ಫಾರ್ಮ್ 1 SWF ಕುರಿತು ಬಳಕೆದಾರರ ಕೈಪಿಡಿ
1. ಪಕ್ಷಿನೋಟ
ಸಾರ್ವಭೌಮ ಸಂಪತ್ತು ನಿಧಿಯಿಂದ SWF ಫಾರ್ಮ್ I ಅನ್ನು ಸಲ್ಲಿಸಲಾಗುತ್ತದೆ. ಇದು ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 92(2)(k) ನಲ್ಲಿ ಉಲ್ಲೇಖಿಸಲಾದ ಲಾಭಾಂಶ, ಬಡ್ಡಿ, ಯಾವುದೇ ಮೊತ್ತ ಮತ್ತು ನಿರ್ದಿಷ್ಟ ವ್ಯಕ್ತಿಯಿಂದ ಸಾಲ, ಷೇರು ಬಂಡವಾಳ ಅಥವಾ ಘಟಕದ ರೂಪದಲ್ಲಿ ಭಾರತದಲ್ಲಿ ಮಾಡಿದ ಹೂಡಿಕೆಯಿಂದ ಉಂಟಾಗುವ ಬಂಡವಾಳ ಲಾಭಗಳಿಗೆ 100% ತೆರಿಗೆ ವಿನಾಯಿತಿ ಪಡೆಯಲು ಬಳಸಲಾಗುತ್ತದೆ.
2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು
- ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
- ತೆರಿಗೆದಾರರು ಮಾನ್ಯವಾದ ಬಳಕೆದಾರ ಹೆಸರು (PAN) ಮತ್ತು ಇ-ಸಲ್ಲಿಕೆ 2.0 ಪೋರ್ಟಲ್ನ ಪಾಸ್ವರ್ಡ್ ಅನ್ನು ಹೊಂದಿದ್ದಾರೆ
- PAN ಡೇಟಾಬೇಸ್ ಪ್ರಕಾರ ತೆರಿಗೆದಾರರ PAN ಸ್ಥಿತಿಯು "ಸಕ್ರಿಯವಾಗಿದೆ"
- ತೆರಿಗೆದಾರರು DSC ವಿಧಾನದ ಮೂಲಕ ಪರಿಶೀಲಿಸಲು ಮಾನ್ಯ DSC ಹೊಂದಿರಬೇಕು. ಅದನ್ನು ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿಸಿರಬೇಕು ಮತ್ತು ಅದರ ಅವಧಿ ಮುಗಿದಿರಬಾರದು.
3. ಫಾರ್ಮ್ ಕುರಿತು
3.1 ಉದ್ದೇಶ
ಈ ಫಾರ್ಮ್ ಅನ್ನು ಸಲ್ಲಿಸುವ ಉದ್ದೇಶವು ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 92(2)(k) ರಲ್ಲಿ ಲಾಭಾಂಶ, ಬಡ್ಡಿ, ಉಲ್ಲೇಖಿಸಲಾದ ಯಾವುದೇ ಮೊತ್ತ ಹಾಗೂ ನಿರ್ದಿಷ್ಟ ವ್ಯಕ್ತಿಯಿಂದ ಸಾಲ, ಷೇರು ಬಂಡವಾಳ ಅಥವಾ ಘಟಕದ ರೂಪದಲ್ಲಿ ಭಾರತದಲ್ಲಿ ಮಾಡಿದ ಹೂಡಿಕೆಯಿಂದ ಉಂಟಾಗುವ ಬಂಡವಾಳ ಲಾಭಗಳಿಗೆ 100% ತೆರಿಗೆ ವಿನಾಯಿತಿ ಪಡೆಯುವುದಾಗಿದೆ.
3.2 ಇದನ್ನು ಯಾರು ಬಳಸಬಹುದು?
