ಫಾರ್ಮ್ ಸಂಖ್ಯೆ 1(28/2024) ಕುರಿತು ಬಳಕೆದಾರರ ಕೈಪಿಡಿ
1. ಅವಲೋಕನ
ಫಾರ್ಮ್ ಸಂಖ್ಯೆ 1 ಒಂದು ಹೇಳಿಕೆ ಹಾಗೂ ಘೋಷಣೆಯಾಗಿದ್ದು, ಇದನ್ನು IFSC ಘಟಕಗಳು (ಪಾವತಿದಾರರು) ಯಾವುದೇ ಪಾವತಿಯನ್ನು ಪಡೆಯುವವರಿಗೆ ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 395 ಮತ್ತು ಸೆಕ್ಷನ್ 147ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಪಾವತಿಗಳ ಮೇಲೆ TDS ಕಡಿತಗೊಳಿಸದಿರಲು ಒದಗಿಸಬೇಕು.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
• ನೀವು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರಾಗಿರಬೇಕು.
• ತೆರಿಗೆದಾರರ PAN ಸ್ಥಿತಿ "ಸಕ್ರಿಯ"ವಾಗಿರಬೇಕು.
• ಘಟಕವು ಮಾನ್ಯವಾದ IFSC ಘಟಕವಾಗಿರಬೇಕು ಮತ್ತು ಕಾಯಿದೆಯ ಸೆಕ್ಷನ್ 147ರ ಅಡಿಯಲ್ಲಿ ಕಡಿತವನ್ನು ಪಡೆಯಲು ಅರ್ಹವಾಗಿರಬೇಕು.
• ದಾಖಲಿಸುವ ಮೊದಲು, ಘಟಕವು ಈ ಕೆಳಗಿನವುಗಳನ್ನು ಅಂತಿಮಗೊಳಿಸಬೇಕು: ಸಂಬಂಧಿತ ತೆರಿಗೆ ವರ್ಷದಿಂದ ಪ್ರಾರಂಭವಾಗುವ ಹದಿನೈದು ವರ್ಷಗಳಲ್ಲಿ ಸತತ ಹತ್ತು ತೆರಿಗೆ ವರ್ಷಗಳವರೆಗೆ, ಸೆಕ್ಷನ್ 147ರ ಅಡಿಯಲ್ಲಿ
• DSC ಮೋಡ್ ಮೂಲಕ ಪರಿಶೀಲನೆಯನ್ನು ನಡೆಸಿದರೆ, ಮೌಲ್ಯಮಾಪಕರು ಮಾನ್ಯ ಮತ್ತು ಸಕ್ರಿಯ DSC ಅನ್ನು ಹೊಂದಿರಬೇಕು.
3. ಫಾರ್ಮ್ ಕುರಿತು
3.1 ಉದ್ದೇಶ
1. ಸೆಕ್ಷನ್ 147ರ ಅಡಿಯಲ್ಲಿ ತೆರಿಗೆ ರಜೆಯನ್ನು ಪಡೆಯಲು IFSC ಘಟಕವು ಆಯ್ಕೆ ಮಾಡುವ ಸತತ ಹತ್ತು ತೆರಿಗೆ ವರ್ಷಗಳನ್ನು ಸೂಚಿಸಲು.
2. ಫಾರ್ಮ್ ಸಂಖ್ಯೆ 1ರ ಸ್ವೀಕೃತಿಯ ನಂತರ ನಿರ್ದಿಷ್ಟ ಪಾವತಿಗಳ ಮೇಲೆ TDS ಅನ್ನು ಕಡಿತಗೊಳಿಸದಿರಲು ಪಾವತಿದಾರರಿಗೆ ಅವಕಾಶ ನೀಡಲು.
3.2 ಇದನ್ನು ಯಾರು ಫೈಲ್ ಮಾಡಬಹುದು?
ಈ ಕೆಳಗಿನ ಎರಡೂ ಷರತ್ತುಗಳನ್ನು ಪೂರೈಸುವ IFSC ಘಟಕದ ಪಾವತಿದಾರ, ಅವರು, ಈ ಫಾರ್ಮ್ ಸಂಖ್ಯೆ 1 ಅನ್ನು ಸಲ್ಲಿಸಬಹುದು:
- ಇದು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ (GIFT IFSC ನಂತಹ) ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ IFSC ಘಟಕವಾಗಿರಬೇಕು, ಮತ್ತು
- 15 ವರ್ಷಗಳಲ್ಲಿ ಯಾವುದೇ 10 ಸತತ ತೆರಿಗೆ ವರ್ಷಗಳವರೆಗೆ ಆದಾಯ ತೆರಿಗೆ ಕಾಯ್ದೆ, 2025ರ ಸೆಕ್ಷನ್ 147ರ ಅಡಿಯಲ್ಲಿ ಕಡಿತವನ್ನು ಪಡೆಯಲು ಅದು ಆಯ್ಕೆ ಮಾಡಿಕೊಂಡಿರುವುದಾಗಿರುತ್ತದೆ.
