ಫಾರ್ಮ್ 1 SWF ಕುರಿತು ಬಳಕೆದಾರರ ಕೈಪಿಡಿ

1. ಪಕ್ಷಿನೋಟ

ಸಾರ್ವಭೌಮ ಸಂಪತ್ತು ನಿಧಿಯಿಂದ SWF ಫಾರ್ಮ್ I ಅನ್ನು ಸಲ್ಲಿಸಲಾಗುತ್ತದೆ. ಇದು ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 92(2)(k) ನಲ್ಲಿ ಉಲ್ಲೇಖಿಸಲಾದ ಲಾಭಾಂಶ, ಬಡ್ಡಿ, ಯಾವುದೇ ಮೊತ್ತ ಮತ್ತು ನಿರ್ದಿಷ್ಟ ವ್ಯಕ್ತಿಯಿಂದ ಸಾಲ, ಷೇರು ಬಂಡವಾಳ ಅಥವಾ ಘಟಕದ ರೂಪದಲ್ಲಿ ಭಾರತದಲ್ಲಿ ಮಾಡಿದ ಹೂಡಿಕೆಯಿಂದ ಉಂಟಾಗುವ ಬಂಡವಾಳ ಲಾಭಗಳಿಗೆ 100% ತೆರಿಗೆ ವಿನಾಯಿತಿ ಪಡೆಯಲು ಬಳಸಲಾಗುತ್ತದೆ.

2. ಈ ಸೇವೆಯನ್ನು ಪಡೆಯಲು ಬೇಕಾಗಿರುವ ಪೂರ್ವಾಪೇಕ್ಷಿತಗಳು

  • ತೆರಿಗೆದಾರರು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
  • ತೆರಿಗೆದಾರರು ಮಾನ್ಯವಾದ ಬಳಕೆದಾರ ಹೆಸರು (PAN) ಮತ್ತು ಇ-ಸಲ್ಲಿಕೆ 2.0 ಪೋರ್ಟಲ್‌ನ ಪಾಸ್‌ವರ್ಡ್ ಅನ್ನು ಹೊಂದಿದ್ದಾರೆ
  • PAN ಡೇಟಾಬೇಸ್ ಪ್ರಕಾರ ತೆರಿಗೆದಾರರ PAN ಸ್ಥಿತಿಯು "ಸಕ್ರಿಯವಾಗಿದೆ"
  • ತೆರಿಗೆದಾರರು DSC ವಿಧಾನದ ಮೂಲಕ ಪರಿಶೀಲಿಸಲು ಮಾನ್ಯ DSC ಹೊಂದಿರಬೇಕು. ಅದನ್ನು ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಿರಬೇಕು ಮತ್ತು ಅದರ ಅವಧಿ ಮುಗಿದಿರಬಾರದು.

3. ಫಾರ್ಮ್ ಕುರಿತು

3.1 ಉದ್ದೇಶ

ಈ ಫಾರ್ಮ್ ಅನ್ನು ಸಲ್ಲಿಸುವ ಉದ್ದೇಶವು ಆದಾಯ ತೆರಿಗೆ ಕಾಯ್ದೆ, 2025 ರ ಸೆಕ್ಷನ್ 92(2)(k) ರಲ್ಲಿ ಲಾಭಾಂಶ, ಬಡ್ಡಿ, ಉಲ್ಲೇಖಿಸಲಾದ ಯಾವುದೇ ಮೊತ್ತ ಹಾಗೂ ನಿರ್ದಿಷ್ಟ ವ್ಯಕ್ತಿಯಿಂದ ಸಾಲ, ಷೇರು ಬಂಡವಾಳ ಅಥವಾ ಘಟಕದ ರೂಪದಲ್ಲಿ ಭಾರತದಲ್ಲಿ ಮಾಡಿದ ಹೂಡಿಕೆಯಿಂದ ಉಂಟಾಗುವ ಬಂಡವಾಳ ಲಾಭಗಳಿಗೆ 100% ತೆರಿಗೆ ವಿನಾಯಿತಿ ಪಡೆಯುವುದಾಗಿದೆ.

3.2 ಇದನ್ನು ಯಾರು ಬಳಸಬಹುದು?