ಆದಾಯ ತೆರಿಗೆ ಕಾಯ್ದೆ, 2025 ರ ಶೇಡ್ಯೂಲ್ V [ಕೋಷ್ಟಕ: ಕ್ರಮ ಸಂಖ್ಯೆ 7, ಟಿಪ್ಪಣಿ 5(a)(ii)(G)] ರ ಪ್ರಕಾರ ಫಾರ್ಮ್ I SWF ಅನ್ನು ಸಾರ್ವಭೌಮ ಸಂಪತ್ತು ನಿಧಿಯಿಂದ ಸಲ್ಲಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿರುವ ಹಾಗೂ ಅಂತಹ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ಪೂರೈಸುವ ಸಾರ್ವಭೌಮ ಸಂಪತ್ತು ನಿಧಿಯು ಈ ಫಾರ್ಮ್ ಅನ್ನು ಸಲ್ಲಿಸಬೇಕು.
3.3 ಫಾರ್ಮ್ ಕುರಿತು ಕಿರುನೋಟ
ಫಾರ್ಮ್ I SWF ನಾಲ್ಕು ಪ್ಯಾನೆಲ್ಗಳನ್ನು ಒಳಗೊಂಡಿದೆ:
- ಭಾಗ ಎ - ಸಾರ್ವಭೌಮ ಸಂಪತ್ತು ನಿಧಿಯ ವಿವರಗಳು
- ಭಾಗ ಬಿ - ಪ್ರಮಾಣೀಕರಣ ಷರತ್ತುಗಳ ಅನುಸರಣೆ
- ಲಗತ್ತುಗಳು
- ಪರಿಶೀಲನೆ
4. ಹಂತ-ಹಂತವಾದ ಮಾರ್ಗದರ್ಶಿ
ಹಂತ 1: ನಿಮ್ಮ ಯೂಸರ್/ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್ಗೆ ಲಾಗಿನ್ ಮಾಡಿ.
ಹಂತ 2: ನಿಮ್ಮ ಯೂಸರ್/ಬಳಕೆದಾರರ ಐಡಿ (PAN) ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ.
ಹಂತ 3: ಇ-ಫೈಲ್ ಗಳಿಗೆ ಹೋಗಿ > ಆದಾಯ ತೆರಿಗೆ ಫಾರ್ಮ್ ಗಳು > ಆದಾಯ ತೆರಿಗೆ ಫಾರ್ಮ್ ಫೈಲ್ ಮಾಡಿ
ಹಂತ 4: ಇಲ್ಲಿರುವ ಮೂರು ಟ್ಯಾಬ್ಗಳಲ್ಲಿ, "ಆದಾಯ ತೆರಿಗೆ ಕಾಯ್ದೆ, 2025ರ ಫಾರ್ಮ್ಗಳು" ಟ್ಯಾಬ್ಅನ್ನು ದಯವಿಟ್ಟು ಆಯ್ಕೆಮಾಡಿ. ನಂತರ ಫಾರ್ಮ್ I SWF ಅನ್ನು ಆಯ್ಕೆಮಾಡಿ ಅಥವಾ ಹುಡುಕಿ ಮತ್ತು "ಈಗ ಸಲ್ಲಿಕೆ ಮಾಡಿ" ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 5: PAN ಕಾರ್ಡ್, ಸಲ್ಲಿಕೆ ವಿಧಾನ, ಫೈಲಿಂಗ್ ಪ್ರಕಾರವನ್ನು ಪರಿಶೀಲಿಸಿ ಮತ್ತು ಅನ್ವಯವಾಗುವ ತೆರಿಗೆ ವರ್ಷ (T.Y) ಆಯ್ಕೆಮಾಡಿ ಮತ್ತು ಮುಂದುವರಿಸಿ ಬಟನ್ ಕ್ಲಿಕ್ ಮಾಡಿ.
ಹಂತ 6: "ಆರಂಭಿಸೋಣ" ಮೇಲೆ ಕ್ಲಿಕ್ ಮಾಡಿ.
