೋ ಅದರೊಳಗೆ ಸಲ್ಲಿಸಬೇಕು. ಜೊತೆಗೆ, ಅದನ್ನು ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರಿಗೆ (ಅಂತರರಾಷ್ಟ್ರೀಯ ತೆರಿಗೆ) ಕಳುಹಿಸಬೇಕು.

2.ಈ ಸೇವೆಯನ್ನು ಪಡೆಯಲು ಅಗತ್ಯವಾದ ಪೂರ್ವಾಪೇಕ್ಷಿತಗಳು

• ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಮಾನ್ಯವಾದ ಬಳಕೆದಾರ ಐಡಿ (User-ID) ಮತ್ತು ಪಾಸ್‌ವರ್ಡ್ ಹೊಂದಿರುವ ನೋಂದಾಯಿತ ಬಳಕೆದಾರರಾಗಿರಬೇಕು.
• ತೆರಿಗೆದಾರರ PAN ಸ್ಥಿತಿ "ಸಕ್ರಿಯ"(Active) ಆಗಿರಬೇಕು.
• PAN ಮತ್ತು ಆಧಾರ್ ಪರಸ್ಪರ ಜೋಡಣೆ (Link) ಆಗಿರಬೇಕು.
• ನೀವು DSC (Digital Signature Certificate) ಮೂಲಕ ಇ-ಪರಿಶೀಲನೆ (e-Verification) ಮಾಡುತ್ತಿದ್ದರೆ, ಮಾನ್ಯವಾದ DSC ಹೊಂದಿರಬೇಕು. ಅದು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರಬೇಕು ಹಾಗೂ ಅವಧಿ ಮುಗಿದಿರಬಾರದು.
• ತೆರಿಗೆದಾರರು (Assessee) ಮತ್ತು ಆದಾಯ ತೆರಿಗೆ ಇಲಾಖೆಯ ನಡುವೆ ಮಾನ್ಯವಾದ ಮುಂಗಡ ಬೆಲೆ ನಿಗದಿ ಒಪ್ಪಂದ (Advance Pricing Agreement - APA) ಇರಬೇಕು.

3. ಫಾರ್ಮ್ ಕುರಿತು

3.1 ಉದ್ದೇಶ

ಫಾರ್ಮ್ 52 ಎಂಬುದು ಆದಾಯ ತೆರಿಗೆ ಇಲಾಖೆಯೊಂದಿಗೆ ಮುಂಗಡ ಬೆಲೆ ನಿಗದಿ ಒಪ್ಪಂದ (Advance Pricing Agreement - APA) ಮಾಡಿಕೊಂಡಿರುವ ತೆರಿಗೆದಾರರು ಸಲ್ಲಿಸುವ ವಾರ್ಷಿಕ ಅನುಸರಣೆ ವರದಿಯಾಗಿದೆ. ಈ ವರದಿಯನ್ನು ಸಲ್ಲಿಸುವ ಉದ್ದೇಶವು, ತೆರಿಗೆದಾರರು APAಯಲ್ಲಿರುವ ಷರತ್ತುಗಳು ಮತ್ತು ನಿಯಮಗಳನ್ನು ಪಾಲಿಸಿರುವುದನ್ನು ದೃಢೀಕರಿಸುವುದಾಗಿದೆ.

3.2 ಫಾರ್ಮ್ ಅನ್ನು ಸಲ್ಲಿಸಲು ಅರ್ಹರು ಯಾರು?

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಮತ್ತು ಆದಾಯ ತೆರಿಗೆ ಇಲಾಖೆಯೊಂದಿಗೆ ಮುಂಗಡ ಬೆಲೆ ನಿಗದಿ ಒಪ್ಪಂದ (Advance Pricing Agreement - APA) ಮಾಡಿಕೊಂಡಿರುವ ಎಲ್ಲಾ ಬಳಕೆದಾರರು ಫಾರ್ಮ್ 52 ಅನ್ನು ಸಲ್ಲಿಸಬೇಕು.

3.3 ಫಾರ್ಮ್‌ನ ಒಂದು ಸಂಕ್ಷಿಪ್ತ ನೋಟ

ಫಾರ್ಮ್ 52ರಲ್ಲಿ ನಾಲ್ಕು ವಿಭಾಗಗಳಿವೆ:
1.ಭಾಗ A: ವ್ಯಕ್ತಿಯ ವಿವರಗಳು
2.ಭಾಗ B: ಇತರ ವಿವರಗಳು
3.ಪ್ರತ್ಯೇಕ ಅನುಬಂಧವಾಗಿ ನೀಡಬೇಕಾದ ಇತರ ವಿವರಗಳು
4.ಪರಿಶೀಲನೆ


4.ಹಂತ ಹಂತದ ಮಾರ್ಗದರ್ಶಿ

ಹಂತ 1 - ನಿಮ್ಮ ಬಳಕೆದಾರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ.