3.3 ಫಾರ್ಮ್‌ನ ಒಂದು ಸಂಕ್ಷಿಪ್ತ ನೋಟ
ಫಾರ್ಮ್ 1-28 ಮೂರು ಶೀರ್ಷಿಕೆಗಳನ್ನು ಹೊಂದಿದೆ:
- IFSC ವಿವರಗಳು
- ಹೇಳಿಕೆ ಹಾಗೂ ಘೋಷಣೆ
- ಪರಿಶೀಲನೆ
4. ಹಂತ-ಹಂತದ ಮಾರ್ಗದರ್ಶಿ
ಹಂತ 1:ನಿಮ್ಮ ಯೂಸರ್/ಬಳಕೆದಾರರ ID ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.
ಹಂತ 2:ನಿಮ್ಮ ಯೂಸರ್/ಬಳಕೆದಾರರ ID (PAN) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ 3:ಇ-ಫೈಲ್‌ಗೆ ಹೋಗಿ > ಆದಾಯ ತೆರಿಗೆ ಫಾರ್ಮ್‌ಗಳು > ಆದಾಯ ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸಿ.
ಹಂತ 4:ಆದಾಯ ತೆರಿಗೆ ಕಾಯ್ದೆ, 2025ರ ಪ್ರಕಾರ ಫಾರ್ಮ್‌ಗಳು ಟ್ಯಾಬ್ ಅನ್ನು ಆಯ್ಕೆಮಾಡಿ, ಫಾರ್ಮ್ ಸಂಖ್ಯೆ 1-ಹೊಸದು, ಇದನ್ನು ಆಯ್ಕೆಮಾಡಿ ಮತ್ತು ಈಗ ಸಲ್ಲಿಸಿ ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 5: ಅನ್ವಯವಾಗುವ ತೆರಿಗೆ ವರ್ಷವನ್ನು (T.Y) ಆಯ್ಕೆ ಮಾಡಿ ಮತ್ತು ಮುಂದುವರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಪ್ರಾರಂಭಿಸೋಣ ಮೇಲೆ ಕ್ಲಿಕ್ ಮಾಡಿ.
ಹಂತ 7:ಪ್ರಾರಂಭಿಸೋಣ ಮೇಲೆ ಕ್ಲಿಕ್ ಮಾಡಿದಾಗ, ಬಳಕೆದಾರರನ್ನು ಫಾರ್ಮ್‌ಗೆ ಕರೆದೊಯ್ಯಲಾಗುತ್ತದೆ. ಸಂಬಂಧಿತ ಮಾಹಿತಿಯನ್ನು ನಮೂದಿಸಿದ ನಂತರ, ಮಾಹಿತಿಯನ್ನು ಉಳಿಸಲು ಕರಡು (ಡ್ರಾಫ್ಟ್) ಆಗಿ ಉಳಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಾಗಿ PDF ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.
ಗಮನಿಸಿ:
- ಕ್ರಮ ಸಂಖ್ಯೆ 6 ರಲ್ಲಿ IFSC ಘಟಕದ ಹೆಸರು ಮತ್ತು ವಿಳಾಸವನ್ನು ಒಳಗೊಂಡಿರುತ್ತದೆ.
- ಕ್ರಮ ಸಂಖ್ಯೆ 7: IFSC ಘಟಕವು ಯಾವ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲಾಗಿದೆ ಹಾಗೂ ನೋಂದಣಿ ದಿನಾಂಕದ ವಿವರಗಳನ್ನು ಒಳಗೊಂಡಿದೆ.
- ಕ್ರಮ ಸಂಖ್ಯೆ 8: ಲಗತ್ತು ಪ್ಯಾನಲ್ ಅನ್ನು ಒಳಗೊಂಡಿದ್ದು, ಇಲ್ಲಿ ಬಳಕೆದಾರರು ಕ್ರಮ ಸಂಖ್ಯೆ 7ರಲ್ಲಿ ಆಯ್ಕೆಮಾಡಿದ ಕಾಯ್ದೆಯ ಆಧಾರದ ಮೇಲೆ ಸಂಬಂಧಿತ ಪ್ರಾಧಿಕಾರವು ನೀಡಿದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು.


ಗಮನಿಸಿ:ಸ್ಟೇಟ್‌ಮೆಂಟ್ ಹಾಗೂ ಘೋಷಿತನ ವಿವರಗಳು, IFSC ಘಟಕದ ವ್ಯವಹಾರದ ಸ್ವರೂಪ ಮತ್ತು ಕಡಿತವು ಅನ್ವಯವಾಗುವ "ಇಂದ" ಮತ್ತು "ತನಕ" ವರ್ಷದ ವಿವರಗಳನ್ನು ಒಳಗೊಂಡಿದೆ.