ಹಂತ 7: "ಆರಂಭಿಸೋಣ" ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಪ್ಯಾನಲ್ ಪರದೆಗೆ ಕರೆದೊಯ್ಯಲಾಗುತ್ತದೆ. ಮುಂದುವರಿಯಲು, ಸಾರ್ವಭೌಮ ಸಂಪತ್ತು ನಿಧಿಯ ಮೊದಲ ಪ್ಯಾನಲ್ ಆದ ಭಾಗ A - ವಿವರಗಳು ಅನ್ನು ಆಯ್ಕೆಮಾಡಿ. ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ, ಪರಿಶೀಲಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.
ಗಮನಿಸಿ: ದಯವಿಟ್ಟು "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ವಿಳಾಸ ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ. "ನನ್ನ ಪ್ರೊಫೈಲ್" ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ಮತ್ತು ವಿಳಾಸ ವಿವರಗಳನ್ನು ನವೀಕರಿಸಬಹುದು.

ಹಂತ 8: ಮೊದಲ ಪ್ಯಾನಲ್ ಅನ್ನು ಉಳಿಸಿದ ನಂತರ, ಎರಡನೇ ಪ್ಯಾನಲ್ ಆದ ಭಾಗ ಬಿ - ಪ್ರಮಾಣೀಕರಣ ಅನ್ನು ಆಯ್ಕೆಮಾಡಿ.
ದಯವಿಟ್ಟು ಚೆಕ್ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಉಳಿಸು ಅನ್ನು ಕ್ಲಿಕ್ ಮಾಡಿ.
ಹಂತ 9: 2ನೇ ಪ್ಯಾನಲ್ ಅನ್ನು ಉಳಿಸಿದ ನಂತರ, 3ನೇ ಪ್ಯಾನಲ್: ಲಗತ್ತು ಅನ್ನು ಆಯ್ಕೆಮಾಡಿ. ದಯವಿಟ್ಟು ಈ ಪ್ಯಾನಲ್ನ "ಲಗತ್ತುಗಳು" ವಿಭಾಗದಲ್ಲಿ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.
ಹಂತ 10: 3ನೇ ಪ್ಯಾನಲ್ ಅನ್ನು ಉಳಿಸಿದ ನಂತರ, "ಪರಿಶೀಲನೆ" ಪ್ಯಾನಲ್ ಅನ್ನು ಆಯ್ಕೆಮಾಡಿ. ಪರಿಶೀಲನೆ ಪ್ಯಾನಲ್ನ ವಿವರಗಳನ್ನು ದೃಢೀಕರಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.
ಹಂತ 11: ಪರಿಶೀಲನೆ ಪ್ಯಾನಲ್ ಅನ್ನು ಉಳಿಸಿದ ನಂತರ, ಪ್ಯಾನಲ್ನ ಸ್ಥಿತಿಯು "ಪೂರ್ಣಗೊಂಡಿದೆ" ಎಂದು ಪ್ರದರ್ಶಿಸಲಾಗುತ್ತದೆ. ನಂತರ, "ಪೂರ್ವವೀಕ್ಷಣೆ" ಬಟನ್ ಸಕ್ರಿಯಗೊಳ್ಳುತ್ತದೆ.
ಹಂತ 12: ಪೂರ್ವವೀಕ್ಷಣೆ ಪುಟದಲ್ಲಿ, ವಿವರಗಳನ್ನು ಪರಿಶೀಲಿಸಿ ಮತ್ತು "ಇ-ಪರಿಶೀಲನೆಗೆ ಮುಂದುವರಿಯಿರಿ" ಅನ್ನು ಕ್ಲಿಕ್ ಮಾಡಿ.
ಗಮನಿಸಿ: "ಡೌನ್ಲೋಡ್" ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, ಬಳಕೆದಾರರು ಪೂರ್ವವೀಕ್ಷಣೆ PDF ಅನ್ನು ಡೌನ್ಲೋಡ್ ಮಾಡಬಹುದು ಮತ್ತು ಇ-ಪರಿಶೀಲನೆಯೊಂದಿಗೆ ಮುಂದುವರಿಯುವ ಮೊದಲು ವಿವರಗಳನ್ನು ಪರಿಶೀಲಿಸಬಹುದು.