Data responsive

ಹಂತ 2 - ಬಳಕೆದಾರ ID (PAN) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

Data responsive

ಹಂತ 3 – ಇ-ಸಲ್ಲಿಕೆ > ಆದಾಯ ತೆರಿಗೆ ಫ಼ಾರ್ಮುಗಳು > ಆದಾಯ ತೆರಿಗೆ ಫ಼ಾರ್ಮ್ ಸಲ್ಲಿಕೆ ಗೆ ಹೋಗಿ.

Data responsive

ಹಂತ 4 – ಆದಾಯ ತೆರಿಗೆ ಕಾಯ್ದೆ 2025 ಟ್ಯಾಬ್‌ನ ಅಡಿಯಲ್ಲಿ ಇರುವ ಫ಼ಾರ್ಮ್‌ಗಳು ವಿಭಾಗದಲ್ಲಿ ಫಾರ್ಮ್ ಅನ್ನು ಆಯ್ಕೆ ಮಾಡಿ/ಹುಡುಕಿ, ನಂತರ "ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 5 – ಅನ್ವಯಿಸುವ ತೆರಿಗೆ ವರ್ಷವನ್ನು ಆಯ್ಕೆ ಮಾಡಿ ಮತ್ತು ನಂತರ "ಮುಂದುವರೆಯಿರಿ" ಮೇಲೆ ಕ್ಲಿಕ್ ಮಾಡಿ.

Data responsive

ಹಂತ 6 – "ಪ್ರಾರಂಭಿಸೋಣ" ಮೇಲೆ ಕ್ಲಿಕ್ ಮಾಡಿ.

Data responsive

ಹಂತ 7 – "ಪ್ರಾರಂಭಿಸೋಣ" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರು ಫಾರ್ಮ್ ಪರದೆಗೆ ಸಾಗುತ್ತಾರೆ. ನಂತರ ಮೊದಲ ವಿಭಾಗವಾದ "ಭಾಗ A: ವ್ಯಕ್ತಿಯ ವಿವರಗಳು" ಅನ್ನು ಆಯ್ಕೆ ಮಾಡಿ.

Data responsive

ಹಂತ 8 – ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ, ನಂತರ "ಉಳಿಸಿ" ಮೇಲೆ ಕ್ಲಿಕ್ ಮಾಡಿ.

ಸೂಚನೆ: ದಯವಿಟ್ಟು “ನನ್ನ ಪ್ರೊಫೈಲ್” ವಿಭಾಗದಲ್ಲಿ ವಿಳಾಸ ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. “ನನ್ನ ಪ್ರೊಫೈಲ್” ಎಂಬ ಹೈಪರ್‌ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ಮತ್ತು ವಿಳಾಸ ವಿವರಗಳನ್ನು ನವೀಕರಿಸಬಹುದು.

ಸೂಚನೆ: ಕ್ಷೇತ್ರ ಸಂಖ್ಯೆ 6ರಲ್ಲಿ “ಅಧಿಕೃತ ಪ್ರತಿನಿಧಿ”ಯನ್ನು “ಹೌದು” ಎಂದು ಆಯ್ಕೆ ಮಾಡಿದ್ದರೆ, ಅಧಿಕೃತ ಪ್ರತಿನಿಧಿಯ ವಿವರಗಳನ್ನು ಬಳಕೆದಾರರೇ ಸ್ವತಃ ಭರ್ತಿ ಮಾಡಬೇಕು.
 

Data responsive

 

Data responsive

ಹಂತ 9 – ಮೊದಲ ವಿಭಾಗವನ್ನು "ಉಳಿಸಿ"ದ (save) ಮಾಡಿದ ನಂತರ, ಆ ವಿಭಾಗದ ಸ್ಥಿತಿಯನ್ನು "ಪೂರ್ಣಗೊಂಡಿದೆ" ಎಂದು ತೋರಿಸಲಾಗುತ್ತದೆ. ಈಗ ಎರಡನೇ ವಿಭಾಗವಾದ "ಭಾಗ B – ಇತರ ವಿವರಗಳು" ಅನ್ನು ಆಯ್ಕೆ ಮಾಡಿ.