ಆದಾಯ ತೆರಿಗೆ ಕಾಯ್ದೆ, 2025 ರ ಶೇಡ್ಯೂಲ್ V [ಕೋಷ್ಟಕ: ಕ್ರಮ ಸಂಖ್ಯೆ 7, ಟಿಪ್ಪಣಿ 5(a)(ii)(G)] ರ ಪ್ರಕಾರ‌ ಫಾರ್ಮ್ I SWF ಅನ್ನು ಸಾರ್ವಭೌಮ ಸಂಪತ್ತು ನಿಧಿಯಿಂದ ಸಲ್ಲಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಿರುವ ಹಾಗೂ ಅಂತಹ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾದ ಷರತ್ತುಗಳನ್ನು ಪೂರೈಸುವ ಸಾರ್ವಭೌಮ ಸಂಪತ್ತು ನಿಧಿಯು ಈ ಫಾರ್ಮ್ ಅನ್ನು ಸಲ್ಲಿಸಬೇಕು.

3.3 ಫಾರ್ಮ್ ಕುರಿತು ಕಿರುನೋಟ

ಫಾರ್ಮ್ I SWF ನಾಲ್ಕು ಪ್ಯಾನೆಲ್‌ಗಳನ್ನು ಒಳಗೊಂಡಿದೆ:

  1. ಭಾಗ ಎ - ಸಾರ್ವಭೌಮ ಸಂಪತ್ತು ನಿಧಿಯ ವಿವರಗಳು
  2. ಭಾಗ ಬಿ - ಪ್ರಮಾಣೀಕರಣ ಷರತ್ತುಗಳ ಅನುಸರಣೆ
  3. ಲಗತ್ತುಗಳು
  4. ಪರಿಶೀಲನೆ
Data responsive

 

4. ಹಂತ-ಹಂತವಾದ ಮಾರ್ಗದರ್ಶಿ

ಹಂತ 1: ನಿಮ್ಮ ಯೂಸರ್/ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಇ-ಸಲ್ಲಿಕೆ ಪೋರ್ಟಲ್‌ಗೆ ಲಾಗಿನ್ ಮಾಡಿ.

Data responsive

 

ಹಂತ 2: ನಿಮ್ಮ ಯೂಸರ್/ಬಳಕೆದಾರರ ಐಡಿ (PAN) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.

Data responsive

 

ಹಂತ 3: ಇ-ಫೈಲ್ ಗಳಿಗೆ ಹೋಗಿ > ಆದಾಯ ತೆರಿಗೆ ಫಾರ್ಮ್ ಗಳು > ಆದಾಯ ತೆರಿಗೆ ಫಾರ್ಮ್ ಫೈಲ್ ಮಾಡಿ

Data responsive

 

ಹಂತ 4: ಇಲ್ಲಿರುವ ಮೂರು ಟ್ಯಾಬ್‌ಗಳಲ್ಲಿ, "ಆದಾಯ ತೆರಿಗೆ ಕಾಯ್ದೆ, 2025ರ ಫಾರ್ಮ್‌ಗಳು" ಟ್ಯಾಬ್ಅನ್ನು ದಯವಿಟ್ಟು ಆಯ್ಕೆಮಾಡಿ. ನಂತರ ಫಾರ್ಮ್ I SWF ಅನ್ನು ಆಯ್ಕೆಮಾಡಿ ಅಥವಾ ಹುಡುಕಿ ಮತ್ತು "ಈಗ ಸಲ್ಲಿಕೆ ಮಾಡಿ" ಬಟನ್ ಅನ್ನು ಕ್ಲಿಕ್ ಮಾಡಿ.

Data responsive

 

ಹಂತ 5: PAN ಕಾರ್ಡ್, ಸಲ್ಲಿಕೆ ವಿಧಾನ, ಫೈಲಿಂಗ್ ಪ್ರಕಾರವನ್ನು ಪರಿಶೀಲಿಸಿ ಮತ್ತು ಅನ್ವಯವಾಗುವ ತೆರಿಗೆ ವರ್ಷ (T.Y) ಆಯ್ಕೆಮಾಡಿ ಮತ್ತು ಮುಂದುವರಿಸಿ ಬಟನ್ ಕ್ಲಿಕ್ ಮಾಡಿ.

Data responsive

 

ಹಂತ 6: "ಆರಂಭಿಸೋಣ" ಮೇಲೆ ಕ್ಲಿಕ್ ಮಾಡಿ.

Data responsive

 

ಹಂತ 7: "ಆರಂಭಿಸೋಣ" ಅನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಪ್ಯಾನಲ್ ಪರದೆಗೆ ಕರೆದೊಯ್ಯಲಾಗುತ್ತದೆ. ಮುಂದುವರಿಯಲು, ಸಾರ್ವಭೌಮ ಸಂಪತ್ತು ನಿಧಿಯ ಮೊದಲ ಪ್ಯಾನಲ್ ಆದ ಭಾಗ A - ವಿವರಗಳು ಅನ್ನು ಆಯ್ಕೆಮಾಡಿ. ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ, ಪರಿಶೀಲಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.