ಹಂತ 13: "ಇ-ಪರಿಶೀಲನೆಗೆ ಮುಂದುವರಿಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, "ನೀವು ಇ-ಪರಿಶೀಲನೆಗೆ ಮುಂದುವರಿಯಲು ಬಯಸುವಿರಾ?" ಎಂದು ಕೇಳುವ ಪಾಪ್ಅಪ್ ದೃಢೀಕರಣವನ್ನು ಪ್ರದರ್ಶಿಸುತ್ತದೆ. "ಹೌದು" ಮೇಲೆ ಕ್ಲಿಕ್ ಮಾಡಿ.
ಹಂತ 14: "ಹೌದು" ಅನ್ನು ಕ್ಲಿಕ್ ಮಾಡಿದಾಗ, ನೀವು DSC/EVC ಬಳಸಿಕೊಂಡು ಫಾರ್ಮ್ I SWF ಅನ್ನು ಪರಿಶೀಲಿಸಬಹುದಾದ ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲ್ಪಡುತ್ತೀರಿ.
ಗಮನಿಸಿ: ಇನ್ನಷ್ಟು ಮಾಹಿತಿಗಾಗಿ "ಇ-ಪರಿಶೀಲನೆ ಮಾಡುವುದು ಹೇಗೆ" ಎಂಬ ಬಳಕೆದಾರ ಕೈಪಿಡಿಯನ್ನು ನೋಡಿ.
ಹಂತ 15: ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟು ಐಡಿ ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು ಐಡಿ ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಗಮನಿಸಿಕೊಳ್ಳಿ. ಇ-ಸಲ್ಲಿಕೆ ಪೋರ್ಟಲ್ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿ(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು) ಗೆ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.
ಸ್ವೀಕೃತಿ ರಸೀದಿಯನ್ನು ಡೌನ್ಲೋಡ್ ಮಾಡಲು 'ಡೌನ್ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ:
- ನಿಮ್ಮ ಡ್ಯಾಶ್ಬೋರ್ಡ್ನಲ್ಲಿ, ಆದಾಯ ತೆರಿಗೆ ಕಾಯ್ದೆ, 2025 ರ ಅಡಿಯಲ್ಲಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್ಗಳನ್ನು ಫೈಲ್ ಮಾಡಿ > ಫೈಲ್ ಮಾಡಿದ ಫಾರ್ಮ್ಗಳನ್ನು ವೀಕ್ಷಿಸಿ > ಫೈಲ್ ಮಾಡಿದ ಫಾರ್ಮ್ ಅನ್ನು ವೀಕ್ಷಿಸಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
- ಇನ್ನಷ್ಟು ತಿಳಿದುಕೊಳ್ಳಲು "ಭರ್ತಿ ಮಾಡಿದ ನಮೂನೆ" ಬಳಕೆದಾರ ಕೈಪಿಡಿಯನ್ನು ನೋಡಿ.
5. ಸಂಬಂಧಿತ ವಿಷಯಗಳು
6.ಪದಕೋಶ
| ಸಂಕ್ಷೇಪಣ/ಸಂಕ್ಷಿಪ್ತರೂಪ | ವಿವರಣೆ/ಪೂರ್ಣ ಸ್ವರೂಪ |
|---|---|
| DSC | ಡಿಜಿಟಲ್ ಸಹಿ ಪ್ರಮಾಣಪತ್ರ |
| EVC | ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ. |
| ARN | ಸ್ವೀಕೃತಿ ರಶೀದಿ ಸಂಖ್ಯೆ |
| PY | ಕಳೆದ ವರ್ಷ |
| FY | ಹಣಕಾಸಿನ ವರ್ಷ |
| TY | ತೆರಿಗೆ ವರ್ಷ |