Data responsive


 
ಹಂತ 10   – ಎರಡನೇ ವಿಭಾಗದಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ನಂತರ "ಉಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

ಸೂಚನೆ:-
a) ಕ್ಷೇತ್ರ ಸಂಖ್ಯೆ 9ರಲ್ಲಿ APA ಪ್ರಕಾರ ಮಾಡಬೇಕಾದ ಹೊಂದಾಣಿಕೆಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲು “ವಿವರಗಳನ್ನು ಸೇರಿಸಿ” ಬಟನ್ ನೀಡಲಾಗಿದೆ. ಇಲ್ಲಿ ಹಲವಾರು ನಮೂದುಗಳನ್ನು (multiple entries) ಮಾಡಬಹುದು. b) “A-1 ಪ್ರಕಾರ ಅಗತ್ಯವಾದ ಹೊಂದಾಣಿಕೆಗಳು” ಕ್ಷೇತ್ರಕ್ಕೆ ಸಂಬಂಧಿಸಿದ ವಿವರವಾದ ಲೆಕ್ಕಾಚಾರವನ್ನು ಕಡ್ಡಾಯವಾಗಿ ಅಡಕಗೊಳಿಸಬೇಕು (mandatory attachment). ಈ ಆಡಕದ ಮಾದರಿಯು "ಟಿಪ್ಪಣಿಗಳು" ವಿಭಾಗದಲ್ಲಿ ಲಭ್ಯವಿದ್ದು, ಅದನ್ನು ಡೌನ್‌ಲೋಡ್ ಮಾಡಿ ತಕ್ಕಂತೆ ಪೂರ್ಣಗೊಳಿಸಬೇಕು. c) ಆಡಕದ ಗಾತ್ರವು 5 MB ಮೀರಬಾರದು ಹಾಗೂ ಅದನ್ನು .pdf ಅಥವಾ .zip ಫಾರ್ಮಾಟ್‌ನಲ್ಲಿ ಸಲ್ಲಿಸಬೇಕು.
 

Data responsiveData responsive

ಹಂತ 11 – ಎರಡನೇ ವಿಭಾಗವನ್ನು ಉಳಿಸಿದ (Save) ನಂತರ, ಆ ವಿಭಾಗದ ಸ್ಥಿತಿಯನ್ನು "ಪೂರ್ಣಗೊಂಡಿದೆ" ಎಂದು ತೋರಿಸಲಾಗುತ್ತದೆ. ಈಗ ಮೂರನೇ ವಿಭಾಗವಾದ "ಪ್ರತ್ಯೇಕ ಅನುಬಂಧದಲ್ಲಿ ನೀಡಬೇಕಾದ ಇತರ ವಿವರಗಳು" ಅನ್ನು ಆಯ್ಕೆ ಮಾಡಿ.

Data responsive


 
ಹಂತ 12   – ಮೂರನೇ ವಿಭಾಗದಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ನಂತರ "ಉಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

ಸೂಚನೆ:-
a) ಈ ವಿಭಾಗದವು ಮುಂಗಡ ಬೆಲೆ ನಿಗದಿ ಒಪ್ಪಂದ (Advance Pricing Agreement - APA) ಗೆ ಸಂಬಂಧಿಸಿದ ಪ್ರಮುಖ ಊಹೆಗಳು (critical assumptions) ಹಾಗೂ ಇತರ ವಿವರಗಳ ಕುರಿತು ಪ್ರಶ್ನೆಗಳ ಗುಚ್ಛವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ತೆರಿಗೆದಾರರು ಅನ್ವಯಿಸುವಂತೆ "ಹೌದು" ಅಥವಾ "ಇಲ್ಲ" ಅನ್ನು ಆಯ್ಕೆ ಮಾಡಬೇಕು. ತೆರಿಗೆದಾರರು ಪ್ರತಿಯೊಂದು ಪ್ರಶ್ನೆಯನ್ನು ಗಮನವಿಟ್ಟು ಓದಿ, ಸಂಬಂಧಿತ ವಾಸ್ತವಾಂಶಗಳು ಮತ್ತು ಅನ್ವಯತೆಯ ಆಧಾರದ ಮೇಲೆ ಸೂಕ್ತ ಆಯ್ಕೆಯನ್ನು ಮಾಡಬೇಕು.