ಗಮನಿಸಿ: ದಯವಿಟ್ಟು "ನನ್ನ ಪ್ರೊಫೈಲ್" ವಿಭಾಗದ ಅಡಿಯಲ್ಲಿ ವಿಳಾಸ ಸೇರಿದಂತೆ ಎಲ್ಲಾ ಕಡ್ಡಾಯ ವಿವರಗಳು ಪೂರ್ಣಗೊಂಡಿವೆ ಎಂದು ಖಚಿತಪಡಿಸಿಕೊಳ್ಳಿ. "ನನ್ನ ಪ್ರೊಫೈಲ್" ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಸಂಪರ್ಕ ಮತ್ತು ವಿಳಾಸ ವಿವರಗಳನ್ನು ನವೀಕರಿಸಬಹುದು.

Data responsiveData responsive

 

ಹಂತ 8: ಮೊದಲ ಪ್ಯಾನಲ್ ಅನ್ನು ಉಳಿಸಿದ ನಂತರ, ಎರಡನೇ ಪ್ಯಾನಲ್ ಆದ ಭಾಗ ಬಿ - ಪ್ರಮಾಣೀಕರಣ ಅನ್ನು ಆಯ್ಕೆಮಾಡಿ.

ದಯವಿಟ್ಟು ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಉಳಿಸು ಅನ್ನು ಕ್ಲಿಕ್ ಮಾಡಿ.

Data responsive

 

ಹಂತ 9: 2ನೇ ಪ್ಯಾನಲ್ ಅನ್ನು ಉಳಿಸಿದ ನಂತರ, 3ನೇ ಪ್ಯಾನಲ್: ಲಗತ್ತು ಅನ್ನು ಆಯ್ಕೆಮಾಡಿ. ದಯವಿಟ್ಟು ಈ ಪ್ಯಾನಲ್‌ನ "ಲಗತ್ತುಗಳು" ವಿಭಾಗದಲ್ಲಿ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.

Data responsive

 

ಹಂತ 10: 3ನೇ ಪ್ಯಾನಲ್ ಅನ್ನು ಉಳಿಸಿದ ನಂತರ, "ಪರಿಶೀಲನೆ" ಪ್ಯಾನಲ್ ಅನ್ನು ಆಯ್ಕೆಮಾಡಿ. ಪರಿಶೀಲನೆ ಪ್ಯಾನಲ್‌ನ ವಿವರಗಳನ್ನು ದೃಢೀಕರಿಸಿ ಮತ್ತು "ಉಳಿಸಿ" ಅನ್ನು ಕ್ಲಿಕ್ ಮಾಡಿ.

Data responsive

 

ಹಂತ 11: ಪರಿಶೀಲನೆ ಪ್ಯಾನಲ್ ಅನ್ನು ಉಳಿಸಿದ ನಂತರ, ಪ್ಯಾನಲ್‌ನ ಸ್ಥಿತಿಯು "ಪೂರ್ಣಗೊಂಡಿದೆ" ಎಂದು ಪ್ರದರ್ಶಿಸಲಾಗುತ್ತದೆ. ನಂತರ, "ಪೂರ್ವವೀಕ್ಷಣೆ" ಬಟನ್ ಸಕ್ರಿಯಗೊಳ್ಳುತ್ತದೆ.

Data responsive

 

ಹಂತ 12: ಪೂರ್ವವೀಕ್ಷಣೆ ಪುಟದಲ್ಲಿ, ವಿವರಗಳನ್ನು ಪರಿಶೀಲಿಸಿ ಮತ್ತು "ಇ-ಪರಿಶೀಲನೆಗೆ ಮುಂದುವರಿಯಿರಿ" ಅನ್ನು ಕ್ಲಿಕ್ ಮಾಡಿ.

ಗಮನಿಸಿ: "ಡೌನ್‌ಲೋಡ್" ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, ಬಳಕೆದಾರರು ಪೂರ್ವವೀಕ್ಷಣೆ PDF ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಇ-ಪರಿಶೀಲನೆಯೊಂದಿಗೆ ಮುಂದುವರಿಯುವ ಮೊದಲು ವಿವರಗಳನ್ನು ಪರಿಶೀಲಿಸಬಹುದು.