ಗಮನಿಸಿ:ಪರಿಶೀಲನೆಯು ಸ್ಥಳ, ದಿನಾಂಕ ಮತ್ತು IP ವಿಳಾಸದೊಂದಿಗೆ ಪರಿಶೀಲಕ/ಘೋಷಿತರ ವಿವರಗಳನ್ನು ಒಳಗೊಂಡಿದೆ.
ವಿವರಗಳನ್ನು ಉಳಿಸಿದ ನಂತರ, ಪೂರ್ವವೀಕ್ಷಣೆ ಮೇಲೆ ಕ್ಲಿಕ್ ಮಾಡಿ.
ಹಂತ 8:ವಿವರಗಳನ್ನು ಪರಿಶೀಲಿಸಿ ಮತ್ತು ಪೂರ್ವವೀಕ್ಷಣೆ ಪುಟದಲ್ಲಿರುವ ಡೌನ್‌ಲೋಡ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಪೂರ್ವವೀಕ್ಷಣೆ PDF ಅನ್ನು ಡೌನ್‌ಲೋಡ್ ಮಾಡಬಹುದು. ನಂತರಇ-ಪರಿಶೀಲನೆಗೆ ಮುಂದುವರಿಯಿರಿಕ್ಲಿಕ್ ಮಾಡಿ.

ಹಂತ 9:ಇ-ಪರಿಶೀಲನೆಗೆ ಮುಂದುವರಿಯಿರಿಕ್ಲಿಕ್ ಮಾಡಿದ ನಂತರ, ದೃಢೀಕರಣ ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಫಾರ್ಮ್ ಅನ್ನು ಸಲ್ಲಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ.
ಹಂತ 10: ಹೌದು ಕ್ಲಿಕ್ ಮಾಡಿದಾಗ, ನೀವು ಇ-ಪರಿಶೀಲನೆ ಪುಟಕ್ಕೆ ಸಾಗುತ್ತೀರಿ, ಅಲ್ಲಿ ನೀವು DSC/EVC (ಅನ್ವಯಿಸಿದಂತೆ) ಬಳಸಿಕೊಂಡು ಫಾರ್ಮ್ 1-ಹೊಸ- 28/2024 ಅನ್ನು ಪರಿಶೀಲಿಸಬಹುದು.
ಸೂಚನೆ:ಹೆಚ್ಚಿನ ತಿಳುವಳಿಕೆಗಾಗಿಇ-ಪರಿಶೀಲನೆ ಹೇಗೆ ಮಾಡುವುದುಎಂಬ ಬಳಕೆದಾರರ ಕೈಪಿಡಿಯನ್ನು ನೋಡಿ.
ಹಂತ 11: ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಯಶಸ್ವಿ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು ID ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಲಿ. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ID(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು) ಯಲ್ಲಿ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.
ಫಾರ್ಮ್ 1-ನ್ಯೂ-28/2024 ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಬಳಕೆದಾರರು ಭರ್ತಿ ಮಾಡಿದ ಫಾರ್ಮ್ ಅನ್ನು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಆದಾಯ ತೆರಿಗೆ ಕಾಯ್ದೆ, 2025 ರ ಅಡಿಯಲ್ಲಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ > ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ > ಫೈಲ್ ಮಾಡಿದ ಫಾರ್ಮ್ ಅನ್ನು ವೀಕ್ಷಿಸಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
ಗಮನಿಸಿ: ಇನ್ನಷ್ಟು ತಿಳಿದುಕೊಳ್ಳಲು "ಭರ್ತಿ ಮಾಡಿದ ನಮೂನೆ" ಬಳಕೆದಾರ ಕೈಪಿಡಿಯನ್ನು ನೋಡಿ.
5.ಸಂಬಂಧಿತ ವಿಷಯಗಳು
6.ಪದಕೋಶ
| ಸಂಕ್ಷೇಪಣ/ಸಂಕ್ಷಿಪ್ತ ರೂಪ | ವಿವರಣೆ/ವಿಸ್ತೃತ ರೂಪ |
| DSC | ಡಿಜಿಟಲ್ ಸಹಿ ಪ್ರಮಾಣಪತ್ರ |
| EVC | ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ. |
| ARN | ಸ್ವೀಕೃತಿ ರಶೀದಿ ಸಂಖ್ಯೆ |
| PY | ಹಿಂದಿನ ವರ್ಷ |
| FY | ಹಣಕಾಸಿನ ವರ್ಷ |
| TY | ತೆರಿಗೆ ವರ್ಷ |