b) ಬಳಕೆದಾರರು “ಇಲ್ಲ” ಆಯ್ಕೆ ಮಾಡಿದರೆ, ಅವರು ಕಾರಣಗಳನ್ನು (ಕಡ್ಡಾಯವಾಗಿ) ನೀಡಬೇಕು ಮತ್ತು ಜೊತೆಗೆ ಒಂದು (ಐಚ್ಛಿಕ) ಅಡಕವನ್ನು ಅಪ್‌ಲೋಡ್ ಮಾಡಬಹುದು.
c) ಕ್ಷೇತ್ರ A – 4ರಲ್ಲಿ, ಅನ್ವಯಿಸುವ ಯಾವುದೇ ಹೆಚ್ಚುವರಿ ಬೆಂಬಲ ದಾಖಲೆಗಳನ್ನು ತೆರಿಗೆದಾರರು ಅಪ್‌ಲೋಡ್ ಮಾಡಬೇಕು. ಬಳಕೆದಾರರು ವಿವರಣೆ (description) ನಮೂದಿಸಿದರೆ, "ಅಡಕ"ಗೊಳಿಸುವ ಬಟನ್ ಕಡ್ಡಾಯ ಕ್ಷೇತ್ರವಾಗಿರುತ್ತದೆ.

Data responsive

 

Data responsiveData responsiveData responsiveData responsiveData responsive

ಹಂತ 13 – ಮೂರನೇ ವಿಭಾಗವನ್ನು ಉಳಿಸಿದ (Save) ನಂತರ, ಆ ವಿಭಾಗದ ಸ್ಥಿತಿ "ಪೂರ್ಣಗೊಂಡಿದೆ" ಎಂದು ತೋರಿಸಲಾಗುತ್ತದೆ. ಈಗ ನಾಲ್ಕನೇ ವಿಭಾಗವಾದ "ಪರಿಶೀಲನೆ" ಆಯ್ಕೆ ಮಾಡಿ.

Data responsive

ಹಂತ 14 – ನಾಲ್ಕನೇ ವಿಭಾಗದಲ್ಲಿ ಇರುವ ವಿವರಗಳನ್ನು ಪರಿಶೀಲಿಸಿ. ಈ ವಿವರಗಳು ಲಾಗಿನ್ ಆಗಿರುವ PAN ನ “ಪ್ರಮುಖ ವ್ಯಕ್ತಿ ವಿವರಗಳು” ನಿಂದ ಸ್ವಯಂಚಾಲಿತವಾಗಿ (auto populated) ತುಂಬಲಾಗಿರುತ್ತವೆ. ನಂತರ "ಉಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 15 - ನಾಲ್ಕನೇ ವಿಭಾಗವನ್ನು "ಉಳಿಸಿ"ದ (Save) ನಂತರ, ಎಲ್ಲಾ ವಿಭಾಗಗಳ ಸ್ಥಿತಿಯನ್ನು "ಪೂರ್ಣಗೊಂಡಿದೆ" ಎಂದು ತೋರಿಸಲಾಗುತ್ತದೆ. ಈಗ "ಮುನ್ನೋಟ" ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಹಂತ 16 – ವಿವರಗಳನ್ನು ಪರಿಶೀಲಿಸಿ ಮತ್ತು ಇ-ಪರಿಶೀಲನೆಗೆ ಮುಂದುವರಿಯಿರಿ ಮೇಲೆ ಕ್ಲಿಕ್ ಮಾಡಿ. ಬಳಕೆದಾರರು "ಡೌನ್‌ಲೋಡ್" ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಮುನ್ನೋಟದ (Preview) PDF ಅನ್ನು ಡೌನ್‌ಲೋಡ್ ಮಾಡಬಹುದು.

ಸೂಚನೆ: ಬಳಕೆದಾರರು UI ಪರದೆಯಲ್ಲಿ ನಮೂದಿಸಿದ ವಿವರಗಳು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಯಾವುದೇ ವಿವರವು ತಪ್ಪಾಗಿದ್ದರೆ ಅಥವಾ ಬಿಟ್ಟುಹೋಗಿದ್ದರೆ, ಬಳಕೆದಾರರು "ತಿದ್ದುಪಡಿ" ಬಟನ್ ಮೇಲೆ ಕ್ಲಿಕ್ ಮಾಡಿ ಅದನ್ನು ಸರಿಪಡಿಸಬಹುದು.