Data responsive

 

ಹಂತ 13: "ಇ-ಪರಿಶೀಲನೆಗೆ ಮುಂದುವರಿಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ, "ನೀವು ಇ-ಪರಿಶೀಲನೆಗೆ ಮುಂದುವರಿಯಲು ಬಯಸುವಿರಾ?" ಎಂದು ಕೇಳುವ ಪಾಪ್ಅಪ್ ದೃಢೀಕರಣವನ್ನು ಪ್ರದರ್ಶಿಸುತ್ತದೆ. "ಹೌದು" ಮೇಲೆ ಕ್ಲಿಕ್ ಮಾಡಿ.

Data responsive

 

ಹಂತ 14: "ಹೌದು" ಅನ್ನು ಕ್ಲಿಕ್ ಮಾಡಿದಾಗ, ನೀವು DSC/EVC ಬಳಸಿಕೊಂಡು ಫಾರ್ಮ್ I SWF ಅನ್ನು ಪರಿಶೀಲಿಸಬಹುದಾದ ಇ-ಪರಿಶೀಲನೆ ಪುಟಕ್ಕೆ ಕರೆದೊಯ್ಯಲ್ಪಡುತ್ತೀರಿ.

ಗಮನಿಸಿ: ಇನ್ನಷ್ಟು ಮಾಹಿತಿಗಾಗಿ "ಇ-ಪರಿಶೀಲನೆ ಮಾಡುವುದು ಹೇಗೆ" ಎಂಬ ಬಳಕೆದಾರ ಕೈಪಿಡಿಯನ್ನು ನೋಡಿ.

ಹಂತ 15: ಯಶಸ್ವಿ ಇ-ಪರಿಶೀಲನೆಯ ನಂತರ, ವಹಿವಾಟು ಐಡಿ ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯೊಂದಿಗೆ ಯಶಸ್ಸಿನ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ದಯವಿಟ್ಟು ವಹಿವಾಟು ಐಡಿ ಮತ್ತು ಸ್ವೀಕೃತಿ ರಶೀದಿ ಸಂಖ್ಯೆಯನ್ನು ಗಮನಿಸಿಕೊಳ್ಳಿ. ಇ-ಸಲ್ಲಿಕೆ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಇಮೇಲ್ ಐಡಿ(ಗಳು) ಮತ್ತು ಮೊಬೈಲ್ ಸಂಖ್ಯೆ(ಗಳು) ಗೆ ನೀವು ದೃಢೀಕರಣ ಸಂದೇಶವನ್ನು ಸಹ ಸ್ವೀಕರಿಸುತ್ತೀರಿ.

ಸ್ವೀಕೃತಿ ರಸೀದಿಯನ್ನು ಡೌನ್‌ಲೋಡ್ ಮಾಡಲು 'ಡೌನ್‌ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿ.

Data responsive

ಗಮನಿಸಿ:

  1. ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ, ಆದಾಯ ತೆರಿಗೆ ಕಾಯ್ದೆ, 2025 ರ ಅಡಿಯಲ್ಲಿ ಇ-ಫೈಲ್ > ಆದಾಯ ತೆರಿಗೆ ಫಾರ್ಮ್‌ಗಳನ್ನು ಫೈಲ್ ಮಾಡಿ > ಫೈಲ್ ಮಾಡಿದ ಫಾರ್ಮ್‌ಗಳನ್ನು ವೀಕ್ಷಿಸಿ > ಫೈಲ್ ಮಾಡಿದ ಫಾರ್ಮ್ ಅನ್ನು ವೀಕ್ಷಿಸಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  2. ಇನ್ನಷ್ಟು ತಿಳಿದುಕೊಳ್ಳಲು "ಭರ್ತಿ ಮಾಡಿದ ನಮೂನೆ" ಬಳಕೆದಾರ ಕೈಪಿಡಿಯನ್ನು ನೋಡಿ.

5. ಸಂಬಂಧಿತ ವಿಷಯಗಳು

6.ಪದಕೋಶ

ಸಂಕ್ಷೇಪಣ/ಸಂಕ್ಷಿಪ್ತರೂಪ ವಿವರಣೆ/ಪೂರ್ಣ ಸ್ವರೂಪ
DSC ಡಿಜಿಟಲ್ ಸಹಿ ಪ್ರಮಾಣಪತ್ರ
EVC ಎಲೆಕ್ಟ್ರಾನಿಕ್ ಪರಿಶೀಲನಾ ಪ್ರಮಾಣಪತ್ರ.
ARN ಸ್ವೀಕೃತಿ ರಶೀದಿ ಸಂಖ್ಯೆ
PY ಕಳೆದ ವರ್ಷ
FY ಹಣಕಾಸಿನ ವರ್ಷ
TY ತೆರಿಗೆ ವರ್ಷ