Data responsiveData responsive


 

Data responsiveData responsive

 

Data responsive

ಹಂತ 17 – "ಇ-ಪರಿಶೀಲನೆಗೆ ಮುಂದುವರಿಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, ಒಂದು ದೃಢೀಕರಣ ಪಾಪ್‌ಅಪ್ (confirmation popup) ಪ್ರದರ್ಶಿಸಲಾಗುತ್ತದೆ. ಬಳಕೆದಾರರು ಪರಿಶೀಲನೆಯನ್ನು ಮುಂದುವರಿಸಲು "ಹೌದು" ಎಂದು ಆಯ್ಕೆ ಮಾಡಬೇಕು, ಇಲ್ಲವಾದರೆ ಮುನ್ನೋಟದ (preview) ಪರದೆಗೆ ಹಿಂತಿರುಗಲು "ಇಲ್ಲ" ಎಂದು ಆಯ್ಕೆ ಮಾಡಬೇಕು.

Data responsive

ಹಂತ 18 -"ಹೌದು" ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಇ=ಪರಿಶೀಲಿಸಿ ಪುಟಕ್ಕೆ ಸಾಗುತ್ತೀರಿ, ಅಲ್ಲಿ ನಿಮಗೆ ಅನ್ವಯವಾಗುವ EVC/DSC ಬಳಸಿ ಫಾರ್ಮ್ 52 ಅನ್ನು ಪರಿಶೀಲಿಸಬಹುದು.

Data responsive

ಸೂಚನೆ: ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಇ-ಪರಿಶೀಲಿಸುವುದು ಹೇಗೆ ಬಳಕೆದಾರ ಕೈಪಿಡಿಯನ್ನು ನೋಡಿ.

ಹಂತ 19 - ಇ-ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ, "ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆ ಸಹಿತ ಪರಿಶೀಲನೆಯು ಯಶಸ್ವಿಯಾಗಿ ಪೂರ್ಣಗೊಂಡ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ದಯವಿಟ್ಟು ಭವಿಷ್ಯದಲ್ಲಿ ಉಲ್ಲೇಖಿಸಬೇಕಾದ ಸಂದರ್ಭಗಳಿಗಾಗಿ ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆ ಗಳನ್ನು ಬರೆದಿಟ್ಟುಕೊಳ್ಳಿ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಇಮೇಲ್ ಐಡಿ(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು) ಗೆ ಸಹ ದೃಢೀಕರಣ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

Data responsive


 
ಫಾರ್ಮ್ 52 ಯಶಸ್ವಿಯಾಗಿ ಸಲ್ಲಿಸಿದ ನಂತರ, ಬಳಕೆದಾರರು ಸಲ್ಲಿಸಿದ ಫಾರ್ಮ್ ಅನ್ನು ವೀಕ್ಷಿಸಲು ಕೆಳಗಿನ ಮಾರ್ಗವನ್ನು ಅನುಸರಿಸಬಹುದು: ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ "ಇ-ಸಲ್ಲಿಕೆ > ಆದಾಯ ತೆರಿಗೆ ಫ಼ಾರ್ಮುಗಳು > ಸಲ್ಲಿಸಿದ ಫ಼ಾರ್ಮುಗಳನ್ನು ನೋಡಿ > ಆದಾಯ ತೆರಿಗೆ ಕಾಯ್ದೆ 2025 ಅಡಿಯಲ್ಲಿ ಸಲ್ಲಿಸಿದ ಫ಼ಾರ್ಮ್" ಟ್ಯಾಬ್‌ಗೆ ಹೋಗಿ ನೋಡಬಹುದು.

ಸೂಚನೆ: ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು “ಸಲ್ಲಿಸಲಾದ ಫ಼ಾರ್ಮ್ ನೋಡಿ” ಬಳಕೆದಾರ ಕೈಪಿಡಿಯನ್ನು ನೋಡಿ.

5. ಸಂಬಂಧಿತ ವಿಷಯಗಳು

6. ಪದಕೋಶ

ಸಂಕೇತ ಪದ/ಸಂಕ್ಷಿಪ್ತ ರೂಪ ವಿವರಣೆ/ಪೂರ್ಣ ರೂಪ
DSC ಡಿಜಿಟಲ್ ಸಹಿ ಪ್ರಮಾಣಪತ್ರ
EVC ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ.
ARN ಸ್ವೀಕೃತಿ ರಶೀದಿ ಸಂಖ್ಯೆ
TY ತೆರಿಗೆ ವರ್ಷ
APA ಮುಂಗಡ ಬೆಲೆ ನಿಗದಿ ಒಪ್ಪಂದ